Union Budget Highlights ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿದೆ ಹಲವು ವಿಶೇಷತೆ!
Feb 1, 2023, 10:40 PM IST
ಭಾರಿ ಕುತೂಹಲ ಕೆರಳಿಸಿದ್ದ ಮೋದಿ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಮದ್ಯಮ ವರ್ಗದ ಜನರಿಗೆ 7 ಲಕ್ಷ ರೂಪಾಯಿ ವರೆಗೆ ಆದಾಯ ತೆರಿಗೆ ವಿನಾಯಿತಿ ಘೋಷಣೆ, ಮಹಿಳಯರಿಗೆ ಉಳಿತಾಯ ಯೋಜನೆ, ಹಿರಿಯರ ರೇವಣಿ ಮೊತ್ತ ಹೆಚ್ಚಳ, ಶಿಕ್ಷಣ, ಕೃಷಿ, ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಅಳೆದು ತೂಗಿ ಹಣ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ಬದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಇತ್ತ ಬರಪೀಡಿತ ಪ್ರದೇಶಗಳಿಗೆ ಹೊಸ ಯೋಜನೆ ರೂಪಿಸಲಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವಂತೆ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹಿಂದುಳಿದ ಜಾತಿ, ಬುಡಕಟ್ಟು ಜನಾಂಗ ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ಹಲವು ಘೋಷಣೆ ಮಾಡಿರುವ ನಿರ್ಮಲಾ, ಕೃಷಿ ಸಾಲವನ್ನು ಹೆಚ್ಚಿಸಿದ್ದಾರೆ. ಇದೀಗ ಬಜೆಟ್ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದೆ. ನಿರುದ್ಯೋಗ ಸಮಸ್ಯೆಗೆ, ಬಡನತ ನಿರ್ಮೂಲನ ಮಾಡಲು ಈ ಬಜೆಟ್‌ನಲ್ಲಿ ಯಾವುದೇ ಪರಿಹಾರ ಸೂತ್ರಗಳಿಲ್ಲ ಎಂದಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ ಈ ಬಜೆಟ್ ಐತಿಹಾಸಿಕ ಎಂದು ಬಣ್ಣಸಿದ್ದಾರೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಲಾಗಿದೆ. ಹೊಸ ಯೋಜನೆ, ಅತೀ ದೊಡ್ಡ ಘೋಷಣೆ, ಯಾವುದು ದುಬಾರಿ? ಯಾವುದು ಅಗ್ಗ, ಪ್ರತಿಪಕ್ಷಗಳ ಪ್ರತಿಕ್ರಿಯೆ ಸೇರದಂತೆ ಬಜೆಟ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
10:40 PM
ನಿರಾಸದಾಯಕ ಬಜೆಟ್, ರಾಜಸ್ಥಾನಕ್ಕೆ ಭಾರಿ ನಿರಾಸೆ, ಸಿಎಂ ಗೆಹ್ಲೋಟ್
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಸದಾಯಕವಾಗಿದೆ. ರಾಜಸ್ಥಾನ ಜನರು ಹಲವು ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದರು. ಆದರೆ ಮೋದಿ ಸರ್ಕಾರ ಎಲ್ಲರಿಗೂ ತಣ್ಣೀರೆರಚಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
9:05 PM
ಕೇಂದ್ರ ಬಜೆಟ್ ಶ್ಲಾಘಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ಬಂಡವಾಳ ಹೂಡಿಕೆ, ಕುಡಿಯುವ ನೀರಿನ ಯೋಜನೆ, ಗ್ರಾಮೀಣ ವಸತಿಗಳ ಹೆಚ್ಚಳ ಸೇರಿದಂತೆ ಹಲವು ಉತ್ತಮ ಅಂಶಗಳನ್ನು ಬಜೆಟ್ ಹೊಂದಿದೆ. ಈ ಬಜೆಟ್ ಉತ್ತಮ ಸಾಮಾಜಿಕ ಪರಿಣಾಮ ಬೀರಲಿದೆ: ಒಡಿಶಾ ಸಿಎಂ ನವೀನ್ ಪಟ್ನಾಯಕ್
8:10 PM
ಹೊಸ ಭಾರತ ಹಾಗೂ ಸಮೃದ್ಧಿ ಭಾರತದ ಬಜೆಟ್, ಯೋಗಿ ಆದಿತ್ಯಾಥ್
ಕೇಂದ್ರ ಮಂಡಿಸಿದ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಎಲ್ಲಾ ವರ್ಗದಕ್ಕೆ ಕೊಡುಗೆ ಜೊತೆಗೆ ಆರ್ಥಿಕ ಸಬಲೀಕರಣದತ್ತ ಸಾಗಲು ಈ ಬಜೆಟ್ ಅತ್ಯಂತ ಮುಖ್ಯವಾಗಿದೆ. ಈ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ
7:38 PM
ಸೀತಾರಾಮನ್ 86 ನಿಮಿಷದ ಬಜೆಟ್ ಮಂಡನೆ ಮೇಳೆ 124 ಬಾರಿ ಮೇಜು ತಟ್ಟಿದ ಮೋದಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಿದ್ದಾರೆ. 86 ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮುಗಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ 124 ಬಾರಿ ಮೇಜು ತಟ್ಟಿ ಅಭಿನಂದಿಸಿದ್ದಾರೆ.
6:58 PM
ಬಜೆಟ್‌ನಲ್ಲಿ ಸಹಕಾರಿ ಸಂಘಟಗಳ ಉತ್ಪಾದನಾ ವಲಯಕ್ಕೆ ಉತ್ತೇಜನ, ಅಮಿತ್ ಶಾ ಧನ್ಯವಾದ
ಟಿಡಿಎಸ್ ಗರಿಷ್ಠ ಮಿತಿಯನ್ನು 3 ಕೋಟಿ ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ. ಪಿಎಸಿಎಸ್ ಮತ್ತು ಪಿಸಿಆರ್‌ಡಿಬಿಗಳಿಂದ ನಗದು ಠೇವಣಿ ವಲಯದಲ್ಲಿ ಮಾಡಿದ ಬದಲಾವಣೆಯಿಂದ ಸಕ್ಕರೆ ಸಹಕಾರಿ ಸಂಘಗಳ ಕಾರ್ಖಾನೆಗಳಿಗೆ ಸರಿಸುಮಾರು 10,000 ಕೋಟಿ ರೂಪಾಯಿ ಪರಿಹಾರ ಪಡೆಯಲಿದೆ. ಇದು ಮಹತ್ವದ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
6:43 PM
ನಿರುದ್ಯೋಗ, ಹಣದುಬ್ಬರ ನಿಯಂತ್ರಣಕ್ಕಿಲ್ಲ ಕ್ರಮ, ಇದು ಭವಿಷ್ಯದ ಮಾರಕ ಬಜೆಟ್, ರಾಹುಲ್ ಗಾಂಧಿ!
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಯಾವುದೇ ಕ್ರಮ ಇಲ್ಲ. ಹಣದುಬ್ಬ ಹಾಗೂ ಅಸಮಾನತೆ ಹೋಗಲಾಡಿಸಲು ಯಾವುದೇ ಯೋಜನೆಗಳಿಲ್ಲ. ದೇಶದ 1 ಶೇಕಡಾ ಶ್ರೀಮಂತರ ಶೇಕಡಾ 40 ರಷ್ಟು ಸಂಪತ್ತು ಹೊಂದಿದ್ದರೆ, ಶೇಕಡಾ 50 ರಷ್ಟು ಬಡವರು ಶೇಕಡಾ 64ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಶೇಕಡಾ 42 ರಷ್ಟು ಯುವ ಸಮೂಹ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.
‘Mitr Kaal’ Budget has:
NO vision to create Jobs
NO plan to tackle Mehngai
NO intent to stem Inequality
1% richest own 40% wealth, 50% poorest pay 64% of GST, 42% youth are unemployed- yet, PM doesn’t Care!
This Budget proves Govt has NO roadmap to build India’s future.
6:39 PM
Union Budget 2023: ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!
ಕೇಂದ್ರ ಬಿಜೆಪಿ ಮಹತ್ವದ ಬಜೆಟ್ ಮಂಡಿಸಿದೆ. ಆರ್ಥಿಕ ಹಿಂಜರಿತ, ಕೋವಿಡ್ ಸಂಕಷ್ಟದಿಂದ ಹೊರಬಂದು ಮೈಕೊಡವಿ ನಿಂತಿರುವ ಭಾರತದ ಅಭಿವೃದ್ಧಿ ವೇಗ ಹೆಚ್ಚಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ವಿಪಕ್ಷ ನಾಯಕರು ಇದು ಪೊಳ್ಳು ಬಜೆಟ್ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

6:38 PM
ರೈತರ ಗೊಬ್ಬರಕ್ಕೆ 50 ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ
ದೇಶದ ಆರ್ಥಿಕ ಮಂಡಿಸಿರುವ ಬಜೆಟ್‌ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ. ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಮಾಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Union Budget :ರೈತರ ಗೊಬ್ಬರಕ್ಕೆ 50 ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ
6:21 PM
ವಿಶ್ವಕರ್ಮರ ಬೆನ್ನಿಗೆ ನಿಂತ ಮೋದಿ, ವಿಕಾಸಕ್ಕೆ ಆದಿ!
ದೇಶದಲ್ಲಿನ ಸಾವಿರಾರು ಕುಶಲಕರ್ಮಿಗಳು ಹಾಗೂ ಕರಕುಶಲತೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಲ್ಲಿ ಪಿಎಂ ವಿಕಾಸ್ ಯೋಜನೆ ಜಾರಿ ಮಾಡಲಾಗಿದೆ. ಪಿಎಂ ವಿಕಾಸ್ ಯೋಜನೆಯ ಮೂಲಕ ವಿಶ್ವಕರ್ಮರು ಭಾರತದ ಪ್ರಗತಿಯಲ್ಲಿ ಸೇರಿಕೊಳ್ಳುವುದಲ್ಲದೆ ದೇಶದ ಬೆಳವಣಿಗೆ ಪ್ರಬಲ ಜನಾಂಗವಾಗಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
4:48 PM
ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಮಹಿಳೆಯರಿಗೆ ಹೊಸ ಯೋಜನೆ!
2023-24ನೇ ಸಾಲಿನ ಬಜೆಟ್ ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಉತ್ತೇಜಿಸಲು ಹೆಚ್ಚಿನ ಬಡ್ಡಿದರ ನೀಡುವ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.
Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ
4:32 PM
ಪ್ರತಿಯೊಬ್ಬನಿಗೂ ಸೂರು, ಆವಾಸ್ ಯೋಜನೆಗೆ ಹಣ ಜೋರು!
2022ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಈ ಮೊತ್ತದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ವಾರ್ಷಿಕ ₹ 10,000 ಕೋಟಿ ವಿನಿಯೋಗಿಸುವ ಮೂಲಕ ಎಲ್ಲರಿಗೂ ಕೈಗೆಟುಕುವ ವಸತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದೆ.
4:19 PM
ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!
ಈ ಬಾರಿಯ ಬಜೆಟ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಇಷ್ಟೇ ಅಲ್ಲ ಲಿಥಿಂಯ ಹಾಗೂ ಐಯಾನ್ ಬ್ಯಾಟರಿ ಮೇಲಿನ ಸುಂಕ ಕಡಿತಗೊಳಿಸಿರುವ ಕಾರಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಇದರ ಜೊತೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿರುವ ಕೊಡುಗೆ ಏನು? ಇಲ್ಲಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:41 PM
ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!
ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.93 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:29 PM
ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಗರಿಷ್ಠ ಬಾರಿ ಬಳಸಿದ ಪದ ಯಾವುದು ಗೊತ್ತಾ?
ಸಾಮಾನ್ಯವಾಗಿ ಬಜೆಟ್ ಭಾಷಣದಲ್ಲಿ ತೆರಿಗೆ, ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಅನ್ನೋ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ತೆರಿಗೆದಾರರಿಗೆ ದೊಡ್ಡ ರಿಲೀಫ್ ನೀಡಿರುವ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಗರಿಷ್ಠ ಬಾರಿ ಬಳಕೆ ಮಾಡಿರುವ ಪದ 'ಟ್ಯಾಕ್ಸ್'!
3:28 PM
ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ಮೀಸಲು!
ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.94 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
Defence Budget 2023: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!
3:21 PM
ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು; ಕೌಶಲಾಭಿವೃದ್ಧಿಗೆ ಡಿಜಿಟಲ್ ವೇದಿಕೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮೋದಿ ಸರ್ಕಾರ ಈ ಹಿಂದಿನಿಂದಲೂ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ. ಅದರಂತೆ ಈ ಬಾರಿಯ ಬಜೆಟ್ ನಲ್ಲಿ ಕೂಡ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:19 PM
ತೆರಿಗೆ ಭಾರವಿಲ್ಲದೆ ಸರ್ವರನ್ನು ಸಂತೃಪ್ತಿಪಡಿಸಿದ ಕೇಂದ್ರ ಬಜೆಟ್: ಸಚಿವ ನಿರಾಣಿ
ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಸಂತೃಪ್ತಿಪಡಿಸುವ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಪ್ರಸಕ್ತ 2023-24ನೇ ಸಾಲಿನ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸರ್ವಸ್ಪರ್ಶಿ ಹಾಗೂ ಸರ್ವರನ್ನೊಳಗೊಂಡ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ಇದು ಭವಿಷ್ಯದ ಬಜೆಟ್ ಎಂದು ನಿರಾಣಿ ಬಣ್ಣಿಸಿದ್ದಾರೆ. ಈವರೆಗೂ ಇದ್ದ ರೂ. 5 ಲಕ್ಷವರೆಗಿನ ಆದಾಯ ತೆರಿಗೆ ಮಿತಿಯನ್ನು ರೂ. 7 ಲಕ್ಷದವರೆಗೆ ಹೆಚ್ಚಿಸಿರುವುದು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ದೇಶವಾಸಿಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಇಟ್ಟುಕೊಂಡಿರುವ ಕಳಕಳಿ ಎಂದು ಹೇಳಿದ್ದಾರೆ.
2:40 PM
ದೂರದೃಷ್ಟಿ ,ದೇಶದ ಹಿತದೃಷ್ಟಿಯುಳ್ಳ ಬಜೆಟ್ಛ ಸಿಟಿ ರವಿ
ಚಿಕ್ಕಮಗಳೂರು: ಬಜೆಟ್ ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ. ಯುವ ಸಮುದಾಯ,ಮೂಲ ಸೌಕರ್ಯ , ಪರಿಸರ ಸ್ನೇಹಿ ಬಜೆಟ್ ಇದು. ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ. ದೂರದೃಷ್ಟಿ,ದೇಶದ ಹಿತದೃಷ್ಟಿಯುಳ್ಳ ಬಜೆಟ್. ಬಡವರ ಸ್ನೇಹಿ ಆಗಿರುವ ಬಜೆಟ್ ,9 ಬಜೆಟ್ ಗಳಂತೆ ಈ ಭಾರೀ ಬಜೆಟ್ ಕೂಡ ದೂರದೃಷ್ಟಿ, ದೇಶದ ಹಿತಕಾಯುವ ನಿಟ್ಟಿನಲ್ಲಿರುವ ಬಜೆಟ್. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಹಣಕಾಸಿನ ಖಾತೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಿ.ಟಿ ರವಿ.
