ರಿಲಾಯನ್ಸ್ ಜಿಯೋ, ಜಿಯೋಕಾಯಿನ್ ಜಾರಿಗೆ ತಂದಿದೆ. ಅದನ್ನು ಎಲ್ಲಿ ಖರೀದಿ ಮಾಡ್ಬೇಕು, ಅದು ಹೇಗೆ ಕೆಲಸ ಮಾಡುತ್ತೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ರಿಲಯನ್ಸ್ ಜಿಯೋ (Reliance Jio) ಬಿಡುಗಡೆ ಮಾಡಿರುವ ಜಿಯೋ ಕಾಯಿನ್ (Jio Coin) ಕೆಲ ದಿನಗಳಿಂದ ಹೆಚ್ಚು ಚರ್ಚೆಯಲ್ಲಿದೆ. ಜನರಲ್ಲಿ ಜಿಯೋಕಾಯಿನ್ ಬಗ್ಗೆ ಅಪಾರ ಕ್ರೇಜ್ ಇದೆ. ಜನರು ಜಿಯೋಕಾಯಿನ್ ಅಂದ್ರೇನು, ಅದ್ರ ಬಳಕೆ ಹೇಗೆ, ಅದ್ರಿಂದ ಲಾಭ ಯಾರಿಗೆ ಎಂಬೆಲ್ಲ ವಿಷ್ಯವನ್ನು ತಿಳಿಯಲು ಉತ್ಸುಕರಾಗಿದ್ದಾರೆ.
ಜಿಯೋ ಕಾಯಿನ್ ಅಂದ್ರೇನು? : ಮೊದಲನೇಯದಾಗಿ ಜಿಯೋ ಕಾಯಿನ್ ಅಂದ್ರೇನು ಎಂಬುದನ್ನು ತಿಳಿದುಕೊಳ್ಳೋಣ, ಜಿಯೋ ಕಾಯಿನ್ ಅನ್ನೋದು ಒಂದು ಡಿಜಿಟಲ್ ಕರೆನ್ಸಿ. ಇದನ್ನು ರಿಲಾಯನ್ಸ್ ಜಿಯೋ ತಯಾರಿಸಿದೆ. ಜಿಯೋ ಕಾಯಿನ್, ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಬ್ಲಾಕ್‌ಚೈನ್ ಚಾಲಿತ ಕ್ರಿಪ್ಟೋಕರೆನ್ಸಿಗಿಂತ ಭಿನ್ನವಾಗಿದೆ. ಇದು ರಿವಾರ್ಡ್ ಟೋಕನ್ ಅಥವಾ ಡಿಜಿಟಲ್ ಲಾಯಲ್ಟಿ ಪಾಯಿಂಟ್‌ನೊಂದಿಗೆ ಸಂಬಂಧ ಹೊಂದಿದೆ.
ಜಿಯೋ 500GB ಆಫರ್! ಕೇವಲ 2 ದಿನಗಳು ಮಾತ್ರ!
ಎಲ್ಲಿ ಜಿಯೋ ಕಾಯಿನ್ ಖರೀದಿ ಮಾಡ್ಬಹುದು? : ವರದಿಗಳ ಪ್ರಕಾರ, ರಿಲಯನ್ಸ್ ಜಿಯೋ ತನ್ನ ಜಿಯೋ ಕಾಯಿನನ್ನು ಮೈಜಿಯೊ, ಜಿಯೋ ಸಿನಿಮಾ ಮತ್ತು ಜಿಯೋಮಾರ್ಟ್‌ನಂತಹ ಇತರ ತನ್ನ ಫ್ಲಾಟ್ ಪಾರ್ಮ್ ನಲ್ಲಿ ನೀಡಲಿದೆ. ಬಳಕೆದಾರರು ವಿವಿಧ ಚಟುವಟಿಕೆಗಳ ಮೂಲಕ ಜಿಯೋ ನಾಣ್ಯಗಳನ್ನು ಗಳಿಸಬಹುದು. ಅಂದ್ರೆ ನೀವು ನೇರವಾಗಿ ಜಿಯೋ ಕಾಯಿನ್ ಖರೀದಿ ಮಾಡಲು ಸಾಧ್ಯವಿಲ್ಲ. ಅಲ್ಲದೆ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಗ್ರಾಹಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಇದ್ರ ಉದ್ದೇಶವಾಗಿದೆ.
ಜಿಯೋಸ್ಪಿಯರ್ ಮೂಲಕ ವೆಬ್ ಬ್ರೌಸ್ ಮಾಡ್ತಿದ್ದರೆ, ಜಿಯೋಸಿನಿಮಾದಲ್ಲಿ ಸಿನಿಮಾ ನೋಡ್ತಿದ್ದರೆ, ಜಿಯೋಮಾರ್ಟ್‌ನಲ್ಲಿ ಶಾಪಿಂಗ್ ಮಾಡ್ತಿದ್ದರೆ ನೀವು ಜಿಯೋಕಾಯಿನ್ ಗಳಿಸ್ಬಹುದು. ನೀವು ಹೆಚ್ಚೆಚ್ಚು ಜಿಯೋ ಅಪ್ಲಿಕೇಶನ್ ಬಳಸಿದ್ರೆ ನಿಮಗೆ ಹೆಚ್ಚು ನಾಣ್ಯಗಳು ಸಿಗುತ್ವೆ. ಜಿಯೋ ಕಾಯಿನ್ ಖಂಡಿತವಾಗಿಯೂ ಗೇಮ್-ಚೇಂಜರ್ ಆಗಬಹುದು. ಏಕೆಂದರೆ ಈ ಟೋಕನ್‌ಗಳನ್ನು ಜಿಯೋ ಅಪ್ಲಿಕೇಶನ್‌ಗಳಲ್ಲಿ ರಿಯಾಯಿತಿಗಳಾಗಿ ನೀವು ಸದ್ಯ ಬಳಸಬಹುದು.
