ಹಳೇ ಗಾಡಿಗೆ ಆಯುಧ ಪೂಜೆ, ಪಾಪ್ ಕಾರ್ನ್ ಬಜೆಟ್: ರಾಜ್ಯ ನಾಯಕರ ಬಣ್ಣನೆ

By Web DeskFirst Published Feb 1, 2019, 4:52 PM IST
Highlights

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಆದ್ರೆ ಈ ಬಜೆಟ್ ಹೇಗಿತ್ತು? ರಾಜ್ಯ ನಾಯಕರು ಏನಂದ್ರು? ಬಜೆಟ್‌ನ್ನು ಹೇಗೆಲ್ಲ ಬಣ್ಣನೆ ಮಾಡಿದ್ದಾರೆ ನೋಡಿ.

ಬೆಂಗಳೂರು, (ಫೆ.01): ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಇಂದು (ಶುಕ್ರವಾರ) ಮಂಡಿಸಿದರು. ಹಲವು ಜನಪ್ರಿಯ ಘೋಷಣೆಗಳು ಬಜೆಟ್‌ನಲ್ಲಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಬಜೆಟ್‌ ಬಗ್ಗೆ ಎರಡೂ ಪಕ್ಷಗಳ ರಾಜ್ಯ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

ನನ್ನ ಯೋಜನೆ ಕಾಪಿ ಹೊಡೆದ ಮೋದಿ: ಸಿದ್ದರಾಮಯ್ಯ ಕಿಡಿ

ಸಾಮಾನ್ಯವಾಗಿ ಆಡಳಿತದವರು ಬಜೆಟ್‌ ಪರವಾಗಿ, ವಿರೋಧ ಪಕ್ಷ ಬಜೆಟ್‌ ಅನ್ನು ಅನುಪಯೋಗಿ ಎಂದು ಹೇಳಿದ್ದಾರೆ. ಹಾಗಾದ್ರೆ  ಬಜೆಟ್ ಬಗ್ಗೆ ಯಾರೆಲ್ಲ ಏನೆಲ್ಲ ಬಣ್ಣಿಸಿದ್ದಾರೆ. ನೊಡಿ.

# ಹಳೇ ಗಾಡಿಗೆ ಆಯುಧ ಪೂಜೆ ಮಾಡಿದಂತೆ ಇದೆ 

ಕೇಂದ್ರ ಇವತ್ತು ಮಂಡಿಸಿರೋ ಬಜೆಟ್ ಸಂಪೂರ್ಣ ಬಜೆಟ್ ಅಲ್ಲ. ಹೊಸ ಸರ್ಕಾರ ಬರುವವರೆಗೆ ಲೇಖಾನುದಾನ ಪಡೆದುಕೊಳ್ಳಲು ಮಂಡಿಸಿರೋ ಬಜೆಟ್.

ದುಡಿಯುವ ಕೈಗಳಿಗೆ ಶಕ್ತಿ ತುಂಬಿದ ಮೋದಿ ಸರ್ಕಾರ: ಏನೆನೆಲ್ಲಾ ಸಹಾಯ?

ಇದು ಚುನಾವಣೆ ದೃಷ್ಟಿಯಿಂದ ಕೊಟ್ಟಿರೋ ಬಜೆಟ್ ಆಗಿದ್ದು,  ಬಜೆಟ್ ನಲ್ಲಿ ಬರೀ ಸಾಧನೆಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸತ್ಯಕ್ಕೆ  ದೂರವಾದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

"

Live| Union Budget 2019: ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

ಇದು ರಾಷ್ಟ್ರದ ಜನತೆಯನ್ನು ದಾರಿ ತಪ್ಪಿಸುವ ಹೇಳಿಕೆಗಳು. ಯಾವುದೂ ಕೂಡಾ ಹೊಸದಿಲ್ಲ. ಹಳೇ ಗಾಡಿಗೆ ಆಯುಧ ಪೂಜೆ ಮಾಡಿದಂತೆ ಇದೆ ಎಂದು ವಿಧಾನಸೌಧದಲ್ಲಿ ಡಿಸಿಎಂ ಪರಮೇಶ್ವರ್ ಹೇಳಿದರು.

