ಅಪ್ಪುಗೆಯ ಬಂಧನದಲ್ಲಿ ಅಮರಿಕ-ಚೀನಾ| ಅಮೆರಿಕ-ಚೀನಾ ಹೊಸ ಘೋಷಣೆಗೆ ಕಿವಿಗೊಟ್ಟ ಜಗತ್ತು| ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಲು ಮುಂದಾದ ಅಮೆರಿಕ-ಚೀನಾ| ಅಮೆರಿಕದಿಂದ 200 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳ ಖರೀದಿಗೆ ಚೀನಾ ಒಪ್ಪಿಗೆ| ಕೃಷಿ ವಲಯದ ಉತ್ಪನ್ನಗಳನ್ನು ಹೆಚ್ಚು ಖರೀದಿಸುವ ನಿರೀಕ್ಷೆ| ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಜನವರಿಯಲ್ಲಿ ಸಹಿ|
ವಾಷಿಂಗ್ಟನ್(ಡಿ.14): ವಾಣಿಜ್ಯ ಸಮರದಲ್ಲಿ ನಿರತವಾಗಿರುವ ಅಮೆರಿಕ-ಚೀನಾ, ಇದೀಗ ಹಗೆತನ ಮರೆತು ಒಂದಾಗಿ ವ್ಯಾಪಾರ ಮಾಡುವ ನಿರ್ಧಾರಕ್ಕೆ ಬಂದಿವೆ.
ಅಮೆರಿಕದಿಂದ ಆಮದು ಹೆಚ್ಚಳಕ್ಕೆ ಸಮ್ಮತಿಸಿರುವ ಚೀನಾ, ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಘೋಷಿಸಿದೆ.
ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!
ತಯಾರಿಕಾ ಸರಕುಗಳು, ಕೃಷಿ ಉತ್ಪನ್ನ, ಇಂಧನ ಉತ್ಪನ್ನ ಮತ್ತು ಸೇವೆಗಳ ಖರೀದಿ ಪ್ರಮಾಣವನ್ನು ಕನಿಷ್ಠ 200 ಶತಕೋಟಿ ಡಾಲರ್’ಗೆ ಹೆಚ್ಚಿಸಲು ಚೀನಾ ಮುಂದಾಗಿದೆ.
ಕೃಷಿ ವಲಯದ ಉತ್ಪನ್ನಗಳನ್ನು ಚೀನಾ ಹೆಚ್ಚು ಖರೀದಿಸುವ ನಿರೀಕ್ಷೆ ಇದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ವಲಯದಲ್ಲಿ ಸರಾಸರಿ 40 ರಿಂದ 50 ಶತಕೋಟಿ ಡಾಲರ್’ನಷ್ಟು ಖರೀದಿ ಮಾಡುವ ಸಾಧ್ಯತೆ ಇದೆ.
ನಿರ್ಬಂಧ ತೆಗೆಯಿರಿ, ಇಲ್ದಿದ್ರೆ ಸರ್ವನಾಶ ಮಾಡ್ತಿವಿ: ಇಟ್ಸ್ ಚೀನಾ VS ಅಮೆರಿಕ!
ಮೊದಲ ಹಂತದ ವ್ಯಾಪಾರ ಒಪ್ಪಂದಕ್ಕೆ ಜನವರಿ ಪ್ರಾರಂಭದಲ್ಲಿ ಸಹಿ ಹಾಕುವ ನಿರೀಕ್ಷೆ ಇದ್ದು, ಎರಡು ಬೃಹತ್ ಆರ್ಥಿಕ ಶಕ್ತಿಗಳ ನಡುವಿನ ವಾಣಿಜ್ಯ ಸಮರ ಅಂತ್ಯ ಕಾಣುವುದನ್ನು ಇಡೀ ವಿಶ್ವ ಎದುರು ನೋಡುತ್ತಿದೆ.