ಕನ್ನಡತಿಯ ಬಿಂದು; ವೃತ್ತಿ ಬದುಕಿಗೊಂದು ತಿರುವು: ಮೊಹಿರಾ ಆಚಾರ್ಯ

By Suvarna News  |  First Published Aug 22, 2021, 4:46 PM IST

ಮೊಹಿರಾ ಆಚಾರ್ಯ ಎನ್ನುವ ಹೆಸರಿಗಿಂತ `ಕನ್ನಡತಿಯ ಬಿಂದು ಪಾತ್ರಧಾರಿ’ ಎಂದರೆ ಎಲ್ಲರಿಗೂ ತಿಳಿಯಬಹುದಾದ ಹೆಸರು. ಅದಕ್ಕೆ ಕನ್ನಡತಿ ಧಾರಾವಾಹಿ ತಂದುಕೊಟ್ಟ ಜನಪ್ರಿಯತೆಯೇ ಕಾರಣ. ತಮ್ಮ ಧಾರಾವಾಹಿ ಕ್ಷೇತ್ರದ ಪಯಣದ ಬಗ್ಗೆ ಮೊಹಿರಾ ಆಚಾರ್ಯ ಇಲ್ಲಿ ಮಾತನಾಡಿದ್ದಾರೆ.


ಕನ್ನಡತಿ ಧಾರಾವಾಹಿಯಲ್ಲಿ ಭುವಿ ಎನ್ನುವ ಭುವನೇಶ್ವರಿಯಷ್ಟೇ ಪ್ರೇಕ್ಷಕರಿಗೆ ಆತ್ಮೀಯವಾದವರು ಆಕೆಯ ತಂಗಿ ಬಿಂದು. ಅದಕ್ಕೆ ಕಾರಣ ಭುವಿ ಮನಸ್ಸು ಮಾಡಿದರೆ ಹೇಗೆ ವಿರೋಧಿಗಳ ಮುಖಕ್ಕೆ ಹೊಡೆದಂತೆ ಮಾತನಾಡಬಹುದು ಎನ್ನುವ ಪ್ರೇಕ್ಷಕರ ಆಸೆಗೆ ಧ್ವನಿಯಾಗುವವರೇ ಬಿಂದು. ಅಂದಹಾಗೆ ಅಂಥದೊಂದು `ಬಿಂದು’ ಪಾತ್ರವನ್ನು ಇದುವರೆಗೆ ಇಬ್ಬರು ನಟಿಸಿ ಹೋಗಿದ್ದಾರೆ. ಮೂರನೆಯವರಾಗಿ ಬಂದಿರುವ ಮೊಹಿರಾ ಆಚಾರ್ಯ ಅವರೆಲ್ಲರನ್ನು ಮರೆಸುವ ಹಾಗೆ ಇಂದು ಪ್ರೇಕ್ಷಕರ ಮನದೊಳಗೆ ಇಳಿದಿದ್ದಾರೆ. ಅದಕ್ಕೆ ಪೂರಕವಾದ ಅಂಶಗಳ ಬಗ್ಗೆ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಇಲ್ಲಿ ಮಾತನಾಡಿದ್ದಾರೆ.