# ಪಾಪ್ ಕಾರ್ನ್ ಬಜೆಟ್ ಎಂದ ಡಿಕೆಶಿ 

ಕೇಂದ್ರ ಬಜೆಟ್ ರೈತರಿಗೂ ಅನುಕೂಲವಾಗೋದಿಲ್ಲ. ಬಿಜೆಪಿ ಅವರಿಗೆ ರಾಜಕೀಯಕ್ಕೂ ಈ ಬಜೆಟ್ ಅನುಕೂಲ ಆಗೊಲ್ಲ.ಜೆಡಿಎಸ್, ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಒಣಭೂಮಿ ಬೇಸಾಯ ಮಾಡೋರಿಗೆ 10 ಸಾವಿರ ನಾವು ಘೋಷಣೆ ಮಾಡಿದ್ವಿ. ವ್ಯವಸಾಯ ಮಾಡೋರಿ 6 ಸಾವಿರ ಕೊಡ್ತೀನಿ ಅಂತ ಹೇಳ್ತಿದ್ದಾರೆ ಅಷ್ಟೆ. ಇದ್ರಲ್ಲಿ ಯಾವುದೇ ಲಾಭವಿಲ್ಲ.

"

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

ಏನಾದ್ರು ಕೊಟ್ಟರೆ ಹೊಟ್ಟೆ ತುಂಬ ಕೊಡಬೇಕು. ಇದು ಚುನಾವಣೆ ಬಜೆಟ್ ಅಷ್ಟೆ.  ನಮ್ಮ ಸರ್ಕಾರ ಮೋದಿ ಸರ್ಕಾರಕ್ಕಿಂತ ಉತ್ತಮ ಯೋಜನೆಗಳನ್ನ ನೀಡಿದೆ. ಇದೊಂದು ಫೇಲ್ಯೂರ್ ಬಜೆಟ್.

ಮೋದಿ ಅವರು ರಾಜ್ಯ ಸರ್ಕಾರದ ಸಾಲಮನ್ನವನ್ನ ಲಾಲಿಪಪ್ ಅಂತ ಹೇಳಿದ್ರು. ಮೋದಿಯ ಈ ಬಜೆಟ್ ಪಾಪ್ ಕಾರ್ನ್ ಬಜೆಟ್ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!

# ಬಜೆಟ್ ಪಕ್ಕಾ ಚುನಾವಣಾ ಪ್ರಣಾಳಿಕೆ
 ಮೋದಿ ಸರ್ಕಾರ ಮಂಡಿಸಿರುವ ಬಜೆಟ್ ಪಕ್ಕಾ ಚುನಾವಣಾ ಪ್ರಣಾಳಿಕೆಯಾಗಿದೆ. ಕೇವಲ 4 ತಿಂಗಳಿಗಾಗಿ ಲೇಖಾನುದಾನ್ ಮಂಡಿಸಬೇಕಿತ್ತು. ಆದರೆ ಜನರನ್ನು ಮರಳು ಮಾಡಲು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗಿದೆ.

ಈ ಬಜೆಟ್ ಕೇವಲ ಚುನಾವಣ ಬಜೆಟ್. ರೈತರ ಮೇಲೆ ಕಾಳಜಿ ಇದ್ರೆ ಸಾಲ ಮನ್ನಾ ಮಾಡಬೇಕಿತ್ತು. ಚುನಾವಣೆಯಲ್ಲಿ ಮತ ಸೆಳೆಯಲು ಪ್ಲಾನ್ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

#ಕೇಂದ್ರ ಸರಕಾರದ ಬಜೆಟ್ ಚುನಾವಣಾ ಬಜೆಟ್
ಜನರ‌ ಖಾತೆಗೆ ದುಡ್ಡು ಹಾಕುತ್ತೀನಿ ಎಂದು ಹೇಳಿ ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದು, ಇದೆಲ್ಲ ಕೇವಲ ಚುನಾವಣೆ ಗಾಗಿ ಮೋದಿ ಸರಕಾರದ ಬಜೆಟ್.

ಈ ಬಜೆಟ್ ಬಿಜೆಪಿ ಪ್ರಣಾಳಿಕೆ ಬಜೆಟ್ ನಂತೆ ಈ ಬಜೆಟ್ ಗೆ ಅರ್ಥವಿಲ್ಲ. ಇದು‌ ಮದ್ಯಂತರ ಬಜೆಟ್ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ರಾಯಚೂರಿನಲ್ಲಿ ಹೇಳಿದ್ದಾರೆ.

ಎಸ್. ಯಡಿಯೂರಪ್ಪ ಹೇಳಿದ್ದೇನು?

