2023ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತವಾಗಲಿದೆ ಎಂದು ಆರ್ಥಿಕ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹಣದುಬ್ಬರ ಇಳಿಕೆಗೆ ಬಡ್ಡಿದರ ಏರಿಕೆ ಎಫೆಕ್ಟ್ ನಿಂದ ಆರ್ಥಿಕ ಪ್ರಗತಿಗೆ ಇನ್ನು ತಡೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಂಡನ್: ವಿಶ್ವ ( 2023ರಲ್ಲಿ ಆರ್ಥಿಕ ಹಿಂಜರಿತದ (Economic Recession) ಅಂಚಿಗೆ ನೂಕಲ್ಪಡುತ್ತಿದೆ ಎಂದು ಬ್ರಿಟನ್‌ನ (Britain) ‘ಸೆಂಟರ್ ಫಾರ್ ಎಕಾನಮಿಕ್ಸ್ ಆ್ಯಂಡ್ ಬಿಸಿನೆಸ್ ರಿಸರ್ಚ್’ ( Centre for Economics and Business Research) (CEBR) ಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಣದುಬ್ಬರ (Inflation) ನಿಗ್ರಹಿಸಲು ಅನೇಕ ದೇಶಗಳು ಸಾಲದ ಬಡ್ಡಿ ದರವನ್ನು (Interest Rate) ಹೆಚ್ಚಿಸುತ್ತಿವೆ. ಹಾಗಾಗಿ ಆರ್ಥಿಕತೆ (Economy) ಸಂಕುಚಿತಗೊಳ್ಳುತ್ತಿದೆ. 2022ರಲ್ಲಿ ಮೊದಲ ಬಾರಿ ವಿಶ್ವದ ಅರ್ಥಿಕತೆ 100 ಲಕ್ಷ ಕೋಟಿ ಡಾಲರ್ ಅಂಕಿಯನ್ನು ದಾಟಿರಬಹುದು. ಆದರೆ 2023ರಲ್ಲಿ ಬೆಲೆಯೇರಿಕೆ ವಿರುದ್ಧ ಸರ್ಕಾರಗಳು (Government) ಹೋರಾಟ ನಡೆಸಲಿರುವ ಕಾರಣ, ಆರ್ಥಿಕತೆಯ ನಾಗಾಲೋಟಕ್ಕೆ ತಡೆ ಬೀಳಲಿದೆ ಎಂದು ಬ್ರಿಟನ್ ಮೂಲದ ಈ ಸಂಸ್ಥೆಯು ವಾರ್ಷಿಕ ಆರ್ಥಿಕ ಮುನ್ನೋಟದ ವರದಿಯೊಂದರಲ್ಲಿ ಹೇಳಿದೆ.
"ಹೆಚ್ಚಿನ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ಬಡ್ಡಿದರಗಳ ಹೆಚ್ಚಳದ ಪರಿಣಾಮವಾಗಿ ಮುಂದಿನ ವರ್ಷ ವಿಶ್ವ ಆರ್ಥಿಕತೆಯು ಹಿಂಜರಿತವನ್ನು ಎದುರಿಸುವ ಸಾಧ್ಯತೆಯಿದೆ" ಎಂದು CEBR ಸಂಸ್ಥೆಯ ಮುನ್ಸೂಚನೆಯ ನಿರ್ದೇಶಕ ಮತ್ತು ಮುಖ್ಯಸ್ಥ ಕೇ ಡೇನಿಯಲ್ ನ್ಯೂಫೆಲ್ಡ್ ಹೇಳಿದ್ದಾರೆ. ‘ಹಣದುಬ್ಬರ ತಡೆಗೆ ಬಡ್ಡಿದರ ಹೆಚ್ಚಳ ವಿಶ್ವಾದ್ಯಂತ ನಡೆದಿದೆ. ಇದರ ಪರಿಣಾಮ ಮುಂದಿನ ವರ್ಷ ವಿಶ್ವವು ಆರ್ಥಿಕ ಹಿಂಜರಿತ ಕಾಣಲಿದೆ. ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ನಿಂತಿಲ್ಲ. ಆರ್ಥಿಕ ಹೊಡೆತ ಬಿದ್ದರೂ 2023ರಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸೆಂಟ್ರಲ್ ಬ್ಯಾಂಕ್‌ಗಳು ಆದ್ಯತೆ ನೀಡುತ್ತವೆ. ಹೀಗಾಗಿ ಇದರ ಪರಿಣಾಮ ಆರ್ಥಿಕ ಪ್ರಗತಿ ಮೇಲೂ ಬೀಳಲಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಣದುಬ್ಬರವನ್ನು ಹೆಚ್ಚು ಆರಾಮದಾಯಕ ಮಟ್ಟಕ್ಕೆ ತರುವ ವೆಚ್ಚವು ಮುಂಬರುವ ಹಲವಾರು ವರ್ಷಗಳವರೆಗೆ ಕಳಪೆ ಬೆಳವಣಿಗೆಯ ದೃಷ್ಟಿಕೋನವಾಗಿದೆ ಎಂದೂ ವರದಿಯಲ್ಲಿ ಸೇರಿಸಲಾಗಿದೆ.
