Used Car Buying: ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ ನೀವು ಗಮನಿಸಬೇಕಾದ್ದೇನು?

Published : Dec 10, 2021, 03:59 PM ISTUpdated : Mar 19, 2025, 12:49 PM IST
Used Car Buying: ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳುವ ಮುನ್ನ ನೀವು ಗಮನಿಸಬೇಕಾದ್ದೇನು?

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬಳಸಿದ ಕಾರುಗಳ ಮಾರಾಟ ಹೆಚ್ಚಾಗಿದೆ. ಬಜೆಟ್ ಸಮಸ್ಯೆ, ಸಾರ್ವಜನಿಕ ಸಾರಿಗೆಯ ಭಯದಿಂದ ಜನರು ಸೆಕೆಂಡ್ ಹ್ಯಾಂಡ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಹಳೆ ಕಾರು ಖರೀದಿಸುವಾಗ ಮಾಹಿತಿ, ಬಜೆಟ್, ಮಾರುಕಟ್ಟೆ ಅವಲೋಕನ, ವಿಶ್ವಾಸಾರ್ಹ ಡೀಲರ್ ಆಯ್ಕೆ ಮುಖ್ಯ. ಫಿಟ್ನೆಸ್ ಪ್ರಮಾಣಪತ್ರ, ಟೆಸ್ಟ್ ಡ್ರೈವ್, ದಾಖಲೆಗಳ ಪರಿಶೀಲನೆ ಅತ್ಯಗತ್ಯ. ಕೊನೆಯದಾಗಿ, ಚೌಕಾಶಿ ಮಾಡಿ, ಖರೀದಿಸಿದ ಕಾರನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ.

ಮಧ್ಯಮ ವರ್ಗದವರಿಗೆ ಕಾರು ಕೊಳ್ಳೋದು ಈಗ ಮುಂಚಿನಷ್ಟು ದೊಡ್ಡ ವಿಷಯವಲ್ಲ. ಅದೂ ಅಲ್ಲದೇ ಬೆಂಗಳೂರಿನಂಥ ಟ್ರಾಫಿಕ್ ಇರೋ ಊರಲ್ಲಿ ಬಹುತೇಕ ಜನರು ನಮ್ಮ ಮೆಟ್ರೋದಂಧ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುತ್ತಿದ್ದು, ತಮ್ಮ ಕಾರನ್ನೂ ಹೊರ ತೆಗೆಯೋಷ್ಟು ಪೇಷೆನ್ಸ್ ಇಲ್ಲವಾಗಿದೆ. ಅಲ್ಲದೇ ಎಲ್ಲೆಡೆ ಊಬರ್, ಓಲಾ, ನಮ್ಮ ಯಾತ್ರಿಯಂಥ ಕ್ಯಾಬ್ ಸೌಕರ್ಯಗಳನ್ನು ಪಡೆಯೋದೂ ಬಹಳ ಸುಲಭ. ಕಾರು ಮೆಂಟೈನೆನ್ಸ್ ಗಿಂದ ಹೆಚ್ಚು ಈಸಿ. ಹಾಗಂಥ ಕಾರು ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತೆ ಎನ್ನುವ ಕಾರಣಕ್ಕೆ ಇಟ್ಟುಕೊಳ್ಳುವುದು ಅನಿವಾರ್ಯ. ಅದಕ್ಕೇ ಅನೇಕರ ಸೆಕೆಂಡ್ ಹ್ಯಾಂಡ್, ಕಡಿಮೆ ರೇಟಿನ ಕಾರನ್ನು ಕೊಳ್ಳಲು ಪ್ರಿಫರ್ ಮಾಡುತ್ತಾರೆ. 

ಹೊಸ ಕಾರು ಕೊಳ್ಳಬೇಕೆಂದಿದ್ದವರು ಕೂಡ ಸೆಕೆಂಡ್ ಹ್ಯಾಂಡ್ ಕಾರಿಗೆ ಬಂದಿದ್ದಾರೆ. ಸಾರ್ವಜನಿಕ ಸಾರಿಗೆ ಬಳಸಲು ಇಷ್ಟಪಡದವರೂ ಕೆಲವರಿದ್ದಾರೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಮ್ಮ ಓಡಾಟಕ್ಕೆಂದು ಒಂದು ಕಾರು ಕೊಳ್ಳುವವರ ಸಾಲೇ ಇದೆ. ಕನಿಷ್ಠ ಒಂದೆರಡು ವರ್ಷಗಳ ಬಳಕೆಗಾದರೂ ಯೂಸಡ್ ಕಾರು ಕೊಳ್ಳಬೇಕೆನ್ನುವವರೂ ಇದ್ದಾರೆ. ಆದರೆ ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟದ ವೇಳೆ  ಏನು ಗಮನಿಸಬೇಕು?

