'ತನ್ನ ಹಣವನ್ನೇ ಸರಿಯಾಗಿ ನಿಭಾಯಿಸದ ವಿಜಯ್‌, ತಮಿಳುನಾಡಿನ ಹಣಕಾಸು ಹೇಗೆ ನಿಭಾಯಿಸ್ತಾರೋ?' ಟ್ರೋಲ್‌ ಆದ ದಳಪತಿ ಇನ್ವೆಸ್ಟ್‌ಮೆಂಟ್‌!

Published : May 06, 2026, 03:50 PM ISTUpdated : May 06, 2026, 03:56 PM IST
thalapathy vijay tamil nadu cm 2026 net worth assets car collection tvk property affidavit

ಸಾರಾಂಶ

ನಟ ಹಾಗೂ ರಾಜಕಾರಣಿ ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂ. ಆಗಿದ್ದು, ಇದರಲ್ಲಿ 313 ಕೋಟಿ ರೂ.ಗಳನ್ನು ಬ್ಯಾಂಕ್ ಠೇವಣಿಗಳಲ್ಲೇ ಇರಿಸಿದ್ದಾರೆ. ಮ್ಯೂಚುವಲ್ ಫಂಡ್ ಅಥವಾ ಷೇರುಗಳ ಬದಲು ಎಫ್‌ಡಿ ಮೇಲೆ ನಂಬಿಕೆ ಇಟ್ಟಿರುವ ಅವರ ಈ ಹೂಡಿಕೆ ಶೈಲಿಯು ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಚೆನ್ನೈ (ಮೇ.6): ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ವಿಜಯ್ ಅವರ ಒಟ್ಟು ಆಸ್ತಿ ಮೌಲ್ಯ 624 ಕೋಟಿ ರೂಪಾಯಿ. ಇದರಲ್ಲಿ 404 ಕೋಟಿ ರೂಪಾಯಿ ಚರಾಸ್ತಿ ಹಾಗೂ 220 ಕೋಟಿ ರೂಪಾಯಿ ಸ್ಥಿರಾಸ್ತಿ ಸೇರಿದೆ. 2024-25ರ ಆರ್ಥಿಕ ವರ್ಷದಲ್ಲಿ ಅವರು 184.53 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದು, ಇದು ಸ್ವಯಂ ಉದ್ಯೋಗ, ಬಾಡಿಗೆ ಮತ್ತು ಬಡ್ಡಿಯಿಂದ ಬಂದ ಆದಾಯವಾಗಿದೆ. ಆದರೆ, ಎಲ್ಲರ ಗಮನ ಸೆಳೆದಿರುವುದು ಅವರು ಬ್ಯಾಂಕ್‌ಗಳಲ್ಲಿ ಇಟ್ಟಿರುವ ನಗದು ಮೊತ್ತ. ಮಾರ್ಚ್ 27, 2026ರ ಅಂಕಿಅಂಶದಂತೆ, ಸಾಲಿಗ್ರಾಮದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಶಾಖೆಯ ಒಂದೇ ಉಳಿತಾಯ ಖಾತೆಯಲ್ಲಿ ಬರೋಬ್ಬರಿ 213.36 ಕೋಟಿ ರೂಪಾಯಿ ಹಣವಿದೆ!

ಇದಿಷ್ಟೇ ಅಲ್ಲದೆ, ವಿಜಯ್ ಅವರು ನಾಲ್ಕು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 100 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ (FD) ಮಾಡಿದ್ದಾರೆ. ಆಕ್ಸಿಸ್ ಬ್ಯಾಂಕ್‌ನಲ್ಲಿ 40 ಕೋಟಿ ರೂ., ಐಒಬಿಯಲ್ಲಿ 25 ಕೋಟಿ ರೂ., ಎಚ್‌ಡಿಎಫ್‌ಸಿಯಲ್ಲಿ 20 ಕೋಟಿ ರೂ. ಹಾಗೂ ಎಸ್‌ಬಿಐನಲ್ಲಿ 15 ಕೋಟಿ ರೂಪಾಯಿಗಳನ್ನು ಇರಿಸಿದ್ದಾರೆ. ಅಂದರೆ, ಮಾರುಕಟ್ಟೆಯ ಯಾವುದೇ ರಿಸ್ಕ್ ಇಲ್ಲದ ಬ್ಯಾಂಕ್ ಡಿಪಾಸಿಟ್‌ಗಳಲ್ಲೇ ಅವರ 313 ಕೋಟಿ ರೂಪಾಯಿ ಹಣ ಸುರಕ್ಷಿತವಾಗಿದೆ. ಇಂದಿನ ಕಾಲದಲ್ಲಿ ಹಣಕಾಸು ತಜ್ಞರು ಎಸ್‌ಐಪಿ (SIP) ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿದ್ದರೆ, ವಿಜಯ್ ಮಾತ್ರ ಹಳೆಯ ಮಾದರಿಯ ಎಫ್‌ಡಿ ಮೇಲೆ ನಂಬಿಕೆ ಇಟ್ಟಿರುವುದನ್ನು ಕಂಡು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

