28 ವರ್ಷದ ಸಿನಿ ಜರ್ನಿಯಲ್ಲಿ ಇದು ಕಿಚ್ಚನ ಹೊಸ ಸಾಹಸಗಾಥೆ: ಸುದೀಪ್ ಹೊಸ ಚಿತ್ರಕ್ಕೆ ಖರ್ಚಾಗುತ್ತಿದೆ 140 ಕೋಟಿ!

ಕಿಚ್ಚ ತನ್ನ ಕನಸಿನಂತೆ ಸ್ಟಾರ್​ ಡೈರೆಕ್ಟರ್​ ಆಗಿಯೂ ಸಕ್ಸಸ್ ಆಗಿದ್ದಾರೆ. ಕಿಚ್ಚನ ಸಾಹಸಗಳು ಒಂದೆರಡಲ್ಲಾ ಅನ್ನೋದಕ್ಕೆ ನಿರ್ದೇಶಕ, ನಟ, ನಿರ್ಮಾಪಕ, ಸಿಂಗರ್​​, ರೈಟರ್​​, ಆ್ಯಂಕರ್​, ಕ್ರಿಕೆಟರ್​​​​ ಅಬ್ಬಬ್ಬಾ ಹೀಗೆ ಎಲ್ಲಾ ರಂಗದಲ್ಲೂ ಬಾದ್​ ಷಾ ಮಾರ್ಕ್​​ ಮಾಡುತ್ತಾ ಬಂದಿದ್ದಾರೆ. 

First Published Sep 13, 2024, 4:51 PM IST | Last Updated Sep 13, 2024, 4:51 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಜರ್ನಿಗೆ 29ರ ಹರೆಯ. ಕಿಚ್ಚ ಇಷ್ಟು ವರ್ಷದಲ್ಲಿ 45ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಇಷ್ಟು ಸಿನಿಮಾಗಳದ್ದು ಒಂದು ಲೆಕ್ಕ ಆದ್ರೆ, ಈಗ ಬಾದ್​​​ ಷಾ ಹೆಜ್ಜೆ ಇಟ್ಟಿರೋ ಹೊಸ ಸಿನಿಮಾದ್ದು ಇನ್ನೊಂದು ಲೆಕ್ಕ. ಯಾಕಂದ್ರೆ ಆ ಹೊಸ ಸಿನಿಮಾ 140 ಕೋಟಿ ವೆಚ್ಚದಲ್ಲಿ ಒಂದು ವರ್ಷ ಶೂಟಿಂಗ್​​​​​​ ನಡೆಯಲಿದೆಂತೆ. ಹಾಗಾದ್ರೆ ಬಾದ್​ ಷಾನಾ ಹೊಸ ಸಾಹಸ ಹೇಗಿರುತ್ತೆ..? ಇಲ್ಲಿದೆ ನೋಡಿ ಎಕ್ಸ್​ಕ್ಲ್ಯೂಸೀವ್ ಡಿಟೈಲ್ಸ್​. ಆಲ್​ ಇಂಡಿಯಾ ಆರಡಿ ಕಟೌಟ್​ ಕಿಚ್ಚ ಸುದೀಪ್​ ಸಾಹಸಗಳು ಒಂದೆರಡಲ್ಲ. ನಿರ್ದೇಶಕ ಆಗೋ ಕನಸು ಕಟ್ಟಿಕೊಂಡು ಸ್ಯಾಂಡಲ್​ವುಡ್​ಗೆ ಬಂದಿದ್ದ ಸುದೀಪ್​ಗೆ ಇಲ್ಲ ಇಲ್ಲ. ನನ್ನ ಹೈಟು ಪರ್ಸನಾಲಿಟಿ ನೋಡಿದ್ರೆ ಮೊದಲು ಹೀರೋ ಆಗು ಅಂತ ಹೇಳಿದ್ರು ಉಪೇಂದ್ರ. ಉಪ್ಪಿ ಹೇಳಿದ್ದ ಒಂದೇ ಒಂದು ಮಾತು ಇಂದು ಭಾರತೀಯ ಚಿತ್ರರಂಗದಲ್ಲಿ ಸುದೀಪ್​ ಸ್ಟಾರ್ ಆಗಿ ಮೆರೆಯೋ ಹಾಗಾಗಿದೆ. 

