ಗಾಯದ ಮೇಲೆ ಬರೆ: ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ ಏರಿಕೆ?

Published : Sep 24, 2019, 05:17 PM IST
ಗಾಯದ ಮೇಲೆ ಬರೆ: ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ ಏರಿಕೆ?

ಸಾರಾಂಶ

ನಿರಂತರ ಏರಿಕೆ ಕಾಣುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ| ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ನಡೆದ ಡ್ರೋಣ್ ದಾಳಿಯ ಪರಿಣಾಮ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯ ಏರಿಕೆ| ಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ನಿರ್ಧಾರ| ಅಬಕಾರಿ ಸುಂಕ ವಿಧಿಸಲು ತೀರ್ಮಾನಿಸಿದ ಕೇಂದ್ರ ಸರ್ಕಾರ| 

ನವದೆಹಲಿ(ಸೆ.24): ಒಂದು ದೇಶವನ್ನು ಮತ್ತೊಂದು ದೇಶ ಅವಲಂಬಿಸಿರುವುದು ಇಂದಿನ ಆಧುನಿಕ ಯುಗದ ಅನಿವಾರ್ಯತೆ. ನಿರ್ದಿಷ್ಟ ದೇಶವೊಂದರಲ್ಲಾಗುವ ಬದಲಾವಣೆಗಳು ಅವಲಂಬಿತ ದೇಶದ ಮೇಲೆ ಪರಿಣಾಮ ಬೀಡುವುದು ಸಹಜ.

ಅದರಂತೆ  ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ನಡೆದ ಡ್ರೋಣ್ ದಾಳಿಯ ಪರಿಣಾಮವಾಗಿ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಇನ್ನು ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹಾಕುವ ನಿರ್ಧಾರಕ್ಕೆ ಬಂದಿದೆ. 

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 
 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!