ಟಾಟಾ ಪಂಚ್ ಕಾರು ಹೇಗಿದೆ? ಏಷ್ಯಾನೆಟ್ ಸುವರ್ಣನ್ಯೂಸ್ ಟೆಸ್ಟ್ ಡ್ರೈವ್ Review!

By Suvarna NewsFirst Published Oct 11, 2021, 3:22 PM IST
Highlights

*ಕೈಗೆಟುಕವ ಬೆಲೆ, ಗರಿಷ್ಠ ಸೇಫ್ಟಿ, ಅತ್ಯುತ್ತಮ ಸ್ಥಳಾವಕಾಶದ ಟಾಟಾ ಪಂಚ್ ಕಾರು
*ಸಿಟಿ, ಹೈವೇ ಹಾಗೂ ಆಫ್ ರೋಡ್‌ಗಳಿಗೆ ಹೇಳಿ ಮಾಡಿಸಿದ ಕಾರು
*ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ನಡೆಸಿದ ಟೆಸ್ಟ್ ಡ್ರೈವ್  Review
*ಕಾರಿನ ಪರ್ಫಾಮೆನ್ಸ್, ಬೆಲೆ, ವೇರಿಯೆಂಟ್ ಸೇರಿದಂತೆ ಎಲ್ಲಾ ಮಾಹಿತಿ ಇಲ್ಲಿದೆ

ಮುಂಬೈ(ಅ.11): ಭಾರತದ ಕಾರು ಮಾರುಕಟ್ಟೆಯನ್ನು ಟಾಟಾ ಮೋಟಾರ್ಸ್(Tata Motors) ಆಕ್ರಮಿಸಿಕೊಳ್ಳುತ್ತಿದೆ. ಬಹುತೇಕರ ಆಯ್ಕೆ ಇದೀಗ ಟಾಟಾ ಕಾರುಗಳಾಗಿದೆ. ಕೈಗೆಟುಕುವ ಬೆಲೆಯಲ್ಲಿ ಟಾಟಾ ಮೋಟಾರ್ಸ್ ಅತ್ಯುತ್ತಮ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಮೈಕ್ರೋ SUV ಕಾರನ್ನು ಪರಿಚಯಿಸಿದೆ. ಟಾಟಾ ಪಂಚ್ SUV ಕಾರು ಬಹುದೊಡ್ಡ ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ನೂತನ ಕಾರಿನ ಪರ್ಫಾಮೆನ್ಸ್, ಫೀಚರ್ಸ್, ವಿಶೇಷತೆ, ಡ್ರೈವಿಂಗ್ ಅನುಭವ, ಪ್ರಯಾಣದ ಕುರಿತು ಪರೀಕ್ಷಿಸಲು ಟಾಟಾ ಮೋಟಾರ್ಸ್ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡಕ್ಕೆ ಆಹ್ವಾನ ನೀಡಿತ್ತು. 

21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ SUV ಕಾರು!

ಟಾಟಾ ಮೋಟಾರ್ಸ್ ಮುಂಬೈನಲ್ಲಿ ಟಾಟಾ ಪಂಚ್(Tata Punch) ಕಾರಿನ ಟೆಸ್ಟ್ ಡ್ರೈವ್(Test Drive) ಆಯೋಜಿಸಿತ್ತು. ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ತಂಡ ಮುಂಬೈನ(Mumbai) ಮೂರು ವಿವಿಧ ರಸ್ತೆಗಳಲ್ಲಿ ಟಾಟಾ ಪಂಚ್ ಕಾರಿನ ಸಾಮರ್ಥ್ಯ, ಡ್ರೈವಿಂಗ್ ಕಂಫರ್ಟ್ ಸೇರಿದಂತೆ ಕಾರಿನ ಕಂಪ್ಲೀಟ್ ಫೀಚರ್ಸ್ ಪರೀಕ್ಷೆ ನಡೆಸಿತು. ಮುಂಬೈ ನಗರ, ಆಫ್ ರೋಡ್ ಹಾಗೂ ಎಕ್ಸ್‌ಪ್ರೆಸ್ ಹೈವೇಗಳಲ್ಲಿ ಟಾಟಾ ಪಂಚ್ ಕಾರನ್ನು Drive ಮಾಡಿ ಸುವರ್ಣನ್ಯೂಸ್ ತಂಡ ರಿವ್ಯೂವ್ ನೀಡುತ್ತಿದೆ.

