Used Cars ಬೆಂಗಳೂರಲ್ಲಿ ಹೆಚ್ಚಿದ ಸೆಕೆಂಡ್ ಹ್ಯಾಂಡ್ ಕಾರು ಬೇಡಿಕೆ, ಮತ್ತೆರೆಡು ಮಹೀಂದ್ರ ಫಸ್ಟ್ ಚಾಯ್ಸ್ ಆರಂಭ!

Published : Dec 10, 2021, 10:59 PM ISTUpdated : Dec 10, 2021, 11:13 PM IST
Used Cars ಬೆಂಗಳೂರಲ್ಲಿ ಹೆಚ್ಚಿದ ಸೆಕೆಂಡ್ ಹ್ಯಾಂಡ್ ಕಾರು ಬೇಡಿಕೆ, ಮತ್ತೆರೆಡು ಮಹೀಂದ್ರ ಫಸ್ಟ್ ಚಾಯ್ಸ್ ಆರಂಭ!

ಸಾರಾಂಶ

ಬೆಂಗಳೂರಲ್ಲಿ ಮತ್ತೆರೆಡು ಸೆಕೆಂಡ್ ಹ್ಯಾಂಡ್ ಕಾರು ಮಳಿಗೆ ಮಹೀಂದ್ರಾ ಫಸ್ಟ್ ಚಾಯ್ಸ್ ‌ನಿಂದ 2 ಮಳಿಗೆ ಆರಂಭ ಬಳಸಿದ ಕಾರು ಖರೀದಿ, ಮಾರಾಟ ಈಗ ಮತ್ತಷ್ಟು ಸುಲಭ

ಬೆಂಗಳೂರು(ಡಿ.10): ಭಾರತದ ಪ್ರಮುಖ ಬಹು ಬ್ರಾಂಡ್ ಪೂರ್ವ ಮಾಲೀಕತ್ವದ ಕಾರುಗಳ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಮಹೀಂದ್ರಾ(Mahindra) ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್ ಇದೀಗ ಬೆಂಗಳೂರಿನಲ್ಲಿ(Bengaluru) ಎರಡು ಹೊಸ ಮಳಿಗೆಗಳನ್ನು ಪರಿಚಯಿಸಿದೆ.  ಜಿಪ್ಪಿ ಆಟೋಮಾರ್ಟ್ ಮತ್ತು ರಿನ್ಯೂ 4 U ಆಟೋಮೊಬೈಲ್ಸ್ ಕ್ರಮವಾಗಿ ತುಮಕೂರು ರಸ್ತೆಯ ಎಂಎಸ್ಆರ್ ಲೇಔಟ್ ಮತ್ತು ನಗರದ ಸರ್ಜಾಪುರ ಪ್ರದೇಶಗಳಲ್ಲಿ ಆರಂಭಗೊಂಡಿದೆ. ಈ ಮಳಿಗೆಗಳ ಸೇರ್ಪಡೆಯೊಂದಿಗೆ, ಈಗ ಬಳಸಿದ ಕಾರುಗಳನ್ನು(Used Cars) ಖರೀದಿಸಲು ಮತ್ತು ಮಾರಾಟ ಮತ್ತಷ್ಟು ಸುಲಭವಾಗಿದೆ. ರಾಜ್ಯದಲ್ಲಿ(karnataka) ಒಟ್ಟು 67 ಮಳಿಗೆಗಳೊಂದಿಗೆ, ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್, ಸಂಘಟಿತ ಉಪಯೋಗಿಸಿದ ಕಾರು ವಿಭಾಗದಲ್ಲಿ ಮಾರುಕಟ್ಟೆ ನಾಯಕನಾಗಿದೆ.

ಬೆಂಗಳೂರು ಮತ್ತು ನೆರೆಯ ಪ್ರದೇಶದಲ್ಲಿ ನಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಆನ್ಲೈನ್ ಬಳಸಿದ ಕಾರ್ ಬುಕಿಂಗ್ ಪೋರ್ಟಲ್  ಮತ್ತು ಮಹೀಂದ್ರಾ ಫಸ್ಟ್ ಚಾಯ್ಸ್ನ ನಮ್ಮ ಭೌತಿಕ ಮಳಿಗೆಗಳ ನಡುವೆ ನಮ್ಮ ಫಿಜಿಟಲ್ ಮಾದರಿಯ ಮೂಲಕ ಗ್ರಾಹಕರಿಗೆ ಸಂಘರ್ಷಮುಕ್ತ ಮಾಲೀಕತ್ವದ ಅನುಭವವನ್ನು ನೀಡುವ ನಮ್ಮ ಉದ್ದೇಶದೊಂದಿಗೆ ಹೊಸ ಮಳಿಗೆ ಆರಂಭವನ್ನು ಜೋಡಿಸಲಾಗಿದೆ. ಎರಡೂ ಡೀಲರ್ಶಿಪ್ಗಳು ಮಹೀಂದ್ರಾ ಫಸ್ಟ್ ಚಾಯ್ಸ್ ಕುಟುಂಬಕ್ಕೆ ಹೆಚ್ಚಿನ ಗ್ರಾಹಕರನ್ನು ಸೇರಿಸುತ್ತವೆ ಮತ್ತು ಬ್ರ್ಯಾಂಡ್ ಅನ್ನು ಗ್ರಾಹಕರಿಗೆ ಹತ್ತಿರ ತರುತ್ತವೆ ಎಂಬ ಖಾತರಿ ನಮಗಿದೆ ಎಂದು  ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್ ಸಿಇಒ  ಅಶುತೋಷ್ ಪಾಂಡೆ ಹೇಳಿದರು.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

