ಭಾರತೀಯ ವೈದ್ಯರು ಯಾಕೆ ಜನೌಷಧಿ ಯೋಜನೆಯನ್ನು ಒಪ್ಪಿಕೊಳ್ಳುತ್ತಿಲ್ಲ? ಬ್ರ್ಯಾಂಡ್‌ ಔಷಧಗಳನ್ನೇ ಬರೆಯೋದೇಕೆ!

By BK Ashwin  |  First Published May 10, 2023, 8:01 PM IST

ಸಾಕಷ್ಟು ಜನರು ವೈದ್ಯರು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಂದ, ಔಷಧ ಕಂಪನಿಗಳಿಂದ ದುಬಾರಿ ಉಡುಗೊರೆಗಳನ್ನು ಪಡೆಯುತ್ತಾರೆ ಎಂದು ಆರೋಪಿಸುತ್ತಾರೆ. ಆದ್ದರಿಂದಲೇ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಎನ್ನುತ್ತಾರೆ.


(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಸಾಮಾನ್ಯವಾಗಿ ವೈದ್ಯರುಗಳು ಅವರ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳ ಸನಿಹದಲ್ಲಿ ಲಭ್ಯವಿರುವ ಬ್ರ್ಯಾಂಡ್‌ಗಳ ಔಷಧವನ್ನೇ ಚೀಟಿಯಲ್ಲಿ ಬರೆದುಕೊಡುತ್ತಾರೆ. ಆದರೆ ವೈದ್ಯರು ಯಾಕೆ ಜೆನೆರಿಕ್ ಔಷಧಗಳನ್ನು ಬರೆದು ಕೊಡುತ್ತಿಲ್ಲ? ರೋಗಿಗಳು ಯಾಕೆ ಜೆನೆರಿಕ್ ಔಷಧಗಳಿಗಾಗಿ ಬೇಡಿಕೆ ಸಲ್ಲಿಸಬೇಕು?

Latest Videos

undefined

ಸಾಕಷ್ಟು ಜನರು ವೈದ್ಯರು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಂದ, ಔಷಧ ಕಂಪನಿಗಳಿಂದ ದುಬಾರಿ ಉಡುಗೊರೆಗಳನ್ನು ಪಡೆಯುತ್ತಾರೆ ಎಂದು ಆರೋಪಿಸುತ್ತಾರೆ. ಆದ್ದರಿಂದಲೇ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಎನ್ನುತ್ತಾರೆ. ಅದಲ್ಲದೆ, ಜೆನೆರಿಕ್ ಔಷಧಗಳನ್ನು ಸಾಮಾನ್ಯವಾಗಿ ಸರ್ಕಾರವೇ ಪೂರೈಸುವುದರಿಂದ, ಅದನ್ನು ಸೂಚಿಸುವುದರಿಂದ ವೈದ್ಯರು ಗುಂಪಿನಿಂದ ಹೊರಗಾಗುವ, ಅಥವಾ ಯಾವುದೇ ಲಾಭ ಹೊಂದದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದಲೇ ವೈದ್ಯರಿಂದ ಕಡಿಮೆ ಬೆಲೆಯ, ಅಥವಾ ಜೆನೆರಿಕ್ ಔಷಧಗಳನ್ನು ಸೂಚಿಸುವಂತೆ ಕೇಳುವುದು ರೋಗಿಗಳ ಕರ್ತವ್ಯವಾಗಿದೆ.

ಇದನ್ನು ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

ಇಲ್ಲಿ ಕಾಡುವಂತಹ ಪ್ರಶ್ನೆಯೆಂದರೆ, ಜೆನೆರಿಕ್ ಔಷಧಗಳನ್ನು ಸೂಚಿಸದಿರಲು ಇದೊಂದೇ ಕಾರಣವಾಗಿರಬಹುದೇ? ಇದಕ್ಕೆ ಉತ್ತರ ರಾಜತಾಂತ್ರಿಕ ರೀತಿಯದ್ದಾಗಿರುತ್ತದೆ! ಎಲ್ಲಾ ವೈದ್ಯರೂ ಒಂದೇ ರೀತಿಯಾಗಿರುವುದಿಲ್ಲ. ಕನಿಷ್ಠ ಕೆಲವು ವೈದ್ಯರಾದರೂ ಜೆನೆರಿಕ್ ಔಷಧಗಳನ್ನು ಸೂಚಿಸುತ್ತಾರೆ. ಆದರೆ ಇತರರು ಔಷಧ ಕಂಪನಿಗಳೊಡನೆ ಅಥವಾ ಔಷಧ ಪ್ರತಿನಿಧಿಗಳೊಡನೆ ಸಹಯೋಗ ಹೊಂದಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ವೈದ್ಯರ ಸಂಬಂಧಿಗಳೇ ಔಷಧ ಅಂಗಡಿಗಳನ್ನು ನಡೆಸುವ ಸಾಧ್ಯತೆಗಳಿದ್ದು, ವೈದ್ಯರು ಅಲ್ಲಿಗೆ ಚೀಟಿ ಕೊಡುವುದು ಸಹಜವಾಗಿರುತ್ತದೆ.