- ಶಶಿಕರ ಪಾತೂರು

Tap to resize

Latest Videos

undefined

ಒಬ್ಬರು ಮಾಡಿದ್ದ ಪಾತ್ರವನ್ನು ಮಾಡಬೇಕಾಗಿ ಬಂದಾಗ ಆತಂಕವಾಗಿತ್ತೇ?
ಇಲ್ಲ. ನನಗೆ ಆಫರ್ ಬಂದಾಗ ಖುಷಿಯಾಗಿತ್ತು. ಯಾಕೆಂದರೆ ಅದಾಗಲೇ `ಕನ್ನಡತಿ’ ಧಾರಾವಾಹಿ ಹೊಸತನದಿಂದ ಕೂಡಿದೆ ಎನ್ನುವ ಬಗ್ಗೆ ಸಾಕಷ್ಟು ಮಂದಿ ಮಾತನಾಡುವುದನ್ನು ಕೇಳಿದ್ದೆ. ನಟನೆಯಲ್ಲಿ ಅವಕಾಶಕ್ಕಾಗಿ ಕಾದಿದ್ದ ನನಗೆ ಮೊದಲ ಧಾರಾವಾಹಿಯ ಚಿತ್ರೀಕರಣ ಪೂರ್ತಿ ಮಾಡಿದ ಎರಡನೇ ದಿನವೇ ಇಂಥದೊಂದು ಆಫರ್ ತಾನಾಗಿಯೇ ಬಂದಾಗ ಖುಷಿಯಾಗಿತ್ತು. ಸ್ಕ್ರೀನ್ ಟೆಸ್ಟ್ ಗಾಗಿ ಕರೆದವರು ಮರುದಿನವೇ ಚಿತ್ರೀಕರಣಕ್ಕೆ ಹಾಜರಾಗಲು ಹೇಳಿದರು. ಈಗಾಗಲೇ ಜನರಿಂದ ಮೆಚ್ಚುಗೆ ಗಳಿಸಿದ್ದ ಪಾತ್ರವಾದ ಕಾರಣ ಜವಾಬ್ದಾರಿ ಹೆಚ್ಚು ಇತ್ತು. ನಾನು ಅದಕ್ಕಿಂತ ಚೆನ್ನಾಗಿ ಮಾಡಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ತಕ್ಕಂತೆ ನನಗೆ ನಿರ್ದೇಶಕ ಯಶವಂತ್ ಅವರು ತುಂಬಾನೇ ಸಹಾಯ ಮಾಡಿದ್ದಾರೆ. ಅವರಿಂದ ತುಂಬಾನೇ ಕಲಿತುಕೊಂಡೆ. ಪಾತ್ರದ ಮೂಲಕ ನನ್ನಲ್ಲಿ ತುಂಬ ಇಂಪ್ರೊವೈಸೇಶನ್ ಮಾಡುವ ಅವಕಾಶ ದೊರೆಯಿತು.

ರಾಬರ್ಟ್ ನಿರ್ಮಾಪಕ ಉಮಾಪತಿ ಫಿಲ್ಮ್ ಸಿಟಿ ಯೋಜನೆ ಹಾಕಿದ್ದೇಕೆ?

ನಿಮಗೆ ನಟಿಯಾಗಬೇಕೆಂಬ ಆಕಾಂಕ್ಷೆ ಬಂದಿದ್ದು ಹೇಗೆ?
ನನಗೆ ಮೊದಲಿಂದಲೂ ಡಾನ್ಸ್, ಡ್ರಾಯಿಂಗ್, ಪೆಯಿಂಟಿಂಗ್ ಅಂದರೆ ತುಂಬ ಇಷ್ಟ ಇತ್ತು. ಆದರೆ ನನಗೆ ಅದು ಯಾವುದನ್ನು ಕೂಡ ವೃತ್ತಿಯಾಗಿಸಬೇಕು ಎನ್ನುವುದು ತಲೆಯಲ್ಲಿ ಇರಲಿಲ್ಲ. ಓದಿದ್ದು ಇಂಜಿನಿಯರಿಂಗ್. ನಾನು ಬಾಲಿವುಡ್ ಡಾನ್ಸ್ ಸ್ಟೈಲ್ ಕಲಿತಿದ್ದೇನೆ. ನಾಟ್ಯದ ಜೊತೆಯಲ್ಲೇ ಹಾಡಿನ ಅರ್ಥಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೆ. ಒಂಬತ್ತನೇ ಕ್ಲಾಸ್ ರಜಾದಲ್ಲಿದ್ದಾಗ ಮಲ್ಲೇಶ್ವರದಲ್ಲಿ ಆನರಾವ್  ಜಾಧವ್ ಬಳಿಯಲ್ಲಿ ವಾರಗಳ ಕಾಲ ತರಬೇತಿ ಪಡೆದಿದ್ದೆ. ಫಸ್ಟ್ ಪಿಯು ಬಳಿಕ `ಮಿತ್ರ ಸಂಗಮ’ ಇನ್ಸ್ಟಿಟ್ಯೂಟಲ್ಲಿ ಕೌಶಲ್ ಸರ್ ಬಳಿಯಲ್ಲಿ ತಿಂಗಳ ಕಾಲ ತರಬೇತಿ ಪಡೆದೆ. ಆ ಬಳಿಕ ಶಾರ್ಟ್‌ಮೂವೀಸ್‌, ಕವರ್‌ ಸಾಂಗ್ಸ್ ಮಾಡುತ್ತಿದ್ದ ನನ್ನನ್ನು ಧಾರಾವಾಹಿ ಕ್ಷೇತ್ರಕ್ಕೆ ಪ್ರವೇಶ ನೀಡಿದ್ದು ಸುವರ್ಣ ವಾಹಿನಿಯ `ಪ್ರೇಮಲೋಕ’ ಧಾರಾವಾಹಿ ಎಂದೇ ಹೇಳಬಹುದು.
 

