ನಟನೆಯಲ್ಲೇ ಸುಖ ಎನ್ನುತ್ತಾರೆ ನಿಮಿಕಾ..!

By Suvarna News  |  First Published Jan 21, 2021, 2:41 PM IST

ನಿಮಿಕಾ ರತ್ನಾಕರ್ ಹೆಸರು ಹೇಳಿದಾಕ್ಷಣ ಗೊತ್ತಾಗಲಾರದು. ಅದಕ್ಕೆ ಕಾರಣ ನಟಿಸಿರುವ ಪ್ರಮುಖ ಚಿತ್ರಗಳು ಇನ್ನು ಕೂಡ ಬಿಡುಗಡೆಯಾಗಿಲ್ಲ. ಆದರೆ ಕಲೆಯನ್ನು ಪ್ರೀತಿಸುವ ಈ ಕಲಾವಿದೆಯ ಚಿತ್ರಗಳು ತೆರೆಕಂಡ ಮೇಲೆ ಈಕೆ ಕನ್ನಡಿಗರ ಕೈಗೆಟುಕದಷ್ಟು ಎತ್ತರ ಬೆಳೆಯುವುದು ಖಚಿತ.


-ಶಶಿಕರ ಪಾತೂರು

ಕನ್ನಡದಲ್ಲಿ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಪರಭಾಷೆಗೆ ಹೋಗಿ ಗೆದ್ದವರು ಹಲವರಿದ್ದಾರೆ. ಈಗ ಕನ್ನಡದಲ್ಲಿ ಅವಕಾಶಗಳಿದ್ದರೂ ಮೊದಲ ಆದ್ಯತೆಯನ್ನು ಪರಭಾಷೆಗೆ ನೀಡುವವರೂ ಇದ್ದಾರೆ. ಯಾಕೆಂದರೆ ಅಲ್ಲಿ ಸಿಗುವ ಜನಪ್ರಿಯತೆ, ಸಂಭಾವನೆ ಎಲ್ಲವೂ ದೊಡ್ಡ ಮಟ್ಟದ್ದು. ಹಾಗೆ ಹೋಗಿ ಹೆಸರು ಮಾಡಿದವರ ಬೆನ್ನು ಬೀಳುವವರಿಗೆ ನಮ್ಮಲ್ಲಿ ಕೊರತೆ ಇಲ್ಲ.

Tap to resize

Latest Videos

undefined

ಆದರೆ ಆಮಟ್ಟಕ್ಕೆ  ಬೆಳೆಯಬಲ್ಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಮಾತ್ರ ಹಿಂದೆ ಬಿದ್ದಿದ್ದೇವೆ. ಆ ನಿಟ್ಟಿನಲ್ಲಿ ಸರಿಯಾದ ಅವಕಾಶ ಸಿಕ್ಕರೆ ನಂಬರ್ ಒನ್ ತಾರೆಯಾಗಬಲ್ಲ ಎಲ್ಲ ಲಕ್ಷಣ ಹೊಂದಿರುವಂಥ ನಟಿ ನಿಮಿಕಾ ರತ್ನಾಕರ್. ವರ್ಷಗಳ ಪ್ರಯತ್ನಕ್ಕೆ ಇದೀಗ ತಾನೇ ಫಲ ಕಾಣುತ್ತಿರುವ ಈ ಚೆಲುವೆಯೊಂದಿಗಿನ ಮಾತುಕತೆ ಇದು.  

ಕೊನೆಗೂ ಕನ್ನಡ ಚಿತ್ರರಂಗ ನಿಮ್ಮ ಕೈ ಹಿಡಿಯಿತು ಎನ್ನಬಹುದೇ?

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎನ್ನುವ ನಂಬಿಕೆ ನನಗೂ ಇದೆ. ಬಹುಶಃ ಈಗ ಆ ಕಾಲ ಕೂಡಿ ಬಂದಿರಬೇಕು; ಹಾಗಾಗಿಯೇ ಕೈ ತುಂಬ ಸಿನಿಮಾಗಳಿವೆ. ಆದರೆ ಅವುಗಳ ಬಿಡುಗಡೆಗೂ ಕಾಲ ಕೂಡಿ ಬರಬೇಕು! ಉದಾಹರಣೆಗೆ ಕಳೆದ ವರ್ಷ ಎಲ್ಲರೂ ಶ್ರಮ ಪಟ್ಟಿದ್ದಾರೆ. ಆದರೆ ನಿರಾಶೆ ಎಲ್ಲರಿಗೂ ಒಂದೇ ರೀತಿಯಲ್ಲಿ ಎದುರಾಗಿದೆ. ನಮ್ಮ ಪರಿಶ್ರಮವನ್ನು ನಾವು ಕೈ ಬಿಡಬಾರದು. ಸಮಯ ಬಂದಾಗ ಅದೆಲ್ಲವೂ ಉಪಯೋಗಕ್ಕೆ ಬರುತ್ತದೆ ಎಂದುಕೊಂಡವಳು ನಾನು. ಕನ್ನಡ ಚಿತ್ರರಂಗ ನನ್ನನ್ನು ಮೊದಲ ಸಿನಿಮಾದಿಂದಲೇ ಕೈ ಹಿಡಿದಿದೆ. ಯಾಕೆಂದರೆ ನನಗೆ ಮೊದಲ ಚಿತ್ರ `ರಾಮಧಾನ್ಯ'ಕ್ಕೆ ರಾಜ್ಯ ಪ್ರಶಸ್ತಿಯೂ ಲಭ್ಯವಾಗಿತ್ತು. ಚಿತ್ರರಂಗದಲ್ಲೇ ಏನಾದರೂ ಸಾಧಿಸಬೇಕು ಎನ್ನುವ ಹುಮ್ಮಸ್ಸು ಉಂಟಾಗಲು ಅದೇ ಕಾರಣ.

