ಅದಾನಿ-ಹಿಂಡನ್‌ಬರ್ಗ್ ವಿವಾದದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಮುಚ್ಚಿದ ಲಕೋಟೆಯಲ್ಲು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದದೆ. ಮೇ.12 ರಂದು ಇದರ ವಿಚಾರಣೆ ನಡೆಯಲಿದೆ.
ನವದೆಹಲಿ (ಮೇ.10): ಅದಾನಿ-ಹಿಂಡೆನ್‌ಬರ್ಗ್ ವಿಚಾರದಲ್ಲಿ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ಆರು ಸದಸ್ಯರ ಸಮಿತಿಯು ಈಗ ಮೇ 8 ರಂದು ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಕವರ್‌ನಲ್ಲಿ ವರದಿಯನ್ನು ಸಲ್ಲಿಸಿದೆ. ಇದನ್ನು ಮೇ 12 ರಂದು ಸಿಜೆಐ ಡಿವೈ ಚಂದ್ರಚೂಡ್ ಅವರ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ತಜ್ಞರ ಸಮಿತಿಯು ಯಾವುದಾದರೂ ವಿಸ್ತರಣೆಗೆ ಒತ್ತಾಯಿಸಿದೆಯೇ ಅಥವಾ ಅಂತಿಮ ವರದಿಯನ್ನು ಸಲ್ಲಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಒಬ್ಬ ವ್ಯಕ್ತಿ, ಅದಾನಿ ಗ್ರೂಪ್‌ನಿಂದ ಸ್ಟಾಕ್ ಬೆಲೆ ಕೃತಕವಾಗಿ ಏರಿಸಿದ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಮತ್ತು ನಿಯಂತ್ರಕ ಬಹಿರಂಗಪಡಿಸುವಿಕೆಯಲ್ಲಿನ ಲೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಯ ಮನವಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾರುಕಟ್ಟೆ ನಿಯಂತ್ರಕರಿಗೆ ಈಗಾಗಲೇ ಸಾಕಷ್ಟು ಸಮಯ ಸಿಕ್ಕಿದೆ ಎಂದು ಹೇಳಿದರು. ಪಿಟಿಐ ವರದಿಯ ಪ್ರಕಾರ, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು, ಪರೀಕ್ಷಿಸಲು, ಸಂಗ್ರಹಿಸಿ ಮತ್ತು ವಶಪಡಿಸಿಕೊಳ್ಳಲು ಸೆಬಿ ಇನ್ನೂ ಆರು ತಿಂಗಳ ಕಾಲಾವಕಾಶ ಕೇಳಿತ್ತು.
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಇತ್ತೀಚೆಗೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಹಣಕಾಸಿನ ತಪ್ಪು ನಿರೂಪಣೆ, ನಿಯಮಾವಳಿಗಳ ವಂಚನೆ ಮತ್ತು/ಅಥವಾ ವಹಿವಾಟಿನ ಮೋಸದ ಸ್ವರೂಪಕ್ಕೆ ಸಂಬಂಧಿಸಿದ ಸಂಭವನೀಯ ಉಲ್ಲಂಘನೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಕಾಲಾವಕಾಶವನ್ನು ಕೋರಿತ್ತು.
ಬಿಜೆಪಿ ಅದಾನಿಗೆ ಹಣ ಕೊಟ್ಟರೆ, ಕಾಂಗ್ರೆಸ್ ಜನರಿಗೆ ಕೊಡುತ್ತೆ; ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ
ಮಾರ್ಚ್ 2 ರಂದು ಸುಪ್ರೀಂ ಕೋರ್ಟ್ SEBI ಗೆ ಎರಡು ತಿಂಗಳೊಳಗೆ ತನಿಖೆ ನಡೆಸುವಂತೆ ಕೇಳಿದೆ ಮತ್ತು ಅಮೆರಿಕದ ಶಾರ್ಟ್ ಸೆಲ್ಲರ್, ಖಂಡನೀಯ ವರದಿಯ ನಂತರ 140 ಶತಕೋಟಿ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಮೊತ್ತದ ಮಾರುಕಟ್ಟೆ ಮೌಲ್ಯವನ್ನು ನಾಶಪಡಿಸಿದ ನಂತರ ಭಾರತೀಯ ಹೂಡಿಕೆದಾರರ ರಕ್ಷಣೆಯನ್ನು ಪರಿಶೀಲಿಸಲು ಸಮಿತಿಯನ್ನು ಸುಪ್ರೀಂ ಕೋರ್ಟ್ ಸ್ಥಾಪನೆ ಮಾಡಿತ್ತು.
ಅದಾನಿಗೆ ಚೀನಾ ನಂಟು; ಆದರೂ ಬಂದರು ನಿರ್ವಹಣೆಗೆ ಅವಕಾಶ: ಕಾಂಗ್ರೆಸ್ ಆಕ್ರೋಶ