ಇದನ್ನು ಓದಿ: ಭಾರತದ ಆರ್ಥಿಕತೆಗೆ ಡಿಜಿಟಲ್ ಕ್ರಾಂತಿಯ ಬಲ
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ಮುನ್ಸೂಚನೆಗಿಂತ ಸಂಶೋಧನೆಗಳು ಹೆಚ್ಚು ನಿರಾಶಾದಾಯಕವಾಗಿದ್ದವು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ‘ಅಕ್ಟೋಬರ್‌ನಲ್ಲಿ ವಿಶ್ವ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಸಂಕುಚಿತಗೊಳ್ಳಲಿದೆ’ ಎಂದು ಅದು ಎಚ್ಚರಿಸಿತ್ತು ಮತ್ತು 2023ರಲ್ಲಿ ಜಾಗತಿಕ ಜಿಡಿಪಿ ಶೇ.2ಕ್ಕಿಂತ ಕಡಿಮೆ ಬೆಳವಣಿಗೆ ಕಾಣುವ 25% ಅವಕಾಶವಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನು ಜಾಗತಿಕ ಆರ್ಥಿಕ ಹಿಂಜರಿತ ಎಂದು ವ್ಯಾಖ್ಯಾನಿಸಲಾಗುತ್ತದೆ.
2037 ರ ವೇಳೆಗೆ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಶ್ರೀಮಂತ ರಾಷ್ಟ್ರಗಳಿಗೆ ಹೊಂದಿಕೊಂಡಂತೆ, ಜಾಗತಿಕ ಒಟ್ಟು ಆಂತರಿಕ ಉತ್ಪನ್ನವು ದ್ವಿಗುಣಗೊಳ್ಳುತ್ತದೆ. ಹಾಗೂ 2037 ರ ವೇಳೆಗೆ, ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶವು ಜಾಗತಿಕ ಉತ್ಪಾದನೆಯ ಮೂರನೇ ಒಂದು ಭಾಗವನ್ನು ಹೊಂದಿರುತ್ತದೆ, ಆದರೆ, ಪವರ್ ಡೈನಾಮಿಕ್ಸ್ ಬದಲಾಗಲಿದ್ದು, ಯುರೋಪಿನ ಪಾಲು ಐದನೇ ಒಂದು ಭಾಗಕ್ಕಿಂತ ಕಡಿಮೆಯಿರುತ್ತದೆ ಎಂದೂ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಇದನ್ನೂ ಓದಿ: ಈ ಶತಮಾನ ಭಾರತಕ್ಕೆ ಸೇರಿದ್ದು: ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಭವಿಷ್ಯ
ಸೆಂಟರ್ ಫಾರ್ ಎಕಾನಮಿಕ್ಸ್ ಆ್ಯಂಡ್ ಬಿಸಿನೆಸ್ ರಿಸರ್ಚ್ ಸಂಸ್ಥೆಯು IMFನ ವಿಶ್ವ ಆರ್ಥಿಕ ಮುನ್ನೋಟ ಮತ್ತು ಆಂತರಿಕ ಮಾದರಿಯ ದತ್ತಾಂಶದ ಮೇಲೆ ಬೆಳವಣಿಗೆ, ಹಣದುಬ್ಬರ ಮತ್ತು ವಿನಿಮಯ ದರಗಳ ಭವಿಷ್ಯವನ್ನು ಆಧರಿಸಿದೆ. ಈ ಅಧ್ಯಯನದ ಪ್ರಕಾರ, ಭಾರತವು 2035 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲಿದೆ ಮತ್ತು 2032 ರ ವೇಳೆಗೆ ಒಟ್ಟಾರೆ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ: ಎಸ್ & ಪಿ ವರದಿ