ಅಷ್ಟೆ ಅಲ್ಲ ಕಿಚ್ಚ ತನ್ನ ಕನಸಿನಂತೆ ಸ್ಟಾರ್​ ಡೈರೆಕ್ಟರ್​ ಆಗಿಯೂ ಸಕ್ಸಸ್ ಆಗಿದ್ದಾರೆ. ಕಿಚ್ಚನ ಸಾಹಸಗಳು ಒಂದೆರಡಲ್ಲಾ ಅನ್ನೋದಕ್ಕೆ ನಿರ್ದೇಶಕ, ನಟ, ನಿರ್ಮಾಪಕ, ಸಿಂಗರ್​​, ರೈಟರ್​​, ಆ್ಯಂಕರ್​, ಕ್ರಿಕೆಟರ್​​​​ ಅಬ್ಬಬ್ಬಾ ಹೀಗೆ ಎಲ್ಲಾ ರಂಗದಲ್ಲೂ ಬಾದ್​ ಷಾ ಮಾರ್ಕ್​​ ಮಾಡುತ್ತಾ ಬಂದಿದ್ದಾರೆ. ಇದೀಗ ಸುದೀಪ್ ಸಿನಿ ಖರಿಯರ್​ನಲ್ಲಿ ಮತ್ತೊಂದು ಸಾಹಸದ ಅಧ್ಯಾಯ ಆರಂಭ ಆಗಿದೆ. ಸುದೀಪ್​​​​ 45ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚನ ಹೈಯೆಸ್ಟ್ ಬಜೆಟ್ ಸಿನಿಮಾ ವಿಕ್ರಾಂತ್ ರೋಣ. ನಿರ್ದೇಶಕ ಅನೂಪ್ ಬಂಢಾರಿ ದೊಡ್ಡ ಕಾಡನ್ನೇ ಸೃಷ್ಟಿಸಿ ಹೆವಿ ಸಿಜಿ ವರ್ಕ್​ ಮಾಡಿ ಬರೋಬ್ಬರಿ 95 ಕೋಟಿ ಬಂಡವಾಳ ಹಾಕಿ ಈ ಸಿನಿಮಾ ಹೊರಗೆ ತಂದಿದ್ರು. ಇದೀಗ ಇದೇ ಕಾಂಬೋ ಅನೂಪ್​ ಹಾಗು ಸುದೀಪ್​ ಬಿಲ್ಲ ರಂಗ ಭಾಷಾ ಸಿನಿಮಾ ಅನೌನ್ಸ್ ಮಾಡಿದ್ದಾರೆ. 

ಈ ಬಿಲ್ಲ ರಂಗ ಭಾಷನ ಬಗ್ಗೆ ಎಕ್ಸ್​ಕ್ಲ್ಯೂಸೀಬವ್ ಸುದ್ದಿ ಏಷ್ಯಾನೆಟ್​ ಸುವರ್ಣ ನ್ಯೂಸ್​ಗೆ ಸಿಕ್ಕಿದ್ದು. ಈ ಮೂವಿ ಬಜೆಟ್​ 140 ಕೋಟಿಯಂತೆ. ಒಂದ್ ಸಿನಿಮಾಗೆ 100 ಕೋಟಿ ಬಂಡವಾಳ ಹೂಡೋದು ಅಂದ್ರೆ ಸುಮ್ಮನೆ ಮಾತಲ್ಲ. ನಿಜಕ್ಕೂ ಅದೊಂದು ಸಾಹಸ. ಗಟ್ಟಿ ಗುಂಡಿಗೆ ಬೇಕು. ಆ ಗಟ್ಟಿ ಮನಸ್ಸು ಮಾಡಿದ್ದಾರೆ ಸುದೀಪ್ ಅನೂಪ್ ಭಂಡಾರಿ. ಬಿಲ್ಲ ರಂಗ ಭಾಷನಲ್ಲಿ ಹೆವಿ ಸಿಜಿ ವರ್ಕ್​ ಇದೆ ಅಂದಾಗು ಸಿಜಿ ಕೆಲಸಕ್ಕಾಗೆ 40 ಕೋಟಿ ಖರ್ಚಾಗುತ್ತಿದೆ. ಬರೋಬ್ಬರಿ ಒಂದು ವರ್ಷ ಶೂಟಿಂಗ್ ಆಗಲಿದೆ. ಯಶ್​ರ ಟಾಕ್ಸಿಕ್​ ಶೂಟಿಂಗ್ ಹೇಗೆ ನಡೆಯುತ್ತಿದೆಯೋ ಅದೇ ತರ ದೊಡ್ಡ ಕ್ರ್ಯೂವ್​ ಬಿಲ್ಲ ರಂಗ ಭಾಷನಲ್ಲಿರಲಿದೆ. ಆ ಕಲಾವಿಧರೆಲ್ಲರ ರೈಮಂಡ್​ರೇಷನ್​​ ಜೊತೆ ಪ್ಯಾನ್ ಇಂಡಿಯಾ ರೀಚ್​ ಆಗೋಕೆ ಬಿಲ್ಲ ರಂಗ ಭಾಷನಿಗೆ 140 ಕೋಟಿ ಎತ್ತಿಡಲಾಗಿದೆ. ವಿಶೇಷ ಅಂದ್ರೆ ಈ ಬಿಲ್ಲ ರಂಗ ಭಾಷಾ ಕಿಚ್ಚನ 100 ಕೋಟಿ ಬಜೆಟ್ ದಾಟಿದ ಮೊದಲ ಸಿನಿಮಾ ಕೂಡ ಹೌದು. ನವೆಂಬರ್​​ನಿಂದ ಬಿಲ್ಲ ರಂಗ ಭಾಷಾ ಶೂಟಿಂಗ್ ಶುರುವಾಗಲಿದೆ.