ಟಾಟಾ ಪಂಚ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಎರಡು ಕಾರನ್ನು ಟೆಸ್ಟ್ ಡ್ರೈವ್‌ಗೆ ಬಳಸಿಕೊಳ್ಳಲಾಯಿತು. ಮುಂಬೈನಗರದಿಂದ ವಲ್ವಲಿ ಫಾಲ್ಸ್ ಕಡೆಗೆ ನಮ್ಮ ಪಂಚ್ ಡ್ರೈವ್ ಆರಂಭಗೊಂಡಿತು. ಪಂಚ್ ಕಾರಿನ ಡ್ರೈವಿಂಗ್ ಹೆಚ್ಚು ಆರಾಮದಾಯಕವಾಗಿದೆ. ಕ್ಲಚ್, ಗೇರ್, ಬ್ರೇಕ್, ಎಕ್ಸಲರೇಟ್..ಹೀಗೆ ಎಲ್ಲವೂ ಅಷ್ಟೇ ಸರಳ ಹಾಗೂ ಸುಳಭವಾಗಿ ಹ್ಯಾಂಡಲ್ ಮಾಡಬಹುದು. ಡ್ರೈವಿಂಗ್ ಕಂಫರ್ಟ್ ಉತ್ತಮವಾಗಿದ್ದು, ನಗರದ ಟ್ರಾಫಿಕ್ ಕಿರಿಕಿರಿ ನಡುವೆಯೂ ಸುಲಭವಾಗಿ ಕಾರು ಡ್ರೈವ್ ಮಾಡಬಹುದು. 

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಪಂಚ್ ಕಾರು 1.2 ಲೀಟರ್ ರಿವಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಪಂಚ್ ಕೇವಲ ಪೆಟ್ರೋಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. ಬೇಡಿಕೆ ಇದ್ದಲ್ಲಿ ಡೀಸೆಲ್ ಹಾಗೂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಟಾಟಾ ಮೋಟಾರ್ ಸಜ್ಜಾಗಿದೆ. 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಕಾರಿನ ಎಂಜಿನ್ ಹೆಚ್ಚು ಶಕ್ತಿಯುತವಾಗಿದ್ದು, ಹೆಚ್ಚು ಪವರ್ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ.

ರಿವೋಟ್ರಾನ್ ಎಂಜಿನ್ ಡೈನಾಪ್ರೋ ಟೆಕ್ನಾಲಜಿ ಹೊಂದಿದೆ. ಇದರಿಂದ ಕಾರಿಗೆ ಹೆಚ್ಚಿನ ಎಂಜಿನ್ ಶಕ್ತಿಯನ್ನು ನೀಡುವುದರ ಜೊತೆಗೆ ಕಡಿಮೆ ಮಟ್ಟದ ಟಾರ್ಕ್ ಹಾಗೂ ಹೆಚ್ಚಿನ ದಕ್ಷತೆಗೆ ನೆರವಾಗಲಿದೆ. ಇದು ಡೈನಾಪ್ರೋ ಟೆಕ್ನಾಲಜಿಯಿಂದ ಸಾಧ್ಯವಾಗಿದೆ.

10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!

