T20 World Cup ಗೂ ಮುನ್ನ ಗುಡ್‌ನ್ಯೂಸ್: ಆಕಾಶದಲ್ಲಿ ಹಾರುತ್ತಾ ಲೈವ್ ಕ್ರಿಕೆಟ್ ನೋಡಿ

By Anusha KbFirst Published Oct 2, 2022, 2:31 PM IST
Highlights

ಕ್ಟೋಬರ್ 16 ರಂದು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಮೊದಲು, ಗುರುಗ್ರಾಮ ಮೂಲದ ವಿಸ್ತಾರ ಏರ್‌ಲೈನ್ಸ್ ಲೈವ್ ಟಿವಿ ಸೇವೆಯನ್ನು ಆರಂಭಿಸಿದೆ. ವಿಶೇಷವಾಗಿ ಯುರೋಪ್‌ ಹಾಗೂ ಯುಕೆ(ಇಂಗ್ಲೆಂಡ್) ಮಾರ್ಗಗಳಲ್ಲಿ ಹಾರುವ ವಿಸ್ತಾರ ಏರ್‌ಲೈನ್ಸ್‌ನ ವಿಮಾನದಲ್ಲಿ ಈ ಸೇವೆ ಲಭ್ಯವಿರಲಿದೆ.

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಂದರೆ ಪ್ರಾಣವನ್ನೇ ಬಿಡುವ ಟಿವಿಯಿಂದ ಅತ್ತಿತ್ತ ಒಂಚೂರು ಕದಲದ ಕ್ರಿಕೆಟ್ ಪ್ರೇಮಿಗಳು ಆ ಸಂದರ್ಭದಲ್ಲಿ ಅನಿವಾರ್ಯವಾಗಿ ವಿಮಾನ ಪ್ರಯಾಣ ಮಾಡಬೇಕು ಎಂದು ಬಯಸಿದರೆ ಅಲ್ಲೂ ನಿಮಗೆ ಟಿವಿಯಲ್ಲಿ ಲೈವ್ ಆಗಿ ಕ್ರಿಕೆಟ್ ನೋಡಬಹುದಾಗಿದೆ. ಹೌದು, ಆಕ್ಟೋಬರ್ 16 ರಂದು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಮೊದಲು, ಗುರುಗ್ರಾಮ ಮೂಲದ ವಿಸ್ತಾರ ಏರ್‌ಲೈನ್ಸ್ ಲೈವ್ ಟಿವಿ ಸೇವೆಯನ್ನು ಆರಂಭಿಸಿದೆ. ವಿಶೇಷವಾಗಿ ಯುರೋಪ್‌ ಹಾಗೂ ಯುಕೆ(ಇಂಗ್ಲೆಂಡ್) ಮಾರ್ಗಗಳಲ್ಲಿ ಹಾರುವ ವಿಸ್ತಾರ ಏರ್‌ಲೈನ್ಸ್‌ನ ವಿಮಾನದಲ್ಲಿ ಈ ಸೇವೆ ಲಭ್ಯವಿರಲಿದೆ. ವಿಮಾನದಲ್ಲಿ ಲೈವ್ ಟಿವಿ ಸೇವೆಯನ್ನು ನೀಡುತ್ತಿರುವ ಮೊದಲ ಭಾರತೀಯ ವಾಯುಯಾನ ಸಂಸ್ಥೆ ಇದಾಗಿದೆ. 

ಗುರುಗ್ರಾಮ್ (Gurugram) ಮೂಲದ ವಿಮಾನಯಾನ ಸಂಸ್ಥೆ ವಿಸ್ತಾರಾ (Vistara airline) ನಿನ್ನೆ ಈ ಸೇವೆ ಆರಂಭಿಸಿದ್ದು, ಈಗ, ಪ್ರಯಾಣಿಕರು ಹಾರುವಾಗಲೂ ಟಿವಿ ನೋಡುವುದನ್ನು ಆನಂದಿಸಬಹುದು.  ಬೋಯಿಂಗ್ 787 ಡ್ರೀಮ್‌ಲೈನರ್‌ಗಳಲ್ಲಿ ಈ ಸೇವೆ ಲಭ್ಯವಿದೆ. ವಿಸ್ತಾರದಲ್ಲಿ ಪ್ರಯಾಣಿಸುವವರು ಎರಡು ಕ್ರೀಡಾ ಚಾನೆಲ್‌ಗಳು (Sports Channel) ಹಾಗೂ ಮೂರು ನ್ಯೂಸ್ ಚಾನೆಲ್‌ಗಳನ್ನು ವಿಮಾನದಲ್ಲಿ ತಮ್ಮ ಪ್ರಯಾಣದ ವೇಳೆ ನೋಡಬಹುದಾಗಿದೆ. ವಿಸ್ತಾರದಲ್ಲಿ ಈಗ ಒಟ್ಟು ಎರಡು ಡ್ರೀಮ್‌ಲೈನರ್‌ಗಳಿದ್ದು (Dreamliners) ಮತ್ತೊಂದು ಸದ್ಯದಲ್ಲಿಯೇ ಜೊತೆ ಸೇರಲಿದೆ.