ಎಲ್ಲಿ ಡೌನ್ಲೋಡ್ ಮಾಡ್ಬೇಕು : ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜಿಯೋ ಸ್ಪೇರ್ (JioSphere) ಅಪ್ಲಿಕೇಷನ್ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಸೈನ್ ಅಪ್ ಮಾಡಿ, ಆ ಬ್ರೌಸರ್ ಯೂಸ್ ಮಾಡ್ತಾ ಇದ್ದಂತೆ ನಿಮ್ಮ ಕಾಯಿನ್ ಹೆಚ್ಚಾಗ್ತಾ ಹೋಗುತ್ತದೆ. ಆಡ್ ಬ್ಲಾಕನ್ನು ನೀವು ಆನ್ ಮಾಡಿದ್ರೆ ನಿಮ್ಮ ಖಾತೆಗೆ ಕಾಯಿನ್ ಸೇರ್ತಾ ಹೋಗುತ್ತೆ. ಜಿಯೋ ಕಾಯಿನ್ ಸದ್ಯ ಕ್ರಿಪ್ಟೋಕರೆನ್ಸಿಯಾಗಿಲ್ಲ ಆದ್ರೆ ಮುಂದಿನ ದಿನಗಳಲ್ಲಿ ಅದು ದೇಶದ ಬಿಟ್ ಕಾಯಿನ್ ಆಗ್ಬಹುದು ಎಂದು ತಜ್ಞರು ಹೇಳ್ತಿದ್ದಾರೆ.
ಜಿಯೋ, ಏರ್ಟೆಲ್‌ಗಿಂತ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಘೋಷಿಸಿದ BSNL
ಬಿಟ್ ಕಾಯಿನ್ ಆಗಿ ಜಿಯೋ ಕಾಯಿನ್ ಬದಲಾದ್ರೆ ಏನಾಗುತ್ತೆ? : ಜಿಯೋ ಕಾಯಿನ್ ಅನ್ನು ಬಿಟ್‌ಕಾಯಿನ್‌ನಂತೆ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದರೆ, ಅದರ ಮೌಲ್ಯವು ಬಿಟ್‌ಕಾಯಿನ್‌ಗೆ ಅನುಗುಣವಾಗಿ ವೇಗವಾಗಿ ಹೆಚ್ಚಾಗಬಹುದು. ಪ್ರಸ್ತುತ ಒಂದು ಬಿಟ್‌ಕಾಯಿನ್‌ನ ಬೆಲೆ 88,44,995.01 ರೂಪಾಯಿ. ಡಿಜಿಟಲ್ ಕರೆನ್ಸಿಯಾಗಿ ಬಿಟ್‌ಕಾಯಿನ್ ಬಳಕೆ 2009 ರಲ್ಲಿ ಪ್ರಾರಂಭವಾಯಿತು. 2010 ರಲ್ಲಿ ಒಂದು ಬಿಟ್‌ಕಾಯಿನ್‌ನ ಬೆಲೆ 2.85 ರೂಪಾಯಿಗಳಷ್ಟಿತ್ತು ಮತ್ತು ಇಂದು ಅದು 88 ಸಾವಿರ ರೂಪಾಯಿಗಳನ್ನು ತಲುಪಿದೆ. ಜಿಯೋಕಾಯಿನ್ ಬಿಟ್‌ಕಾಯಿನ್‌ಗೆ ಪರ್ಯಾಯವಾದರೆ, ಅದರ ಬೆಲೆಯೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ರಿಲಯನ್ಸ್‌ನ ಜಿಯೋ ಕಾಯಿನ್ ಟಾಟಾದ ನ್ಯೂ ಕಾಯಿನ್‌ನಂತೆ ಕಾರ್ಯನಿರ್ವಹಿಸುತ್ತದೆಯೇ? : ಬಿಗ್ ಬಾಸ್ಕೆಟ್‌ನಿಂದ ಟಾಟಾ 1MG ವರೆಗೆ, ನೀವು ಟಾಟಾದ ಯಾವುದೇ ಅಪ್ಲಿಕೇಶನ್‌ಗಳ ಮೂಲಕ ಶಾಪಿಂಗ್ ಮಾಡಿದರೆ, ಕಂಪನಿಯು ನಿಮಗೆ ಕೆಲವು ಹೊಸ ನಾಣ್ಯಗಳನ್ನು ಉಚಿತವಾಗಿ ನೀಡುತ್ತದೆ. ಶಾಪಿಂಗ್ ಮಾಡಿದ ನಂತರ, ಈ Neu ನಾಣ್ಯಗಳನ್ನು ಅಪ್ಲಿಕೇಶನ್‌ನಲ್ಲಿ ಒದಗಿಸಲಾದ ವ್ಯಾಲೆಟ್‌ಗೆ ಜಮಾ ಮಾಡಲಾಗುತ್ತದೆ, ಮುಂದಿನ ಬಾರಿ ಶಾಪಿಂಗ್ ಮಾಡುವಾಗ ನೀವು ಯಾವುದೇ ಟಾಟಾ ಅಪ್ಲಿಕೇಶನ್‌ನಲ್ಲಿ ಇದನ್ನು ಬಳಸಬಹುದು. ಬೆಲೆಯ ಬಗ್ಗೆ ಹೇಳುವುದಾದರೆ, 1 Neu ನಾಣ್ಯದ ಬೆಲೆ 1 ರೂಪಾಯಿಗೆ ಸಮಾನವಾಗಿರುತ್ತದೆ. ಒಂದು ಜಿಯೋ ನಾಣ್ಯದ ಬೆಲೆ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.