ಹೊಟೇಲ್ ಉದ್ಯಮದವರಿಗೆ ಗುಡ್‌ನ್ಯೂಸ್: commercial cylinder ದರದಲ್ಲಿ ಇಳಿಕೆ

By Anusha Kb  |  First Published Oct 2, 2022, 11:14 AM IST

ಬೆಲೆ ಏರಿಕೆ ತಾಪದ ನಡುವೆ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್‌ ದರವನ್ನು ತೈಲ ಕಂಪನಿಗಳು 25 ರು.ನಷ್ಟು ಇಳಿಸಿವೆ.


ನವದೆಹಲಿ: ಬೆಲೆ ಏರಿಕೆ ತಾಪದ ನಡುವೆ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್‌ ದರವನ್ನು ತೈಲ ಕಂಪನಿಗಳು 25 ರು.ನಷ್ಟು ಇಳಿಸಿವೆ. ಇದೇ ವೇಳೆ ವೈಮಾನಿಕ ಇಂಧನ ದರವೂ ಕಿಲೋ ಲೀಟರ್‌ಗೆ 5,521 .ರೂಪಾಯಿ  ಇಳಿಕೆ ಆಗಿದೆ. ಹೋಟೆಲ್‌ಗಳು ಹೆಚ್ಚಾಗಿ ಬಳಸುವ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ನ ದರ ಶನಿವಾರ 25.50 ರು. ಇಳಿಕೆ ಕಂಡಿದೆ. ಇದರಿಂದ ರು. 1,885 ಇದ್ದ ಸಿಲಿಂಡರ್‌ ದರ 1859.5 ರು.ಗೆ ಇಳಿದಿದೆ. ಆದರೆ ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್‌ ಬೆಲೆ 1,053 ರು. ಇದು, ಬದಲಾವಣೆ ಆಗಿಲ್ಲ. ಹಾಗೆಯೇ 9 ಕೆಜಿ ಇದ್ದ ಸಿಲಿಂಡರ್ ದರದಲ್ಲಿ 36 ರೂಪಾಯಿ ಕಡಿಮೆ ಆಗಿದೆ.

ಹೀಗಾಗಿ ತೈಲ ಮಾರುಕಟ್ಟೆ ಕಂಪನಿಗಳು ಹೇಳುವಂತೆ 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ದರ ರಾಷ್ಟ್ರ ರಾಜಧಾನಿ (National Capital) ದೆಹಲಿಯಲ್ಲಿ 25.50 ರೂಪಾಯಿಯಷ್ಟು ಕಡಿಮೆ ಆಗಿದೆ. ಇದರಿಂದ ಪ್ರಸ್ತುತ ವಾಣಿಜ್ಯ ಸಿಲಿಂಡರ್ ದರ ದೆಹಲಿಯಲ್ಲಿ 1859.50 ಇದೆ. ಹಾಗೆಯೇ ಮುಂಬೈನಲ್ಲಿ (Mumbai) 32.5 ರೂಪಾಯಿ ಕಡಿಮೆ ಆಗಿದ್ದು, 1811.50 ರೂಪಾಯಿ ಇದೆ. ಹಾಗೆಯೇ ಕೋಲ್ಕತ್ತಾದಲ್ಲಿ (Kolkata) 36.5 ರೂಪಾಯಿ ಕಡಿಮೆ ಆಗಿದ್ದು, 1811. 50 ರೂಪಾಯಿ ಇದೆ. ಹಾಗೂ ಚೆನ್ನೈನಲ್ಲಿ (Chennai) 35.5 ರೂಪಾಯಿ ಕಡಿಮೆ ಆಗಿದೆ.  

