ಸ್ಟಾರ್ ಇಂಡಿಯಾಕ್ಕೆ ಮಾಧವನ್ ಉಸ್ತುವಾರಿ, ದಕ್ಷಿಣ ಭಾರತದ ಟಿವಿ ಕ್ಷೇತ್ರದಲ್ಲಿ ಸಂಚಲನ

By Suvarna NewsFirst Published Dec 13, 2019, 11:57 PM IST
Highlights

ಭಾರತೀಯ ಟಿವಿ ಮಾಧ್ಯಮದಲ್ಲಿ ಅತಿದೊಡ್ಡ ಬದಲಾವಣೆ/ ದಕ್ಷಿಣ ಭಾರತದ ಮನರಂಜನಾ ವಿಭಾಗದಲ್ಲಿ ಹೊಸ ಗಾಳಿ/ ಕೆ. ಮಾಧವನ್ ಅವರಿಗೆ ಸ್ಟಾರ್ ಇಂಡಿಯಾ ಸಾರಥ್ಯ/ ಕನ್ನಡ, ಮಲಯಾಳಂ, ತೆಲುಗು, ತಮಿಳು ಟಿವಿ ಮಾಧ್ಯಮದಲ್ಲಿ ಸಂಚಲನ

ನವದೆಹಲಿ(ಡಿ. 13) ಡಿಸ್ನಿ ಮತ್ತು ಸ್ಟಾರ್ ಇಂಡಿಯಾದ ದೇಶಿಯ ಮ್ಯಾನೇಜರ್ ಆಗಿ ಕೆ. ಮಾಧವನ್ ನೇಮಕವಾಗಿದ್ದಾರೆ. ಇಷ್ಟು ದಿನ ಕಂಟ್ರಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ್ ಗುಪ್ತಾ ಗೂಗಲ್ ಕಂಟ್ರಿ ಮ್ಯಾನೇಜರ್ ಮತ್ತು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೇ ಕಾರಣಕ್ಕೆ ಕಳೆದ ತಿಂಗಳು ಹುದ್ದೆ ತೊರೆದಿದ್ದರು.

ಸ್ಟಾರ್ ಇಂಡಿಯಾ ಮತ್ತು ಡಿಸ್ನಿಯ ಏಷ್ಯಾ ಫೆಸಿಫಿಕ್ ವಿಭಾಗದ ಅಧ್ಯಕ್ಷ ಉದಯ್ ಶಂಕರ್ ಅವರಿಗೆ ಮಾಧವನ್ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಕಂಪನಿ ಕಾರ್ಯಕಾರಿ ವಿಭಾಗದ ಎಲ್ಲ ಮುಖ್ಯಸ್ಥರು ಮಾಧವನ್ ಅವರಿಗೆ ತಮ್ಮ ವರದಿ ನೀಡಬೇಕಾಗುತ್ತದೆ.

2016ರಿಂದ ಮಾಧವನ್ ಸ್ಟಾರ್ ಇಂಡಿಯಾ ದಕ್ಷಿಣ ವಾಣಿಜ್ಯ ವಿಭಾಗದ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದರು. ದಕ್ಷಿಣ ಭಾರತದಲ್ಲಿ ತಮ್ಮ ಟೆಲಿವಿಶನ್ ಸಂಸ್ಥೆ ಅಭೂತಪೂರ್ವ ಬೆಳವಣಿಗೆ ಸಾಧಿಸಲು ಮಾಧವನ್ ಕೊಡುಗೆ ನೀಡಿದ್ದರು. ದಕ್ಷಿಣ ಭಾರತದ ಪ್ರಮುಖ ನಾಲ್ಕು ಭಾಷೆಗಳಲ್ಲಿ ಅಂದರೆ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲಗು ವಿಭಾಗಕ್ಕೆ ತಮ್ಮ ಬಿಜಿನಸ್ ವಿಸ್ತರಿಸುವ ಗುರಿ ಮಾಧವನ್ ಅವರದ್ದು.

ಟಿವಿ ಖರೀದಿಗೆ ಒಂದು ವರ್ಷದಲ್ಲಿ ಭಾರತೀಯರು ಖರ್ಚು ಮಾಡಿದ ಹಣ ಎಷ್ಟು?

ಸಂಜಯ್ ಗುಪ್ತಾ ಅವರು ಹುದ್ದೆ ತೊರೆಯುವ ವಿಚಾರ ತಮಗೆ ಗೊತ್ತೆ ಇದೆ. ಸಂಜಯ್ ಅವರು ಈ ಕಂಪನಿಯಲ್ಲಿ ಕೆಲಸ ಮಾಡುವ ಕೊನೆಯ ದಿನ ಡಿಸೆಂಬರ್ 27, 2019. ವ್ಯವಸ್ಥೆಯನ್ನು ಸರಿದೂಗಿಸಲು ನಮ್ಮ ಪ್ರಾದೇಶಿಕ ಮನರಂಜನಾ ಕ್ಷೇತ್ರದಲ್ಲಿ ಸಾಧನೆ ತೋರಿರುವ, ಮಾರುಕಟ್ಟೆ ಮೌಲ್ಯ ಅರಿತುಕೊಂಡಿರುವ ಕೆ.ಮಾಧವನ್ ಅವರನ್ನು ನಮ್ಮ ಟಿವಿ ಮಾಧ್ಯಮದ ಎಲ್ಲ ವ್ಯವಹಾರ ನೋಡಿಕೊಳ್ಳಲು ನೇಮಕ ಮಾಡುತ್ತಿದ್ದೇನೆ. ಸಂಜಯ್ ಗೆ ವರದಿ ನೀಡುತ್ತಿದ್ದ ಎಲ್ಲರೂ ಇನ್ನು ಮುಂದೆ ಮಾಧವನ್ ಅವರಿಗೆ ನೀಡಬೇಕಾಗುತ್ತದೆ. ಎಲ್ಲರೂ ಅವರಿಗೆ ಶುಭಾಶಯ ಹೇಳುವುದರೊಂದಿಗೆ ಕೈಜೋಡಿಸಿ ಎಂದು ಅಧ್ಯಕ್ಷ ಉದಯ್ ಶಂಕರ್ ಮಾಧವನ್ ಅವರಿಗೆ ಇಮೇಲ್ ಮುಖಾಂತರ ತಿಳಿಸಿದ್ದಾರೆ ಎನ್ನಲಾಗಿದೆ.

ಹಾಟ್ ಸ್ಟಾರ್ ವ್ಯವಹಾರಗಳು ಮಾತ್ರ ನನ್ನ ನಿಯಂತ್ರಣದಲ್ಲಿಯೇ ಇರಲಿವೆ. ಹಾಟ್ ಸ್ಟಾರ್ ವ್ಯವಹಾರ ನೋಡಿಕೊಳ್ಳುತ್ತಿರುವ ನಿತಿನ್ ಬವಂಕುಳೆ ಟಿವಿ ವಿಚಾರವನ್ನು ಮಾಧವನ್ ಜತೆ ಹಂಚಿಕೊಂಡೆ ಹಾಟ್ ಸ್ಟಾರ್ ವಿಚಾರದಲ್ಲಿ ನನ್ನ ಸಂಪರ್ಕದಲ್ಲಿ ಇರುತ್ತಾರೆ ಎಂದು ಉದಯ್ ಶಂಕರ್ ಇಮೇಲ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

click me!