ನನ್ನ ದಾರಿಗೆ ಅಡ್ಡ ಬಂದರೆ ಸುಮ್ಮನಿರೋಲ್ಲ- ಶಮಂತ್

ಕನ್ನಡತಿ ನಿಮ್ಮಲ್ಲಿ ತಂದುಕೊಟ್ಟ ಬದಲಾವಣೆಗಳೇನು?
ಕನ್ನಡತಿ ನನಗೆ ನಟಿಯಾಗಿ ಒಂದು ಟರ್ನ್ ನೀಡಿದೆ ಎಂದೇ ಹೇಳಬಹುದು. ಸಾಕಷ್ಟು ಜನ ಗುರುತಿಸುವಂತಾಯಿತು. ಅದರಿಂದ ಖುಷಿಯಾಗಿದೆ. ಚಿತ್ರೋದ್ಯಮದ ಕಡೆಯಿಂದಲೂ ಅವಕಾಶಗಳು ಹೆಚ್ಚಿವೆ. ಇಲ್ಲಿ ನಟಿಸುತ್ತಿರುವ ಕಾರಣ ಬೇರೆ ಧಾರಾವಾಹಿಗಳಲ್ಲಿ ಲೀಡ್ ಆಗಿ ಕರೆದರೂ ನಾನು ಹೋಗಿಲ್ಲ. ಯಾಕೆಂದರೆ ಲೈಫ್ ಕೊಟ್ಟ ಧಾರಾವಾಹಿಯನ್ನು ಅರ್ಧದಲ್ಲೇ ಬಿಟ್ಟು ಹೋಗುವುದು ವೃತ್ತಿ ಧರ್ಮ ಅಲ್ಲ ಅಲ್ವಾ? ಅಂಥ ಅವಕಾಶಗಳು ಬೇಕಾಗಿಲ್ಲ. ಆದರೆ ಕನ್ನಡತಿಯ ಬಳಿಕ ನಾನು ಒಪ್ಪಿಕೊಂಡು ನಟಿಸಿದ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ತಂಡದವರು ಇನ್ನೂ ಶೀರ್ಷಿಕೆ ಅನೌನ್ಸ್ ಮಾಡಿಲ್ಲ. ಹಾಗಾಗಿ ಆ ಬಗ್ಗೆ ಹೆಚ್ಚು ನಾನು ಹೇಳುವಂತಿಲ್ಲ. ಅದರ ತಾರಾಗಣದಲ್ಲಿ ಹೊಸಬರೇ ಇದ್ದೇವೆ. ಆದರೆ ತೆಲುಗಿನಲ್ಲಿ ಚಿತ್ರಗಳನ್ನು ನೀಡಿರುವ ಕೋಟಿಪತಿ ಶ್ರೀನಿವಾಸ್ ನಿರ್ದೇಶಕ. ಒಟ್ಟಿನಲ್ಲಿ ಪ್ರೇಕ್ಷಕರು ತುಂಬ ಪ್ರೀತಿ ತೋರಿಸುತ್ತಿದ್ದಾರೆ . ಅದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದುಕೊಂಡಿದ್ದೇನೆ.

click me!