2025ರ ಬಜೆಟ್: 36 ಜೀವರಕ್ಷಕ ಔಷಧಿ ಸೇರಿದಂತೆ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಿದೆ?

Published : Feb 01, 2025, 01:10 PM ISTUpdated : Feb 01, 2025, 01:19 PM IST
2025ರ ಬಜೆಟ್: 36 ಜೀವರಕ್ಷಕ ಔಷಧಿ ಸೇರಿದಂತೆ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಿದೆ?

ಸಾರಾಂಶ

2025ರ ಕೇಂದ್ರ ಬಜೆಟ್‌ನಲ್ಲಿ 36 ಜೀವರಕ್ಷಕ ಔಷಧಿಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಕಸ್ಟಮ್ ಡ್ಯುಟಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ಔಷಧಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಮತ್ತು ಇತರೆ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ.

ನವದೆಹಲಿ: 2025ರ ಕೇಂದ್ರ ಬಜೆಟ್ ಮಂಡನೆಯಾಗಿದ್ದು,  36 ಜೀವ ರಕ್ಷಕ ಔಷಧಿಗಳ (ಕ್ಯಾನ್ಸರ್ ಔಷಧಿ) ಮೇಲಿನ ಕಸ್ಟಮ್ ಡ್ಯುಟಿಯನ್ನು ರದ್ದುಗೊಳಿಸಲಾಗಿದೆ. ಔಷಧಿಗಳ ಜೊತೆಯಲ್ಲಿ ಲಿಥೀಯಂ- ಐಯಾನನ್ ಬ್ಯಾಟರಿ ಸ್ಕ್ರ್ಯಾಪ್ ಮೇಲಿನ ಡ್ಯುಟಿ ಸಹ ತೆಗೆಯಲಾಗಿದೆ.  ಕಸ್ಟಮ್ ಡ್ಯುಟಿ ತೆಗೆದ ಪರಿಣಾಮ ಜೀವ ರಕ್ಷಕ ಔಷಧಿಗಳು ಮತ್ತು ಬ್ಯಾಟರಿ ಬೆಲೆ ಅಗ್ಗವಾಗಲಿದೆ. ಸರ್ಕಾರ ಇಂಟರೆಕ್ಟಿವ್ ಫ್ಲ್ಯಾಟ್ ಪೆನಲ್ ಡಿಸ್ಪ್ಲೇ ಮೇಲಿನ ಡ್ಯುಟಿ ಶೇ.10ರಿಂದ ಶೇ.20ಕ್ಕೆ ಏರಿಕೆ ಮಾಡಿದೆ. ಆದರೆ, ಈ ಉತ್ಪನ್ನಗಳು ಎಷ್ಟು ಅಗ್ಗ ಅಥವಾ ದುಬಾರಿಯಾಗುತ್ತವೆ ಎಂಬುದು ಖಚಿತವಾಗಿಲ್ಲ. ಸರ್ಕಾರವು ಜುಲೈ 1, 2017 ರಂದು ದೇಶಾದ್ಯಂತ ಜಿಎಸ್‌ಟಿಯನ್ನು ಜಾರಿಗೊಳಿಸಿದೆ. ಜಿಎಸ್‌ಟಿ ಬಂದ ಬಳಿಕ ಬಜೆಟ್‌ನಲ್ಲಿ ಕೇವಲ ಕಸ್ಟಮ್ ಡ್ಯುಟಿ ಏರಿಕೆ/ಏರಿಳಿತ ಮಾಡಲಾಗುತ್ತದೆ. ಕಸ್ಟಮ್ ಡ್ಯುಟಿ ಏರಿಕೆ ಮತ್ತು ಇಳಿಕೆ ಸರಕುಗಳ ಬೆಲೆ ಮೇಲೆ ನೇರ ಪರಿಣಾಮ ಬೀರುತ್ತವೆ. 