ನಗರದಲ್ಲಿ ಸುಲಭವಾಗಿ ಯಾವುದೇ ಒತ್ತಡವಿಲ್ಲದೆ ಪಂಚ್ ಕಾರು ಡ್ರೈವ್ ಮಾಡಿದ ಸುವರ್ಣನ್ಯೂಸ್ ತಂಡ, ಆಫ್ ರೋಡ್ ಡ್ರೈವಿಂಗ್ ಪರ್ಫಾಮೆನ್‌ಗಾಗಿ ಮುಂಬೈ ಹೊರವಲಯದಲ್ಲಿರುವ ವಲ್ವಲಿ ಫಾಲ್ಸ್ ಹಾಗೂ ಟ್ರೆಕಿಂಗ್ ಸ್ಥಳದತ್ತ ಹೊರಟಿತು. 1199 cc ಎಂಜಿನ್,  85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಪವರ್‌ ಹಾಗೂ ಡೈನಾಪ್ರೋ ಟೆಕ್ನಾಲಜಿಯಿಂದ ಪಂಚ್ ಕಾರು ಕೆಸರು, ಕಲ್ಲುಗಳಿಂದ ಕೂಡಿದ ಗುಡ್ಡ ಸಲೀಸಾಗಿ ಹತ್ತೇ ಬಿಟ್ಟಿತು. ಈ ಪ್ರಯಾಣದಲ್ಲಿ ನೀರು ಹರಿಯುವ ಸಣ್ಣ ತೊರೆಯನ್ನು ಪಂಚ್ ದಾಟಿತ್ತು. ಇದು 2 ವೀಲ್ ಡ್ರೈವ್ ಕಾರು. ಆಫ್ ರೋಡ್‌ನಲ್ಲಿ 4 ವೀಲ್ ಡ್ರೈವ್ ಕಾರಿನಷ್ಟೇ ಸಾಮರ್ಥ್ಯ ಪ್ರದರ್ಶಿಸಿದೆ.   187mm ಗ್ರೌಂಡ್ ಕ್ಲೀಯರೆನ್ಸ್ ಹಾಗೂ 16 ಇಂಚಿನ್ ಡೈಮಂಡ್ ಕಟ್ ಅಲೋಯ್ ವೀಲ್‌ನಿಂದ ಆಫ್ ರೋಡ್ ಡ್ರೈವ್ ಯಾವುದೇ ಆತಂಕವಿಲ್ಲದೆ ಮಾಡಬಹುದು. ಟ್ರಾಕ್ಷನ್ ಪ್ರೋ ಮೂಡ್ ಫೀಚರ್ಸ್ ಇರುವುದರಿಂದ ಕೆಸರಿನಲ್ಲಿ ಚಕ್ರ ಗಿರಿ ಗಿರನೆ ತಿರುಗುತ್ತಿದ್ದರೂ, ಕಾರು ಮಾತ್ರ ಮುಂದೆ ಸಾಗದ ಪರಿಸ್ಥಿತಿ ಎದುರಾದರೆ, ಟ್ರಾಕ್ಷನ್ ಪ್ರೋ ಆನ್ ಮಾಡಿದರೆ ಸಲೀಸಾಗಿ ಕಾರು ಮುಂದ ಸಾಗಲಿದೆ.

5 ಸ್ಟಾರ್ ಸುರಕ್ಷತೆಯ ಏಕೈಕ ಹ್ಯಾಚ್‌ಬ್ಯಾಕ್; ಟಾಟಾ ಅಲ್ಟ್ರೋಜ್ i ಟರ್ಬೋ ಬಿಡುಗಡೆ!