.
2:01 PM
ಯಾವುದು ದುಬಾರಿ, ಯಾವುದು ಅಗ್ಗ?
ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ತೆರಿಗೆದಾರರಿಗೆ ಬಂಪರ್ ಕೊಡುಗೆ ಘೋಷಿಸಿದರೆ, ಆಮದು ಸುಂಕ, ರಫ್ತು ಸುಂಕದಲ್ಲಿ ಕೆಲ ಬದಲಾವಣೆಗಳಾಗಿವೆ. ಇಷ್ಟೇ ಅಲ್ಲ ಸಿಗರೇಟು ತಂಬಾಕು ದುಬಾರಿಯಾಗಿದ್ದರೆ, ಮೊಬೈಲ್ ಫೋನ್, ಸ್ಥಳೀಯ ಮತ್ಸ ಉತ್ಪನ್ನಗಳು ಅಗ್ಗವಾಗಿದೆ. ಬಜೆಟ್ ಬಳಿಕ ಯಾವುದೇ ದುಬಾರಿ? ಯಾವುದು ಅಗ್ಗ ಇಲ್ಲಿದೆ ಸಂಪೂರ್ಣ ವಿವರ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1:49 PM
ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
ಎಲ್ಲಾ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ತನ್ನ ರಾಜಧಾನಿಯಲ್ಲಿ ಅಥವಾ ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯುನಿಟಿ ಮಾಲ್‌ಅನ್ನು ಸ್ಥಾಪನೆ ಮಾಡುವುದಾಗಿ ಬಜೆಟ್ ಅಲ್ಲಿ ತಿಳಿಸಿದೆ.
Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
1:31 PM
Union Budget 2023: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಭಾಷಣ ಭಾಗ 2
1:31 PM
Union Budget 2023: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಭಾಷಣ ಭಾಗ 1
1:26 PM
ಗ್ರಾಮೀಣ ಪ್ರದೇಶದಲ್ಲೂ ಡಿಜಿಟಲ್ ಲೈಬ್ರರಿ
ರಾಜ್ಯಗಳಿಗೆ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1:07 PM
ಯಾವುದು ಅಗ್ಗ, ಯಾವುದು ತುಟ್ಟಿ?
ಅಡುಗೆ ಮನೆಯ ಚಿಮಣಿ ಆಮದು ಸುಂಕ ಏರಿಕೆ
ಚಿಮಣಿ ಆಮದು ಸುಂಕ ಶೇ.7 ರಿಂದ 13ಕ್ಕೆ ಏರಿಕೆ
ಆಯ್ದ ಆಮದು ಸುಂಕದಲ್ಲಿ ಭಾರೀ ಇಳಿಕೆ
ಶೇ.21 ರಿಂದ ಶೇ.13ಕ್ಕೆ ಆಮದು ಸುಂಕ ಇಳಿಕೆ
ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕ ಇಳಿಕೆ
ಜವಳಿ, ವಿದ್ಯುತ್ ವಾಹನಗಳ ಬ್ಯಾಟರಿ
ಮೊಬೈಲ್ ಕ್ಯಾಮರಾ ಲೆನ್ಸ್, ಆಟದ ಸಾಮಾನುಗಳು
ಸೈಕಲ್, ಟಿವಿ ಬಿಡಿಭಾಗಗಳು, ಗ್ಲಿಸರಿನ್, ನೈಸರ್ಗಿಕ ಅನಿಲ್ ಆಮದು ಸುಂಕ ಇಳಿಕೆ
ಮೊಬೈಲ್, ಕ್ಯಾಮರಾ ಲೆನ್ಸ್ ಅಗ್ಗ
1:01 PM
ಭಾರತ ವಿಶ್ವ ಗುರುವಾಗುವತ್ತ ಹೆಜ್ಜೆ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಒತ್ತು ನೀಡುವಂಥ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ಗೆ ಅಭಿನಂದನೆಗಳು. ಭಾರತ ವಿಶ್ವ ಗುರುವಾಗುವತ್ತ ಗಮನ ಹರಿಸಲು ಮುಂದಿನ 25 ವರ್ಷಗಳ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಈ ಬಜೆಟ್ ಸಹಕಾರಿ ಎಂದ ಸಿ.ಟಿ.ರವಿ
Heartiest Congratulations to Finance Minister Smt for presenting the that addresses the needs of every Bharatiya.
This budget truly embraces the Sabka Saath Sabka Vikas vision outlined by PM Shri towards making Bharat the Vishwa Guru.
12:59 PM
ತೆರಿಗೆ ಮಿತು 7 ಲಕ್ಷಕ್ಕೆ ಏರಿಕೆ, ಮಧ್ಯಮ ವರ್ಗದ ಶ್ರಮಿಕರಿಗೆ ಬಂಬರ್
ಮಧ್ಯಮ ವರ್ಗಕ್ಕೆ ಈ ಬಾರಿಯ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಂದ 7 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೂಡುಗೆ ನೀಡಲಾಗಿದೆ.
12:48 PM
ರೈತ ಪರ ಬಜೆಟ್ ಇದು: ಅಶ್ವತ್ಥ್ ನಾರಾಯಣ್
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿಕೆ. ಜನಪರ, ರೈತರ ಬಜೆಟ್ ಇದು. ಕೃಷಿಕರಿಗೆ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಕೂಲಿ ಕಾರ್ಮಿಕರಿಗೆ ತಲುಪುವಂಥ ಬಜೆಟ್. ಮೂಲಸೌಕರ್ಯ ಅಭಿವೃದ್ಧಿ ವೆಚ್ಚ 35% ಹೆಚ್ಚಳ ಮಾಡಿದ್ದಾರೆ. ಇದರಿಂದ ಬಂಡವಾಳ ಮತ್ತು ಉದ್ಯೋಗವಕಾಶ ಸೃಷ್ಟಿ. ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಅನುದಾನ ಕೊಟ್ಟಿದ್ದಾರೆ. ಪಿಎಂ ಆವಾಜ್ ಯೋಜನೆಗೆ 79 ಸಾವಿರ ಕೋಟಿ ಕೊಟ್ಟಿದ್ದು ಸಂತೋಷ.
ಇದು ಪೀಪಲ್ ಫ್ರೆಂಡ್ಲಿ ಬಜೆಟ್. ಕೃಷಿ, ಕೂಲಿ ಕಾರ್ಮಿಕರು, ಕಟ್ಟ ಕಡೆಯ ವ್ಯಕ್ತಿಗೆ ಅನುಕೂಲ ಆಗಿದೆ. ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. 7.5 ಲಕ್ಷ ಕೋಟಿ ಇದ್ದಿದ್ದನ್ನು, 10 ಲಕ್ಷ ಕೋಟಿಗೆ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಮತ್ತು ಉದ್ಯೋಗ ಸಿಗಲಿದೆ. ಅಪ್ಪರ್ ಭದ್ರಾ ಯೋಜನೆಗ 5,300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 79 ಸಾವಿರ ಕೋಟಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹಣ ಬಿಡುಗಡೆಯಾಗಿದೆ. ಏಕಲವ್ಯ ಶಾಲೆ ಮೂಲಕ ಶಿಕ್ಷಕರ ನೇಮಕ, ಶಾಲೆ ತೆರೆಯುವುದು. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಉತ್ತೇಜನ. ಸ್ಟಾರ್ಟಪ್ ಯೋಜನೆಗೆ ಹೆಚ್ಚು ಉತ್ತೇಜನ.
ನಿರ್ಮಲಾ ಸೀತಾರಾಮನ್ ಮಂಡಿಸಿರೋ ಬಜೆಟ್ ಅನ್ನ ಬಿಜೆಪಿ ಸ್ವಾಗತಿಸಲಿದೆ.
12:34 PM
ಮದ್ಯಮ ವರ್ಗದ ಜನರಿಗೆ ಬಂಪರ್
12 ಲಕ್ಷ ರೂ. ಆದಾಯಕ್ಕಿಂತ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂ. ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ. 7 ಲಕ್ಷದವರೆಗೂ ತೆರಿಗೆ ಮಿತಿ ಇದೆ. ಟ್ಯಾಕ್ಸ್ ಸ್ಲ್ಯಾಬ್ ಈ ರೀತಿ ಇದೆ.
12:30 PM
ರೈಲ್ವೇಸ್‌ಗೆ ದಾಖಲೆ ಅನುದಾನ ಮೀಸಲಿಟ್ಟ ಕೇಂದ್ರ ಸರಕಾರ
ರೈಲ್ವೇಸ್‌ಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದಾಖಲೆಯ 2.40 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದೆ. ಇದು 2013-14ರ ಬಜೆಟ್‌ಗೆ ಹೋಲಿಸಿದರೆ, 9 ಪಟ್ಟು ಅಧಿಕ ಹಣವಾಗಿದೆ.
12:27 PM
ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ
*ಎನ್ ಪಿಎಸ್ ಮೇಲಿನ ಹೂಡಿಕೆಗೆ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ
*ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪ್ರೋತ್ಸಾಹ ಪಡೆಯುವ ಅವಧಿ 2023ರ ಮಾರ್ಚ್ ತನಕ ವಿಸ್ತರಣೆ
*ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ
*ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.1ರಷ್ಟು ಟಿಡಿಎಸ್
12:23 PM
ಅಂತೂ ಮಧ್ಯಮ ವರ್ಗದ ಕಡೆಗೆ ಗಮನ ಹರಿಸಿದ ನಿರ್ಮಲಾ ಸೀತರಾಮನ್
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿ ಘೋಷಿಸಿದ ನಿರ್ಮಲಾ, ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.
12:22 PM
ಯಾವುದು ತುಟ್ಟಿ, ಯಾವುದು ಅಗ್ಗ?
ಅಡುಗೆ ಮನೆಯಲ್ಲಿ ಬಳಸುವ ಚಿಮ್ನಿಗಳಿನ್ನು ಅಗ್ಗವಾಗಲಿದೆ. ಸಿಗರೇಟ್ ಸೇದುವವರು ಮತ್ತಷ್ಟು ಹೆಚ್ಚಿನ ಹಣ ವ್ಯಯಿಸಬೇಕಾಗೋದು ಅನಿವಾರ್ಯ.
12:21 PM
ಜ್ಞಾನಾಧಾರಿತ ಆರ್ಥಿಕ ಪ್ರಗತಿಗೆ ಒತ್ತು
ಪ್ರದಾನಿ ಕಿಸಾನ್ ಯೋಜನೆಯಡಿಯಲ್ಲಿ ಕೃಷಿಕರಿಗೆ 2.2 ಲಕ್ಷ ಕೋಟ ಿರೂ. ಹಣ ವರ್ಗಾಯಿಸಲಾಗುವುದು. ಮೋದಿ ನೇತೃತ್ವದ 2ನೇ ಸರಕಾರದ ಕಡೆಯ ಪೂರ್ಣವಧಿ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್ ಕೃಷಿಕರಿಗೆ ಅನುಕೂಲವಾಗುವಂಥ ಯೋಜನೆಗೆ ಮತ್ತಷ್ಟು ಆದ್ಯತೆ ನೀಡಿದ್ದಾರೆ. ಆ ಮೂಲಕ ಜ್ಞಾನಾಧಾರಿತ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
12:17 PM
ಭದ್ರಾ ಮೇಲ್ದಂಡೆಗೆ ದೊಡ್ಡ ಮೊತ್ತದ ಅನುದಾನ ಘೋಷಣೆಗೆ ಸಿಎಂ ಹರ್ಷ
ಹಾವೇರಿ: ಬ್ಯಾಡಗಿ ತಾಲೂಕು ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಮಾದ್ಯಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿದ್ದಾರೆ. ಇದನ್ನು ಸ್ವಾಗತಿಸುವೆ. ಬರಗಾಲ ಪೀಡಿತ ಬಿಸಿಲು ಪ್ರದೇಶದ ನಾಡಿಗೆ ನೀರಾವರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಈ ಯೋಜನೆ ಬಹಳ ಪ್ರಮುಖವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುನಾದ ಘೋಷಣೆ ಮಾಡಿದ್ದು ಸಂತಸದ ಸಂಗತಿ
12:14 PM
ಠೇವಣಿ ಇಡೋ ಮಹಿಳೆಯರಿಗೆ ವಿಶೇಷ ಬಡ್ಡಿ ಯೋಜನೆ
ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಜಾರಿ
2 ವರ್ಷದ ಅವಧಿಯ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ
ಠೇವಣಿ ಇಡುವ ಮಹಿಳೆಯರಿಗೆ ಶೇ.7.5ರಷ್ಟು ಬಡ್ಡಿ ಯೋಜನೆ
12:13 PM
ಕೈಗಾರಿಕೆ ಆರಂಭಿಸೋರಿಗೆ ಅವಕಾಶ
ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ
ಸಣ್ಣ ಕೈಗಾರಿಕೆಗಳಿಗೆ 9 ಸಾವಿರ ಕೋಟಿ ರೂ.ವರೆಗೂ ಸಾಲ ಸೌಲಭ್ಯ
ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ದರ ಶೇ.1ರಷ್ಟು ಇಳಿಕೆ
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ 9 ಸಾವಿರ ಕೋಟಿ ಸಾಲ
12:11 PM
ಹಳೇ ವಾಹನ ಗುಜರಿಗೆ ಹಾಕುವುದೇ ಲೇಸು
ಹಳೆ ವಾಹನಗಳ ಬದಲಾವಣೆಗೆ ಹೊಸ ನೀತಿ ಜಾರಿ
ವಾಯುಮಾಲಿನ್ಯ ಉಂಟು ಮಾಡುವ ವಾಹನಗಳ ಬದಲಾವಣೆ
2022ರ ಗುಜರಿ ನೀತಿಯಂತೆ ಸರ್ಕಾರಿ ವಾಹನಗಳ ಬದಲಾವಣೆ
ಮಾಲಿನ್ಯಕಾರಿ ವಾಹನಗಳ ಬದಲಾವಣೆಗೆ ಅನುದಾನ
ಸರ್ಕಾರಿ ಹೊಸ ವಾಹನ ಖರೀದಿಗೆ ಕೇಂದ್ರದಿಂದ ಅನುದಾನ
12:11 PM
ಕೌಶಲ್ಯ ಅಭಿವೃದ್ಧಿಗೆ ಆಗ್ಯತೆ
ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ 4-0 ಘೋಷಣೆ
3 ವರ್ಷದಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯಾಧಾರಿತ ಉದ್ಯೋಗ
ಯೋಜನೆಯಡಿ ಹೊಸ ಕೋರ್ಸ್‌ಗಳ ಪರಿಚಯ
ಐಒಪಿ, 3-ಡಿ ಪ್ರಿಂಟಿಂಗ್, ಡ್ರೋಣ್ ಕೋರ್ಸ್‌ಗಳಿಗೆ ಆದ್ಯತೆ
ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಜತೆ ಒಪ್ಪಂದ
ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿ
30 ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
12:10 PM
ಪ್ರವಾಸೋದ್ಯಮ ಅಭಿವೃದ್ಧಿಗೆ 50 ಹೊಸ ಕೇಂದ್ರಗಳ ಅಭಿವೃದ್ಧಿ
ರಸ್ತೆ, ಮೂಲಭೂತ ಸೌಕರ್ಯ, ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಕ್ರಮ
47 ಲಕ್ಷ ಯುವಕರಿಗೆ ಕಲಿಕಾ ವೇತನ ನೀಡಲು ಕ್ರಮ
ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್
ಪ್ರವಾಸಿಗರಿಗೆಂದೇ ಹೊಸ ಆ್ಯಪ್
ಪ್ರವಾಸದ ಮಾಹಿತಿ ನೀಡುವ ಹೊಸ ಆ್ಯಪ್
‘ದೇಖೋ ಅಪ್ನಾ ದೇಶ್’ ಹೆಸರಿನ ಹೊಸ ಯೋಜನೆ ಘೋಷಣೆ
ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲು ಒತ್ತು
12:08 PM
50 ಹೊಸ ಏರ್‌ಪೋರ್ಟ್ ಅಭಿವೃದ್ಧಿಗೆ ಅನುಮೋದನೆ
ದೇಶದಲ್ಲಿ ಹೊಸದಾಗಿ 50 ಏರ್ಪೋರ್ಟ್ಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ಅನುದಾನ.