"ವಾರೆನ್ ಬಫೆಟ್ ಹೇಗೆ 300 ಬಿಲಿಯನ್ ಡಾಲರ್ ನಗದಿನ ಮೇಲೆ ಕುಳಿತಿದ್ದಾರೋ, ಹಾಗೆಯೇ ದಳಪತಿ ವಿಜಯ್ ಕೂಡ 300 ಕೋಟಿ ನಗದಿನ ಮೇಲೆ ಕುಳಿತಿದ್ದಾರೆ, ಅವರು ನಿಜಕ್ಕೂ ವಿಷನರಿ" ಎಂದು ಎಕ್ಸ್‌ನಲ್ಲಿ ಒಬ್ಬ ಯೂಸರ್‌ ತಮಾಷೆ ಮಾಡಿದ್ದಾರೆ. ವಿಜಯ್ ಅವರ ಷೇರು ಮಾರುಕಟ್ಟೆ ಹೂಡಿಕೆ ಅತ್ಯಂತ ಕನಿಷ್ಠವಾಗಿದ್ದು, ಕೇವಲ 19.37 ಲಕ್ಷ ರೂಪಾಯಿ ಮಾತ್ರ ಷೇರುಗಳಲ್ಲಿದೆ. ಇದು ಅವರ ಒಟ್ಟು ಆಸ್ತಿಯ ಶೇ. 0.04 ಕ್ಕಿಂತಲೂ ಕಡಿಮೆ. ಉಳಿದಂತೆ ಅವರು ಮ್ಯೂಚುವಲ್ ಫಂಡ್ ಅಥವಾ ಬಾಂಡ್‌ಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ.

ತಮಿಳುನಾಡಿನ ವಾರನ್‌ ಬಫೆಟ್‌ ಅಂತೆ ವಿಜಯ್‌

ನೆಟ್ಟಿಗರ ಈ ಚರ್ಚೆಯಲ್ಲಿ ಹಲವರು ಹೂಡಿಕೆಯ ಸಲಹೆಗಳನ್ನೂ ನೀಡಿದ್ದಾರೆ. "ಪಿಎಸ್‌ಯು ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ನಿಯಮಿತ ಆದಾಯದ ಜೊತೆಗೆ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿತ್ತು" ಎಂದು ಕೆಲವರು ಹೇಳಿದರೆ, ಇನ್ನು ಕೆಲವರು "ವಿಜಯ್ ಹಣಕಾಸು ತಜ್ಞರ ಪಾಲಿನ ದುಸ್ವಪ್ನ" ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ವಿಜಯ್‌ ತನ್ನ ಹಣವನ್ನೇ ಸರಿಯಾಗಿ ನಿಭಾಯಿಸಿಲ್ಲ, ಹಣದುಬ್ಬರ, ರಿಟರ್ನ್ಸ್‌ ಯಾವುದನ್ನೂ ಲೆಕ್ಕಹಾಕದೇ ಬರೀ ಎಫ್‌ಡಿಯಲ್ಲಿ ಇನ್ವೆಸ್ಟ್‌ ಮಾಡಿದ್ದಾರೆ. ಹೀಗಿರುವ ವ್ಯಕ್ತಿ ತಮಿಳುನಾಡಿನ ಹಣಕಾಸು ವ್ಯವಸ್ಥೆ ಹೇಗೆ ನಿಭಾಯಿಸ್ತಾರೋ' ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ತಮಿಳರು ಸಾಮಾನ್ಯವಾಗಿ ಚಿನ್ನ ಮತ್ತು ಆಸ್ತಿಯ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ ಎಂಬ ಮಾತು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ವಿಜಯ್ ಅವರ 220 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳ ಪೈಕಿ ನೀಲಂಕರೈ, ಸಾಲಿಗ್ರಾಮ, ಮೈಲಾಪುರ ಮತ್ತು ಎಗ್ಮೋರ್‌ನಲ್ಲಿ 115 ಕೋಟಿ ರೂ. ಮೌಲ್ಯದ 10 ವಸತಿ ಕಟ್ಟಡಗಳಿವೆ. ತ್ಯಾಗರಾಯ ನಗರ ಮತ್ತು ಶೋಲಿಂಗನಲ್ಲೂರು ಸೇರಿದಂತೆ ವಿವಿಧೆಡೆ 82.8 ಕೋಟಿ ರೂ. ಮೌಲ್ಯದ ವಾಣಿಜ್ಯ ಮಳಿಗೆಗಳಿವೆ. ಕೊಪ್ಪೂರು ಗ್ರಾಮದಲ್ಲಿ ಅವರು 2023ರಲ್ಲಿ 35.81 ಕೋಟಿ ರೂಪಾಯಿಗೆ ಖರೀದಿಸಿದ 2.30 ಎಕರೆ ಜಮೀನು ಅವರ ದೊಡ್ಡ ವಾಣಿಜ್ಯ ಆಸ್ತಿಯಾಗಿದೆ. ಇದರೊಂದಿಗೆ ಪೋರೂರ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಜಮೀನುಗಳನ್ನು ಅವರು ಹೊಂದಿದ್ದಾರೆ.