ನೇಕಾರರು ನೇಯ್ದ ಬಟ್ಟೆ, ಚರ್ಮದ ಉತ್ಪನ್ನಗಳು, ಸಾಗರ ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.. ಸಾಗರ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು 30 ರಿಂದ 5 ಪ್ರತಿಶತಕ್ಕೆ ಇಳಿಸಲಾಗಿದೆ. ಹೆಪ್ಪುಗಟ್ಟಿದ ಮೀನಿನ ಪೇಸ್ಟ್ ಮೇಲಿನ ಕಸ್ಟಮ್ ಸುಂಕವನ್ನು 15 ರಿಂದ 5 ಕ್ಕೆ ಇಳಿಸಲಾಗಿದೆ. ಎಲ್‌ಇಡಿ-ಎಲ್‌ಸಿಡಿ ಟಿವಿ ಬೆಲೆಗಳು ಕಡಿಮೆಯಾಗಲಿದ್ದು, ಇವುಗಳ ಮೇಲೆ ವಿಧಿಸಲಾಗಿದ್ದ ಕಸ್ಟಮ್ ಸುಂಕವನ್ನು ಕಡಿತಗೊಳಿಸಲಾಯಿತು. ಲಿಥಿಯಂ ಐಯಾನ್ ಬ್ಯಾಟರಿ, ಇವಿ ಮತ್ತು ಮೊಬೈಲ್ ಬ್ಯಾಟರಿಗಳು ಅಗ್ಗವಾಗಲಿದೆ.

ಯಾವ ಉತ್ಪನ್ನಗಳ ಬೆಲೆ ಯಾಕೆ ಇಳಿಕೆಯಾಗಿದೆ ಎಂಬುದರ ಮಾಹಿತಿ 

ಉತ್ಪನ್ನಕಾರಣ
ಜೀವರಕ್ಷಕ ಔಷಧಿಗಳು36 ಜೀವರಕ್ಷಕ ಔಷಧಿಗಳ ಮೇಲೆ ಕಸ್ಟಮ್ ಸುಂಕ ತೆಗೆದು ಹಾಕಲಾಗಿದೆ.
ಇಲೆಕ್ಟ್ರಾನಿಕ್ ಉತ್ಪನ್ನಗಳುಓಪನ್ ಸೇಲೆ ಮತ್ತು ಇತರೆ ಘಟಕಗಳ ಮೇಲಿನ ಸುಂಕವನ್ನು 5% ಕ್ಕೆ ಇಳಿಸಲಾಗಿದೆ
ಇಲೆಕ್ಟ್ರಾನಿಕ್ ವಾಹನಗಳುEV ಬ್ಯಾಟರಿ ತಯಾರಿಕೆಯಲ್ಲಿ ಬಳಸುವ 35 ಅಡಿಷನಲ್ ಗೂಡ್ಸ್ ತೆರಿಗೆ ವಿನಾಯ್ತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯುಲ್ಲಿವೆ.
ಮೊಬೈಲ್ ಫೋನ್ ಬ್ಯಾಟರಿಮೊಬೈಲ್ ಫೋನ್ ಬ್ಯಾಟರಿ ತಯಾರಿಕೆಯಲ್ಲಿ ಬಳಸುವ 28 ಅಡಿಷನಲ್ ಗೂಡ್ಸ್ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯುಲ್ಲಿವೆ.
ಶಿಪ್ ಮ್ಯಾನ್ಯುಫ್ಯಾಕ್ಚರ್ ರಿಂಗ್ಕಚ್ಛಾ ವಸ್ತುಗಳ ಮೇಲಿನ ತೆರಿಗೆ ರದ್ದುಗೊಳಿಸಲಾಗಿದೆ.
ಫುಟ್‌ವಿಯರ್, ಹ್ಯಾಂಡ್ ಬ್ಯಾಗ್, ಫರ್ನಿಚರ್ಕಸ್ಟಮ್ ಡ್ಯುಟಿ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಓಲಾ, ಸ್ವಿಗ್ಗಿ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ ನಿರ್ಮಲಾ ಸೀತಾರಾಮನ್ 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!