ಮ್ಯಾನ್ ಹೋಲ್ಗಳಲ್ಲಿ ಮಾನವರು ಇಳಿಯದಂತೆ ಯಂತ್ರಗಳ ಬಳಕೆಗೆ ಹೆಚ್ಚಿನ ಅನುದಾನ
ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ
7 ಸಾವಿರ ಕೋಟಿ ಅನುದಾನದಲ್ಲಿ ಇ-ಕೋರ್ಟ್ಗಳ ಸ್ಥಾಪನೆ
ಇಡೀ ದೇಶಾದ್ಯಂತ 30 ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
2030 ರ ವೇಳೆಗೆ 5 MMT ಹಸಿರು ಹೈಡ್ರೋಜನ್ ಉತ್ಪಾದನೆ
ಈ ಗುರಿಯನ್ನು ಸಾಧಿಸಲು 35,000 ಕೋಟಿ ರೂ.ಗಳನ್ನು ನಿಗದಿ
ಭಾರತವು 2070ರ ವೇಳೆಗೆ ಕಾರ್ಬನ್ ಫ್ರೀ ಆಗಲಿದೆ
ಮಾಲಿನ್ಯ ಹೆಚ್ಚಿಸುವ ವಾಹನಗಳು ಗುಜರಿಗೆ ಸೇರಲಿವೆ
ದೇಶದಲ್ಲಿ ಹಸಿರು ಪರಿಸರ ಅಭಿವೃದ್ಧಿಗೆ ಹೆಚ್ವಿನ ಆಧ್ಯತೆ
12:06 PM
ಬದಲಿ ಇಂಧನ ಬಳಕೆಗೆ ಆದ್ಯತೆ
ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 19,700 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹಸಿರು ಜಲಜನಕ ಯೋಜನೆ ಕಡಿಮೆ ಇಂಗಾಲದ ಸಾಂದ್ರತೆಯ ಆರ್ಥಿಕತೆಯ ನಿರ್ಮಾಣಕ್ಕೆ ನೆರವು ನೀಡಲಿದೆ. ಅಲ್ಲದೆ, ಜೈವಿಕ ಇಂಧನಗಳ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ. 2030ರ ವೇಳೆಗೆ 5 ಎಂಎಂಟಿ ವಾರ್ಷಿಕ ಉತ್ಪಾದನೆ ಗುರಿಯನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ಬಜೆಟ್‌ನಲ್ಲಿ ಇಂಧನ ಮಾರ್ಪಡಿಗೆ ಹಾಗೂ ನಿವ್ವಳ ಶೂನ್ಯ ಗುರಿ ತಲುಪಲು ಹಾಗೂ ಇಂಧನ ಭದ್ರತೆಗೆ 35,000 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ.
12:05 PM
ಹಿರಿಯ ನಾಗರಿಕಗೆ ಬಂಪರ್ ಕೊಡುಗೆ
ಹಿರಿಯ ನಾಗರಿಕರು ಠೇವಣಿ ಮೊತ್ತ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ. ಆ ಮೂಲಕ ಹಿರಿಯ ನಾಗರಿಕರ ಸೇವಿಂಗ್ಸ್ ಕಡೆ ನಿರ್ಮಲಾ ಗಮನ ಹರಿಸಿದ್ದಾರೆ.
12:01 PM
ಭದ್ರಾ ಮೇಲ್ದಂಡೆಗೆ ಅನುದಾನ: ಕಾರಜೋಳ ಫುಲ್ ಖುಷ್
ನೀರಾವರಿ ಸಚಿವ ಗೋವಿಂದ ಕಾರಜೋಳ ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಭದ್ರಾ ಮೇಲ್ದಂಡೆ ಗೆ 5,300 ಕೋಟಿ ಅನುದಾನ ನೀಡಲಾಗಿದೆ. ಈ ಅನುದಾನವನ್ನ ಬರ ಪೀಡಿತ ಪ್ರದೇಶಗಳಿಗೆ ಕೃಷಿಕರಿಗೆ ಕುಡಿಯುವ ನೀರೀನ ಯೋಜನೆಗಳಿಗೆ ಬಳಿಸಲು ಆರ್ಥಿಕ ನೆರವಾಯ್ತು. ದೇಶದ ಇತಿಹಾಸದಲ್ಲೇ ರಾಷ್ಟ್ರೀಯ ಯೋಜನೆ ಅಂತ ಇಷ್ಟು ದೊಡ್ಡ ಅನುದಾನ ಕೊಟ್ಟಿರಲಿಲ್ಲ. ಈಗ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಅನುದಾನ ನೀಡಿರುವುದಕ್ಕೆ ಧನ್ಯವಾದಗಳು ತಿಳಿಸುತ್ತೇನೆ, ಎಂದಿದ್ದಾರೆ.
ಸಿಎಂ ಟ್ವೀಟ್
ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳೆಂದು ಸಿಎಂ ಹರ್ಷ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
11:58 AM
ರಾಜ್ಯಗಳಿಗೆ ಇನ್ನೂ ಒಂದು ವರ್ಷ ಬಡ್ಡಿರಹಿತ ಸಾಲ
ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 50 ವರ್ಷಗಳ ಬಡ್ಡಿರಹಿತ ಸಾಲ ಸೌಲಭ್ಯವನ್ನು ಇನ್ನೂ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಅಲ್ಲದೇ, ಬಂಡವಾಳ ವೆಚ್ಚದ ಉದ್ದೇಶದಿಂದ ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡುತ್ತಿದ್ದ ಈ ಸಾಲಕ್ಕೆ ಮೀಸಲಿಡುವ ಅನುದಾನವನ್ನು 1.3 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದು 2022-23ನೇ ಆರ್ಥಿಕ ಸಾಲಿನಲ್ಲಿ ಮೀಸಲಿಟ್ಟ ಅನುದಾನಕ್ಕಿಂತ ಶೇ.30ರಷ್ಟು ಹೆಚ್ಚು. ಈ ಬಡ್ಡಿರಹಿತ ಸಾಲಕ್ಕೆ ಭಾರೀ ಬೇಡಿಕೆಯಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ತಿಳಿಸಿದ್ದರು.
11:57 AM
ಇಂಧನ ಕ್ಷೇತ್ರಕ್ಕೆ 35 ಸಾವಿರ ಕೋಟಿ ಮೀಸಲು
ಈ ಸಾಲಿನ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಇಂಧನ ಕ್ಷೇತ್ರಕ್ಕೆ ನಿರ್ಮಲಾ ಆದ್ಯತೆ ನೀಡಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ ಹಾಗೂ ಬದಲಿ ಇಂದನ ಬಳಕೆಗೆ ಈಗಾಗಲೆ ಹೇಚ್ಚು ಒತ್ತು ನೀಡುತ್ತಿರುವ ಮೋದಿ ಸರಕಾರ ಈಗಲೂ ಗ್ರೀನ್ ಎನರ್ಜಿ ಅಭಿವೃದ್ಧಿ ಗೆ 19,700 ಕೋಟಿ ರೂ ನಿಗದಿಗೊಳಿಸಿದೆ
11:55 AM
ಕೇಂದ್ರ ಬಜೆಟ್‌ಗೆ ಗೃಹ ಸಚಿವರ ಪ್ರತಿಕ್ರಿಯೆ
ಕೇಂದ್ರ ಬಜೆಟ್ ವಿಚಾರ ಅರಗ ಜ್ಞಾನೇಂದ್ರ ಹೇಳಿಕೆ. ಕೇಂದ್ರ ಬಜೆಟ್ ದೇಶಕ್ಕೆ ಪೂರಕವಾಗಿ ಬರಲಿದೆ. ಇತ್ತೀಚಿಗೆ ಮೋದಿ ಅವರ ನೇತೃತ್ವದಲ್ಲಿ ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವಷ್ಟು ಬೆಳೆವಣಿಗೆ ಆಗಿದೆ. ಅ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ಜನಕ್ಕೆ ಉಪಯೋಗವಾಗುವ ಅನೇಕ ಕಾರ್ಯಕ್ರಮ ಘೋಷಣೆ ಮಾಡ್ತಾರೆ. ಇತ್ತೀಚೆಗೆ GST-CST ಉತ್ತಮವಾಗಿ ಸಂಗ್ರಹ ಆಗ್ತಿದೆ. ಆರ್ಥಿಕ ಶಿಸ್ತಿನ್ನು ಸ್ವಾತಂತ್ರ್ಯ ಇತಿಹಾಸದಲ್ಲೆ ಮೊದಲು ಬಾರಿ ಅಳವಡಿಕೆ ಮಾಡಿಕೊಂಡಿಕೊಂಡಿದ್ದಾರೆ. ಅತ್ಯಂತ ಒಳ್ಳೆಯ ಬಜೆಟ್ ನಿರೀಕ್ಷೆ ಮಾಡ್ತೀವಿ.
11:54 AM
ಪಿಎಂ ಪ್ರಣಾಮ್ ಯೋಜನೆ ಘೋಷಣೆ
1 ಕೋಟಿ ರೈತರಿಗೆ ಸಾವಯವ ಕೃಷಿ ಉತ್ತೇಜನಕ್ಕೆ ಪ್ರೋತ್ಸಾಹ
ಪಿಎಂ ಪ್ರಣಾಮ್ ಯೋಜನೆ ಘೋಷಣೆ
ಪರ್ಯಾಯ ರಸಗೊಬ್ಬರ ತಯಾರಿಕೆಗೆ ಆದ್ಯತೆ
ಜೈವಿಕ ಗೊಬ್ಬರ ತಯಾರಿಕೆಗೆ ‘ಗೋವರ್ಧನ್’ ಯೋಜನೆ
200 ಬಯೋ ಗ್ಯಾಸ್ ಪ್ಲಾಂಟ್ ನಿರ್ಮಾಣ
ಅಂತಾರಾಜ್ಯ ಕಾರಿಡಾರ್ ನಿರ್ಮಾಣಕ್ಕೆ 20700 ಕೋಟಿ ರೂ.
2070ರೊಳಗೆ ಕಾರ್ಬನ್ ಮುಕ್ತನಗರ ನಿರ್ಮಾಣದ ಗುರಿ
ಹಸಿರು ಇಂಧನ ಬಳಕೆಗೆ 35 ಸಾವಿರ ಕೋಟಿ ರೂ.
5ಜಿ ಸೇವೆಗೆ ದೇಶಾದ್ಯಂತ 100 ಸಂಶೋಧನಾ ಕೇಂದ್ರ
11:49 AM
ಸಣ್ಣ ಕೈಗಾರಿಕೆಗಳಿಗೆ ಹಣ ರಿಲೀಸ್
ಶೇ.95ರಷ್ಟು ಮುಟ್ಟುಗೋಲು ಹಾಕಿಕೊಂಡ ಹಣ ಸಣ್ಣ ಕೈಗಾರಿಕೆಗಳಿಗೆ ವಾಪಸ್
‘ವಿವಾದ್ ಸೇ ವಿಶ್ವಾಸ್’ ಯೋಜನೆಯಡಿ ಹಣ ವಾಪಸ್
ವಿವಾದಿತ ಯೋಜನೆಗಳನ್ನು ಬಗೆಹರಿಸಲು ಯೋಜನೆ
ವಿಫಲಗೊಂಡ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕ್ರಮ
11:48 AM
ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ 5,300 ಕೋಟಿ ರೂ. ನೆರವು
ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ನೆರವು ಘೋಷಿಸಿದೆ. ಈ ಭಾಗದ ಅಭಿವೃದ್ಧಿಗೆ ನೆರವು ನೀಡಲು ಬಜೆಟ್ ನಲ್ಲಿ 5,300 ಕೋಟಿ ರೂ. ನೆರವು ಘೋಷಿಸಲಾಗಿದೆ.
11:48 AM
ಬಂಡವಾಳ ವೆಚ್ಚ ಹೆಚ್ಚಳ
ಬಂಡವಾಳ ವೆಚ್ಚದ ಮೇಲೆ ಸರ್ಕಾರ ಈ ಬಾರಿ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಬಂಡವಾಳ ಹೂಡಿಕೆ ವೆಚ್ಚವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶೇ.33ರಷ್ಟು ಹೆಚ್ಚಳ ಮಾಡುವ ಮೂಲಕ 2023-24ನೇ ಸಾಲಿಗೆ 10ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. 2022ನೇ ಸಾಲಿನ ಬಜೆಟ್‌ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನಲ್ಲಿ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಿಸಿದ್ದರು. 2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಲಾಗಿತ್ತು.
11:45 AM
ಉತ್ತರ ಕರ್ನಾಟಕ ನೀರಿನ ಸಮಸ್ಯೆಗೆ ಪರಿಹಾರ
ನಿರೀಕ್ಷೆಯಂತೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಉತ್ತರ ಕರ್ನಾಟಕಕ್ಕೆ ನೀರು ನೀಡಲು ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
11:43 AM
ಕೃತಕ ಬುದ್ಧಿಮತ್ತೆಗೆ ಭಾರತದಲ್ಲೂ ಒತ್ತು
ಭಾರತದಲ್ಲೂ ಕೃತಕ ಬುದ್ಧಿಮತ್ತೆಯನ್ನು ಪ್ರೋತ್ಸಾಹಿಸಲಲು ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದ್ದು, 'Make AI for India' ಮತ್ತು 'Make AI work for India', ಎಂದು ವಿತ್ತ ಸಚಿವೆ ನಿರ್ಮಲಾ ಘೋಷಿಸಿದ್ದಾರೆ.
11:41 AM
ಕೃಷಿ ಸಾಲಕ್ಕೆ ಹೆಚ್ಚು ಹಣ ಮೀಸಲು
*ಕೃಷಿ ಕ್ರೆಡಿಟ್ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ.
*ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
*ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ ಘೋಷಣೆ. ಇದಕ್ಕಾಗಿ 6,000 ಕೋಟಿ ರೂ. ಮೀಸಲು.
*ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ಮಿಲ್ಲೆಟ್ ರಿಸರ್ಚ್ ಗೆ ಹೆಚ್ಚಿನ ಪ್ರೋತ್ಸಾಹ.
*ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಪಿಎಂ ವಿಶ್ವಕರ್ಮ ಕುಶಲ್ ಸಮ್ಮಾನ್ ಯೋಜನೆ.
11:40 AM
ಖಾಸಗಿ ಹೂಡಿಕೆಗೆ ಆದ್ಯತೆ
ಖಾಸಗಿ ಹೂಡಿಕೆಗೆ ನೆರವು ನೀಡಲು ಅಗತ್ಯ ಅನುದಾನ. ಇದು ಕಳೆದ 20 ವರ್ಷಗಳಲ್ಲಿಯೆ ಅತ್ಯಧಿಕ ಆರ್ಥಿಕ ನೆರವು ಘೋಷಣೆ.
11:36 AM
ಪಂಚಾಯತಿ ಮಟ್ಟದಲ್ಲಿ ಲೈಬ್ರರಿ ಸ್ಥಾಪನೆಗೆ ರಾಜ್ಯಕ್ಕೆ ಸಹಕಾರ
ರಾಜ್ಯ ಸರಕಾರಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಗತ್ಯ ಲೈಬ್ರರಿ ಸ್ಥಾಪಿಸಲು ಅಗತ್ಯ ನೆರವು. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಬಳಸಲು ಅಗತ್ಯ ಸಹಕಾರ.
States will be encouraged to set up physical libraries for them at panchayat and ward levels and provide infrastructure for accessing the National Digital Library resources: FM Nirmala Sitharaman pic.twitter.com/hlydoAGEwu
— ANI (@ANI)11:32 AM
ಮೂಲಸೌಕರ್ಯ ಕ್ಷೇತ್ರದಲ್ಲಿ ದಾಖಲೆಯ ಹೂಡಿಕೆ
10 ಲಕ್ಷ ಕೋಟಿ ಮೂಲ ಬಂಡವಾಳ ಹೂಡಿಕೆ. ಭಾರತದ ಇತಿಹಾಸದಲ್ಲಿಯೇ ಅತೀದೊಡ್ಡ ಹೂಡಿಕೆ. ರಾಜ್ಯ ಸರ್ಕಾರಗಳಿಗೆ ಸಾಲ ಸೌಲಭ್ಯ ಇನ್ನೊಂದು ವರ್ಷ ಮುಂದುವರಿಕೆ
11:31 AM
ಏಕಲವ್ಯ ಮಾದರಿ ವಸತಿ ಶಾಲೆಗೆ 18, 800 ಶಿಕ್ಷಕರ ನೇಮಕ
ಸೂಕ್ಷ್ಮ ಬುಡಕಟ್ಟು ಜನಾಂಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ
ಸೂಕ್ಷ್ಮ ಬುಡಕಟ್ಟು ಜನಾಂಗಗಳ ಅಭಿವೃದ್ಧಿ 15 ಸಾವಿರ ಕೋಟಿ ರೂ.
ವಸತಿ, ಕುಡಿಯುವ ನೀರು, ವಿದ್ಯುತ್, ರಸ್ತೆ ಅಭಿವೃದ್ಧಿ
ಈ ಕಾರ್ಯಕ್ರಮದಡಿ ಎರಡು ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದೆರ್ಜೆಗೇರಿಸಲಾಗುವುದು.
11:29 AM
ಕರ್ನಾಟಕಕ್ಕೆ ಬಂಪರ್
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ. ನಿರೀಕ್ಷೆಯಂತೆ ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ ಘೋಷಿಸಿದ ವಿತ್ತ ಸಚಿವೆ. ಉತ್ತರ ಕರ್ನಾಟಕಕ್ಕೆ ಬಂಪರ್ ಯೋಜನೆ ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಕೇಂದ್ರದ ಗಿಫ್ಟ್.
11:29 AM
ಮಕ್ಕಳು, ಯುವಕರಿಗೆ ನ್ಯಾಷನಲ್ ಡಿಜಿಟಲ್ ಲೈಬ್ರರಿ

ಪಂಚಾಯ್ತಿ, ವಾರ್ಡ್ ಮಟ್ಟದಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ
ಕೊರೊನಾ ಸಮಯದ ಓದಿನ ಕೊರತೆ ಸರಿದೂಗಿಸಲು ಕ್ರಮ
ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಪಠ್ಯೇತರ ಪುಸ್ತಕಗಳ ಸರಬರಾಜು
ಮಕ್ಕಳು, ಯುವಕರ ವಯಸ್ಸಿಗೆ ಸೂಕ್ತವಾದಂತೆ ಲೈಬ್ರರಿ ಸ್ಥಾಪನೆಗೆ ಆದ್ಯತೆ
11:28 AM
ಔಷಧ ಉತ್ಪಾದನೆ, ಸಂಶೋಧನೆಗೆ ವಿಶೇಷ ಯೋಜನೆ
ವಿಶ್ವದೆಲ್ಲೆಡೆ ಫಾರ್ಮಸಿ ಕಂಪನಿಗಳ ಹುನ್ನಾರ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಲ್ಲಿಯೇ ಔಷಧ ಉತ್ಪಾದನೆ ಹಾಗೂ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ. ಔಷಧ ಉತ್ಪಾದನಾ ಕೇಂದ್ರದಲ್ಲಿ ಸಂಶೋಧನೆಗೆ ಒತ್ತು ಕೊಡುವ ಯೋಜನೆ ಸರ್ಕಾರಿ ಸ್ವಾಮ್ಯದ ಐಸಿಎಂಆರ್ ಜತೆ ಖಾಸಗಿ ಸಂಶೋಧನಾ ಸಂಸ್ಥೆಗಳ ಒಪ್ಪಂದ ಮಾಡಿಕೊಳ್ಳಲಾಗುವುದು.
11:26 AM
ಸಪ್ತ ಕ್ರಾಂತಿಗೆ ನಾಂದಿ ಹಾಡಿದ ವಿತ್ತ ಸಚಿವೆ
1. ಸಮಗ್ರ ಅಭಿವೃದ್ಧಿ
2. ಹಸಿರು ಕ್ರಾಂತಿ
3. ಮೂಲ ಸೌಕರ್ಯ
4. ಯುವ ಸಬಲೀಕರಣ
5. ಮಹಿಳಾ ಸಬಲೀಕರಣ
6. ಕೃಷಿಯಲ್ಲಿ ಸಾರ್ಟ್ ಅಪ್
7. ದೇಶದ ಸಾಮರ್ಥ್ಯ ಅನಾವರಣ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಮತ್ತೊಮ್ಮೆ ಒತ್ತು ನೀಡಿದ ವಿತ್ತ ಸಚಿವೆ.
11:25 AM
ಮೀನುಗಾರಿಕೆ, ಹೈನುಗಾರಿಕೆಗೆ ಹೆಚ್ಚಿನ ಅನುದಾನ
ಕೃಷಿಕರಿಗೆ ಸಾಲ ಯೋಜನೆಯನ್ನು 20 ಲಕ್ಷ ಕೋಟಿಯವರೆಗೆ ವಿಸ್ತರಿಸಲಾಗುವುದು. ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ. ಕೃಷಿಕರ ಆದಾಯ ಹೆಚ್ಚಿುವಂತ ಯೋಜನೆಗಳಿಗೆ ಮೊದಲ ಆದ್ಯತೆ.
11:22 AM
ವೈದ್ಯ ಶಿಕ್ಷಣಕ್ಕೆ ಹೆಚ್ಚಿನ ಅನುದಾನ
ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು. ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ. 157 ಹೊಸ ನರ್ಸಿಂಗ್ ಕಾಲೇಜು. 2014 ರಿಂದ ಸ್ಥಾಪಿತಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಸರ್ಕಾರದ ಘೋಷಣೆ.
11:20 AM
ನಿರೀಕ್ಷೆಯಂತೆ 400 ಹೊಸ ವಂದೇ ಭಾರತ್ ರೈಲು ಘೋಷಣೆ
*400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗೋದು. ಈ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗೋದು.
*100 ಹೊಸ ಕಾರ್ಗೋ ಟರ್ಮಿನಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗೋದು.
*ಹೊಸ ಮೆಟ್ರೋ ರೈಲು ವ್ಯವಸ್ಥೆಗೆ ಹೊಸ ಹೂಡಿಕೆಯನ್ನು ಪ್ರೋತ್ಸಾಹಿಸಲಾಗೋದು .
11:19 AM
7 ಆದ್ಯತಾ ಪಟ್ಟಿ ವಿವರಿಸಿದ ಸಚಿವೆ ನಿರ್ಮಲಾ
1. ಎಲ್ಲರನ್ನು ಒಳಗೊಂಡ ಸಮಗ್ರ ಬೆಳವಣಿಗೆ
ರೈತರು, ಮಹಿಳೆಯರು, ಎಸ್ಸಿ/ ಎಸ್ಟಿ, ದಿವ್ಯಾಂಗರು
ಹಿಂದುಳಿದವರು ಸೇರಿ ವಂಚಿತರಿಗೆ ಮೊದಲ ಆದ್ಯತೆ
2. ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ
ರೈತರಿಗೆ ಬೆಳೆ ಯೋಜನೆಗೆ ಸೂಕ್ತ ಮಾಹಿತಿ ನೀಡುವುದು
ಸಾಲ ಸೌಲಭ್ಯ ಡಿಜಿಟಲೀಕರಣ
ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯ
ಕೃಷಿ ಆಧಾರಿತ ಸಾರ್ಟ್ ಅಪ್ಗಳಿಗೆ ಪ್ರತ್ಯೇಕ ಅನುದಾನ
ರೈತರಿಗೆ ಸಮಸ್ಯೆ ಪರಿಹರಿಸಲು ಕೆಲಸ ಮಾಡುವ ಸಾರ್ಟ್ಅಪ್ಗಳಿಗೆ ನೆರವು
3. ಹಸಿರು ಅಭಿವೃದ್ಧಿಗೆ ಅತಿಹೆಚ್ಚಿನ ಆದ್ಯತೆ
ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು
4. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶ
ಪ್ರವಾಸೋದ್ಯಮದ ಪ್ರೋತ್ಸಾಹದ ಸರ್ಕಾರದ ಪ್ರಮುಖ ಆದ್ಯತೆ
An Agriculture Accelerator Fund will be set up to encourage agri-startups by young entrepreneurs: Finance Minister Nirmala Sitharaman pic.twitter.com/0Q7gWu4IOt
— ANI (@ANI)11:17 AM
ಪ್ರಸಕ್ತ ಸಾಲಿನ ಆರ್ಥಿಕ ಬೆಳವಣಿಗೆ ದರ ಶೇ.7
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರ ಶೇ.7. ಈ ಹಿಂದಿನ ಬಜೆಟ್ ಬುನಾದಿ ಮೇಲೆ ಈ ಬಜೆಟ್ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆ ಸರಿಯಾದ ದಾರಿಯಲ್ಲಿದೆ. ಸುಧಾರಣಾ ಕ್ರಮಗಳ ಪರಿಣಾಮವಾಗಿ ಈ ಕಷ್ಟಕರ ಸಮಯದಲ್ಲಿ ಸರಿಯಾದ ಮಾರ್ಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
11:16 AM
ಕೃಷಿಕರಿಗೆ ವಿಶೇಷ ಮನ್ನಣೆ
ಕೃಷಿಗೆ ಡಿಜಿಟಲ್ ಸೌಕರ್ಯ, ಕೃಷಿ ಆಧಾರಿತ ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರಿಗೆ ಹೆಚ್ಚು ಒತ್ತು. ಗ್ರೀನ್ ಆರ್ಥಿಕ ವಲಯಕ್ಕೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಸ್ಮಾರ್ಟ್ ಅಪ್‌ಗಳಿಗೆ ವಿಶೇಷ ಆರ್ಥಿಕ ನೆರವು ನೀಡಲು ವಿಶೇಷ ಅನುದಾನ.
11:13 AM
ಹಳ್ಳಿ ಹೆಣ್ಣು ಮಕ್ಕಳಿಗೆ ದೀನ್ ದಯಾಳ್ ಉಪಾಧ್ಯ ಯೋಜನೆ
ದೇಶದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಸೂಕ್ತ ವಾತಾವರಣ ಕಲ್ಪಿಸಲಾಗಿದೆ. ಸ್ವಾತಂತ್ರ್ಯದ ಶತಮಾನದ ವೇಳೆಗೆ ಹೆಣ್ಣು ಮಕ್ಕಳ ಆರ್ಥಿಕತೆ ಸುಧಾರಣೆಗಾಗಿ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕತೆ ಸುಧಾರಿಸಿದ ದೀನ್ ದಯಾಳ್ ಉಪಾಧ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
11:13 AM
ಕುಶಲಕರ್ಮಿಗಳಿಗೆ ಮಣೆ
ದೊಡ್ಡ ಗಾತ್ರದ ಉತ್ಪಾದನಾ ಸಂಸ್ಥೆಗಳನ್ನು ಹುಟ್ಟುಹಾಕಲಾಗುತ್ತಿದೆ
ಕುಶಲ ಕರ್ಮಿಗಳಿಗಾಗಿ ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ
ಕುಶಲಕರ್ಮಿಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ
ಗುಣಮಟ್ಟದ, ಹೆಚ್ಚಿನ ಸಂಖ್ಯೆಯ ಕರಕುಶಲ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ
ಎಸ್ಸಿ/ ಎಸ್ಟಿ, ಹಿಂದುಳಿದ ವರ್ಗಗಳಿಗೆ ಹೆಚ್ಚು ಸಹಾಯಕ
11:11 AM
ಶಿಸ್ತುಬದ್ಧ ಹಣಕಾಸು ಯೋಜನೆ
ಹಣಕಾಸು ಈಗ ಅತಿಹೆಚ್ಚು ಶಿಸ್ತುಬದ್ಧವಾಗಿದೆ
ಭಾರತದ ಉತ್ತಮ ಆಡಳಿತ ದೇಶ ಎಂಬ ಮನ್ನಣೆ ಗಳಿಸಿದೆ
ಅನೇಕ ಯೋಜನೆಗಳು ಎಲ್ಲರನ್ನು ಒಳಗೊಂಡು ಅಭಿವೃದ್ಧಿಯಾಗಿದೆ
ಸ್ವಚ್ಚಭಾರತ ಯೋಜನೆ ಅತ್ಯಂತ ಯಶ್ವಸಿ
ಉಜ್ವಲ ಯೋಜನೆಯಡಿ 9.6 ಕೋಟಿ ಗ್ಯಾಸ್ ಸಂಪರ್ಕ
120 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ
ಕಿಸಾನ್ ಸಮ್ಮಾನ್ ಯೋಜನೆಯಡಿ
11. 4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ಹಣ ವಿತರಣೆ
11:10 AM
ವಿಶ್ವಕ್ಕೆ ದಾರಿ ತೋರುವ ಭಾರತೀಯ ಆರ್ಥಿಕತೆ
ಜಿ20ಯ ಅಧ್ಯಕ್ಷ ಸ್ಥಾನ ಸಿಕ್ಕ ಬಳಿಕ ಭಾರತೀಯ ಆರ್ಥಿಕತೆಯ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದ್ದು, ಈ ಬಜೆಟ್ ದೇಶದ ಆರ್ಥಕತೆಯ ದಿಕ್ಕನ್ನು ಮಾತ್ರವಲ್ಲ, ವಿಶ್ವದ ಆರ್ಥಿಕ ದಿಕ್ಕನ್ನೇ ಬದಲಿಸಲಿದೆ.