ನೈಜ ಮಾಹಿತಿ ಪಡೆಯುವುದು (Information)
ಹೊಸ ಕಾರುಗಳನ್ನು ಹೋಲಿಸಿದರೆ ಬಳಕೆಯಾದ ಕಾರುಗಳನ್ನು ಖರೀದಿಸುವುದು ತುಂಬಾ ಕಷ್ಟ. ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಪಡೆಯೋದು ತುಂಬಾ ಸುಲಭ. ಆದರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದರೆ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. 

ಎಲೆಕ್ಟ್ರಿಕ್ ಕಾರಿನಲ್ಲಿ BYD ಕ್ರಾಂತಿ, ಕೇವಲ 5 ನಿಮಿಷಕ್ಕೆ ಫುಲ್ ಚಾರ್ಜ್, 470 ಕಿ.ಮಿ ಮೈಲೇಜ್

ಬಜೆಟ್  (Budget)
ಹೊಸ ಕಾರಿನಂತೆ ಹಳೆ ಕಾರು ಖರೀದಿಸುವಾಗ ಮೊದಲು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಸಣ್ಣ ಕುಟುಂಬವಾಗಿದ್ದರೆ ನಾಲ್ಕು ಪ್ರಯಾಣಿಕರ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತ. ದೀರ್ಘ ಪಯಣ ಬಯಸುವವರಾದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಕುಟುಂಬದ ಸದಸ್ಯರಿದ್ದರೆ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಬೆಸ್ಟ್. 

ಅವಲೋಕನ 
ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುವುದು ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕಾರಿನ ಮಾಡೆಲ್ ಕುರಿತು ಸೂಕ್ತ ಮಾಹಿತಿ ಪಡೆಯಲು ಇಂಟರ್‌ನೆಟ್ ಸಹಕರಿಸಬಲ್ಲದು. ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು. 

ಸರಿಯಾದ ಡೀಲರ್‌ ಆಯ್ಕೆ (Best dealers) 
ಹಳೆ ಕಾರು ಖರೀದಿಸುವಾಗ ತಕ್ಕ ವಿತರಕರನ್ನು ಆರಿಸಿಕೊಳ್ಳಬೇಕು. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡಬಹುದು. ಹಾಗಾಗಿ ಸ್ಟಾಂಡರ್ಡ್ ಡೀಲರ್ಸ್ ಆರಿಸಿಕೊಳ್ಳಬೇಕು. 

ಹಣಕಾಸಿನ ನೆರವು (Finance)
ಕಾರು ಖರೀದಿ ಆಸೆ ಪೂರೈಸಲು ಮಾರುಕಟ್ಟೆಯಲ್ಲಿ ಹಲವು ಫೈನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳಿ. ಉದಾಹರಣೆಗೆ ನಿಮ್ಮ ಆದಾಯಕ್ಕೆ ಅನುಸರಿಸಿ ಹೆಚ್ಚು ನಂಬಿಕೆಯುಕ್ತ ಫೈನಾನ್ಸ್‌ಗಳಿಂದ ಸ್ಪಷ್ಟ ಮಾಹಿತಿ ಪಡೆಯಿರಿ. 

ಫಿಟ್‌ನೆಸ್ ಸರ್ಟಿಫಿಕೇಟ್  (Fitness certificate)
ಕಾರಿನ ಎಫ್‌ಸಿ ಅರ್ಥಾತ್ ಫಿಟ್‌ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿರಬೇಕು. 15 ವರ್ಷಕ್ಕಿಂತ ಹೆಚ್ಚು ಹಳೆಯ ಕಾರು ಕೊಳ್ಳುವಾಗ ಇವನ್ನೆಲ್ಲ ಗಮನಿಸುವುದು ಒಳಿತು. ಎಫ್‌ಸಿ ಇಲ್ಲದ ಕಾರುಗಳನ್ನು, ವಾಹನಗಳನ್ನು ರಸ್ತೆಗಿಳಿಸುವುದು ದಂಡಾರ್ಹ ಅಪರಾಧ. ಎಫ್‌ಸಿ ರದ್ದಾಗಿರುವುದರಿಂದ ಒಂದೆರಡು ಸಾವಿರದಷ್ಟು ಬೆಲೆ ಇಳಿಸಬಹುದು ಅಥವಾ ನಗಣ್ಯ ಎಂದು ಬಿಡಬಹುದು. ಇದರಿಂದ ಎಚ್ಚರ ವಹಿಸಿ.