ಪಿಯೂಷ್ ಗೋಯೆಲ್ ಮಂಡಿಸಿದ ಬಜೆಟ್  ಉತ್ತಮವಾಗಿದೆ. ರಾಜ್ಯದ ಉದ್ದಗಲಕ್ಕೂ ವಿಜಯೋತ್ಸವ ಆಚರಿಸಿ ಜನ ಬಜೆಟ್ ಗೆ ಮನ್ನಣೆ ಕೊಡಲು ಮನವಿ ಮಾಡುತ್ತೇನೆ ಎಂದರು.

ಇದ್ರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಸಾಲ ಮರುಪಾವತಿಗೆ ರೈತರಿಗೆ  ವಿನಾಯಿತಿ . ಎಲ್ಲಾ ಮಧ್ಯಮವರ್ಗ, ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಸಹಕಾರಿಯಾಗಲಿದೆ.

ಮಧ್ಯಮ ವರ್ಗದ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಧಾರ. ದೇಶದ ಬಡವರ ಹಣ ಉಳಿತಾಯ ಆಗಲಿದೆ. ಐಟಿ ಪೂರ್ಣ ಆನ್ ಲೈನ್ ಮೂಲಕ ಕಚೇರಿಗೆ ಅಲೆಯುವುದು ತಪ್ಪಿದೆ

ಕಾಂಗ್ರೆಸ್ ಮುಖಂಡರು ಕಾರ್ಮಿಕರ ಬಗ್ಗೆ ಮಾತಾಡ್ತಿದ್ರು. ಇವತ್ತು ಕಾರ್ಮಿಕರ ವೇತನ, ಗ್ರ್ಯಾಚುಟಿ ಹೆಚ್ಚಳ ಮೂಲಕ ಅಸಂಘಟಿತ ವಲಯದಲ್ಲಿ ಮಾಸಿಕ 3 ಸಾವಿರ ರೂ ಪಿಂಚಣಿ ನೀಡಲು ನಿರ್ಧಾರ 

 ಮಹಿಳೆಯರಿಗಾಗಿ ಹೆರಿಗೆ ರಜೆ ಏರಿಕೆ. ಅಂಗನವಾಡಿ ಕಾರ್ಯಕರ್ತೆಯರಿಗೆ ದೊಡ್ಡ ಕೊಡುಗೆ. ಅವರು ಈ ಕುರಿತು ಪ್ರತಿಭಟನೆ ಕೂಡ ಮಾಡಿದ್ರು ಹೇಳಿದರು.

ಆರ್ಥಿಕ ಸ್ಥಿತಿ ಬಿಗಿ ಮಾಡಿದ ಪರಿಣಾಮ ಬಡವರಿಗೆ ಇಷ್ಟು ದೊಡ್ಡ ಮಟ್ಟದ ಸಹಾಯ ಆಗಿದೆ. ಸಿದ್ದರಾಮಯ್ಯ,ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಮುಖಂಡರು ಅಧಿಕಾರದಲ್ಲಿದ್ದಾಗ ಮಾಡಿದ್ದೇನು

ಈ ಬಜೆಟ್ ಅನ್ನು ಸಿದ್ದರಾಮಯ್ಯ ಟೀಕೆ ಮಾಡಬಹುದು. ಅದರೆ ದೇಶದ ಎಲ್ಲಾ ಆರ್ಥಿಕ ತಜ್ಞರು ಹೊಗಳಿದ್ದಾರೆ ಎಂದರು.

ಕೇಂದ್ರ ಬಜೆಟ್ ಬಗ್ಗೆ ಸಿಎಂ ಮಾತು  
ಇದೊಂದು ಬೊಂಬಾಯಿ ಮಿಠಾಯಿ ಬಜೆಟ್ ಆಗಿದ್ದು,  ರೈತರಿಗೆ ನಿರಾಶಾದಾಯಕವಾಗಿದೆ.  ಕೇಂದ್ರದ ಬಜೆಟ್ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು.

ರೈತರಿಗೆ ಹೆಚ್ಚು ಅನುಕೂಲ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಆದ್ರೆ ಇಂದಿನ ಕೇಂದ್ರ ಬಜೆಟ್ ನಲ್ಲಿ ಯಾವುದೇ ಸ್ಪಷ್ಟ ನಿಲುವು ಇಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

click me!