ಆಫ್ ರೋಡ್‌ನಲ್ಲೂ ಸೈ ಎನಿಸಿಕೊಂಡ ಟಾಟಾ ಪಂಚ್ ಕಾರನ್ನು ನಮ್ಮ ತಂಡ ಎಕ್ಸ್‌ಪ್ರೆಸ್ ಹೈವೇನಲ್ಲಿ ಪರೀಕ್ಷಿಸಿತು. ವಲ್ವವಲಿಯಿಂದ ಲೋನವಾಲಾಗೆ ಪಂಚ್ ಕಾರನ್ನು ಡ್ರೈವ್ ಮಾಡಲಾಯಿತು. ಗಾಳಿಯನ್ನು ಸೀಳಿಕೊಂಡು ಮುಂದೆ ಸಾಗಬಲ್ಲ ಡಿಸೈನ್ ಪಂಚ್ ಕಾರಿನಲ್ಲಿದೆ. ಮುಂಭಾಗದ ಹೆಡ್‌ಲ್ಯಾಂಪ್ಸ್  ಏರ್ ಡ್ಯಾಮ್ ಡಿಸೈನ್‌ನಿಂದ ಮುಂಭಾಗದಿಂದ ಬರುವ ಗಾಳಿ ಕಾರಿನ ಹಿಂಭಾಗದಿಂದ ಹೊರಹೋಗಲಿದೆ. ಇದರಿಂದ ಕಾರು ಅದೆಷ್ಟೇ ವೇಗವಾಗಿ ಚಲಾಯಿಸಿದರೂ ಗಾಳಿ ಕಾರಣದಿಂದ ರೋಲಿಂಗ್ ಆಗುವ ಅಥಾವ ವೈಬ್ರೇಟ್ ಆಗುವ ಸಾಧ್ಯತೆಗಳಿಲ್ಲ. ಈ ಮೂಲಕ ಅತೀ ವೇಗದ ಡ್ರೈವ್‌ನಲ್ಲೂ ಪಂಚ್ ಸುರಕ್ಷತೆಯನ್ನು ನೀಡಲಿದೆ.

ಹೈವೇ ರಸ್ತೆಯಲ್ಲಿ ನಮ್ಮ ತಂಡ 160 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಪಂಚ್ ಕಾರನ್ನು ಪರೀಕ್ಷಿಸಿತು. ಕಾರಿನ ಬಿಲ್ಡ್ ಕ್ವಾಲಿಟಿ, ಕಾರಿನ ತೂಕದ ಕಾರಣ ಪಂಚ್ ಯಾವುದೇ ಸಮಸ್ಯೆ ಇಲ್ಲದೆ ವೇಗವಾಗಿ ಸಾಗಿತು. ಹೈವೇ ಪ್ರಯಾಣವೂ ಸುಖಕರ ಹಾಗೂ ಆರಾಮದಾಯಕವಾಗಿತ್ತು. ಮೈಕ್ರೋ SUV ಆಗಿದ್ದರೂ ಕಾರಿನೊಳಗೆ ಹೆಚ್ಚು ಸ್ಥಳಾವಕಾಶವಿದೆ. ಡ್ರೈವಿಂಗ್ ಅನುಕೂಲಕ್ಕಾಗಿ ರಸ್ತೆ ಹಾಗೂ ಮುಂಭಾಗದ ನೋಟ ಸ್ಪಷ್ಟವಾಗಿ ಗೋಚರಿಸುವಂತೆ ಡಿಸೈನ್ ಈ ಕಾರಿನಲ್ಲಿದೆ. 0-60 ಕಿ.ಮೀ ವೇಗವನ್ನು ಕೇವಲ 6.5 ಸೆಕೆಂಡ್‌ಗಳಲ್ಲಿ ಪಡೆಯಲಿದೆ.

ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ!

ಪಂಚ್ ಕಾರು 3827 mm ಉದ್ದ, 1742 mm ಅಗಲ, 1615 mm ಎತ್ತರ ಹಾಗೂ 2445 mm ವೀಲ್ ಬೇಸ್ ಹೊಂದಿದೆ. ಹೀಗಾಗಿ ಕಾರಿನೊಳಗೆ ಕೂತಾಗ ದೊಡ್ಡ SUV ಕಾರಿನಲ್ಲಿ ಕೂತ ಅನುಭವ ಆಗಲಿದೆ. ಇನ್ನು ಹಿಂಬದಿ ಸವರಾರಿಗೂ ಲೆಗ್‌ರೂಂ, ರೆಡ್ ರೂಂ ಸ್ಪೇಸ್ ಕೂಡ ಉತ್ತಮವಾಗಿರುವುದರಿಂದ ದಣಿವು ಆಗುವುದಿಲ್ಲ. ಮುಂಬೈ ಎಕ್ಸ್‌ಪ್ರೆಸ್ ಹೈವೇನಲ್ಲಿ ಪಂಚ್ ಸಾಮರ್ಥ್ಯ ಅತ್ಯುತ್ತಮವಾಗಿದೆ. ಹೀಗಾಗಿ ಕುಟುಂಬ ಸಮೇತ ದೂರ ಪ್ರಯಾಣಕ್ಕೆ ಉತ್ತಮ ಕಾರಾಗಿದೆ.