ಹಾಗಾಗಿ, ವೈದ್ಯರಿಗೆ ಕಮಿಷನ್ ಅಥವಾ ಲಾಭಾಂಶ ಪಡೆಯುವುದು ಮಾತ್ರವೇ ಅಲ್ಲದೆ ಬೇರೆಯ ಕಾರಣಗಳೂ ಇವೆ. ಕೆಲವು ವೈದ್ಯರು ನಿರ್ದಿಷ್ಟ ಸಮಸ್ಯೆಗಳ ಲಕ್ಷಣಗಳನ್ನು ಕಡಿಮೆ ಸಮಯದಲ್ಲಿ ಬಗೆಹರಿಸಲು ಜೆನೆರಿಕ್ ಔಷಧಗಳು ಸಮರ್ಥವಾಗಿಲ್ಲ ಎಂದೇ ಭಾವಿಸುತ್ತಾರೆ. ಕಡಿಮೆ ಅವಧಿಯಲ್ಲಿ ರೋಗ ವಾಸಿಯಾದರಷ್ಟೇ ರೋಗಿಗಳಿಗೆ ನಮ್ಮ‌ ಮೇಲೆ ನಂಬಿಕೆ ಬರಲು ಸಾಧ್ಯ ಎಂಬುದು ಅವರ ಭಾವನೆಯಾಗಿರುತ್ತದೆ. ಪ್ರತಿಯೊಬ್ಬ ವೈದ್ಯರೂ ಚಿಕಿತ್ಸೆ ಅತ್ಯಂತ ಕ್ಷಿಪ್ರವಾಗಿದ್ದು, ಉತ್ತಮ ಫಲಿತಾಂಶ ನೀಡಬೇಕು ಎಂದೇ ಭಾವಿಸುತ್ತಾರೆ. ಏಕೆಂದರೆ, ಬೇಗ ವಾಸಿಯಾದಷ್ಟೂ ವೈದ್ಯ ಉತ್ತಮ ಎಂದು ರೋಗಿಗಳು ನಂಬುತ್ತಾರೆ!

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ಇದಕ್ಕಿರುವ ಇನ್ನೊಂದು ಕಾರಣವೆಂದರೆ, ಔಷಧಗಳ ಲಭ್ಯತೆ. ಸಾಕಷ್ಟು ಭಾರತೀಯ ಔಷಧಾಲಯಗಳು ಜೆನೆರಿಕ್ ಔಷಧಗಳ ಸಂಗ್ರಹ ಇಟ್ಟಿರುವುದಿಲ್ಲ. ಇದರ ಪರಿಣಾಮವಾಗಿ, ಜೆನೆರಿಕ್ ಔಷಧಗಳನ್ನು ಹುಡುಕಿಕೊಂಡು ರೋಗಿಗಳು ತೆರಳುವಂತಾಗುತ್ತದೆ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ, ಈಗ ಸರ್ಕಾರ ಜೆನೆರಿಕ್ ಔಷಧಗಳನ್ನು ಸ್ಥಳೀಯ ಔಷಧಾಲಯಗಳಿಗೆ ಮಾತ್ರವಲ್ಲದೆ, ಆನ್‌ಲೈನ್ ವ್ಯಾಪಾರಿಗಳಿಗೂ ಒದಗಿಸುವಂತೆ ಆದೇಶಿಸಿದೆ.

