ಸ್ಯಾಂಡಲ್‌ವುಡ್‌ನಲ್ಲಿ ಸಾಮಾಜಿಕ ಜವಾಬ್ದಾರಿ ಮೇಲೆ ನಿಂತಿರುವ ಚಿತ್ರ ವಿಕಾಸ ಪರ್ವ: ರೋಹಿತ್‌ ನಾಗೇಶ್‌

Published : Sep 13, 2024, 05:25 PM IST
ಸ್ಯಾಂಡಲ್‌ವುಡ್‌ನಲ್ಲಿ ಸಾಮಾಜಿಕ ಜವಾಬ್ದಾರಿ ಮೇಲೆ ನಿಂತಿರುವ ಚಿತ್ರ ವಿಕಾಸ ಪರ್ವ: ರೋಹಿತ್‌ ನಾಗೇಶ್‌

ಸಾರಾಂಶ

ಬಹಳ ಸರಳವಾದ ವಿಷಯ ಸಿನಿಮಾದ್ದು, ಆದರೆ ಸಂಕೀರ್ಣ ವಿಚಾರ ಇದೆ. ಇದು ಪ್ರತಿ ಮನೆಯ ಸಮಸ್ಯೆ. ಮೇಲ್ನೋಟಕ್ಕೆ ಸಿಂಪಲ್‌. ಆದರೆ ಇದು ಜಾಸ್ತಿಯಾಗುತ್ತಾ ಹೋಗಿ ಗಹನಕ್ಕೆ ಇಳಿದಾಗ ಅದರ ಗಾಂಭೀರ್ಯ ಅರ್ಥ ಆಗುತ್ತೆ.

- ಈ ಸಿನಿಮಾಗೆ ಕತೆ, ಚಿತ್ರಕಥೆ ಬರೆದವರು ವಿಶ್ರುತ್‌ ನಾಯಕ್‌. ಅವರು ಯಾವಾಗಲೂ ಒಂದೊಳ್ಳೆ ಕಥೆ ತರ್ತೀನಿ ಸಿನಿಮಾ ಮಾಡೋಣ ಅಂತ ಹೇಳ್ತಿದ್ರು. ಒಮ್ಮೆ ಅವರು ನಿರ್ದೇಶಕ ಅನ್ಬು ಅರಸ್‌ ಜೊತೆ ಬಂದರು. ಒಂದು ಕಥೆ ಹೇಳಿದರು. ಬಹಳ ಚೆನ್ನಾಗಿದೆಯಲ್ಲಾ ಅನಿಸಿತು. ‘ಈ ಕಥೆ ಸಿನಿಮಾ ಆಗಬೇಕು’ ಅಂತ ಅವರ ಬಳಿ ಹೇಳಿದೆ.

- ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸಮೀರ್‌ ಕಥೆ ಕೇಳಿದ ಕೂಡಲೇ ಸಿನಿಮಾ ನಿರ್ಮಿಸಲು ಮುಂದಾದರು. ಒಂದೊಳ್ಳೆ ಕಥೆಗೆ ಪ್ರೊಡ್ಯೂಸರ್‌ ಸಿಕ್ಕರಲ್ಲಾ ಅಂತ ಸಂತೋಷಪಟ್ಟು ನನ್ನ ಪಾಡಿಗಿದ್ದೆ. ಆಗ ವಿಶ್ರುತ್‌ ಮತ್ತು ಅನ್ಬು ಮತ್ತೆ ಬಂದು ನೀವೇ ಲೀಡ್‌ ಪಾತ್ರ ಮಾಡಬೇಕು ಅಂದುಬಿಟ್ಟರು. ಪಾತ್ರ ನನಗೆ ಚೆನ್ನಾಗಿ ಸೂಟ್ ಆಗ್ತಿದೆ ಅನಿಸಿ ಒಪ್ಪಿದೆ. ಅಂದುಕೊಂಡ ಹಾಗೆ ಸಿನಿಮಾದ ಕೆಲಸ ಮುಗಿದು ಇದೀಗ ತೆರೆಗೆ ಬರುತ್ತಿದೆ. ಎಂದೋ ಮನಸ್ಸೊಳಗೆ ಸೇರಿಕೊಂಡ ಕನಸು ಇದೀಗ ನನಸಾಗುತ್ತಿದೆ.

