Education Budget 2024: ಶಿಕ್ಷಣ-ಕೌಶಲ್ಯಾಭಿವೃದ್ಧಿ, ಮಹಿಳೆಯರ ಉದ್ಯೋಗಕ್ಕೆ ಹೆಚ್ಚಿನ ಒತ್ತು

Published : Jul 23, 2024, 02:04 PM IST
Education Budget 2024: ಶಿಕ್ಷಣ-ಕೌಶಲ್ಯಾಭಿವೃದ್ಧಿ, ಮಹಿಳೆಯರ ಉದ್ಯೋಗಕ್ಕೆ ಹೆಚ್ಚಿನ ಒತ್ತು

ಸಾರಾಂಶ

ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಸುಧಾರಣೆಯಾಗಬೇಕಿದ್ದು,  ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ.

ನವದೆಹಲಿ (ಜು.23): ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಸುಧಾರಣೆಯಾಗಬೇಕಿದ್ದು,  ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡಲಾಗಿದೆ. 

ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವರೆಗೂ ಶಿಕ್ಷಣ ಸಾಲ ನೀಡುವ ಮೂಲಕ ಶೇ.3ರ ಬಡ್ಡಿದರದಲ್ಲಿ ಆರ್ಥಿಕ ನೆರವು  ನೀಡಲಾಗುವುದು ಎಂದು ಘೋಷಿಸಲಾಗಿದೆ. ರಾಜ್ಯ ಸರಕಾರ ಹಾಗು ಉದ್ಯಮಗಳೊಂದಿಗೆ ಕೈ ಜೋಡಿಸಿ, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು. ಐದು ವರ್ಷಗಳಲ್ಲಿ 20 ಲಕ್ಷ ಯುವಕರ ಕೌಶಲ್ಯಾಭಿವೃದ್ಧಿಯ ಗುರಿ ಇದ್ದು, ಇದಕ್ಕಾಗಿ  ಅಗತ್ಯ ನೆರವು ನೀಡಲಾಗುವುದು ಎಂದು ಘೋಷಿಸಲಾಗಿದೆ. ಸಾವಿರ ಐಟಿಐಗಳ ಉನ್ನತೀಕರಣ, ಕೋರ್ಸ್ ಮರು ವಿನ್ಯಾಸ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡುವ ಬಗ್ಗೆ ಕೂಡ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ.

Budget 2024 LIVE: ನೈಸರ್ಗಿಕ ಕೃಷಿಗೆ ಒತ್ತು, ಆಂಧ್ರ, ಬಿಹಾರಕ್ಕೆ ಬಂಪರ್

ಇದಲ್ಲದೆ ಒಟ್ಟು 1000 ಐಟಿಐಗಳನ್ನು ( Industrial Training Institutes) ಮೇಲ್ದರ್ಜೆಗೇರಿಸಲಾಗುವುದು, ಕೋರ್ಸ್ ವಿಷಯ ಮತ್ತು ವಿನ್ಯಾಸವನ್ನು ಕೈಗಾರಿಕೆಗಳ ಕೌಶಲ್ಯದ ಅಗತ್ಯಗಳಿಗೆ ಉಪಯೋಗಿಸಿಕೊಳ್ಳಲಾಗುವುದು.  ಸರ್ಕಾರದಿಂದ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ನೀಡಲಾಗುವುದು. ಈ ಇಂಟರ್ನ್‌ಗಳು ರೂ 5000 ಸ್ಟೈಫಂಡ್ ಮತ್ತು ರೂ 6000 ನೆರವು ನೀಡಲಾಗುವುದು. ಕಂಪನಿಗಳು ತಮ್ಮ CSR ನಿಧಿಗಳ ಸರ್ಕಾರದ ಇಂಟರ್ನ್‌ಶಿಪ್ ಯೋಜನೆಯಿಂದ ವೆಚ್ಚವನ್ನು ಭರಿಸುತ್ತವೆ ಎಂದಿದ್ದಾರೆ.

ಇದಲ್ಲದೆ ಯುಜಿಸಿಗೆ ಧನಸಹಾಯವನ್ನು ಶೇಕಡಾ 60.99 ರಷ್ಟು ಕಡಿಮೆಗೊಳಿಸಲಾಗಿದೆ. ಹಿಂದಿನ ವರ್ಷದ ಪರಿಷ್ಕೃತ ಅಂದಾಜಿನ 6,409 ಕೋಟಿಯಿಂದ 2,500 ಕೋಟಿಗೆ ಇಳಿಸಲಾಗಿದೆ. ಮತ್ತೊಂದೆಡೆ, 2024-25 ರ ಹಣಕಾಸು ವರ್ಷಕ್ಕೆ 15,928 ಕೋಟಿ ರೂ ಘೋಷಣೆ ಮಾಡುವ ಜೊತೆಗೆ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಅನುದಾನವು 4,000 ಕೋಟಿ ರೂ.ಗಿಂತ ಹೆಚ್ಚಾಗಿದೆ.

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

ಇದಲ್ಲದೆ ಸರ್ಕಾರವು ಅನುಸಂಧನ್ ರಾಷ್ಟ್ರೀಯ ಸಂಶೋಧನಾ ಫಂಡ್‌ ಅನ್ನು ಕಾರ್ಯಗತಗೊಳಿಸುತ್ತದೆ ಎಂದು ಬಜೆಟ್‌ ನಲ್ಲಿ ಸೀತರಾಮನ್ ಒತ್ತಿ ಹೇಳಿದರು. ಇನ್ನು ಮಹಿಳೆಯರು ಹೆಚ್ಚಿನ ಉದ್ಯೋಗದಲ್ಲಿ ತೊಡಗಿಕೊಳ್ಳಲು  ಒತ್ತು ನೀಡಲಾಗುವುದು. ಜೊತೆಗೆ ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!