ಸುರಕ್ಷತೆ:
ಟಾಟಾ ಕಾರುಗಳು ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಬೇಸ್ ಮಾಡೆಲ್‌ನಿಂದ ಹಿಡಿದು ಟಾಪ್ ಮಾಡೆಲ್ ವರೆಗೂ ಸ್ಟಾಂಡರ್ಟ್ ಸೇಫ್ಟಿ ಫೀಚರ್ಸ್ ನೀಡಲಾಗಿದೆ. ಎರಡು ಏರ್‌ಬ್ಯಾಗ್, ABS(ಆ್ಯಂಟಿ ಲಾಕ್ ಬ್ರೇಕ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರುಬ್ಯೂಶನ್(EBD)ಈ ಕಾರಿನಲ್ಲಿದೆ. ಮತ್ತೊಂದು ವಿಶೇಷತೆ ಅಂದರೆ ಬ್ರೇಕ್ ಸ್ವೇ ಕಂಟ್ರೋಲ್. ಇದು ಹಠಾತ್ ಬ್ರೇಕ್ ಹಾಕಿದಾಗ ವಾಹನದ ಇನ್‌ಸ್ಟೆಬಿಲಿಟಿ ತಪ್ಪಿಸುತ್ತದೆ.  ದಿಢೀರ್ ಬ್ರೇಕಿಂಗ್ ಸಂದರ್ಭದಲ್ಲಿನ ಅಸ್ಛಿರತೆಯನ್ನು ತಡೆಯುತ್ತದೆ. ರಿವರ್ಸ್ ಕ್ಯಾಮಾರ, ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಶೀಘ್ರದಲ್ಲೇ ಪಂಚ್ ಕಾರಿನ NCAP ಕ್ರಾಶ್ ಟೆಸ್ಟ್ ವರದಿ ಪ್ರಕಟಗೊಳ್ಳಲಿದೆ. ಈ ಕಾರು ಕೂಡ 5 ಸ್ಟಾರ್ ರೇಟಿಂಗ್ ಪಡೆಯುವುದರಲ್ಲಿ ಅನುಮಾನವಿಲ್ಲ.

ರಾಜಧಾನಿಯ ರಾಜಕುಮಾರ ಟಾಟಾ ಟಿಗೋರ್‌ ಇವಿ; ಎಲೆಕ್ಟ್ರಿಕ್ ಕಾರಿನ Review!
 
ಕಾರಿನ ಡಿಸೈನ್:
ಟಾಟಾ ಪಂಚ್ ಕಾರಿನ ವಿನ್ಯಾಸಾ ಆಲ್ಫಾ ಆರ್ಕಿಟೆಕ್ಟ್ ಅಡಿಯಲ್ಲಿ ನಿರ್ಮಾಣಗೊಂಡಿದೆ. ಟಾಟಾ ಅಲ್ಟ್ರೋಜ್ ಕಾರು ಇದೇ ಮಾದರಿಯಡಿ ನಿರ್ಮಾಣ ಮಾಡಲಾಗಿದೆ. ಕಾರಿ ಮುಂಭಾಗ ಟಾಟಾ ಹ್ಯಾರಿಯರ್ ಲುಕ್ ಹೋಲುತ್ತಿದೆ. ಹಿಂಭಾಗದಲ್ಲಿ ಮತ್ತಷ್ಟು ಆಕರ್ಷಕ ವಿನ್ಯಾಸ ಮಾಡಲಾಗಿದೆ. ಟೋಪಿಕಲ್ ಮಿಸ್ಟ್, ಬ್ಲೂ, ಆರ್ಕಸ್ ವೈಟ್ ಸೇರಿದಂತೆ 7 ಬಣ್ಣಗಳಲ್ಲಿ ಟಾಟಾ ಪಂಚ್ ಕಾರು ಲಭ್ಯವಿದೆ. ಮೊದಲ ನೋಟಕ್ಕೆ ಟಾಟಾ ಹ್ಯಾರಿಯರ್ ಹಾಗೂ ನೆಕ್ಸಾನ್ ಕಾರಿನ ಫೀಲ್ ಸಿಗಲಿದೆ. 

