Shah Rukh Khan car:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್!

Published : Dec 11, 2021, 03:54 PM IST
Shah Rukh Khan car:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್!

ಸಾರಾಂಶ

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕರೂ ಸಂಕಷ್ಟ ಮುಗಿದಿಲ್ಲ ಪ್ರಕರಣ ಬೆನ್ನಲ್ಲೇ ಶಾರುಖ್ ಖಾನ್ ತಮ್ಮ ಐಷಾರಾಮಿ ಕಾರು ಮಾರಾಟಕ್ಕೆ ನಿರ್ಧಾರ BMW 7 ಸೀರಿಸ್ ಕಾರು ಮಾರಾಟಕ್ಕಿಟ್ಟ ಶಾರುಖ್ ಖಾನ್  

ಮುಂಬೈ(ಡಿ.11): ಬಾಲಿವುಡ್ ಡ್ರಗ್ಸ್ ಪ್ರಕರಣ(Bollywood Drug case) ತಣ್ಣಗಾಗಿದ್ದರೂ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್(Shah Rukh Khan) ಕುಟುಂಬದ ಸಂಕಷ್ಟ ಮುಗಿದಿಲ್ಲ. ಇದೀಗ ಬಾಂಬೆ ಹೈಕೋರ್ಟ್ ಜಾಮೀನಿನಲ್ಲಿ ವಿಧಿಸಿದ ಷರತ್ತು ಸಡಿಲಗೊಳಿಸುವಂತೆ ಆರ್ಯನ್ ಖಾನ್(Aryan Khan) ಪರ ವಕೀಲರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಶಾರುಖ್ ಖಾನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆರ್ಯನ್ ಖಾನ್ ಪ್ರಕರಣದಿಂದ ನೊಂದಿರುವ ಶಾರುಖ್ ಖಾನ್ ಇದೀಗ ತಮ್ಮ ಐಷಾರಾಮಿ ಕಾರು(Luxury car) ಮಾರಾಟ ಮಾಡುತ್ತಿದ್ದಾರೆ.

ಶಾರುಖ್ ಖಾನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದರಲ್ಲಿ  BMW 7 ಸೀರಿಸ್ ಕಾರನ್ನು ಶಾರುಖ್ ಖಾನ್ ಮಾರಾಟಕ್ಕಿಟ್ಟಿದ್ದಾರೆ. ಇದು ಶಾರುಖ್ ಖಾನ್ ಅತೀ ಹೆಚ್ಚು ಬಾರಿ ಬಳಸಿದ ಔಷಾರಾಮಿ ಕಾರಿಗಿದೆ. ಅಷ್ಟೇ ಅತ್ಯುತ್ತಮ ಕಂಡೀಷನ್‌ ಕಾರು ಇದಾಗಿದೆ. 3 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. ಟರ್ಬೋಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 326 bhp ಪವರ್ ಹಾಗೂ  450 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

5 ಸಾವಿರ ಕೋಟಿ ರೂ. ಒಡೆಯ ಶಾರುಖ್ ಖಾನ್ ಬಳಿ ಇವೆ ದುಬಾರಿ ಕಾರು!

ಈ ಕಾರು ನಗರದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 6 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಹೆದ್ದಾರಿಗಳಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 10 ಕಿಲೋಮೀಟರ್ ಮೈಲೇಜ್ ನೀಡಲಿದೆ ನಗರ ಹಾಗೂ ಹೈವೇಗಳಲ್ಲಿ ಡ್ರೈವ್ ಮಾಡಲು, ಪ್ರಯಾಣಿಸಲು ಈ ಕಾರು ಅತ್ಯುತ್ತಮವಾಗಿದೆ.

ಶಾರುಖ್ ಖಾನ್  BMW 7 ಸೀರಿಸ್ ಕಾರು 2012ರ ಮಾಡೆಲ್ ಕಾರಾಗಿದೆ. ಹೊಸ ಕಾರಿನ ಬೆಲೆ 1.2 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 2012ರ  BMW 7 ಸೀರಿಸ್ ಕಾರು ನಿರ್ಮಾಣ ಸ್ಥಗಿತಗೊಳಿಸಿ, ಹೊಸ ಮಾಡೆಲ್ 7 ಸೀರಿಸ್ ಕಾರು ಮಾರುಕಟ್ಟೆಯಲ್ಲಿದೆ. ನೂತನ 7 ಸೀರಿಸ್ ಕಾರಿನ ಬೆಲೆ 1.39 ಲಕ್ಷ ರೂಪಾಯಿಯಿಂದ 2.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಆದರೆ ಶಾರುಖ್ ಖಾನ್ ಮಾರಾಟಕ್ಕಿಟ್ಟಿರವ  BMW 7 ಸೀರಿಸ್ ಕಾರಿನ ಬೆಲೆ ಬಹಿರಂಗ ಪಡಿಸಿಲ್ಲ.  BMW 7 ಸೀರಿಸ್ ಕಾರನ್ನು ಶಾರುಖ್ ಖಾನ್ ಹೆಚ್ಚುಬಾರಿ ಬಳಸಿರುವ ಕಾರಣ ಖರೀದಿದಾರರು ಟೈರ್ ಬದಲಾಯಿಸುವ ಅನಿವಾರ್ಯತೆ ಎದುರಾಗಲಿದೆ.