In these times of global challenges, India’s G20 presidency gives us a unique opportunity to strengthen India’s role in the world economic order: Finance Minister Nirmala Sitharaman pic.twitter.com/TVHIpRyjDD
— ANI (@ANI)
11:07 AM
ಅಂತ್ಯೋದಯ ಕಾರ್ಡ್‌ದಾರರಿಗೆ ಉಚಿತ ಆಹಾರ ಧಾನ್ಯ
ಮುಂದಿನ ಒಂದು ವರ್ಷ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಅಹಾರ ಧಾನ್ಯವನ್ನು ಕೇಂದ್ರ ಸರ್ಕಾರ ನೀಡಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಇದನ್ನು ಜನರಿಗೆ ನೀಡಲಿದ್ದೇವೆ.28 ತಿಂಗಳು ಉಚಿತ ಪಡಿತರ ನೀಡಿದ್ದೇವೆ. ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯಡಿ ಉಚಿತ . 2 ಲಕ್ಷ ಕೋಟಿ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು
ವಿಶ್ವದ ಹಣಕಾಸು ವ್ಯವಸ್ಥೆಯಲ್ಲಿ ಭಾರತದ ಪಾತ್ರ ದೊಡ್ಡದು. 2014ರಿಂದ ಸರ್ಕಾರದ ಪ್ರಯತ್ನ ಜನರಿಗೆ ಉತ್ತಮ ಜೀವನ ಮಟ್ಟ ನೀಡಿದೆ. ಕಳೆದ 9 ವರ್ಷದಲ್ಲಿ ಭಾರತದ ಹಣಕಾಸು ಗಣನೀಯವಾಗಿ ಬೆಳೆದಿದೆ. ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಆರ್ಥಿಕತೆ ಆಗಿದ್ದೇವೆ.
11:05 AM
ಎಲ್ಲ ಹಿಂದುಳಿದ ವರ್ಗಗಳಿಗೂ ಸಿಗುವಂತೆ ಬಜೆಟ್ ಇದು
ಇದು ಅಮೃತಕಾಲದ ಮೊದಲ ಬಜೆಟ್ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ದೇಶದ ಪ್ರಗತಿಯ ಹಣ್ಣುಗಳು ದೇಶದ ಎಲ್ಲಾ ವರ್ಗದವರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧ ಮಾಡಲಾಗಿದೆ.
11:04 AM
ಅಮೃತ್ ಕಾಲದ ಮೊದಲ ಬಜೆಟ್
ಜಾಗತಿಕವಾಗಿ ಭಾರತದ ಆರ್ಥಿಕತೆ ಉತ್ತುಂಗಕ್ಕೇರುತ್ತಿರುವ ಈ ಸಂದರ್ಭದಲ್ಲಿ, ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತದ ಆರ್ಥಿಕ ನೀಲಿನಕ್ಷೆಯುಳ್ಳ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಸಚಿವೆ.
11:02 AM
ಬಜೆಟ್ ಮಂಡಿಸಲು ಆರಂಭಿಸಿದ ನಿರ್ಮಲಾ
2023-24ನೇ ಕೇಂದ್ರ ಆಯವ್ಯವವನ್ನ ಮಂಡಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಆರಂಭಿಸಿದ್ದು, ಮಹಿಳೆ, ಕೃಷಿಕರು, ವಿದ್ಯಾರ್ಥಗಳು, ಓಬಿಸಿ, ಎಸ್ ಸಿ ಹಾಗೂ ಎಸ್ಟಿ ಕಮ್ಯೂನಿಟಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ ಎನ್ನುವ ಮೂಲಕ ಬಜೆಟ್ ಮಂಡನೆ ಆರಂಭಿಸಿದ್ದಾರೆ.
10:57 AM
ನಿರ್ಮಲಾ ಬಜೆಟ್ ಮಂಡನೆಗೆ ಒಪ್ಪಿಗೆ ಸೂಚಿಸಿದ ಕ್ಯಾಬಿನೆಟ್
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ
ಕ್ಯಾಬಿನೆಟ್‌ನಿಂದಲೂ ಒಪ್ಪಿಗೆ ಪಡೆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
8 ವರ್ಷಗಳ ಬಳಿಕ ಆದಾಯ ತೆರಿಗೆದಾರರಿಗೆ ಸಿಗುತ್ತಾ ಗುಡ್ ನ್ಯೂಸ್
11 ಗಂಟೆಗೆ ದೇಶದ 75ನೇ ಬಜೆಟ್ ಮಂಡನೆ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
10:51 AM
ಆರೋಗ್ಯ ಕ್ಷೇತ್ರಕ್ಕೆ ನಿರ್ಮಲಾ ಕೊಡುತ್ತಾರಾ ಟಾನಿಕ್?
ದೇಶದ ಜೀವನಾಡಿಯಾದ ಕೃಷಿ ವಲಯಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಅಂಶಗಳನ್ನು ಬಜೆಟ್ ಒಳಗೊಂಡಿರಲಿದೆ ಎನ್ನಲಾಗಿದೆ. ಕೃಷಿಕರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನ ಆಧರಿತ ವಲಯಕ್ಕೆ ಸರ್ಕಾರ ಹೊಸ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಸಾಲದ ನೆರವನ್ನು ಹೆಚ್ಚಿಸುವ ಸಾಧ್ಯತೆ ನಿಚ್ಚಲವಾಗಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ದೇಶ ಎದುರಿಸಿದ ಸಂಕಷ್ಟಮುಂದೆ ಎದುರಾಗದಂತೆ ತಡೆಯಲು ದೇಶದ ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆ ಇದೆ.

10:43 AM
ಬಜೆಟ್ ಮಂಡಿಸಲು ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
10:42 AM
Budget 2023: ಸೆನ್ಸೆಕ್ಸ್ 60 ಸಾವಿರದ ಗಡಿಗೆ, 17,750 ಅಂಕ ದಾಟಿದ ನಿಫ್ಟಿ-50!
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಭಾರತದ ಷೇರುಮಾರುಕಟ್ಟೆ ಹಸಿರು ಹಾದಿ ಹಿಡಿದಿದೆ. ಸೆನ್ಸೆಕ್ಸ್ 457 ಅಂಕಗಳ ಜಿಗಿತ ಕಂಡಿದ್ದರೆ, ನಿಫ್ಟಿ-50 ಪಟ್ಟಿ 17750 ಅಂಕಗಳ ಗಡಿ ದಾಟಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
10:26 AM
ಡಬಲ್ ಎಂಜಿನ್ ಸರಕಾರದಿಂದ ಡಬಲ್ ನಿರೀಕ್ಷೆಗಳು!
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದದ್ದು, ಸಹಜವಾಗಿಯೇ ಕೇಂದ್ರ ಬಜೆಟ್‌ನಿಂದ ರಾಜ್ಯ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅವುಗಳಲ್ಲಿ ಕೆಲವು ಇವು.
- ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ
- ಹೈದರಾಬಾದ್ ಕರ್ನಾಟಕದ ಭಾಗಕ್ಕೆ ಏಮ್ಸ್ ಮಾದರಿ ಆಸ್ಪತ್ರೆ
- ರಾಜ್ಯಕ್ಕೆ ನಿರ್ಮಲಾರಿಂದ ಹೊಸ ರೈಲು ಹಾಗೂ ಮಾರ್ಗಗಳ ನಿರೀಕ್ಷೆ ಇದೆ.
- ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ
- ಮರದಾ-ಬೇಡ್ತಿ ನದಿ ಜೋಡನೆ ಯೋಜನೆ ಆಗುತ್ತಾ ಜಾರಿ?
- ರಾಜ್ಯದ ಮತ್ತಷ್ಟು ರಸ್ತೆಗಳು ವಿಸ್ರರಣೆಯಾಗುವ ನಿರೀಕ್ಷೆ ಇದೆ.
- ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗುತ್ತಾ ಘೋಷಣೆ?
- ಈಗಾಗಲೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿರುವ ಸ್ಮಾರ್ಟ್ ಸಿಟಿ ಯೋಜನೆ, ಮತ್ತಷ್ಟು ಜಿಲ್ಲೆಗಳಿಗೆ ವಿಸ್ತಾರಣೆಯಾಗುತ್ತಾ?
-
10:02 AM
ಪೇಪರ್‌ಲೆಸ್ ಬಜೆಟ್: ಆ್ಯಪ್‌ನಲ್ಲೇ ಪ್ರತಿ ಲಭ್ಯ
ಬುಧವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ ಕಾಗದ ರಹಿತ ಆಗಲಿದೆ. ಬಜೆಟ್‌ನ ಸಂಪೂರ್ಣ ಮಾಹಿತಿಯು ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ (Union Budget Mobile App) ಎಂಬ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಲ್ಲಿ ಕಾಗದರಹಿತವಾಗಿಯೇ ಬಜೆಟ್ ಮಂಡಿಸಲಿದ್ದಾರೆ. ಈ ನಿಮಿತ್ತ ಬಿಡುಗಡೆ ಮಾಡಲಾಗಿರುವ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಜೆಟ್‌ನ ಮುಖ್ಯಾಂಶಗಳು, ಬಜೆಟ್ ಭಾಷಣ, ಹಾಗೂ ವಾರ್ಷಿಕ ಹಣಕಾಸು ವರದಿ ಸೇರಿದಂತೆ ಸವಿವರವಾದ ಮಾಹಿತಿ ಪಡೆಯಬಹುದಾಗಿದೆ.
ಈ ಹಿಂದಿನ ಎರಡು ಬಜೆಟ್‌ಗಳನ್ನು ಕೂಡ ಕಾಗದ ರಹಿತ ಅಥವಾ ಆನ್‌ಲೈನ್ ಮೂಲಕವೇ ಪ್ರಸ್ತುತ ಪಡಿಸಲಾಗಿತ್ತು.
9:46 AM
ರಾಷ್ಟ್ರಪತಿ ಭಾಷಣ, ಬಜೆಟ್ ಮಂಡನೆ ಮಹಿಳೆಯರಿಂದ ಇದೇ ಮೊದಲು
ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಇದೇ ಮೊದಲ ಬಾರಿ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಹಾಗೂ ಬಜೆಟ್ ಮಂಡನೆ ಮಹಿಳೆಯರಿಂದ ಆಗುತ್ತಿದೆ. ಭಾರತದ 2ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಬಜೆಟ್ ಜಂಟಿ ಸದನ ಉದ್ದೇಶಿಸಿ ಮಂಗಳವಾರ ಭಾಷಣ ಮಾಡಿದ್ದಾರೆ. ಇನ್ನು ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಇನ್ನೇನು ಕೆಲವೇ ಗಂಟೆಗಳಲ್ಲಿ ಬಜೆಟ್ ಮಂಡಿಸಲಿದ್ದಾರೆ.
9:18 AM
ಚುನಾವಣಾ ರಾಜ್ಯ ಕರ್ನಾಟಕಕ್ಕೆ ಬಂಪರ್?
ಈ ವರ್ಷದ ಮೇನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಹಜವಾಗಿಯೇ ಕರ್ನಾಟಕ್ಕೆ ಈ ಬಾರಿಯ ಬಜೆಟ್‌ಲ್ಲಿ ವಿಶೇಷ ಒತ್ತು ನೀಡುವುದು ಖಚಿತ. ಕೇಂದ್ರದಿಂದ ಎಲೆಕ್ಷನ್ ಪ್ಯಾಕೇಜ್ ಸಿಗುವ ನಿರೀಕ್ಷೆ ಇದ್ದು, ಡಬಲ್ ಇಂಜಿನ್ ಸಂದೇ ಶ ನೀಡಲು ಕೇಂದ್ರ ಯತ್ನಿಸಲಿದೆ. ವಿಶೇಷ ಪ್ಯಾಕೇಜ್ ಮೂಲಕ ಮತ ಸೆಳೆಯಲು ತಂತ್ರ ರೂಪಿಸುವ ಸಾಧ್ಯತೆ ಇದ್ದು, ಅಭಿವೃದ್ಧಿ ಮಂತ್ರ ದ ಮೂಲಕ ವಿಪಕ್ಷಗಳಿಗೆ ಕಡಿವಾಣ ಹಾಕೋದು ಖಚಿತ. ಎಲೆಕ್ಷನ್ ರಾಜ್ಯಕ್ಕೆ ಭಾರೀ ಅನುದಾನ ಘೋಷಣೆ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಬಜೆಟ್‌ನತ್ತು ಕರ್ನಾಟಕ ಜನರ ಚಿತ್ತ ಹೆಚ್ಚಾಗಿದೆ.
ಅಧಿಕಾರದ ಗುರಿ ತಲುಪಲು ಬಜೆಟ್ ಮೂಲಕ ಬುನಾದಿ ಹಾಕು ನಿರೀಕ್ಷೆ ಇದೆ.
9:10 AM
ರಾಷ್ಟ್ರಪತಿ ಭೇಟಿಯಾಗಲು ಬಂದ ನಿರ್ಮಲಾ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬಜೆಟ್ ಪ್ರತಿ ನೀಡಿದ ನಂತರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ನಂತರ ಸಂಸತ್ತಿನಲ್ಲಿ ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ.
Delhi | Finance Minister Nirmala Sitharaman reaches Rashtrapati Bhavan to call on President Murmu
FM will then attend the Union Cabinet meeting, and then present Union Budget 2023-24. pic.twitter.com/hHDSZU7g3j
9:05 AM
ತೆರಿಗೆ ಪರಿಷ್ಕರಣೆ, ಆರೋಗ್ಯ ವಲಯಕ್ಕೆ ಒತ್ತು?
ಸಚಿವೆ ನಿರ್ಮಲಾ ತಮ್ಮ ಹೊಸ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬಹುದೊಡ್ಡ ಬೇಡಿಕೆಯಾದ ಆದಾಯ ಮಿತಿ ತೆರಿಗೆ ಮಿತಿಯನ್ನು ಇನ್ನಷ್ಟುಹೆಚ್ಚಿಸಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಸೆಕ್ಷನ್ 80ಸಿ ಮತ್ತು 80ಡಿ ನೀಡುವ ವಿನಾಯ್ತಿಗಳನ್ನು ವಿಸ್ತರಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಜೊತೆಗೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್ ಟಮ್‌ರ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹಿಂಪಡೆವ ಸಾಧ್ಯತೆ ಇದೆ. ಇನ್ನು ಕಾರ್ಪೊರೆಟ್ ವಲಯ ಮತ್ತು ಜನಸಾಮಾನ್ಯರು ಕೋವಿಡ್ ನಿರ್ವಹಣೆಗೆ ಮಾಡಿದ ವೆಚ್ಚವನ್ನು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಬಹುದೆಂಬ ದೊಡ್ಡ ಆಶಾಭಾವನೆ ಇದೆ.
