ಓಲಾ, ಸ್ವಿಗ್ಗಿ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ ನಿರ್ಮಲಾ ಸೀತಾರಾಮನ್ 

Published : Feb 01, 2025, 12:34 PM ISTUpdated : Feb 01, 2025, 01:27 PM IST
ಓಲಾ, ಸ್ವಿಗ್ಗಿ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದ ನಿರ್ಮಲಾ ಸೀತಾರಾಮನ್ 

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರಿಗೆ ಐ-ಕಾರ್ಡ್ ಮತ್ತು e-shram ಪೋರ್ಟಲ್ ನೋಂದಣಿ ಘೋಷಣೆ. ಈ ಯೋಜನೆಯಿಂದ 1 ಕೋಟಿ ಗಿಗ್ ವರ್ಕರ್ಸ್‌ಗಳಿಗೆ ಲಾಭ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಜೆಟ್ ಮಂಡಿಸಿದ್ದು,  ಓಲಾ ಮತ್ತು ಸ್ವಿಗ್ಗಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಬಲ ತುಂಬುವ ಕೆಲಸ ಮಾಡಿದ್ದಾರೆ. ಓಲಾ ಮತ್ತು ಸ್ವಿಗ್ಗಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರಿಗೆ I-Card ಮಾಡಲಾಗುವುದು ಮತ್ತು e-shram ಪೋರ್ಟಲ್‌ನಲ್ಲಿ  ಇವರ ಹೆಸರುಗಳನ್ನು ನೋಂದಾಯಿಸಲಾಗುವುದು. ಈ ಯೋಜನೆಯಲ್ಲಿ 1 ಕೋಟಿ ಗಿಗ್ ವರ್ಕರ್ಸ್‌ (Gig Worker) ಲಾಭ ಸಿಗಲಿದೆ . ನಗರ ಪ್ರದೇಶದ ಬಡ ಮತ್ತು ವಂಚಿತ ಗುಂಪುಗಳ ಆದಾಯ, ಸುಸ್ಥಿರ ಜೀವನೋಪಾಯ ಮತ್ತು ಉತ್ತಮ ಜೀವನವನ್ನು ಹೆಚ್ಚಿಸಲು ನಗರ ಕಾರ್ಮಿಕರ ಉನ್ನತಿಗಾಗಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್  ಭಾಷಣದಲ್ಲಿ ಹೇಳಿದ್ದಾರೆ. 

ಯುವಕರಿಗೆ ಸಂಬಂಧಿಸಿದ ಜಾಬ್-ಸ್ಕಿಲ್ಲಿಂಗ್‌ ಕುರಿತು ಪ್ರಮುಖ ಘೋಷಣೆಗಳು 
1.IITs ಮತ್ತು IIMs ನಲ್ಲಿ 10 ಸಾವಿರ ಫೆಲೋಶಿಪ್ ಸಿಗಲಿದೆ. 
2.ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣದಲ್ಲಿ 10 ಸಾವಿರ ಸೀಟ್‌ಗಳ ಸಂಖ್ಯೆ ಹೆಚ್ಚಾಗಲಿದೆ. 5 ವರ್ಷದಲ್ಲಿ 75,000 ಸೀಟ್‌ಗಳ ಸಂಖ್ಯೆ ಏರಿಕೆಯಾಗಲಿದೆ. 
3.ಕೌಶಲ್ಯ ಕೋರ್ಸ್‌ಗಳಿಗಾಗಿ 50 ಸಾವಿರ ಅಟಲ್ ಟಿಕರಿಂಗ್ ಲ್ಯಾಬ್‌ಗಳ ನಿರ್ಮಾಣ.
4.ಭಾರತೀಯ ಭಾಷಾ ಪುಸ್ತಕ ಯೋಜನೆಯ ಸಹಾಯದಿಂದ ಶಾಲೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಡಿಜಿಟಲ್ ಪುಸ್ತಕಗಳು ಲಭ್ಯವಿರುತ್ತವೆ.
5.ನ್ಯಾಷನಲ್ ಸೆಂಟರ್ ಫಾರ್ ಸ್ಕಿಲ್ಲಿಂಗ್ ಅಡಿಯಲ್ಲಿ 5 ಹೊಸ ಕೇಂದ್ರಗಳನ್ನು ನಿರ್ಮಿಸಲಾಗುವುದು.

ಇದನ್ನೂ ಓದಿ: Budget 2025: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲದ ಮಿತಿ ಏರಿಕೆ, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆ!

 

6.ದೇಶದ 23 ಐಐಟಿಗಳಲ್ಲಿ 65,000 ಸೀಟುಗಳ ಹೆಚ್ಚಳ. ಇದರರಲ್ಲಿ ಪಾಟ್ನಾದ ಐಐಟಿ ಸಹ ಸೇರ್ಪಡೆಯಾಗಿದೆ.  
7.ಶಿಕ್ಷಣ ಕ್ಷೇತ್ರದ ಬೆಳವಣಿಗೆಗಾಗಿ AI ನಲ್ಲಿ 3 ಶ್ರೇಷ್ಠತೆಯ ಕೇಂದ್ರಗಳ ನಿರ್ಮಾಣ ಮಾಡಲಾಗುವುದು. 5 ಸಾವಿರ ಕೋಟಿ ಬಜೆಟ್‌ನಲ್ಲಿ ಕೃಷಿ, ಆರೋಗ್ಯ ಮತ್ತು ಎಐ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಇದನ್ನೂ ಓದಿ: ತೆರಿಗೆದಾರರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ₹12 ಲಕ್ಷವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮಂಡ್ಯದಲ್ಲಿ ಅಮೆರಿಕದ ಸೆಮಿಕಂಡಕ್ಟರ್ ಘಟಕಕ್ಕೆ 100 ಎಕರೆ ಭೂಮಿ ಗುರುತು: ಕೆಐಎಡಿಬಿಗೆ ಸೂಚನೆ
ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ: ದಾಖಲಿಸಿದ ಒಟ್ಟು ಹಣ ಎಷ್ಟು?