ತಮನ್ನಾಗೆ ವಿಜಯ್ ವರ್ಮಾ ಫಸ್ಟ್ ಲವ್ ಅಲ್ಲ: ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರಿ ಬ್ರೇಕಪ್

- ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೀವಿ. ಪ್ರೇಕ್ಷಕ ಸಿನಿಮಾ ನೋಡಿ ವಾಪಾಸ್‌ ಹೋಗುವಾಗ ಮನರಂಜನೆಯ ಜೊತೆಗೆ ಭಾವನಾತ್ಮಕ ವಿಷಯವನ್ನು ಎದೆಯೊಳಗೆ ಇಟ್ಟುಕೊಂಡು ಹೋಗ್ತಾನೆ.

- ಬಹಳ ಸರಳವಾದ ವಿಷಯ ಸಿನಿಮಾದ್ದು, ಆದರೆ ಸಂಕೀರ್ಣ ವಿಚಾರ ಇದೆ. ಇದು ಪ್ರತಿ ಮನೆಯ ಸಮಸ್ಯೆ. ಮೇಲ್ನೋಟಕ್ಕೆ ಸಿಂಪಲ್‌. ಆದರೆ ಇದು ಜಾಸ್ತಿಯಾಗುತ್ತಾ ಹೋಗಿ ಗಹನಕ್ಕೆ ಇಳಿದಾಗ ಅದರ ಗಾಂಭೀರ್ಯ ಅರ್ಥ ಆಗುತ್ತೆ.

- ಸಿನಿಮಾದ ಅಡಿಬರಹ ‘ಕನ್‌ಫ್ಯೂಶನ್‌ ಟು ಕನ್‌ಕ್ಲೂಷನ್‌’ ಅಂತಿದೆ. ಕನ್‌ಫ್ಯೂಶನ್‌ನೊಂದಿಗೆ ಹೊರಟ ವ್ಯಕ್ತಿಯೊಬ್ಬ ಕನ್‌ಕ್ಲೂಷನ್‌ಗೆ ಬರುವವರೆಗಿನ ಜರ್ನಿಯೇ ವಿಕಾಸ ಪರ್ವ.

28 ವರ್ಷದ ಸಿನಿ ಜರ್ನಿಯಲ್ಲಿ ಇದು ಕಿಚ್ಚನ ಹೊಸ ಸಾಹಸಗಾಥೆ: ಸುದೀಪ್ ಹೊಸ ಚಿತ್ರಕ್ಕೆ ಖರ್ಚಾಗುತ್ತಿದೆ 140 ಕೋಟಿ!

- ಸಕಲೇಶಪುರ ನನ್ನೂರು. ಇಂಜಿನಿಯರಿಂಗ್‌ ಮಾಡ್ತಿದ್ದಾಗ ಕಾಲೇಜಿಗೇ ‘ಕಲ್ಚರಲ್‌ ಚಾಂಪಿಯನ್‌’ ಆಗಿದ್ದೆ. ಆದರೆ ಸಿನಿಮಾ ನಟನೆಯ ಕಲ್ಪನೆ ಇರಲಿಲ್ಲ. ಕಾಲೇಜು ಮುಗಿದು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡ್ಕೊಂಡಿದ್ದೆ. ನನ್ನ ಎಂಗೇಜ್‌ಮೆಂಟ್‌ ಮತ್ತು ಮದುವೆ ಸಮಯದಲ್ಲಿ ಸಿನಿಮಾ ಅವಕಾಶಗಳು ಬಂದವು. ಆದರೆ ನನ್ನ ಹುಡುಗಿ ಒಪ್ಪದಿದ್ದ ಕಾರಣ ಮಾಡಲಿಲ್ಲ. ಮುಂದೆ ಆಕೆಯ ಮನಪರಿವರ್ತನೆ ಆಗಿ, ‘ನೀನು ಸಿನಿಮಾ ಮಾಡಬೇಕು’ ಅಂತ ಒತ್ತಾಯಿಸಿದ ಕಾರಣಕ್ಕೆ ಮತ್ತೆ ಸಿನಿಮಾ ರಂಗಕ್ಕೆ ಬಂದೆ. ಈಗ ಕಾರ್ಪೊರೇಟ್‌ ಟ್ರೈನರ್‌ - ಎನ್‌ಎಲ್‌ಬಿ ಮಾಸ್ಟರ್‌ ಕೋಚ್‌ ಆಗಿದ್ದೀನಿ. ಸಿನಿಮಾ, ಸೀರಿಯಲ್‌ನಲ್ಲೂ ನಟಿಸ್ತೀನಿ. ಸದ್ಯ ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸುತ್ತಿದ್ದೇನೆ. ಹೆಂಡತಿಗೆ ನಾನು ಒಳ್ಳೆಯವನು ಅಂತ ಗೊತ್ತಾಗಿದೆ. ಅವಳು ಖುಷಿಯಾಗಿದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು