ಇನ್ನು ಮಳೆ ನಡುವೆ ಫುಡ್ ಡೆಲಿವರಿ ಮಾಡಿದ್ರೆ ಜೊಮ್ಯಾಟೋ ಸ್ವಿಗ್ಗಿಯಿಂದ ಹೆಚ್ಚುವರಿ ರೈನ್ ಟ್ಯಾಕ್ಸ್

Published : May 16, 2025, 05:01 PM ISTUpdated : May 16, 2025, 05:02 PM IST
ಇನ್ನು ಮಳೆ ನಡುವೆ ಫುಡ್ ಡೆಲಿವರಿ ಮಾಡಿದ್ರೆ ಜೊಮ್ಯಾಟೋ ಸ್ವಿಗ್ಗಿಯಿಂದ ಹೆಚ್ಚುವರಿ ರೈನ್ ಟ್ಯಾಕ್ಸ್

ಸಾರಾಂಶ

ಮಳೆಯಲ್ಲಿ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಮಳೆ ನಡುವೆ ಬಹುತೇಕರು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುತ್ತಾರೆ.ಆದರೆ ಇನ್ನು ಹೀಗೆ ಮಳೆಯಲ್ಲಿ ನಿಮಗೆ ಫುಡ್ ಡೆಲಿವರಿ ಮಾಡಬೇಕು ಎಂದರೆ ಹೆಚ್ಚುವರಿ ಶುಲ್ಕವಾಗುತ್ತದೆ. ಇದು ರೈನ್ ಸರ್ಚಾರ್ಜ್ ಹಾಕಲಾಗುತ್ತದೆ.  

ನವದೆಹಲಿ(ಮೇ.16) ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತದೆ. ಮುಂಗಾರು ಮಳೆ ಅಪ್ಪಳಿಸಲು ಸಜ್ಜಾಗಿದೆ. ಇನ್ನು ಮಳೆ ಆರ್ಭಟಗಳು ಹೆಚ್ಚಾಗುತ್ತದೆ. ಇದರ ನಡುವೆ ಸರ್ಕಾರ, ಸ್ಥಳೀಯ ಆಡಳಿತ ಮಳೆ ಅವಾಂತರ ಎದುರಿಸಲು ಸಜ್ಜಾಗುತ್ತಿದೆ. ಇತ್ತ ಜನಸಾಮಾನ್ಯರು ಕೂಡ ಮಳೆಗಾಲಕ್ಕೆ ತಯಾರಾಗುತ್ತಿದ್ದಾರೆ. ಇದರ ನಡುವೆ ಸ್ವಿಗ್ಗಿ ಹಾಗೂ ಜೋಮ್ಯಾಟೋ ಕೂಡ ಮಳೆಗಾಲಕ್ಕೆ ಹೊಸ ಪ್ಲಾನ್ ಮೂಲಕ ಬಂದಿದೆ. ಮನೆಯಲ್ಲಿ ಕುಳಿತು ಬೆಚ್ಚಗೆ ಆಹಾರ ಸವಿಯು ಪ್ರಿಯರಿಗೆ ಸ್ವಿಗ್ಗಿ ಹಾಗೂ ಜೋಮ್ಯಾಟೋ ಶಾಕ್ ನೀಡಿದೆ. ಇದೀಗ ಮಳೆಯಲ್ಲಿ ನಿಮಗೆ ಫುಡ್ ಡೆಲಿವರಿ ಮಾಡಲು ಹೆಚ್ಚುವರಿಯಾಗಿ ರೈನ್ ಚಾರ್ಜ್ ಹಾಕಲಾಗುತ್ತದೆ.

ಫುಡ್ ಡೆಲಿವರಿಗೆ ರೈನ್ ಚಾರ್ಜ್ 
ಸ್ವಿಗ್ಗಿ, ಜೊಮ್ಯಾಟೋ ಇದೀಗ ಹೆಚ್ಚುವರಿಯಾಗಿ ರೈನ್ ಟ್ಯಾಕ್ಸ್ ವಿಧಿಸಲು ಮುಂದಾಗಿದೆ. ಮಳೆ ನಡುವೆ ಫುಡ್ ಡೆಲಿವರಿ ಮಾಡಲು ಈ ಚಾರ್ಜ್ ಪಡೆಯಲಾಗುತ್ತದೆ. ಈ ಮೊದಲು ಗೋಲ್ಡ್ ಅಥವಾ ಪ್ರಿಮಿಯಂ ಗ್ರಾಹಕರಿಗೆ ಈ ಶುಲ್ಗಳಿಂದ ವಿನಾಯಿತಿ ನೀಡಲಾಗಿತ್ತು.ಆದರೆ ಹೊಸ ನೀತಿ ಪ್ರಕಾರ ಎಲ್ಲಾ ಗ್ರಾಹಕರೂ ಮಳೆಯಲ್ಲಿ ಫುಡ್ ಡೆಲಿವರಿ ಪಡೆಯಲು ರೈನ್ ಟ್ಯಾಕ್ಸ್ ಪಾವತಿಸಬೇಕು. ಫುಡ್ ಆರ್ಡರ್ ಮಾಡುವಾಗ ಇದರಲ್ಲಿ ರೈನ್ ಸರ್ಚಾರ್ಜ್ ಹಾಕಲಾಗುತ್ತದೆ.

ಜೊಮೆಟೋ ವಿವಾದಕ್ಕೆ 'ನಾನ್‌ಸೆನ್ಸ್' ಎಂದು ಮುಖ್ಯಸ್ಥರ ಸ್ಪಷ್ಟನೆ!

ಇತ್ತೀಚಿನ ವರೆಗೆ ಸ್ವಿಗ್ಗಿ, ಜೊಮ್ಯಾಟೋ ಸದಸ್ಯರಲ್ಲದ  ಗ್ರಾಹಕರಿಗೆ ಈ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿತ್ತು. ರೈನ್ ಸರ್ಚಾರ್ಜ್ ಸೇರಿದಂತೆ ಇತರ ಚಾರ್ಚ್ ವಿಧಿಸಲಾಗುತ್ತಿತ್ತು. ಆದರೆ ಡೆಲಿವರಿ ವೇಳೆ ಎದುರಾಗುತ್ತಿರುವ ಸವಾಲು ಹಾಗೂ ಆರ್ಥಿಕ ಸಂಕಷ್ಟ ತಪ್ಪಿಸಲು ರೈನ್ ಚಾರ್ಜ್ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ರೈನ್ ಟ್ಯಾಕ್ಸ್ ವಿಧಿಸಿ ಆಗಿದೆ. ಇದೀಗ ಮಳೆಗಾಲದಲ್ಲಿ ಮನೆ ಒಳಗೆ ಬೆಚ್ಚಗೆ ಕುಳಿತು ಏನಾದರೂ ತಿನ್ನಬೇಕು ಎಂದರೂ ಮಳೆಗೂ ಟ್ಯಾಕ್ಸ್ ಕಟ್ಟಬೇಕು. 2 ರೂಪಾಯಿಯಿಂದ 10 ರೂಪಾಯಿವರೆಗೆ ಚಾರ್ಜ್ ಮಾಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ಮಳೆ ತೆರಿಗೆಗೆ ಗ್ರಾಹಕರು ಗರಂ
ಸ್ವಿಗ್ಗಿ ಜೊಮ್ಯಾಟೋ ಮೂಲಕ ಪ್ರತಿ ದಿನ ಅಥವಾ ಸತತವಾಗಿ ಆಹಾರ ಆರ್ಡರ್ ಮಾಡುವ ಸದಸ್ಯರು ಈ ನಿರ್ಧಾರದಿಂದ ಗರಂ ಆಗಿದ್ದಾರೆ. ಸ್ವಿಗ್ಗಿ, ಜೊಮ್ಯಾಟೋ ಸದಸ್ಯರಲ್ಲದವರಗೆ ಈ ಶುಲ್ ವಿಧಿಸುವುದರಲ್ಲಿ ಅರ್ಥವಿದೆ. ಆದರೆ ಸದಸ್ಯರಾಗಿ, ಹೆಚ್ಚುವರಿ ಪಾವತಿ ಮಾಡಿಯೂ ಮತ್ತೆ ರೈನ್ ಟ್ಯಾಕ್ಸ್ ವಿದಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಮಳೆಗಾಲದಲ್ಲಿ ಡೆಲಿವರಿ ಹೆಚ್ಚು ಸವಾಲು
ಮಳೆಗಾಲದಲ್ಲಿ ಫುಡ್ ಡೆಲಿವರಿ ಹೆಚ್ಚು ಸವಾಲಿನಿಂದ ಕೂಡಿದೆ. ಪ್ರಮುಖವಾಗಿ ಭಾರಿ ಮಳೆಯಲ್ಲಿ ಡೆಲಿವರಿಗಾಗಿ ಸಾಗುವುದೇ ದೊಡ್ಡ ಸವಾಲು. ಇನ್ನು ಆಹಾರಗಳು ಸುರಕ್ಷಿತವಾಗಿ ತಲುಪಿಸಬೇಕು. ಮಳೆಯಿದಂ ಹಲವು ರಸ್ತೆಗಳು ಜಲಾವೃತಗೊಳ್ಳುವುದು ಸಾಮಾನ್ಯ . ಈ ವೇಳೆ ನಿಗದಿತ ಸಮಯದೊಳಗೆ ಆಹಾರಗಳನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಾಗುತ್ತದೆ. ಡೆಲಿವರಿ ಎಜೆಂಟ್ ಹರಸಾಹಸ ಮಾಡಿ ಫುಡ್ ತಲುಪಿಸಿದ ಹಲವು ಘಟನೆಗಳು ನಡೆದಿದೆ. ಆದರೆ ಈ ಸರ್ಜಚಾರ್ಜ್ ನೇರವಾಗಿ ಡೆಲಿವರಿ ಎಜೆಂಟ್‌ಗಳಿಗೆ ಸಿಗುವುದಿಲ್ಲ. ಇದು ಕಂಪನಿ ಒಟ್ಟು ಆದಾಯದಲ್ಲಿ ಸೇರಿಕೊಳ್ಳಲಿದೆ ಎನ್ನಲಾಗುತ್ತಿದೆ.

ಜೊಮ್ಯಾಟೋ ಹಾಗೂ ಸ್ವಿಗ್ಗಿ  ಹೊಸ ರೈನ್ ಟ್ಯಾಕ್ಸ್ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬದಲಾವಣೆ ಆಗಿದೆ. ಪ್ರತಿ ತಿಂಗಳು ಈ ರೀತಿ ಒಂದೊಂದು ಸರ್ಚಾರ್ಜ್ ಸೇರಿಸಿಕೊಳ್ಳುತ್ತಾ ಸಾಗುವುದು ಸರಿಯಲ್ಲ. ಇದು ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಹಲವರು ಸಲಹೆ ನೀಡಿದ್ದಾರೆ. ಮಳೆ ಇಲ್ಲದ ವೇಳೆ ಆರ್ಡರ್ ಮಾಡಿದರೂ ಈ ರೈನ್ ಟ್ಯಾಕ್ಸ್ ಹಾಕಲಾಗುತ್ತದಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಜೊಮೆಟೋ ಡೆಲಿವರಿ ಬಾಯ್ ಫುಡ್ ಡೆಲಿವರಿ ಕೊಡದೇ ಜೀವ ಬೆದರಿಕೆ ಹಾಕಿದ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!