ತಂಗಿಗೆ ಯಶ್ ಕೊಟ್ಟ ಉಡುಗೊರೆ ಏನು ಗೊತ್ತೇ?

ನಟಿಯಾಗದಿದ್ದರೆ ಬೇರೆ ಯಾವ ಕ್ಷೇತ್ರ ಆಯ್ಕೆ ಮಾಡಬೇಕು ಎಂದುಕೊಂಡಿದ್ದಿರಿ?

ನಾನು ಕಲಿತಿದ್ದು ಇಂಜಿನಿಯರಿಂಗ್. ವೃತ್ತಿಯಲ್ಲಿಯೂ  ಇಂಜಿನಿಯರ್ ಆಗಿಯೇ ಇದ್ದೆ. ಆದರೆ 2017ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಸುಪರ್ ಟ್ಯಾಲೆಂಟ್ ಆಗಿ ಆಯ್ಕೆಯಾದೆ. ವಿಚಿತ್ರ ಏನೆಂದರೆ ಅದಕ್ಕೂ ಮೊದಲು ಕಾಲೇಜ್ ದಿನಗಳಲ್ಲಿ 75 ಕೆ.ಜಿಯಷ್ಟು ತೂಕವಿದ್ದೆ. ಗುರಿ ಇರಿಸಿಕೊಂಡು ಸ್ಪರ್ಧೆಗೆ ಇಳಿದರೆ ಗೆಲ್ಲಬೇಕು ಎನ್ನುವ ಛಲ ಇರುತ್ತದೆ. ಆನಂತರ ಇವತ್ತಿನವರೆಗೂ ನಾನು ನನ್ನ ಫಿಟ್‌ನೆಸ್‌ ಬಿಟ್ಟುಕೊಟ್ಟಿಲ್ಲ. ಈಗ ನನ್ನ ತೂಕ ಕೇವಲ 58ಕೆ.ಜಿ ಮಾತ್ರ!  ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಆದ ಬಳಿಕ ಕೊರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಾಗಿತ್ತು. ಆಗ ರಜಾ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಇಂಜಿನಿಯರಿಂಗ್ ವೃತ್ತಿಗೆ ರಾಜೀನಾಮೆ ಕೊಟ್ಟು ಸ್ಫರ್ಧಿಸಿದೆ. ಗ್ಲಾಮರ್ ಫೀಲ್ಡ್ ನನಗೆ ಹೊಸತಲ್ಲವಾದರೂ, ನಟಿಯಾಗುವುದಕ್ಕಿಂತ ಗಾಯಕಿಯಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕನ್ನಡದಲ್ಲಿ ಒಂದಷ್ಟು ಸಿನಿಮಾ ಹಾಡುಗಳಿಗೆ ಟ್ರ್ಯಾಕ್ ಸಿಂಗಿಂಗ್ ಕೂಡ ಮಾಡಿದ್ದೆ. ವಿ ಮನೋಹರ್ ಅವರ ಸಂಗೀತ ನಿರ್ದೇಶನದಲ್ಲಿ ತುಳು ಚಿತ್ರಗಳಿಗೆ ಹಾಡಿದ್ದೇನೆ. 

ಯೋಜನೆ ಹಾಕದ ಜೀವನ ನನ್ನದು: ಭೂಮಿಕಾ ಶೆಟ್ಟಿ

ನೀವು ಎಷ್ಟು ಭಾಷೆಗಳನ್ನು ಮಾತನಾಡಬಲ್ಲಿರಿ ?