ವಿಜಯ್‌ ಬಳಿಯ ಕಾರುಗಳ ಸಂಗ್ರಹ

  • ₹3.01 ಕೋಟಿ → ಲೆಕ್ಸಸ್ 350
  • ₹6 ಕೋಟಿ → ಟಾಟಾ ಕ್ಯಾರವಾನ್
  • ₹2 ಕೋಟಿ → BMW i7
  • ₹1.63 ಕೋಟಿ → ಟೊಯೋಟಾ ವೆಲ್‌ಫೈರ್
  • ₹5.35 ಲಕ್ಷ → ಮಾರುತಿ ಸ್ವಿಫ್ಟ್
  • ₹67,400 → TVS XL ಸೂಪರ್

ವಿಜಯ್‌ ಅವರ ಸಾಲಗಳು

  • ₹12.6 ಕೋಟಿ → ಪತ್ನಿಗೆ ಸಾಲ
  • ₹20 ಕೋಟಿ → A L P ಆಂಟೋನಿಯಸ್ ಬ್ರಿಟ್ಟೊ
  • ₹20 ಕೋಟಿ → ಕೋಕಿಲಾಂಬಲ್ ಶೈಕ್ಷಣಿಕ ಪ್ರತಿಷ್ಠಾನ
  • ₹5.84 ಕೋಟಿ → ವಿದ್ಯಾ ಚಾರಿಟೇಬಲ್ ಟ್ರಸ್ಟ್
  • ₹5 ಕೋಟಿ → ವಿ ರವಿಚಂದ್ರನ್
  • ₹3 ಕೋಟಿ → ಎನ್. ಆನಂದ್
  • ₹2.34 ಕೋಟಿ → ಗ್ರೀನ್ ಲೀಪ್ ಇನ್ಫೋಟೆಕ್

ವಿಜಯ್‌ ಅವರ ಆಸ್ತಿ ಹೂಡಿಕೆಗಳು

  • ₹115 ಕೋಟಿ → ವಸತಿ
  • ₹82.8 ಕೋಟಿ → ವಾಣಿಜ್ಯ
  • ₹35.81 ಕೋಟಿ → ಕೊಪ್ಪಳದಲ್ಲಿ 2.30 ಎಕರೆ
  • ₹22 ಕೋಟಿ → ಕೃಷಿಯೇತರ ಭೂಮಿ

ವಿಜಯ್ ಬಳಿ ಇರುವ ಚಿನ್ನ

  • ₹1.20 ಕೋಟಿ → 883 ಗ್ರಾಂ ಚಿನ್ನ ಮತ್ತು ಬೆಳ್ಳಿ

ವಿಜಯ್ ಪತ್ನಿ ಸಂಗೀತ ಬಳಿ ಇರುವ ಚಿನ್ನ / ಆಭರಣ:

  • ₹4.07 ಕೋಟಿ → 3,132 ಗ್ರಾಂ ಚಿನ್ನ
  • ₹4.75 ಲಕ್ಷ → 2 ಕೆಜಿ ಬೆಳ್ಳಿ
  • ₹1 ಕೋಟಿ → 134.91 ಕ್ಯಾರೆಟ್ ವಜ್ರಗಳು

ವಿಜಯ್‌ ಅವರ ಆದಾಯ ಮೂಲಗಳು: ಚಲನಚಿತ್ರಗಳು, ಬಡ್ಡಿ ಆದಾಯ, ಬಾಡಿಗೆ ಆದಾಯ

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಭಿಕ್ಷೆ ಬೇಡಿದರೂ ಬರದ ಹಣ; ಸಾಲ ತೀರಿಸಲು 50 ವರ್ಷಗಳ ಬಳಿಕ ಸಾರಾಯಿ ರಫ್ತಿಗೆ ಇಳಿದ ಪಾಕಿಸ್ತಾನ!
ನೀವು ಶ್ರೀಮಂತರಾಗಬೇಕೇ? ಹಾಗಿದ್ರೆ ಈ 5 ತಪ್ಪುಗಳನ್ನು ಮಾಡಲೇಬೇಡಿ