ಮೇಡ್ ಇನ್ ಚೀನಾ ಕಾರನ್ನು ಭಾರತಕ್ಕೆ ತರಬೇಡಿ; ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ!

By Suvarna News  |  First Published Oct 9, 2021, 6:07 PM IST
  • ಗಡಿಯಲ್ಲಿ ಚೀನಾ ತಂಟೆ, ಮೇಡ್ ಚೀನಾ ವಸ್ತು ಬೇಡ 
  • ಚೀನಾದಲ್ಲಿ ಉತ್ಪಾದಿಸಿದ ಕಾರನ್ನು ಭಾರತದಲ್ಲಿ ಮಾರಾಟ ಬೇಡ
  • ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ, ಭಾರತದಲ್ಲೇ ಉತ್ಪಾದನೆ ಆರಂಭಿಸಿ

ನವದೆಹಲಿ(ಅ.9): ಗಡಿಯಲ್ಲಿ ಚೀನಾ(China) ತಂಟೆ ಹೆಚ್ಚಾಗುತ್ತಿದೆ. ಅರುಣಾಚಲ ಪ್ರದೇಶದೊಳಕ್ಕೆ ನುಗ್ಗಿ ಕಿರಿಕ್ ಮಾಡಿರುವ(Arunachal Pradesh) ಚೀನಾ ಸದ್ದಡಗಿಸಲು ಭಾರತ ಸಜ್ಜಾಗಿದೆ. ನಾಳೆ(ಅ.10) ಮೊಲ್ಡಾದಲ್ಲಿ ಕಮಾಂಡರ್ ಮಟ್ಟದ ಮಾತುಕತೆಯೂ ನಡೆಯಲಿದೆ. ಇದರ ನಡುವೆ ಚೀನಾಗೆ ಮತ್ತೊಂದು ಹೊಡೆತ ನೀಡಲು ಭಾರತ ಮುಂದಾಗಿದೆ. ಚೀನಾದಲ್ಲಿ ಉತ್ಪಾದಿಸಿದ ಕಾರು(Made In china), ಚೀನಾದಲ್ಲಿ ಉತ್ಪಾದನೆಯಾದ ಕಾರಿನ ಬಿಡಿಭಾಗ ಭಾರತಕ್ಕೆ ತರಬೇಡಿ ಎಂದು ಟೆಸ್ಲಾ(Tesla) ಕಂಪನಿಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಸೂಚಿಸಿದ್ದಾರೆ.

ಕಾಶ್ಮೀರದಲ್ಲಿ ಏಷ್ಯಾದ ಅತಿ ಉದ್ದ ಸುರಂಗ!

ಹಲವು ವರ್ಷಗಳ ಕಾಯುವಿಕೆ ಬಳಿಕ ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರು(Electric car) ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡುತ್ತಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿಯಾಗಿರುವ ಟೆಸ್ಲಾ ಹಲವು ದೇಶದಲ್ಲಿ ಘಟಕ(Unit) ಹೊಂದಿದೆ. ಹಲವು ದೇಶಗಳಿಗೆ ಚೀನಾ ಘಟಕದಿಂದಲೇ ಕಾರಿನ ಬಿಡಿಭಾಗ ಹಾಗೂ ಕಾರು ಪೂರೈಕೆಯಾಗುತ್ತಿದೆ. ಆದರೆ ಭಾರತಕ್ಕೆ ಮೇಡ್ ಇನ್ ಚೀನಾ ಉತ್ಪನ್ನ ಬೇಡ. ಇಲ್ಲಿ ಚೀನಾ ಘಟಕದಲ್ಲಿ ಉತ್ಪಾದನೆಯಾದ ಟೆಸ್ಲಾ ಕಾರನ್ನು ಮಾರಾಟಮಾಡಬೇಡಿ ಎಂದು ಟೆಸ್ಲಾಗೆ ಗಡ್ಕರಿ ಸೂಚನೆ ನೀಡಿದ್ದಾರೆ.

Tap to resize

Latest Videos

undefined

ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!