ಹೊಸ ಮಹೀಂದ್ರಾ ಫಸ್ಟ್ ಚಾಯ್ಸ್ ಮಳಿಗೆಗಳು ಪ್ರಮಾಣೀಕೃತ ಬಳಸಿದ ಕಾರು ಮಾರಾಟಗಳು, ಮಹೀಂದ್ರಾ ಪ್ರಮಾಣೀಕೃತ ಉಪಯೋಗಿಸಿದ ಕಾರುಗಳ ಮೇಲೆ ವಾರಂಟಿ, ಸುಲಭ ಹಣಕಾಸು, ತೊಂದರೆ-ಮುಕ್ತ  ವರ್ಗಾವಣೆ ಮತ್ತು ಅತ್ಯುನ್ನತ ಗ್ರಾಹಕ ಅನುಭವ ಹೀಗೆ ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್ ಬ್ರ್ಯಾಂಡ್ ಪ್ರತಿನಿಧಿಸುವ ಎಲ್ಲ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುತ್ತವೆ.

ಕಳೆದ ಹಲವು ವರ್ಷಗಳಲ್ಲಿ ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್ ಹೆಚ್ಚು ಅಸಂಘಟಿತ ಪೂರ್ವ ಮಾಲೀಕತ್ವದ ಕಾರುಗಳ ವಲಯದಲ್ಲಿ ಸಂಘಟಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ, ಫ್ರಾಂಚೈಸಿಗಳು, ಗ್ರಾಹಕರು, ವಿತರಕರು ಮತ್ತು ಸಾಂಸ್ಥಿಕ ಗ್ರಾಹಕರಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯ ವಲಯವನ್ನು ಸೃಷ್ಟಿಸುತ್ತದೆ. ಎಲ್ಲ ಫ್ರ್ಯಾಂಚೈಸ್ ಮಾಲೀಕರು ತಂತ್ರಜ್ಞಾನ, ತರಬೇತಿ, ಸಾಫ್ಟ್ವೇರ್, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ಗೆ ಪ್ರವೇಶವನ್ನು ಹೊಂದಿರುತ್ತಾರೆ. ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್, ದೇಶದ ಉದ್ದ ಮತ್ತು ಅಗಲದ ಗ್ರಾಹಕರಿಗೆ ಓಮ್ನಿ ಚಾನಲ್ ಮಾದರಿಯ ಮೂಲಕ ಮಾರಾಟವಾದ 5000+ ಪ್ರಮಾಣೀಕೃತ ವಾಹನಗಳ ದೊಡ್ಡ ಸಂಗ್ರಹವನ್ನು ಹೊಂದಿದೆ.

Used Car Buying: ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ ನೀವು ಗಮನಿಸಬೇಕಾದ್ದು ಏನನ್ನು?

350ಕ್ಕೂ ಹೆಚ್ಚು ನಗರಗಳಲ್ಲಿ 1100ಕ್ಕೂ ಅಧಿಕ ಚಿಲ್ಲರೆ ಮಳಿಗೆಗಳ ಮೂಲಕ ಬಳಸಿದ ಕಾರು ವಿಭಾಗದಲ್ಲಿ ಮಹೀಂದ್ರಾ ಫಸ್ಟ್ ಚಾಯ್ಸ್ ಉದ್ಯಮದ ಮುಂಚೂಣಿಯಲ್ಲಿದೆ, ದೇಶದಲ್ಲಿ ಇದುವರೆಗೆ 20 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದೆ.ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬಳಸಿದ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಹೊಸ ಕಾರುಗಳಿಗೆ ಬೆಲೆ ಏರಿಕೆಯಿಂದ ಗ್ರಾಹಕರು ಇದೀಗ ಬಳಸಿದ ಕಾರುಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ವಿಶೇಷ ಅಂದರೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಾಲ ಸೌಲಭ್ಯ, ಸುಲಭ ಕಂತು, ಕಡಿಮೆ ಬಡ್ಡಿ ದರ ಹಾಗೂ ಕಡಿಮೆ ಡೌನ್ ಪೇಮೆಂಟ್ ಸೌಲಭ್ಯಗಳೂ ಲಭ್ಯವಿದೆ. ಹೀಗಾಗಿ ಹಲವರಿಗೆ ಬಳಸಿದ ಕಾರುಗಳ ಖರೀದಿ ಸುಲಭವಾಗಿದೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