LED DRL, ಪಕ್ಕದಲ್ಲಿ ಇಂಡೇಕೇಟರ್,  ಮುಂಭಾಗದ ಟಾಟಾ ಲೋಗೋ, ಕೆಳಗೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಕ್ಲಸ್ಟರ್ , ವಿಶಿಷ್ಟವಾದ ಗ್ರಿಲ್, ಬಂಪರ್‌ನ ಕೆಳಭಾಗವು ಕಪ್ಪು ಪ್ಲಾಸ್ಟಿಕ್‌ನಿಂದ,  ಏರ್-ಡ್ಯಾಮ್  ಸೇರಿದಂತೆ ಟಾಟಾ ಲುಕ್ ಅತ್ಯಾಕರ್ಷಕವಾಗಿದೆ. ಹಿಂಭಾಗದಲ್ಲಿ ಟೈಲ್ ಲೈಟ್ಸ್ Y ಶೇಪ್ ನೀಡಲಾಗಿದೆ.  ಕಾರಿನ ಡೋರ್ 90 ಡಿಗ್ರಿ ತೆರೆಯಲಿದೆ. ಟಾಟಾ ಅಲ್ಟ್ರೋಜ್ ಕಾರಿನಲ್ಲೂ ಇದೇ ಮಾದರಿ ಬಳಸಿಕೊಳ್ಳಲಾಗಿದೆ. 

306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!

ಟಾಟಾ ಪಂಚ್ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ಯೂರ್, ಅಡ್ವೆಂಚರ್, ಅಕಂಪ್ಲೀಶ್ಡ್ ಹಾಗೂ ಟಾಪ್ ಮಾಡೆಲ್ ಕ್ರಿಯೇಟೀವ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಪ್ಯೂರ್ ಡ್ಯುಯೆಲ್ ಏರ್‌ಬ್ಯಾಗ್, ISOFIX, ಸೆಂಟ್ರಲ್ ಲಾಕಿಂಗ್, ಟಿಲ್ಟ್ ಸ್ಟೀರಿಂಗ್, 15 ಇಂಚಿನ ಸ್ಟೀಲ್ ವೀಲ್ ಸೇರಿದಂತೆ ಇನ್ನಿತರ ಸ್ಟಾಂಡರ್ಟ್ ಫೀಚರ್ಸ್ ಇರಲಿದೆ.  

ಟೆಕ್ ಹಾಗೂ ಇಂಟೀರಿಯರ್:
ಪಂಚ್ ಕಾರಿನ ಒಳಭಾಗದಲ್ಲಿನ ಡಿಸೈನ್ ಉತ್ತಮ ಹಾಗೂ ಆಕರ್ಷಕ ಟಚ್ ನೀಡಲಾಗಿದೆ. ಬಳಸಿರುವ ಪ್ಲಾಸ್ಟಿಕ್ ಉತ್ತಮ ಗುಣಮಟ್ಟದ್ದಾಗಿದೆ. ಟಾಪ್ ಮಾಡೆಲ್ ಕಾರಿನಲ್ಲಿ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆ್ಯಪಲ್ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್ ಅಟೋ ಪ್ಲೇ, iRA ಕೆನೆಕ್ಟೆಡ್ ಫೀಚರ್ಸ್,  TFT ಸ್ಕ್ರೀನ್ ಇನ್ಸುಸ್ಟ್ರುಮೆಂಟ್ ಕ್ಲಸ್ಟರ್ , ಸ್ಟೀರಿಂಗ್ ವೀಲ್ ಮೌಂಟೆಡ್ ಕ್ರೂಸ್ ಕಂಟ್ರೋಲ್, ಇನ್ಫೋಟೈನ್ಮೆಂಟ್ ಕಂಟ್ರೋಲ್ ಬಟನ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಕಾರಿನೊಳಗೆ 25 ಕ್ಯಾಬಿನ್ ಸ್ಪೇಸ್ ನೀಡಲಾಗಿದೆ. ಎಸಿ ವೆಂಟ್, USB,ಚಾರ್ಜಿಂಗ್ ಪ್ಲಾಟ್ ಸೇರಿದಂತೆ ಎಲ್ಲಾ ಫೀಚರ್ಸ್ ಪಂಚ್ ಕಾರಿನಲ್ಲಿದೆ. ರೈನ್ ಸೆನ್ಸಿಂಗ್ ವೈಪರ್ ಫೀಚರ್ಸ್ ಇದರಲ್ಲಿದೆ.