8:52 AM
ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ನಿರ್ಮಲಾ
ಬಜೆಟ್ ಮಂಡನೆ ಹಿನ್ನೆಲೆ ಸಚಿವೆ ನಿರ್ಮಲಾ ಸೀತಾರಾಮನ್ ನಾತ್೯ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯಕ್ಕೆ ಆಗಮಿಸಿದರು. ನಿರ್ಮಲಾ ಇಂದು 5ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಹಳೇ ಸಂಸತ್ ಭವನದಲ್ಲಿ ಮಂಡನೆಯಾಗುತ್ತಿರುವ ಕೊನೆಯ ಬಜೆಟ್ ಇದಾಗಿದ್ದು, ಸಾರ್ವತ್ರಿಕ ಚುನಾವಣೆಗೂ (2024) ಮುನ್ನ ಮಂಡನೆಯಾಗುತ್ತಿರುವ ಪೂರ್ಣಪ್ರಮಾಣದ ಬಜೆಟ್ ಇದು. ಆರ್ಥಿಕ ಹಿಂಜರಿತಕ್ಕೆ ಹೊಸ ಟಾನಿಕ್ ನೀಡುವ ಜೊತೆಗೆ, ಆತ್ಮನಿರ್ಭರಕ್ಕೆ ಹೆಚ್ಚು ಒತ್ತು ನೀಡುವ ನಿರೀಕ್ಷೆ ಇದೆ. ವಿಶ್ವದಲ್ಲಿ ಆರ್ಥಿಕತೆ ಹಿಂಜರಿತ ಹಿನ್ನಲೆ, ಅದರ ದುಷ್ಪರಿಣಾಮ ತಪ್ಪಿಸಲು ಮೇಕ್ ಇನ್ ಇಂಡಿಯಾಗೆ ಒತ್ತು ಕೊಡುವ ಸಾಧ್ಯತೆ ಇದೆ.
8:42 AM
ಬಜೆಟ್ ಮಂಡನೆಗೆ ಕ್ಷಣಗಣನೆ, ಶ್ರೀಸಾಮಾನ್ಯನ ನಿರೀಕ್ಷೆಗಳು ಏನೇನಿವೆ?
ಇನ್ನೇನು ಕೆಲವೇ ಹೊತ್ತಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಭಾಷಣ ಆರಂಭಿಸಲಿದ್ದಾರೆ.. ಜನಸಾಮಾನ್ಯರಿಗೇನು ನಿರೀಕ್ಷೆಗಳಿವೆ? ಯಾವ್ಯಾವ ಕ್ಷೇತ್ರಕ್ಕೆ ಏನೇನು ಸಿಗಬಹುದು? ಕರ್ನಾಟಕ ಏನು ನಿರೀಕ್ಷಿಸುತ್ತಿದೆ?
8:33 AM
ನಿರ್ಮಲಾ ಸೀತಾರಾಮನ್ 5ನೇ ಬಜೆಟ್ ಮಂಡನೆಗೆ ಕೌಂಟ್ಡೌನ್
ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿರುವ ಭಾರತದ ಆರ್ಥಿಕತೆಗೆ ಈ ಬಾರಿಯ ಕೇಂದ್ರದ ಬಜೆಟ್ ಹೊಸ ವೇಗ ನೀಡಲಿದೆ ಅನ್ನೋ ನಿರೀಕ್ಷೆ ಇದೆ. ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಬಂಪರ್ ಕೂಡುಗೆ ನೀಡುವ ನಿರೀಕ್ಷೆಗಳಿವೆ.
8:11 AM
ಬಜೆಟ್ ಹೇಗೆ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್ ಮಂಡಿಸುವುದಕ್ಕೂ ಮುನ್ನ ಸಾಕಷ್ಟುಪೂರ್ವ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಮಾರು 6 ತಿಂಗಳ ಮುನ್ನವೇ ಬಜೆಟ್ ತಯಾರಿಯ ಪ್ರಕ್ರಿಯೆ ಶುರುವಾಗುತ್ತದೆ. ಇಲ್ಲಿದೆ ಬಜೆಟ್ ತಯಾರಾಗುವ ಪ್ರಕ್ರಿಯೆ...
7:53 AM
ಭಾರತದ ಭವಿಷ್ಯ ಬದಲಿಸಿದ 10 ಬಜೆಟ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?
ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಕೇಂದ್ರ ಆಯವ್ಯಯ ಎಂದರೆ ಇಡೀ ದೇಶದ ಅಭಿವೃದ್ಧಿಯ ಮಾರ್ಗಸೂಚಿ. ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಚಹರೆ ಬದಲಿಸಿದ ಪ್ರಮುಖ ಬಜೆಟ್‌ಗಳ ಕಿರು ಪರಿಚಯ ಇಲ್ಲಿದೆ.
7:35 AM
ಭಾರತದ ಬಜೆಟ್ ವಿಶ್ವಕ್ಕೇ ಆಶಾಕಿರಣ : ಪ್ರಧಾನಿ ಮೋದಿ
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಮತ್ತು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಲಿರುವ ಬಜೆಟ್ ಜನರ ಭರವಸೆ, ಆಕಾಂಕ್ಷೆಗಳನ್ನು ಈಡೇರಿಸಲು ಶ್ರಮಿಸುತ್ತದೆ ಮತ್ತು ಜಗತ್ತು ಭಾರತದತ್ತ ನೋಡುತ್ತಿರುವ ಭರವಸೆಯನ್ನು ಹೆಚ್ಚಿಸುತ್ತದೆ ಎಂದರು.
11:24 PM
ಭಾರತದ ಮೊದಲ ಬಜೆಟ್ ಮಂಡಿಸಿದ್ದು ಬ್ರಿಟೀಷ್ ಅಧಿಕಾರಿ!
ಭಾರತದ ಮೊದಲ ಬಜೆಟ್ ಮಂಡಿಸಿದ್ದು 1860ರ ಏ.7ರಂದು. ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ನಾಯಕ ಮತ್ತು ಆರ್ಥಿಕ ತಜ್ಞನಾಗಿದ್ದ ಸ್ಕಾಟ್ಲೆಂಡ್ ಮೂಲದ ಜೇಮ್ಸ್ ವಿಲ್ಸನ್ ಭಾರತದ ಮೊದಲ ಮಂಡಿಸಿದರು.
11:20 PM
ಮೋದಿ 2.0 ಸರ್ಕಾರದ ಕೊನೆಯ ಸಂಪೂರ್ಣ ಬಜೆಟ್, ಕಳೆದೆರಡು ವರ್ಷದಂತೆ ಪೇಪರ್‌ಲೆಸ್
2024ರ ಎಪ್ರಿಲ್ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಮೋದಿ 2.0 ಸರ್ಕಾರ ಮಂಡಿಸುತ್ತಿರುವ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ. ಕಳೆದೆರಡು ವರ್ಷದಂತೆ ಈ ಬಾರಿಯೂ ಪೇಪರ್‌ಲೆಸ್ ಬಜೆಟ್ ಮಂಡನೆಯಾಗಲಿದೆ. ಗೃಹ ಸಾಲದ ಮೇಲಿನ ಬಡ್ಡಿ ಕಡಿತ, ಆಮದು ಸುಂಕ ಕಡಿತ, ಆದಾಯ ತೆರಿಗೆಯಲ್ಲಿ ವಿನಾಯಿತಿ ಸೇರಿದಂತೆ ಹಲವು ಸಲಹೆಗಳನ್ನು ಉದ್ಯಮ ಕ್ಷೇತ್ರದ ದಿಗ್ಗಜರು, ಆರ್ಥಿಕ ತಜ್ಞರು ನೀಡಿದ್ದರು. ಇದೀಗ ಈ ಬಜೆಟ್ ಮೇಲೆ ನೀರಕ್ಷೆಗಳು ಹೆಚ್ಚಾಗಿದೆ.
10:27 PM
ಬಜೆಟ್ ತಂಡದ ಜೊತೆ ನಿರ್ಮಲಾ ಸೀತಾರಾಮನ್ ಫೋಟೋ!
ಕೇಂದ್ರದ ರಾಜ್ಯ ಹಣಕಾಸು ಸಚಿವ ಪಂಕಚ್ ಚೌಧರಿ ಹಾಗೂ ಡಾ.ಭಾಗವತ್ ಕಿಶನ್‌ರಾವ್, ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ, CBDT ಮುಖ್ಯಸ್ಥ ನಿತಿನ್ ಗುಪ್ತಾ ಸೇರಿದಂತೆ ಕೇಂದ್ರ ಬಜೆಟ್ ತಂಡದ ಜೊತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೋಟೋಗೆ ಫೋಸ್ ನೀಡಿದ್ದಾರೆ.
Hon'ble Finance Minister Smt , MoS (F) Sh & MoS (F) Sh with the CBDT Budget team on Budget eve.
Secretary, Revenue, Sh Sanjay Malhotra, Chairman, CBDT Sh Nitin Gupta & Member, CBDT Smt Pragya Saxena are also present.
pic.twitter.com/q3HOhOLe46
10:15 PM
ಆಹಾರೋತ್ಪಾದನೆಯಲ್ಲಿ ದಾಖಲೆ, 315.7 ದಶಲಕ್ಷ ಟನ್‌ಗೆ ಉತ್ಪಾದನೆ ಏರಿಕೆ
ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ 2021 -22 ಸಾಲಿನ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಆಹಾರೋತ್ಪಾದನೆ 315.7 ದಶಲಕ್ಷ ಟನ್‌ಗೆ ಏರಿಕೆಯಾಗಿರುವುದಾಗಿ ಉಲ್ಲೇಖಿಸಿದ್ದಾರೆ. 2022 – 23ನೇ ಸಾಲಿನ ಮೊದಲ ಅಂದಾಜು ಪ್ರಕಾರ ದೇಶದಲ್ಲಿ 149.9 ದಶಲಕ್ಷ ಟನ್ ಆಹಾರ ಧಾನ್ಯಗಳು ಉತ್ಪಾದನೆಯಾಗುವ ನಿರೀಕ್ಷೆಯಿದೆ.
10:10 PM
ಉತ್ತಮ ಬಜೆಟ್ ನಿರೀಕ್ಷೆ, ಮಧ್ಯಮ ವರ್ಗಕ್ಕೆ ಸಿಗುತ್ತಾ ಬಂಪರ್?
ಬೆಲೆ ಏರಿಕೆ ಬಿಸಿ, ಆದಾಯ ಕುಂಠಿತ, ಉದ್ಯೋಗ ನಷ್ಟಕ್ಕೆ ಈ ಬಾರಿಯ ಬಜೆಟ್ ಪರಿಹಾರವಾಗಲಿದೆ ಅನ್ನೋ ಚರ್ಚೆ ಜೋರಾಗಿದೆ. ಇದರ ನಡುವೆ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ಸೇರಿದಂತೆ ಹಲವು ಅನೂಕೂಗಳ ಸಿಗುವ ನಿರೀಕ್ಷೆಗಳು ಹೆಚ್ಚಾಗಿದೆ.
10:40 PM IST:
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಸದಾಯಕವಾಗಿದೆ. ರಾಜಸ್ಥಾನ ಜನರು ಹಲವು ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದರು. ಆದರೆ ಮೋದಿ ಸರ್ಕಾರ ಎಲ್ಲರಿಗೂ ತಣ್ಣೀರೆರಚಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
9:05 PM IST:
ಬಂಡವಾಳ ಹೂಡಿಕೆ, ಕುಡಿಯುವ ನೀರಿನ ಯೋಜನೆ, ಗ್ರಾಮೀಣ ವಸತಿಗಳ ಹೆಚ್ಚಳ ಸೇರಿದಂತೆ ಹಲವು ಉತ್ತಮ ಅಂಶಗಳನ್ನು ಬಜೆಟ್ ಹೊಂದಿದೆ. ಈ ಬಜೆಟ್ ಉತ್ತಮ ಸಾಮಾಜಿಕ ಪರಿಣಾಮ ಬೀರಲಿದೆ: ಒಡಿಶಾ ಸಿಎಂ ನವೀನ್ ಪಟ್ನಾಯಕ್
8:10 PM IST:
ಕೇಂದ್ರ ಮಂಡಿಸಿದ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಎಲ್ಲಾ ವರ್ಗದಕ್ಕೆ ಕೊಡುಗೆ ಜೊತೆಗೆ ಆರ್ಥಿಕ ಸಬಲೀಕರಣದತ್ತ ಸಾಗಲು ಈ ಬಜೆಟ್ ಅತ್ಯಂತ ಮುಖ್ಯವಾಗಿದೆ. ಈ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ
7:38 PM IST:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಿದ್ದಾರೆ. 86 ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮುಗಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ 124 ಬಾರಿ ಮೇಜು ತಟ್ಟಿ ಅಭಿನಂದಿಸಿದ್ದಾರೆ.
6:58 PM IST:
ಟಿಡಿಎಸ್ ಗರಿಷ್ಠ ಮಿತಿಯನ್ನು 3 ಕೋಟಿ ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ. ಪಿಎಸಿಎಸ್ ಮತ್ತು ಪಿಸಿಆರ್‌ಡಿಬಿಗಳಿಂದ ನಗದು ಠೇವಣಿ ವಲಯದಲ್ಲಿ ಮಾಡಿದ ಬದಲಾವಣೆಯಿಂದ ಸಕ್ಕರೆ ಸಹಕಾರಿ ಸಂಘಗಳ ಕಾರ್ಖಾನೆಗಳಿಗೆ ಸರಿಸುಮಾರು 10,000 ಕೋಟಿ ರೂಪಾಯಿ ಪರಿಹಾರ ಪಡೆಯಲಿದೆ. ಇದು ಮಹತ್ವದ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
6:44 PM IST:
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಯಾವುದೇ ಕ್ರಮ ಇಲ್ಲ. ಹಣದುಬ್ಬ ಹಾಗೂ ಅಸಮಾನತೆ ಹೋಗಲಾಡಿಸಲು ಯಾವುದೇ ಯೋಜನೆಗಳಿಲ್ಲ. ದೇಶದ 1 ಶೇಕಡಾ ಶ್ರೀಮಂತರ ಶೇಕಡಾ 40 ರಷ್ಟು ಸಂಪತ್ತು ಹೊಂದಿದ್ದರೆ, ಶೇಕಡಾ 50 ರಷ್ಟು ಬಡವರು ಶೇಕಡಾ 64ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಶೇಕಡಾ 42 ರಷ್ಟು ಯುವ ಸಮೂಹ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.
‘Mitr Kaal’ Budget has:
NO vision to create Jobs
NO plan to tackle Mehngai
NO intent to stem Inequality
1% richest own 40% wealth, 50% poorest pay 64% of GST, 42% youth are unemployed- yet, PM doesn’t Care!
This Budget proves Govt has NO roadmap to build India’s future.