Tap to resize

Latest Videos

ಬೆಲೆ ಹೆಚ್ಚಿರುವ LPG Cylinder, ಎಣ್ಣೆ, ಬೇಳೆ ಪ್ಯಾಕೆಟ್‌ ಮೇಲೆ ಮೋದಿ ಫೋಟೋ ಹಾಕುತ್ತೇವೆ: ತೆಲಂಗಾಣ ಸಿಎಂ ಪುತ್ರಿ

ಜೂನ್‌ನಿಂದ ಈವರೆಗೆ ವಾಣಿಜ್ಯ ಸಿಲಿಂಡರ್‌ ದರ 494.5 ರು. ಇಳಿಕೆಯಾಗಿದೆ. ಹಾಗೆಯೇ ಪೆಟ್ರೋಲ್‌, ಡೀಸೆಲ್‌ ದರ ಕೂಡ 6 ತಿಂಗಳಿಂದ ಪರಿಷ್ಕರಣೆ ಆಗಿಲ್ಲ. ಜೊತೆಗೆ ವಿಮಾನದ ಇಂಧನ ದರವೂ ಪ್ರತಿಶತ 4.5ರಷ್ಟು ಕಡಿತಗೊಂಡಿದ್ದು,. 5,521 ರು. ಇಳಿಕೆಯೊಂದಿಗೆ ಕಿಲೋ ಲೀಟರ್‌ಗೆ 1,15,520.27 ರು. ಆಗಿದೆ. ಹಬ್ಬದ ಸೀಸನ್‌ನಲ್ಲಿ ಹೀಗೆ ವಾಣಿಜ್ಯ ಸಿಲಿಂಡರ್ ದರದಲ್ಲಿ ಇಳಿಕೆ ಆಗಿರುವುದರಿಂದ ಹೊಟೇಲ್ ಹಾಗೂ ಉಪಹಾರ ಗೃಹಗಳ ಉದ್ಯಮ ನಡೆಸುವವರು ಖುಷಿ ಪಟ್ಟಿದ್ದಾರೆ. 

ಇದಕ್ಕೂ ಮೊದಲು ಸರಿಯಾಗಿ ಒಂದು ತಿಂಗಳ ಹಿಂದೆ ಸೆಪ್ಟೆಂಬರ್ ಒಂದರಂದು ವಾಣಿಜ್ಯ ಸಿಲಿಂಡರ್‌ಗಳ (commercial cylinder) ದರದಲ್ಲಿ ಇಳಿಕೆ ಆಗಿತ್ತು. 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಅಂದು 91.50 ರೂಪಾಯಿಯಷ್ಟು ಇಳಿಸಲಾಗಿತ್ತು. 

ಇಂದಿನಿಂದ ಆಗುತ್ತಿರುವ 6 ಬದಲಾವಣೆಗಳು: ಸಣ್ಣ ಉಳಿತಾಯಕ್ಕೆ ಹೆಚ್ಚಿನ ಬಡ್ಡಿ, ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ!


ವಇದಕ್ಕೂ ಮೊದಲು ಆಗಸ್ಟ್ 1 ರಂದು ಕೂಡ ವಾಣಿಜ್ಯ ಸಿಲಿಂಡರ್ ದರಗಳಲ್ಲಿ 36 ರೂಪಾಯಿ ಇಳಿಕೆ ಆಗಿತ್ತು. ಅದಕ್ಕೂ ಮೊದಲು ಜುಲೈ 6 ರಂದು 19 ಕೆಜಿ ಸಿಲಿಂಡರ್ ದರದಲ್ಲಿ 8.5 ರಷ್ಟು ಕಡಿತಗೊಳಿಸಲಾಗಿತ್ತು. ಆದರೆ ಮನೆ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಜುಲೈ 6 ರಂದು 14. 2 ಕೆಜಿ ತೂಗುವ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯುನಿಟ್‌ಗೆ 50 ರೂಪಾಯಿಯಂತೆ ಏರಿಕೆ ಆಗಿತ್ತು. ಇದಕ್ಕೂ ಮೊದಲು ಮೇ.19 ರಂದು ಗೃಹ ಬಳಕೆಯ ಸಿಲಿಂಡರ್ ದರದಲ್ಲಿ (domestic liquid petroleum gas cylinders) ಬದಲಾವಣೆ ಆಗಿತ್ತು. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ (National capital)  ಮನೆ ಬಳಕೆಯ ಸಿಲಿಂಡರ್ ದರ 1053 ರೂಪಾಯಿ ಇದೆ.

click me!