6 ದಿನದಲ್ಲಿ ಪೆಟ್ರೋಲ್ ದರ ಭಾರಿ ಏರಿಕೆ

By Kannadaprabha NewsFirst Published Sep 23, 2019, 7:36 AM IST
Highlights

ಪೆಟ್ರೋಲ್ ಹಾಗೂ ಡೀಸೆಲ್ ಎರಡು ದರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 

ನವದೆಹಲಿ [ಸೆ.23]: ಸೌದಿ ಬಿಕ್ಕಟ್ಟಿನ ಬಳಿಕ ದಿನೇ ದಿನೇ ಏರುತ್ತಿರುವ ಕಚ್ಚಾತೈಲ ಬೆಲೆ, ಕಳೆದ 6 ದಿನಗಳಲ್ಲಿ ಭರ್ಜರಿ ಏರಿಕೆ ಕಂಡಿದೆ. 6 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 1.59 ರು. ಮತ್ತು ಡೀಸೆಲ್‌ ಬೆಲೆ ಲೀ.ಗೆ 1.31 ರು.ನಷ್ಟುಹೆಚ್ಚಳವಾಗಿದೆ. ಇದು ದೈನಂದಿನ ತೈಲ ಬೆಲೆ ಪರಿಷ್ಕರಣೆ ನೀತಿ 2017ರಲ್ಲಿ ಜಾರಿಯಾದ ಬಳಿಕ ಒಂದು ವಾರದಲ್ಲಿ ಆಗಿರುವ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.

ಸೌದಿ ಅರೇಬಿಯಾದ ತೈಲ ಬಾವಿಗಳ ಮೇಲೆ ಡ್ರೋನ್‌ ದಾಳಿಯ ಬಳಿಕ ಕಚ್ಚಾತೈಲ ಉತ್ಪಾದನೆಯಲ್ಲಿ ಬಾರೀ ಇಳಿಕೆಯಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ಮತ್ತೊಂದೆಡೆ ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿರುವುದು, ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿದಂತೆ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ.

 ಎಲ್ಲೆಲ್ಲಿ ಎಷ್ಟುರೇಟು  

ನಗರ ಪೆಟ್ರೋಲ್‌ - ಡೀಸೆಲ್‌

ದೆಹಲಿ 73.62 - 66.74

ಕೋಲ್ಕತಾ 76.32 - 69.15

ಮುಂಬೈ 76.52 - 70.01

ಬೆಂಗಳೂರು 75.56 - 68.80

ಚೆನ್ನೈ 76.52 - 70.56

click me!