ಬಹುತೇಕ ಭಾರತೀಯ ಔಷಧಾಲಯಗಳಲ್ಲಿ ಫಾರ್ಮಾಸಿಸ್ಟ್ ಮಾರ್ಗದರ್ಶನದಲ್ಲಿ ಬ್ರ್ಯಾಂಡಿನ ಔಷಧಗಳನ್ನು ಒದಗಿಸಲು ಸಹಾಯಕರಿರುತ್ತಾರೆ. ಅವರಿಗೆ ಜೆನೆರಿಕ್ ಔಷಧಗಳ ಬಗ್ಗೆ ಅತ್ಯಂತ ಕಡಿಮೆ ಮಾಹಿತಿಯಿರುತ್ತದೆ. ಅವರ ಬಳಿ ಜೆನೆರಿಕ್ ಔಷಧಗಳನ್ನು ಕೇಳುವುದು ಅರ್ಥಹೀನವಾಗುತ್ತದೆ. ಆದ್ದರಿಂದ ರೋಗಿಗಳು ಜೆನೆರಿಕ್ ಔಷಧಗಳನ್ನು, ಅದರಲ್ಲೂ ಒಂದೊಂದು ಔಷಧಗಳನ್ನು ಹುಡುಕಿಕೊಂಡು ಬೇರೆ ಬೇರೆ ಔಷಧ ಮಳಿಗೆಗಳಿಗೆ ತೆರಳುತ್ತಾರೆ. ಇದು ಅವರಿಗೆ ಸುಸ್ತಾಗುವಂತೆ ಮಾಡುವ ಪ್ರಕ್ರಿಯೆಯೂ ಹೌದು. ಆದ್ದರಿಂದ ಈ ಸಮಸ್ಯೆಯೇ ಬೇಡವೆಂದು ರೋಗಿಗಳು ಮುಂದಿನ ಬಾರಿ ಸ್ಥಳೀಯವಾಗಿ ಲಭ್ಯವಿರುವ ಔಷಧಗಳನ್ನು ಕೊಡುವಂತೆ ವೈದ್ಯರ ಬಳಿ ಕೇಳಿಬಿಡುತ್ತಾರೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಅಂತಿಮವಾಗಿ, ಮತ್ತು ಬಹುಶಃ ಅತ್ಯಂತ ಮುಖ್ಯವಾಗಿ, ಭಾರತದಲ್ಲಿ ಬ್ರ್ಯಾಂಡೆಡ್‌ ಔಷಧಗಳ ಕುರಿತು ಸಾಮಾನ್ಯವಾಗಿ ಜನರಿಗೆ ಜೆನರಿಕ್ ಔಷಧಗಳಿಂದ ಹೆಚ್ಚಿನ ಮಾಹಿತಿ ಇರುತ್ತದೆ. ಜೆನೆರಿಕ್ ಔಷಧಗಳ ಕುರಿತು ಮಾಹಿತಿ ಇಲ್ಲದ ಜನರು ಒಂದು ವೇಳೆ ವೈದ್ಯರು ಅವುಗಳನ್ನು ಸೂಚಿಸಿದರೆ ಅನುಮಾನ ಪಡುವ ಸಾಧ್ಯತೆಗಳಿವೆ. ಇಲ್ಲಿ ನಾವು ಗಮನಿಸಬಹುದಾದ ಒಂದು ಉದಾಹರಣೆ ಎಂದರೆ ಜ್ವರ ಅಥವಾ ನೋವನ್ನು ಪರಿಹರಿಸಲು ಬಳಸುವ ಕ್ರೋಸಿನ್ ಎಂಬ ಬ್ರ್ಯಾಂಡ್‌. ಒಂದು ವೇಳೆ ವೈದ್ಯರೇನಾದರೂ ಕ್ರೋಸಿನ್ ಬಗ್ಗೆ ತಿಳಿದಿರುವ ರೋಗಿಯ ಬಳಿ ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳುವ ಒಂದು ಸೂಚಿಸಿದರೆ, ರೋಗಿಗೆ ಈ ಮಾತ್ರೆ ನನ್ನ ಕಾಯಿಲೆಯನ್ನು ಗುಣಪಡಿಸಬಹುದೇ ಎಂಬ ಅನುಮಾನ ಬರುತ್ತದೆ. 

ಯಾಕೆಂದರೆ ಅವರಿಗೆ ಪ್ಯಾರಾಸಿಟಮಲ್ ಎನ್ನುವುದು ಕ್ರೋಸಿನ್ನಿನ ಜೆನೆರಿಕ್ ಹೆಸರು ಎಂಬ ಅರಿವಿರುವುದಿಲ್ಲ. ರೋಗಿಗಳಿಗೆ ಇಂತಹ ಮಾಹಿತಿಯ ಕೊರತೆ ಇರುವುದರಿಂದ ಸಾಮಾನ್ಯವಾಗಿ ವೈದ್ಯರು ಬ್ರಾಂಡೆಡ್ ಔಷಧಗಳನ್ನು ಸೂಚಿಸಿ, ಅವರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ಜನೌಷಧಿ ಯೋಜನೆ ಎಂದರೇನು?