ಗರಿಷ್ಠ ಸುರಕ್ಷತೆ, ಆಕರ್ಷಕ ವಿನ್ಯಾಸ; ಟಾಟಾ ಟಿಯಾಗೊ NRG ಕಾರು ಬಿಡುಗಡೆ!

ಕಾರಿನ ಲಗೇಜ್ ಸ್ಪೇಸ್ ಕೂಡ ಉತ್ತಮವಾಗಿದೆ.  ಬೂಟ್ ವಾಲ್ಯೂಮ್ 366 ಲೀಟರ್, ಮಹೀಂದ್ರ KUV100 ಕಾರಿನಲ್ಲಿ ಈ ಸಾಮರ್ಥ್ಯ ಕೇವಲ 100 ಲೀಟರ್. ಪಂಚ್ ಕಾರು ರೆನಾಲ್ಟ್ ಕಿಗರ್, ನಿಸಾನ್ ಮ್ಯಾಗ್ನೈಟ್, ಮಾರುತಿ ಇಗ್ನಿಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.  ಕಾರು ಮೈಕ್ರೋ SUV ಆದರೂ ಟ್ರೂ SUVಗೆ ಸಮನಾಗಿದೆ.   

ಕಾರಿನ ಬೆಲೆ:
ಟಾಟಾ ಪಂಚ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಪಂಚ್ ಕಾರಿನ ಬೆಲೆ 4.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಟಾಪ್ ಮಾಡೆಲ್ ಬೆಲೆ 8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 4 ರಿಂದ ಪಂಚ್ ಕಾರು ಬುಕಿಂಗ್ ಆರಂಭಗೊಂಡಿದೆ. 21,000 ರೂಪಾಯಿಗೆ ಪಂಚ್ ಕಾರು ಬುಕ್ ಮಾಡಹುದು.

ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ನಡಿಸದ ಫಸ್ಟ್ ಟೆಸ್ಟ್ ಡ್ರೈವ್‌ನಲ್ಲಿ ಟಾಟಾ ಪಂಚ್ ಬಹುತೇಕ ವಿಭಾಗದಲ್ಲಿ ಅತ್ಯುತ್ತಮ ಏನಿಸಿಕೊಂಡಿದೆ. ಹೀಗಾಗಿ ಎಂಟ್ರಿಲೆವಲ್ ಕಾರು ಖರೀದಿಸಲು ಇಚ್ಚಿಸುವ ಮಂದಿಗೆ ಇದು ಅತ್ಯುತ್ತಮ ಹಾಗೂ ಮೊದಲ ಆಯ್ಕೆಯಾಗಲಿದೆ. ಅತ್ಯುತ್ತಮ ಪರ್ಫಾಮೆನ್ಸ್ ಮೂಲಕ ಮಾರುಕಟ್ಟೆಯಲ್ಲಿರುವ ಇತರ SUV ಕಾರುಗಳಿಗೆ ತೀವ್ರ ಪೈಪೋಟಿ ನೀಡಬಲ್ಲ ಎಲ್ಲಾ ಸಾಮರ್ಥ್ಯ ತೋರಿದೆ.

click me!