6:39 PM IST:
ಕೇಂದ್ರ ಬಿಜೆಪಿ ಮಹತ್ವದ ಬಜೆಟ್ ಮಂಡಿಸಿದೆ. ಆರ್ಥಿಕ ಹಿಂಜರಿತ, ಕೋವಿಡ್ ಸಂಕಷ್ಟದಿಂದ ಹೊರಬಂದು ಮೈಕೊಡವಿ ನಿಂತಿರುವ ಭಾರತದ ಅಭಿವೃದ್ಧಿ ವೇಗ ಹೆಚ್ಚಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ವಿಪಕ್ಷ ನಾಯಕರು ಇದು ಪೊಳ್ಳು ಬಜೆಟ್ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Union Budget 2023: ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!
6:38 PM IST:
ದೇಶದ ಆರ್ಥಿಕ ಮಂಡಿಸಿರುವ ಬಜೆಟ್‌ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ. ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಮಾಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Union Budget :ರೈತರ ಗೊಬ್ಬರಕ್ಕೆ 50 ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ
6:21 PM IST:
ದೇಶದಲ್ಲಿನ ಸಾವಿರಾರು ಕುಶಲಕರ್ಮಿಗಳು ಹಾಗೂ ಕರಕುಶಲತೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಲ್ಲಿ ಪಿಎಂ ವಿಕಾಸ್ ಯೋಜನೆ ಜಾರಿ ಮಾಡಲಾಗಿದೆ. ಪಿಎಂ ವಿಕಾಸ್ ಯೋಜನೆಯ ಮೂಲಕ ವಿಶ್ವಕರ್ಮರು ಭಾರತದ ಪ್ರಗತಿಯಲ್ಲಿ ಸೇರಿಕೊಳ್ಳುವುದಲ್ಲದೆ ದೇಶದ ಬೆಳವಣಿಗೆ ಪ್ರಬಲ ಜನಾಂಗವಾಗಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
Budget 2023: ವಿಶ್ವಕರ್ಮರ ಬೆನ್ನಿಗೆ ನಿಂತ ಮೋದಿ, ವಿಕಾಸಕ್ಕೆ ಆದಿ!
4:48 PM IST:
2023-24ನೇ ಸಾಲಿನ ಬಜೆಟ್ ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಉತ್ತೇಜಿಸಲು ಹೆಚ್ಚಿನ ಬಡ್ಡಿದರ ನೀಡುವ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.
Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ
4:32 PM IST:
2022ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಈ ಮೊತ್ತದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ವಾರ್ಷಿಕ ₹ 10,000 ಕೋಟಿ ವಿನಿಯೋಗಿಸುವ ಮೂಲಕ ಎಲ್ಲರಿಗೂ ಕೈಗೆಟುಕುವ ವಸತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದೆ.
Budget 2023: ಪ್ರತಿಯೊಬ್ಬನಿಗೂ ಸೂರು, ಆವಾಸ್ ಯೋಜನೆಗೆ ಹಣ ಜೋರು!
4:19 PM IST:
ಈ ಬಾರಿಯ ಬಜೆಟ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಇಷ್ಟೇ ಅಲ್ಲ ಲಿಥಿಂಯ ಹಾಗೂ ಐಯಾನ್ ಬ್ಯಾಟರಿ ಮೇಲಿನ ಸುಂಕ ಕಡಿತಗೊಳಿಸಿರುವ ಕಾರಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಇದರ ಜೊತೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿರುವ ಕೊಡುಗೆ ಏನು? ಇಲ್ಲಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:41 PM IST:
ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.93 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:29 PM IST:
ಸಾಮಾನ್ಯವಾಗಿ ಬಜೆಟ್ ಭಾಷಣದಲ್ಲಿ ತೆರಿಗೆ, ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಅನ್ನೋ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ತೆರಿಗೆದಾರರಿಗೆ ದೊಡ್ಡ ರಿಲೀಫ್ ನೀಡಿರುವ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಗರಿಷ್ಠ ಬಾರಿ ಬಳಕೆ ಮಾಡಿರುವ ಪದ 'ಟ್ಯಾಕ್ಸ್'!
ನಿರ್ಮಲ ಬಜೆಟ್‌ನಲ್ಲಿ ಗರಿಷ್ಠ ಬಾರಿ ಬಳಕೆ ಮಾಡಿದ ಪದ 'ಟ್ಯಾಕ್ಸ್'!
3:28 PM IST:
ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.94 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
Defence Budget 2023: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!
3:21 PM IST:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮೋದಿ ಸರ್ಕಾರ ಈ ಹಿಂದಿನಿಂದಲೂ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ. ಅದರಂತೆ ಈ ಬಾರಿಯ ಬಜೆಟ್ ನಲ್ಲಿ ಕೂಡ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
3:19 PM IST:
ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಸಂತೃಪ್ತಿಪಡಿಸುವ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಪ್ರಸಕ್ತ 2023-24ನೇ ಸಾಲಿನ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸರ್ವಸ್ಪರ್ಶಿ ಹಾಗೂ ಸರ್ವರನ್ನೊಳಗೊಂಡ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ಇದು ಭವಿಷ್ಯದ ಬಜೆಟ್ ಎಂದು ನಿರಾಣಿ ಬಣ್ಣಿಸಿದ್ದಾರೆ. ಈವರೆಗೂ ಇದ್ದ ರೂ. 5 ಲಕ್ಷವರೆಗಿನ ಆದಾಯ ತೆರಿಗೆ ಮಿತಿಯನ್ನು ರೂ. 7 ಲಕ್ಷದವರೆಗೆ ಹೆಚ್ಚಿಸಿರುವುದು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ದೇಶವಾಸಿಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಇಟ್ಟುಕೊಂಡಿರುವ ಕಳಕಳಿ ಎಂದು ಹೇಳಿದ್ದಾರೆ.
2:40 PM IST:
ಚಿಕ್ಕಮಗಳೂರು: ಬಜೆಟ್ ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ. ಯುವ ಸಮುದಾಯ,ಮೂಲ ಸೌಕರ್ಯ , ಪರಿಸರ ಸ್ನೇಹಿ ಬಜೆಟ್ ಇದು. ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ. ದೂರದೃಷ್ಟಿ,ದೇಶದ ಹಿತದೃಷ್ಟಿಯುಳ್ಳ ಬಜೆಟ್. ಬಡವರ ಸ್ನೇಹಿ ಆಗಿರುವ ಬಜೆಟ್ ,9 ಬಜೆಟ್ ಗಳಂತೆ ಈ ಭಾರೀ ಬಜೆಟ್ ಕೂಡ ದೂರದೃಷ್ಟಿ, ದೇಶದ ಹಿತಕಾಯುವ ನಿಟ್ಟಿನಲ್ಲಿರುವ ಬಜೆಟ್. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಹಣಕಾಸಿನ ಖಾತೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಿ.ಟಿ ರವಿ.
.
2:01 PM IST:
ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ತೆರಿಗೆದಾರರಿಗೆ ಬಂಪರ್ ಕೊಡುಗೆ ಘೋಷಿಸಿದರೆ, ಆಮದು ಸುಂಕ, ರಫ್ತು ಸುಂಕದಲ್ಲಿ ಕೆಲ ಬದಲಾವಣೆಗಳಾಗಿವೆ. ಇಷ್ಟೇ ಅಲ್ಲ ಸಿಗರೇಟು ತಂಬಾಕು ದುಬಾರಿಯಾಗಿದ್ದರೆ, ಮೊಬೈಲ್ ಫೋನ್, ಸ್ಥಳೀಯ ಮತ್ಸ ಉತ್ಪನ್ನಗಳು ಅಗ್ಗವಾಗಿದೆ. ಬಜೆಟ್ ಬಳಿಕ ಯಾವುದೇ ದುಬಾರಿ? ಯಾವುದು ಅಗ್ಗ ಇಲ್ಲಿದೆ ಸಂಪೂರ್ಣ ವಿವರ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1:49 PM IST:
ಎಲ್ಲಾ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ತನ್ನ ರಾಜಧಾನಿಯಲ್ಲಿ ಅಥವಾ ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯುನಿಟಿ ಮಾಲ್‌ಅನ್ನು ಸ್ಥಾಪನೆ ಮಾಡುವುದಾಗಿ ಬಜೆಟ್ ಅಲ್ಲಿ ತಿಳಿಸಿದೆ.
Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
1:31 PM IST:
1:31 PM IST:
1:26 PM IST:
ರಾಜ್ಯಗಳಿಗೆ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
1:07 PM IST:
ಅಡುಗೆ ಮನೆಯ ಚಿಮಣಿ ಆಮದು ಸುಂಕ ಏರಿಕೆ
ಚಿಮಣಿ ಆಮದು ಸುಂಕ ಶೇ.7 ರಿಂದ 13ಕ್ಕೆ ಏರಿಕೆ
ಆಯ್ದ ಆಮದು ಸುಂಕದಲ್ಲಿ ಭಾರೀ ಇಳಿಕೆ
ಶೇ.21 ರಿಂದ ಶೇ.13ಕ್ಕೆ ಆಮದು ಸುಂಕ ಇಳಿಕೆ
ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕ ಇಳಿಕೆ
ಜವಳಿ, ವಿದ್ಯುತ್ ವಾಹನಗಳ ಬ್ಯಾಟರಿ
ಮೊಬೈಲ್ ಕ್ಯಾಮರಾ ಲೆನ್ಸ್, ಆಟದ ಸಾಮಾನುಗಳು
ಸೈಕಲ್, ಟಿವಿ ಬಿಡಿಭಾಗಗಳು, ಗ್ಲಿಸರಿನ್, ನೈಸರ್ಗಿಕ ಅನಿಲ್ ಆಮದು ಸುಂಕ ಇಳಿಕೆ
ಮೊಬೈಲ್, ಕ್ಯಾಮರಾ ಲೆನ್ಸ್ ಅಗ್ಗ
1:01 PM IST:
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಒತ್ತು ನೀಡುವಂಥ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ಗೆ ಅಭಿನಂದನೆಗಳು. ಭಾರತ ವಿಶ್ವ ಗುರುವಾಗುವತ್ತ ಗಮನ ಹರಿಸಲು ಮುಂದಿನ 25 ವರ್ಷಗಳ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಈ ಬಜೆಟ್ ಸಹಕಾರಿ ಎಂದ ಸಿ.ಟಿ.ರವಿ
Heartiest Congratulations to Finance Minister Smt for presenting the that addresses the needs of every Bharatiya.
This budget truly embraces the Sabka Saath Sabka Vikas vision outlined by PM Shri towards making Bharat the Vishwa Guru.
12:59 PM IST:
ಮಧ್ಯಮ ವರ್ಗಕ್ಕೆ ಈ ಬಾರಿಯ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಂದ 7 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೂಡುಗೆ ನೀಡಲಾಗಿದೆ.
1:04 PM IST:
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿಕೆ. ಜನಪರ, ರೈತರ ಬಜೆಟ್ ಇದು. ಕೃಷಿಕರಿಗೆ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಕೂಲಿ ಕಾರ್ಮಿಕರಿಗೆ ತಲುಪುವಂಥ ಬಜೆಟ್. ಮೂಲಸೌಕರ್ಯ ಅಭಿವೃದ್ಧಿ ವೆಚ್ಚ 35% ಹೆಚ್ಚಳ ಮಾಡಿದ್ದಾರೆ. ಇದರಿಂದ ಬಂಡವಾಳ ಮತ್ತು ಉದ್ಯೋಗವಕಾಶ ಸೃಷ್ಟಿ. ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಅನುದಾನ ಕೊಟ್ಟಿದ್ದಾರೆ. ಪಿಎಂ ಆವಾಜ್ ಯೋಜನೆಗೆ 79 ಸಾವಿರ ಕೋಟಿ ಕೊಟ್ಟಿದ್ದು ಸಂತೋಷ.
ಇದು ಪೀಪಲ್ ಫ್ರೆಂಡ್ಲಿ ಬಜೆಟ್. ಕೃಷಿ, ಕೂಲಿ ಕಾರ್ಮಿಕರು, ಕಟ್ಟ ಕಡೆಯ ವ್ಯಕ್ತಿಗೆ ಅನುಕೂಲ ಆಗಿದೆ. ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. 7.5 ಲಕ್ಷ ಕೋಟಿ ಇದ್ದಿದ್ದನ್ನು, 10 ಲಕ್ಷ ಕೋಟಿಗೆ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಮತ್ತು ಉದ್ಯೋಗ ಸಿಗಲಿದೆ. ಅಪ್ಪರ್ ಭದ್ರಾ ಯೋಜನೆಗ 5,300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 79 ಸಾವಿರ ಕೋಟಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹಣ ಬಿಡುಗಡೆಯಾಗಿದೆ. ಏಕಲವ್ಯ ಶಾಲೆ ಮೂಲಕ ಶಿಕ್ಷಕರ ನೇಮಕ, ಶಾಲೆ ತೆರೆಯುವುದು. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಉತ್ತೇಜನ. ಸ್ಟಾರ್ಟಪ್ ಯೋಜನೆಗೆ ಹೆಚ್ಚು ಉತ್ತೇಜನ.
ನಿರ್ಮಲಾ ಸೀತಾರಾಮನ್ ಮಂಡಿಸಿರೋ ಬಜೆಟ್ ಅನ್ನ ಬಿಜೆಪಿ ಸ್ವಾಗತಿಸಲಿದೆ.
12:41 PM IST:
12 ಲಕ್ಷ ರೂ. ಆದಾಯಕ್ಕಿಂತ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂ. ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ. 7 ಲಕ್ಷದವರೆಗೂ ತೆರಿಗೆ ಮಿತಿ ಇದೆ. ಟ್ಯಾಕ್ಸ್ ಸ್ಲ್ಯಾಬ್ ಈ ರೀತಿ ಇದೆ.
12:30 PM IST:
ರೈಲ್ವೇಸ್‌ಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ದಾಖಲೆಯ 2.40 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದೆ. ಇದು 2013-14ರ ಬಜೆಟ್‌ಗೆ ಹೋಲಿಸಿದರೆ, 9 ಪಟ್ಟು ಅಧಿಕ ಹಣವಾಗಿದೆ.
12:27 PM IST:
*ಎನ್ ಪಿಎಸ್ ಮೇಲಿನ ಹೂಡಿಕೆಗೆ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ
*ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪ್ರೋತ್ಸಾಹ ಪಡೆಯುವ ಅವಧಿ 2023ರ ಮಾರ್ಚ್ ತನಕ ವಿಸ್ತರಣೆ
*ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ
*ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.1ರಷ್ಟು ಟಿಡಿಎಸ್
12:24 PM IST:
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿ ಘೋಷಿಸಿದ ನಿರ್ಮಲಾ, ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.
12:22 PM IST:
ಅಡುಗೆ ಮನೆಯಲ್ಲಿ ಬಳಸುವ ಚಿಮ್ನಿಗಳಿನ್ನು ಅಗ್ಗವಾಗಲಿದೆ. ಸಿಗರೇಟ್ ಸೇದುವವರು ಮತ್ತಷ್ಟು ಹೆಚ್ಚಿನ ಹಣ ವ್ಯಯಿಸಬೇಕಾಗೋದು ಅನಿವಾರ್ಯ.