1,759 ಔಷಧ ಹಾಗೂ 280 ಸರ್ಜಿಕಲ್ ಉಪಕರಣಗಳನ್ನು ಒಳಗೊಂಡ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾವನ್ನು ನವೆಂಬರ್ 2008ರಲ್ಲಿ ಕೇಂದ್ರ ಔಷಧೀಯ ಇಲಾಖೆ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ, ಜನೌಷಧಿ ಯೋಜನೆಯಲ್ಲಿ ಜಾರಿಗೆ ತಂದಿತು. ಜನೌಷಧಿ ಯೋಜನೆ ರೋಗಿಗಳಿಗೆ ಕಡಿಮೆ ಬೆಲೆಯ, ಪರಿಣಾಮಕಾರಿ ಔಷಧಿಗಳನ್ನು ಒದಗಿಸುತ್ತದೆ. ಇದು ಸಾರ್ವಜನಿಕರನ್ನು ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಜಾಗೃತರನ್ನಾಗಿಸುವ ಉದ್ದೇಶ ಹೊಂದಿದೆ. ಔಷಧಿಗಳ ಬೆಲೆ ಹೆಚ್ಚಾದಷ್ಟು ಅದು ಒಳ್ಳೆಯದು ಎಂಬ ಭಾವನೆಯಿಂದ ಜನರನ್ನು ಹೊರತರಲು ಪ್ರಯತ್ನಿಸುತ್ತದೆ.

ಈ ಯೋಜನೆಯಡಿ, ಜನೌಷಧಿ ಕೇಂದ್ರ ಎಂದು ಕರೆಯಲಾಗುವ ಔಷಧಾಲಯಗಳನ್ನು ತೆರೆಯಲಾಗಿದ್ದು, ಅಕ್ಟೋಬರ್ 2022ರ ವರದಿಯ ಪ್ರಕಾರ, ದೇಶಾದ್ಯಂತ 8,819 ಜನೌಷಧಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇಂದಿನ ತನಜ ಜನೌಷಧಿ ಯೋಜನೆಯ ಕುರಿತು ನಡೆಸಲಾದ ಅಧ್ಯಯನವೊಂದರ ಪ್ರಕಾರ, ಜನೌಷಧಿ ಕೇಂದ್ರಗಳಿಂದ ಖರೀದಿಸಲಾದ ಔಷಧಗಳು ಇತರ ಬ್ರ್ಯಾಂಡ್‌ಗಳ ಔಷಧಗಳಷ್ಟೇ ಉತ್ತಮ ಗುಣಮಟ್ಟ ಹೊಂದಿವೆ ಎಂದು ಕಂಡುಬಂದಿದೆ.

ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

ಜನೌಷಧಿ ಔಷಧಗಳು ಯಾಕೆ ಕಡಿಮೆ ಬೆಲೆ ಹೊಂದಿವೆ?

ಜನೌಷಧಿ ಕೇಂದ್ರದ ಜೆನೆರಿಕ್ ಔಷಧಗಳನ್ನು ಸ್ವಾಮ್ಯವಿಲ್ಲದೆ ಅಥವಾ ಬ್ರ್ಯಾಂಡ್ ಹೆಸರಿಲ್ಲದೆ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಜನೌಷಧಿ ಕೇಂದ್ರದ ಔಷಧಗಳು ಮಾರುಕಟ್ಟೆಯ ಇತರ ಬ್ರ್ಯಾಂಡ್‌ಗಳ ಔಷಧಗಳಿಂದ ಕನಿಷ್ಠ 50% ಕಡಿಮೆ ಬೆಲೆ ಹೊಂದಿರುತ್ತವೆ. ಕೆಲವೊಂದು ಔಷಧಗಳಂತೂ 80% - 90% ಕಡಿಮೆ ಬೆಲೆ ಹೊಂದಿರುತ್ತವೆ. ಜನೌಷಧಿ ಕೇಂದ್ರಗಳ ಮಾಲಕರಿಗೆ ಪ್ರತಿಯೊಂದು ಔಷಧಿಯ ಗರಿಷ್ಠ ಮಾರಾಟ ಬೆಲೆಯ 20%ದಷ್ಟು ಲಾಭಾಂಶ ಲಭ್ಯವಿರುತ್ತದೆ.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

click me!