ಟೆಸ್ಲಾ ಕಂಪನಿಯ ಚೀನಾ ಘಟಕದಲ್ಲಿ ಉತ್ಪಾದನೆಯಾಗುವ ಕಾರಿನ ಬಿಡಿ ಭಾಗ ಭಾರತಕ್ಕೆ ಆಮದು ಮಾಡಿ ಇಲ್ಲಿ ಜೋಡಣೆ ಮಾಡಿ ಕಾರು ಮಾರಾಟ ಮಾಡುವ ಪ್ರಕ್ರಿಯೆ ಬೇಡ. ಇದರ ಬದಲು ಭಾರದಲ್ಲೇ ಘಟಕ ಆರಂಭಿಸಿ,(manufacturing unit). ಇಲ್ಲೇ ಕಾರು ಉತ್ಪಾದನೆ ಆರಂಭಿಸಿ, ವಿದೇಶಗಳಿಗೆ ರಫ್ತು ಮಾಡಿ ಎಂದು ಟೆಸ್ಲಾಗೆ ಸೂಚನೆ ನೀಡಿದ್ದಾರೆ.

ಟೆಸ್ಲಾ ಕಂಪನಿ ಅಧಿಕಾರಿಗಳ ಜೊತೆ ಸಭೆಯಲ್ಲಿ ನಿತಿನ್ ಗಡ್ಕರಿ ಈ ಸೂಚನೆ ನೀಡಿದ್ದಾರೆ. ಟೆಸ್ಲಾಗೆ ಕೇಂದ್ರ ಸರ್ಕಾರ(Government) ಎಲ್ಲಾ ಸಹಕಾರ ನೀಡಲಿದೆ. ಬೇಡಿಕೆಯನ್ನು ಪೂರೈಕೆ ಮಾಡಲಿದೆ. ಆದರೆ ಚೀನಾ ಉತ್ಪನ್ನ  ಬೇಡ ಎಂದು ಗಡ್ಕರಿ ಹೇಳಿದ್ದಾರೆ.

ದಸರಾ ಹಬ್ಬಕ್ಕೆ ಬೆಂಗಳೂರು ಮೈಸೂರು ರಸ್ತೆ ಲೋಕಾರ್ಪಣೆ; 3 ಗಂಟೆ ಪ್ರಯಾಣ ಇನ್ನು 90 ನಿಮಿಷ!

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ 2016ರಲ್ಲಿ ಭಾರತ ಪ್ರವೇಶ ಮಾಡುವುದಾಗಿ ಹೇಳಿತ್ತು. ಆದರೆ ಬಳಿಕ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತು. ಕೊನೆಗೂ 2021ರಲ್ಲಿ ಕೇಂದ್ರ ಸರ್ಕಾರ ಟೆಸ್ಲಾ ಆಗಮನವನ್ನು ಖಚಿತಪಡಿಸಿತು. 

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಟೆಸ್ಲಾ ಕಂಪನಿಗೆ ಹೆಚ್ಚಿನ ಬೆಂಬಲ ನೀಡುತ್ತಿದೆ. ಈ ಮೂಲಕ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್ ಮಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ

ಟೆಸ್ಲಾ ಜೊತೆಗಿನ ಸಭೆಯಲ್ಲಿ ಹೈವೇನಲ್ಲಿ ವೇಗದ ಮಿತಿಯನ್ನು ಹೆಚ್ಚಿನ ಪ್ರಸ್ತಾವನೆಯನ್ನು ಇಡಲಾಗಿದೆ. ಸದ್ಯ ಹೈವೇನಲ್ಲಿ ವೇಗದ ಮಿತಿ 140 ಕಿ.ಮಿ ಪ್ರತಿ ಗಂಟೆಗೆ ನಿಗದಿಪಡಿಸಲಾಗಿದೆ. ಇದನ್ನು ಹೆಚ್ಚಿಸಲು ಟೆಸ್ಲಾ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಿತಿನ್ ಗಡ್ಕರಿ ವೇಗದ ಮಿತಿಯನ್ನು ಹೆಚ್ಚಿಸಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅನುಮತಿ ಬೇಕಿದೆ ಎಂದರು.
 

click me!