ಜಾಗ್ವಾರ್ to BMW; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ!

ಶಾರುಖ್ ಖಾನ್ ಅವರ   BMW 7 ಸೀರಿಸ್ ಕಾರಿನ ತೂಕ 740Li. ಅಂದರೆ ಸರಿಸುಮಾರು 2 ಟನ್ ತೂಕಕ್ಕಿಂತಲೂ ಹೆಚ್ಚು. ಹೀಗಾಗಿ ಐಷಾರಾಮಿಗಳು ಕಾರುಗಳು ಹೆಚ್ಚಿನ ಮೈಲೇಜ್ ನೀಡುವುದಿಲ್ಲ. 

ಐಷಾರಾಮಿ ಕಾರಾಗಿರುವ ಕಾರಣ BMW 7 ಸೀರಿಸ್ ಕಾರಿನ ನಿರ್ವಹಣೆ ಕೊಂಚ ದುಬಾರಿ. ಇದರ ಜನರಲ್ ಸರ್ವೀಸ್ 16,500 ರೂಪಾಯಿ. ಪ್ರತಿ 10,000 ಕಿಲೋಮೀಟರ್‌ಗೆ ಒಂದು ಜನರಲ್ ಸರ್ವೀಸ್ ಅಗತ್ಯ. ಇನ್ನು ಮುಂಭಾಗದ ಹಾಗೂ ಹಿಂಭಾಗದ ಒಟ್ಟು 4 ಬ್ರೇಕ್ ಪ್ಯಾಡ್ ಬೆಲೆ 80,000 ರೂಪಾಯಿ. ಇನ್ನು ಒಂದು ಟೈಯರ್ ಬೆಲೆ 30,000 ರೂಪಾಯಿ. ಈ ಕಾರಿನಲ್ಲಿರುವ 100 amp ಬ್ಯಾಟರಿ ಬೆಲೆ 15,000 ರೂಪಾಯಿ.

ಶಾರುಖ್ ಖಾನ್ ಕಾರು ಕಲೆಕ್ಷನ್:
ಬಾಲಿವುಡ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಶಾರುಖ್ ಖಾನ್ ಬಳಿ ವಿಶ್ವದ ದುಬಾರಿ ಕಾರುಗಳಲ್ಲೊಂದಾದ ಬುಗಾಟಿ ವೈಯ್ರಾನ್ ಕಾರಿದೆ. ಇದರ ಬೆಲೆ 12 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇನ್ನು 7 ಕೋಟಿ ರೂಪಾಯಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಪ್ ಕಾರು ಹೊಂದಿದ್ದಾರೆ. 3.91 ಕೋಟಿ ರೂಪಾಯಿ ಬೆಲೆ(ಎಕ್ಸ್ ಶೋ ರೂಂ)ಯ ಬೆಂಟ್ಲಿ ಜಿಟಿ ಕಾರು, 2 ಕೋಟಿ ರೂಪಾಯಿ ಬೆಲೆ BMW i8 ಕಾರು ಹಾಗೂ 1.30 ಕೋಟಿ ರೂಪಾಯಿ ಎಕ್ಸ್ ಶೋ ರೂಂ ಬೆಲೆ BMW 730li ಕಾರಿದೆ. 

BMW ಸೀರಿಸ್ ಕನ್ವರ್ಟೇಬಲ್, ಹ್ಯುಂಡೈ ಕ್ರೆಟಾ, ಆಡಿ A8 L, ರೇಂಜ್ ರೋವರ್ ಸ್ಪೋರ್ಟ್, ಟೊಯೋಟಾ ಲ್ಯಾಂಡ್ ಕ್ರ್ಯೂಸರ್, ಮಿಸ್ಟಿಬಿಶ್ ಪಜೆರೋ ಕಾರು ಹೊಂದಿದ್ದಾರೆ.

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್