ನಾನು ಹುಟ್ಟಿದ್ದು ಮಂಗಳೂರಿನಲ್ಲಿ. ತುಳು ನನ್ನ ಮಾತೃಭಾಷೆ. ಇನ್ನು ಕರ್ನಾಟಕದವಳಾಗಿದ್ದುಕೊಂಡು ಕನ್ನಡ ಚೆನ್ನಾಗಿ ಮಾತನಾಡದಿದ್ದರೆ ಹೇಗೆ? ನನ್ನ ಕನ್ನಡ ಉಚ್ಚಾರಣೆಯ ಸ್ಪಷ್ಟತೆಗೆ ನಾನು ಇದುವರೆಗೆ ಕೆಲಸ ಮಾಡಿರುವ ಚಿತ್ರತಂಡದವರೇ ಸಾಕ್ಷಿ. ಆದರೆ ವಿಪರ್ಯಾಸದ ವಿಚಾರ ಏನೆಂದರೆ ನನ್ನ ಫೊಟೊ ನೋಡಿದ ಒಂದಷ್ಟು ನಿರ್ದೇಶಕರು, ಈಕೆ ಯಾವುದೋ ಕನ್ನಡ ಬಾರದ ಉತ್ತರದ ಹುಡುಗಿ ಇರಬೇಕು ಎಂದುಕೊಂಡು ಸಂಪರ್ಕಿಸದೇ ಹೋದ ಉದಾಹರಣೆ ಇದೆ. ಪ್ರಸ್ತುತ ನಾನು ನಟಿಸುತ್ತಿರುವ `ಅಬ್ಬರ' ಚಿತ್ರದ ನಿರ್ದೇಶಕರಂತೂ ಇದನ್ನು ನೇರವಾಗಿಯೇ ಹೇಳಿದ್ದಾರೆ. ಅದೇ ರೀತಿ ನನಗೆ ಹಿಂದಿಕೂಡ ಗೊತ್ತು. ಚೆನ್ನಾಗಿ ಮಾತನಾಡಬಲ್ಲೆ. ಇನ್ನು ಅಲ್ಪ ಸ್ವಲ್ಪ ತೆಲುಗು ಕೂಡ ಕಲಿತಿದ್ದೇನೆ!

`ಕನ್ನಡತಿ'ಯ ವರಲಕ್ಷ್ಮಿ ಈ ಮಾಲಿನಿ ರಾವ್

ಸದ್ಯಕ್ಕೆ ನೀವು ನಟಿಸುತ್ತಿರುವ ಚಿತ್ರಗಳು ಯಾವುವು?

ಓಂ ಪ್ರಕಾಶ್ ರಾವ್ ನಿರ್ದೇಶನದ `ತ್ರಿಶೂಲಂ' ಚಿತ್ರದಲ್ಲಿ ನಾನು ಉಪೇಂದ್ರ ಅವರಿಗೆ ಜೋಡಿಯಾಗಿದ್ದೇನೆ. ಅದರಲ್ಲಿ ರವಿಚಂದ್ರನ್ ಅವರು ಉಪೇಂದ್ರ ಅವರ ಅಣ್ಣನಾಗಿ ನಟಿಸಿದ್ದಾರೆ. ಅದರಲ್ಲಿ ನನ್ನದು ಫನ್ ಲವ್ವಿಂಗ್ ಕ್ಯಾರೆಕ್ಟರ್. ಆಗಲೇ ಹೇಳಿದಂತೆ `ಅಬ್ಬರ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಜೊತೆಗೆ ನಟಿಸಿದ್ದೇನೆ. ಅಲ್ಲಿ ನನಗೆ ರೌಡಿ ರೀತಿಯ ಪಾತ್ರ. ಇನ್ನು ಧರ್ಮಕೀರ್ತಿಯವರ ಜೊತೆಗೆ ಸಾಫ್ಟ್ ನೇಚರ್ ಇರುವ ಹುಡುಗಿಯಾಗಿ ನಟಿಸುತ್ತಿದ್ದೇನೆ. ಇವುಗಳಲ್ಲದೆ `ಡಾರ್ಲಿಂಗ್ ಕೃಷ್ಣ' ನಟನೆಯ ಮಿ. ಬ್ಯಾಚುಲರ್ ಸಿನಿಮಾದಲ್ಲಿ ಮಾಡರ್ನ್ ಹುಡುಗಿಯ ಪಾತ್ರವಿದೆ. ಹೀಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರ ದೊರಕುತ್ತಿರುವುದಕ್ಕೆ ಖುಷಿಯಿದೆ. ಇದೇ ರೀತಿ ಸಿನಿಮಾಗಳಲ್ಲಿ ಚೆನ್ನಾಗಿರುವ ಪಾತ್ರಗಳ ಮೂಲಕ ಇನ್ನಷ್ಟು ಜನರ ಅಭಿಮಾನ ಪಡೆಯಬೇಕು ಎನ್ನುವುದೇ ನನ್ನ ಆಶಯ.

click me!