ಲೈವ್ ಟಿವಿ ಪ್ರಸ್ತುತ ನಮ್ಮ ಡ್ರೀಮ್‌ಲೈನರ್‌ಗಳಲ್ಲಿ ಲಭ್ಯವಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ನಮ್ಮಲ್ಲಿರುವ ಹೆಚ್ಚಿನ ವಿಮಾನಗಳಿಗೆ ಅದನ್ನು ವಿಸ್ತರಿಸಲು ನಾವು ನೋಡುತ್ತಿದ್ದೇವೆ ಎಂದು ವಿಸ್ತಾರ ಏರ್‌ಲೈನ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದರು. 

ಪುರುಷ ಪೈಲಟ್ ಸಹ ಸ್ಕರ್ಟ್‌ ಧರಿಸ್ಬೋದು, ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್‌ ಹೊಸ ಲಿಂಗ ನೀತಿ

ಮುಖ್ಯವಾಗಿ ಇಂಗ್ಲೆಂಡ್ (UK) ಹಾಗೂ ಯುರೋಪ್ (Europe) ಮಾರ್ಗಗಳಲ್ಲಿ ಪ್ರಯಾಣಿಸುವ ವಿಸ್ತಾರದ ಪ್ರಯಾಣಿಕರಿಗೆ (Passengers) ಇದು ಲಭ್ಯವಾಗಲಿದೆ. ಬೋಯಿಂಗ್ 787-9 ಡ್ರೀಮ್‌ ಲೈನರ್‌ನಲ್ಲಿ ಲೈವ್‌ ಟಿವಿ ವ್ಯವಸ್ಥೆ ಮಾಡಲಾಗಿದೆ. ಭೂಮಿಯಿಂದ 35 ಸಾವಿರ ಕಿ.ಮೀ. ಎತ್ತರದಲ್ಲೂ ನಮ್ಮ ಪ್ರಯಾಣಿಕರು ಇತರ ಜಗತ್ತಿನೊಂದಿಗೆ ಈ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಅಲ್ಲದೇ ಈ ವಿಮಾನದಲ್ಲಿ ಅಂತಾರಾಷ್ಟ್ರೀಯ ಮಾರ್ಗದಲ್ಲಿ (International Route) ನಾವು ವೈ-ಫೈ ಸೌಲಭ್ಯವನ್ನು ಕೂಡ ನೀಡುತ್ತಿದ್ದೇವೆ. ಇದು ನಮ್ಮ ಗ್ರಾಹಕರಿಗೆ ನಾವು ವಿಮಾನದಲ್ಲಿ ನೀಡುವ ಮನೋರಂಜನಾ ಅನುಭವವನ್ನು ಉತ್ತಮಗೊಳಿಸುತ್ತದೆ ಎಂದು ವಿಸ್ತಾರದ ವಕ್ತಾರರು ಹೇಳಿದ್ದಾರೆ.

13 ತಿಂಗಳ ಕಂದನ ಬೇರೆ ವಿಮಾನಕ್ಕೆ ಶಿಫ್ಟ್‌ ಮಾಡಿದ ಏರ್‌ಲೈನ್ಸ್‌: ದಂಗಾದ ದಂಪತಿ

ವಿಸ್ತಾರಾ ಆರಂಭವಾದಾಗಿದಿಂದಲೂ ವಿಶಿಷ್ಟವಾದ ಹಾರಾಟದ ಅನುಭವ ಮತ್ತು ವಿಮಾನದಲ್ಲಿ ಮನರಂಜನೆಯನ್ನು ನಿರಂತರವಾಗಿ ನೀಡುತ್ತಿದೆ. ವಿಮಾನಯಾನ ಸಂಸ್ಥೆಯು  ಪ್ರಯಾಣವನ್ನು ಸಾಧ್ಯವಾದಷ್ಟು ಆನಂದದಾಯಕವಾಗಿಸಲು ನಿರಂತರವಾಗಿ ಅವಕಾಶಗಳನ್ನು ಹುಡುಕುತ್ತಿದೆ. ಗ್ರಾಹಕರಿಗೆ ನಾವು ಈ ರೀತಿಯ ಅನುಭವ ನೀಡಲು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು. 
 

click me!