ಅಮೆರಿಕ ಮಿಲಿಟರಿ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಆಫ್ಘಾನ್ ಮಹಿಳೆ!

By Suvarna News  |  First Published Aug 22, 2021, 10:49 PM IST
  • ತುಂಬು ಗರ್ಭಿಣಿಯನ್ನು ತಾಲಿಬಾನ್ ಉಗ್ರರಿಂದ ರಕ್ಷಿಸಿದ ಅಮೆರಿಕ ಪಡೆ
  • ಹೆರಿಗೆ ನೋವು ಕಾಣಿಸಿಕೊಂಡ ಕಾರಣ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪೈಲೆಟ್
  • ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಆಫ್ಘಾನಿಸ್ತಾನ ಮಹಿಳೆ
     

ಜರ್ಮನಿ(ಆ.22): ಆಫ್ಘಾನಿಸ್ತಾನ ನರಕದಿಂದ ಅಮಾಯಕ ಜನರು ಬೇರೆ ದೇಶಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಉಗ್ರರ ಗುಂಡೇಟಿನ ಘೋರ ಸಾವಿಗಿಂತ ಇತರ ಯಾವುದೇ ದೇಶದ ಜೈಲಲ್ಲಾದರೂ ಬದುಕುತ್ತೇವೆ ಅನ್ನೋ ಪರಿಸ್ಥಿತಿಗೆ ಮುಗ್ದ ಜನರು ಬಂದಿದ್ದಾರೆ. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ವಿಮಾನ ಲ್ಯಾಂಡ್ ಆದರೆ ಸಾಕು ತಮ್ಮನ್ನು ಕರೆದುಕೊಂಡು ಹೋಗಿ ಎಂದು ಅಂಗಲಾಚುತ್ತಿರುವವ ಸಂಖ್ಯೆ ದೊಡ್ಡದಿದೆ. ಹೀಗೆ ಅಮೆರಿಕ ಮಿಲಿಟರಿ ವಿಮಾನ ಹತ್ತಿದ ಆಫ್ಘಾನ್ ಮಹಿಳೆ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.

ಸಹಾಯ ಮಾಡಿ, ನಮ್ಮನ್ನು ಕಾಪಾಡಿ: ಅಮೆರಿಕ ಸೇನೆ ಎದುರು ಅಫ್ಘಾನ್ ಮಹಿಳೆಯರ ಕಣ್ಣೀರು!

Tap to resize

Latest Videos

undefined

ಅಮೆರಿಕ ತನ್ನ ನಾಗರೀಕರನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರಿಸಲು ಮಿಲಿಟರಿ ವಿಮಾನದಲ್ಲಿ ಆಫ್ಘಾನಿಸ್ತಾನದ ತುಂಬು ಗರ್ಭಿಣಿ ಹತ್ತಿದ್ದಾಳೆ. ಮಧ್ಯ ಪ್ರಾಚ್ಯದಿಂದ ಅಮೆರಿಕ ಮಿಲಿಟರಿ ವಿಮಾನ ಹಾರಾಟ ಆರಂಭಿಸಿದ ಕೆಲ ಹೊತ್ತಲ್ಲಿ ಮಹಿಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. 

 

Medical support personnel from the 86th Medical Group help an Afghan mother and family off a U.S. Air Force C-17, call sign Reach 828, moments after she delivered a child aboard the aircraft upon landing at Ramstein Air Base, Germany, Aug. 21. (cont..) pic.twitter.com/wqR9dFlW1o

— Air Mobility Command (@AirMobilityCmd)

ಎತ್ತರದಲ್ಲಿ ಹಾರುತ್ತಿರುವ ಕಾರಣ ಮಹಿಳೆಗೆ ತೀವ್ರ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿದೆ. ಇದನ್ನು ಅರಿತ ಅಮೆರಿಕ ಮಿಲಿಟರಿ ವಿಮಾನ ಪೈಲೆಟ್, ಎತ್ತರದ ಮಟ್ಟವನ್ನು ತಗ್ಗಿಸಿದ್ದಾರೆ. ವಿಮಾನವನ್ನು ಮತ್ತಷ್ಟು ಕೆಳಗಿಳಿಸಿದ್ದಾರೆ. ಈ ಮೂಲಕ ವಿಮಾನದೊಳಗೆ ಗಾಳಿ ಒತ್ತಡ ಹೆಚ್ಚಿಸಲಾಯಿತು. ಇದು ತಾಯಿಯ ಉಸಿರಾಟ ಹಾಗೂ ಆಕೆಯನ್ನು ಪ್ರಾಣಾಪಾಯದಿಂದ ರಕ್ಷಿಸಲು ನೆರವಾಯಿತು.

ತಾಲಿಬಾನ್ ಅಟ್ಟಹಾಸ: ದಿಕ್ಕೇ ತೋಚದ ಕಂದಮ್ಮಗಳಿಗೆ ಅಮೆರಿಕನ್ ಸೈನಿಕರ ಆಸರೆ!

ಪರಿಸ್ಥಿತಿ ಬಿಗಡಾಯಿಸುತ್ತಿದ್ದ ಕಾರಣ ಪೈಲೆಟ್ ವಿಮಾನವನ್ನು ಜರ್ಮನಿಯಲ್ಲಿರುವ ಅಮೆರಿಕಾ ಏರ್ ಬೇಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ತಕ್ಷಣವೇ ಅಮೆರಿಕ ಮಿಲಿಟರಿ ವೈದ್ಯಕೀಯ ಸಿಬ್ಬಂದಿಗಳು ಗರ್ಭಿಣಿ ಮಹಿಳೆಗೆ ನೆರವಿಗೆ ಧಾವಿಸಿದ್ದಾರೆ. ವಿಮಾನದಲ್ಲಿ ತಾಯಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು ಯುಎಸ್ ಮಿಲಿಟರಿ ಏರ್‌ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಅಮೆರಿಕ ವಿಲಿಟರಿ ಹೇಳಿದೆ. 

click me!