ಟೆಸ್ಟ್ ಡ್ರೈವ್ (Test drive)
ಖರೀದಿಸುವ ಹಳೆ ಕಾರು ನೋಡಲು ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡಿ. ನಿಮಗೆ ಪರಿಚಯಿವಿರುವ ಮೆಕ್ಯಾನಿಕ್ ಅಥವಾ ಡ್ರೈವಿಂಗ್ ಮತ್ತು ಕಾರಿನ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುವ ನಿಮ್ಮ ಆಪ್ತ ಸ್ನೇಹಿತರ ನೆರವು ಪಡೆಯಿರಿ. ಆ ಮೂಲಕ ಕಾರು ಎಷ್ಟು ಕೀ.ಮೀ. ಓಡಿದೆ, ಆಕ್ಸಿಡೆಂಟ್ ಏನಾದರೂ ಆಗಿದ್ಯಾ, ಬಿಡಿಭಾಗ ಡ್ಯಾಮೇಜ್ ಆಗಿದೆಯೇ ಹೀಗೆ ಹಲವು ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ

ಕಡಿಮೆ ಬೆಲೆಗೆ ಟೆಸ್ಲಾ Y ಮಾಡೆಲ್ ಕಾರು ಪರಿಚಯಿಸಲು ಮುಂದಾದ ಟೆಸ್ಲಾ

ಹಳೆ ಕಾರಿನ ದಾಖಲೆ ಪತ್ರ (Documents)
ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿ. ಇನ್ನೊಂದು ವಿಚಾರ ಏನೆಂದರೆ ಕಳವಾದ ಕಾರು ಮಾರುವ ಸಾಧ್ಯತೆ ಜಾಸ್ತಿಯಾಗಿದ್ದು, ಕಾರು ಸರ್ವಿಸ್ ಬುಕ್ ಬಗ್ಗೆಯೂ ಸ್ಪಷ್ಟತೆ ಇರಲಿ. 

ಚೌಕಾಶಿ (Negotiation)
ಮೇಲೆ ತಿಳಿಸಿದ ಎಲ್ಲ ವಿಷಯವೂ ಓಕೆ ಆದಲ್ಲಿ ಕಾರು ಉತ್ತಮ ಕಂಡೀಷನ್‌ನಲ್ಲಿದ್ದು, ಖರೀದಿಗೆ ಸೂಕ್ತ ಎಂಬ ವಿಚಾರ ಮನಗಂಡಲ್ಲಿ ಮಾತ್ರ ಡೀಲ್‌ಗೆ ಸಿದ್ಧರಾಗಿರಿ. ಆದರೆ ಡೀಲರುಗಳು ಮುಂದಿಡುವ ಆಫರ್‌ಗೆ ಮುಂದಾಗದೇ ಆದಷ್ಟು ಚೌಕಾಶಿ ಮಾಡಿಕೊಂಡು ಡೀಲ್ ಮುಗಿಸಿ. 

ದಾಖಲೆ ನಿಮ್ಮ ಹೆಸರಿಗೆ
ಅಂತಿಮವಾಗಿ ವ್ಯವಹಾರ ಮುಗಿದ ನಂತರ ನಿಗದಿತ ಅವಧಿಯಲ್ಲಿ ಖರೀದಿಸಿದ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. 
ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ. ಇತ್ತೀಚೆಗೆ ಬಳಸಿದ ಕಾರಿನ ಮಾರಾಟಕ್ಕೆ ಆನ್‌ಲೈನ್‌ನ ದಾರಿ ರೆಕ್ಕೆಪುಕ್ಕ ಹಚ್ಚಿದೆ. ನೀವು ಕಾರು ಮಾರುವ ಮುನ್ನ ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ ಮೂಲಕ ಉತ್ತಮ ಬೆಲೆ ಗಿಟ್ಟಿಸಿಕೊಳ್ಳಬಹುದು. 

ನಿಮ್ಮ ಕಾರ್ ನಿರ್ವಹಣೆ ದುಬಾರಿಯಾಗಬಾರದು ಎಂದಿದ್ದರೆ ಈ ಟಿಪ್ಸ್ ಪಾಲಿಸಿ

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್