12:21 PM IST:
ಪ್ರದಾನಿ ಕಿಸಾನ್ ಯೋಜನೆಯಡಿಯಲ್ಲಿ ಕೃಷಿಕರಿಗೆ 2.2 ಲಕ್ಷ ಕೋಟ ಿರೂ. ಹಣ ವರ್ಗಾಯಿಸಲಾಗುವುದು. ಮೋದಿ ನೇತೃತ್ವದ 2ನೇ ಸರಕಾರದ ಕಡೆಯ ಪೂರ್ಣವಧಿ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್ ಕೃಷಿಕರಿಗೆ ಅನುಕೂಲವಾಗುವಂಥ ಯೋಜನೆಗೆ ಮತ್ತಷ್ಟು ಆದ್ಯತೆ ನೀಡಿದ್ದಾರೆ. ಆ ಮೂಲಕ ಜ್ಞಾನಾಧಾರಿತ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
12:17 PM IST:
ಹಾವೇರಿ: ಬ್ಯಾಡಗಿ ತಾಲೂಕು ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಮಾದ್ಯಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿದ್ದಾರೆ. ಇದನ್ನು ಸ್ವಾಗತಿಸುವೆ. ಬರಗಾಲ ಪೀಡಿತ ಬಿಸಿಲು ಪ್ರದೇಶದ ನಾಡಿಗೆ ನೀರಾವರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಈ ಯೋಜನೆ ಬಹಳ ಪ್ರಮುಖವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುನಾದ ಘೋಷಣೆ ಮಾಡಿದ್ದು ಸಂತಸದ ಸಂಗತಿ
12:14 PM IST:
ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಜಾರಿ
2 ವರ್ಷದ ಅವಧಿಯ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ
ಠೇವಣಿ ಇಡುವ ಮಹಿಳೆಯರಿಗೆ ಶೇ.7.5ರಷ್ಟು ಬಡ್ಡಿ ಯೋಜನೆ
12:13 PM IST:
ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ
ಸಣ್ಣ ಕೈಗಾರಿಕೆಗಳಿಗೆ 9 ಸಾವಿರ ಕೋಟಿ ರೂ.ವರೆಗೂ ಸಾಲ ಸೌಲಭ್ಯ
ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ದರ ಶೇ.1ರಷ್ಟು ಇಳಿಕೆ
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ 9 ಸಾವಿರ ಕೋಟಿ ಸಾಲ
12:11 PM IST:
ಹಳೆ ವಾಹನಗಳ ಬದಲಾವಣೆಗೆ ಹೊಸ ನೀತಿ ಜಾರಿ
ವಾಯುಮಾಲಿನ್ಯ ಉಂಟು ಮಾಡುವ ವಾಹನಗಳ ಬದಲಾವಣೆ
2022ರ ಗುಜರಿ ನೀತಿಯಂತೆ ಸರ್ಕಾರಿ ವಾಹನಗಳ ಬದಲಾವಣೆ
ಮಾಲಿನ್ಯಕಾರಿ ವಾಹನಗಳ ಬದಲಾವಣೆಗೆ ಅನುದಾನ
ಸರ್ಕಾರಿ ಹೊಸ ವಾಹನ ಖರೀದಿಗೆ ಕೇಂದ್ರದಿಂದ ಅನುದಾನ
12:11 PM IST:
ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ 4-0 ಘೋಷಣೆ
3 ವರ್ಷದಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯಾಧಾರಿತ ಉದ್ಯೋಗ
ಯೋಜನೆಯಡಿ ಹೊಸ ಕೋರ್ಸ್‌ಗಳ ಪರಿಚಯ
ಐಒಪಿ, 3-ಡಿ ಪ್ರಿಂಟಿಂಗ್, ಡ್ರೋಣ್ ಕೋರ್ಸ್‌ಗಳಿಗೆ ಆದ್ಯತೆ
ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಜತೆ ಒಪ್ಪಂದ
ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿ
30 ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
12:10 PM IST:
ರಸ್ತೆ, ಮೂಲಭೂತ ಸೌಕರ್ಯ, ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಕ್ರಮ
47 ಲಕ್ಷ ಯುವಕರಿಗೆ ಕಲಿಕಾ ವೇತನ ನೀಡಲು ಕ್ರಮ
ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್
ಪ್ರವಾಸಿಗರಿಗೆಂದೇ ಹೊಸ ಆ್ಯಪ್
ಪ್ರವಾಸದ ಮಾಹಿತಿ ನೀಡುವ ಹೊಸ ಆ್ಯಪ್
‘ದೇಖೋ ಅಪ್ನಾ ದೇಶ್’ ಹೆಸರಿನ ಹೊಸ ಯೋಜನೆ ಘೋಷಣೆ
ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲು ಒತ್ತು
12:08 PM IST:
ದೇಶದಲ್ಲಿ ಹೊಸದಾಗಿ 50 ಏರ್ಪೋರ್ಟ್ಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ಅನುದಾನ.
ಮ್ಯಾನ್ ಹೋಲ್ಗಳಲ್ಲಿ ಮಾನವರು ಇಳಿಯದಂತೆ ಯಂತ್ರಗಳ ಬಳಕೆಗೆ ಹೆಚ್ಚಿನ ಅನುದಾನ
ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ
7 ಸಾವಿರ ಕೋಟಿ ಅನುದಾನದಲ್ಲಿ ಇ-ಕೋರ್ಟ್ಗಳ ಸ್ಥಾಪನೆ
ಇಡೀ ದೇಶಾದ್ಯಂತ 30 ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
2030 ರ ವೇಳೆಗೆ 5 MMT ಹಸಿರು ಹೈಡ್ರೋಜನ್ ಉತ್ಪಾದನೆ
ಈ ಗುರಿಯನ್ನು ಸಾಧಿಸಲು 35,000 ಕೋಟಿ ರೂ.ಗಳನ್ನು ನಿಗದಿ
ಭಾರತವು 2070ರ ವೇಳೆಗೆ ಕಾರ್ಬನ್ ಫ್ರೀ ಆಗಲಿದೆ
ಮಾಲಿನ್ಯ ಹೆಚ್ಚಿಸುವ ವಾಹನಗಳು ಗುಜರಿಗೆ ಸೇರಲಿವೆ
ದೇಶದಲ್ಲಿ ಹಸಿರು ಪರಿಸರ ಅಭಿವೃದ್ಧಿಗೆ ಹೆಚ್ವಿನ ಆಧ್ಯತೆ
12:06 PM IST:
ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 19,700 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹಸಿರು ಜಲಜನಕ ಯೋಜನೆ ಕಡಿಮೆ ಇಂಗಾಲದ ಸಾಂದ್ರತೆಯ ಆರ್ಥಿಕತೆಯ ನಿರ್ಮಾಣಕ್ಕೆ ನೆರವು ನೀಡಲಿದೆ. ಅಲ್ಲದೆ, ಜೈವಿಕ ಇಂಧನಗಳ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ. 2030ರ ವೇಳೆಗೆ 5 ಎಂಎಂಟಿ ವಾರ್ಷಿಕ ಉತ್ಪಾದನೆ ಗುರಿಯನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ಬಜೆಟ್‌ನಲ್ಲಿ ಇಂಧನ ಮಾರ್ಪಡಿಗೆ ಹಾಗೂ ನಿವ್ವಳ ಶೂನ್ಯ ಗುರಿ ತಲುಪಲು ಹಾಗೂ ಇಂಧನ ಭದ್ರತೆಗೆ 35,000 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ.
12:05 PM IST:
ಹಿರಿಯ ನಾಗರಿಕರು ಠೇವಣಿ ಮೊತ್ತ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ. ಆ ಮೂಲಕ ಹಿರಿಯ ನಾಗರಿಕರ ಸೇವಿಂಗ್ಸ್ ಕಡೆ ನಿರ್ಮಲಾ ಗಮನ ಹರಿಸಿದ್ದಾರೆ.
12:02 PM IST:
ನೀರಾವರಿ ಸಚಿವ ಗೋವಿಂದ ಕಾರಜೋಳ ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಭದ್ರಾ ಮೇಲ್ದಂಡೆ ಗೆ 5,300 ಕೋಟಿ ಅನುದಾನ ನೀಡಲಾಗಿದೆ. ಈ ಅನುದಾನವನ್ನ ಬರ ಪೀಡಿತ ಪ್ರದೇಶಗಳಿಗೆ ಕೃಷಿಕರಿಗೆ ಕುಡಿಯುವ ನೀರೀನ ಯೋಜನೆಗಳಿಗೆ ಬಳಿಸಲು ಆರ್ಥಿಕ ನೆರವಾಯ್ತು. ದೇಶದ ಇತಿಹಾಸದಲ್ಲೇ ರಾಷ್ಟ್ರೀಯ ಯೋಜನೆ ಅಂತ ಇಷ್ಟು ದೊಡ್ಡ ಅನುದಾನ ಕೊಟ್ಟಿರಲಿಲ್ಲ. ಈಗ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಅನುದಾನ ನೀಡಿರುವುದಕ್ಕೆ ಧನ್ಯವಾದಗಳು ತಿಳಿಸುತ್ತೇನೆ, ಎಂದಿದ್ದಾರೆ.
ಸಿಎಂ ಟ್ವೀಟ್
ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳೆಂದು ಸಿಎಂ ಹರ್ಷ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
11:58 AM IST:
ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 50 ವರ್ಷಗಳ ಬಡ್ಡಿರಹಿತ ಸಾಲ ಸೌಲಭ್ಯವನ್ನು ಇನ್ನೂ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಅಲ್ಲದೇ, ಬಂಡವಾಳ ವೆಚ್ಚದ ಉದ್ದೇಶದಿಂದ ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡುತ್ತಿದ್ದ ಈ ಸಾಲಕ್ಕೆ ಮೀಸಲಿಡುವ ಅನುದಾನವನ್ನು 1.3 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದು 2022-23ನೇ ಆರ್ಥಿಕ ಸಾಲಿನಲ್ಲಿ ಮೀಸಲಿಟ್ಟ ಅನುದಾನಕ್ಕಿಂತ ಶೇ.30ರಷ್ಟು ಹೆಚ್ಚು. ಈ ಬಡ್ಡಿರಹಿತ ಸಾಲಕ್ಕೆ ಭಾರೀ ಬೇಡಿಕೆಯಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ತಿಳಿಸಿದ್ದರು.
11:57 AM IST:
ಈ ಸಾಲಿನ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಇಂಧನ ಕ್ಷೇತ್ರಕ್ಕೆ ನಿರ್ಮಲಾ ಆದ್ಯತೆ ನೀಡಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ ಹಾಗೂ ಬದಲಿ ಇಂದನ ಬಳಕೆಗೆ ಈಗಾಗಲೆ ಹೇಚ್ಚು ಒತ್ತು ನೀಡುತ್ತಿರುವ ಮೋದಿ ಸರಕಾರ ಈಗಲೂ ಗ್ರೀನ್ ಎನರ್ಜಿ ಅಭಿವೃದ್ಧಿ ಗೆ 19,700 ಕೋಟಿ ರೂ ನಿಗದಿಗೊಳಿಸಿದೆ
11:55 AM IST:
ಕೇಂದ್ರ ಬಜೆಟ್ ವಿಚಾರ ಅರಗ ಜ್ಞಾನೇಂದ್ರ ಹೇಳಿಕೆ. ಕೇಂದ್ರ ಬಜೆಟ್ ದೇಶಕ್ಕೆ ಪೂರಕವಾಗಿ ಬರಲಿದೆ. ಇತ್ತೀಚಿಗೆ ಮೋದಿ ಅವರ ನೇತೃತ್ವದಲ್ಲಿ ಇಡೀ ಜಗತ್ತು ನಮ್ಮ ಕಡೆ ತಿರುಗಿ ನೋಡುವಷ್ಟು ಬೆಳೆವಣಿಗೆ ಆಗಿದೆ. ಅ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ಜನಕ್ಕೆ ಉಪಯೋಗವಾಗುವ ಅನೇಕ ಕಾರ್ಯಕ್ರಮ ಘೋಷಣೆ ಮಾಡ್ತಾರೆ. ಇತ್ತೀಚೆಗೆ GST-CST ಉತ್ತಮವಾಗಿ ಸಂಗ್ರಹ ಆಗ್ತಿದೆ. ಆರ್ಥಿಕ ಶಿಸ್ತಿನ್ನು ಸ್ವಾತಂತ್ರ್ಯ ಇತಿಹಾಸದಲ್ಲೆ ಮೊದಲು ಬಾರಿ ಅಳವಡಿಕೆ ಮಾಡಿಕೊಂಡಿಕೊಂಡಿದ್ದಾರೆ. ಅತ್ಯಂತ ಒಳ್ಳೆಯ ಬಜೆಟ್ ನಿರೀಕ್ಷೆ ಮಾಡ್ತೀವಿ.
11:54 AM IST:
1 ಕೋಟಿ ರೈತರಿಗೆ ಸಾವಯವ ಕೃಷಿ ಉತ್ತೇಜನಕ್ಕೆ ಪ್ರೋತ್ಸಾಹ
ಪಿಎಂ ಪ್ರಣಾಮ್ ಯೋಜನೆ ಘೋಷಣೆ
ಪರ್ಯಾಯ ರಸಗೊಬ್ಬರ ತಯಾರಿಕೆಗೆ ಆದ್ಯತೆ
ಜೈವಿಕ ಗೊಬ್ಬರ ತಯಾರಿಕೆಗೆ ‘ಗೋವರ್ಧನ್’ ಯೋಜನೆ
200 ಬಯೋ ಗ್ಯಾಸ್ ಪ್ಲಾಂಟ್ ನಿರ್ಮಾಣ
ಅಂತಾರಾಜ್ಯ ಕಾರಿಡಾರ್ ನಿರ್ಮಾಣಕ್ಕೆ 20700 ಕೋಟಿ ರೂ.
2070ರೊಳಗೆ ಕಾರ್ಬನ್ ಮುಕ್ತನಗರ ನಿರ್ಮಾಣದ ಗುರಿ
ಹಸಿರು ಇಂಧನ ಬಳಕೆಗೆ 35 ಸಾವಿರ ಕೋಟಿ ರೂ.
5ಜಿ ಸೇವೆಗೆ ದೇಶಾದ್ಯಂತ 100 ಸಂಶೋಧನಾ ಕೇಂದ್ರ
11:49 AM IST:
ಶೇ.95ರಷ್ಟು ಮುಟ್ಟುಗೋಲು ಹಾಕಿಕೊಂಡ ಹಣ ಸಣ್ಣ ಕೈಗಾರಿಕೆಗಳಿಗೆ ವಾಪಸ್
‘ವಿವಾದ್ ಸೇ ವಿಶ್ವಾಸ್’ ಯೋಜನೆಯಡಿ ಹಣ ವಾಪಸ್
ವಿವಾದಿತ ಯೋಜನೆಗಳನ್ನು ಬಗೆಹರಿಸಲು ಯೋಜನೆ
ವಿಫಲಗೊಂಡ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕ್ರಮ
11:48 AM IST:
ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ನೆರವು ಘೋಷಿಸಿದೆ. ಈ ಭಾಗದ ಅಭಿವೃದ್ಧಿಗೆ ನೆರವು ನೀಡಲು ಬಜೆಟ್ ನಲ್ಲಿ 5,300 ಕೋಟಿ ರೂ. ನೆರವು ಘೋಷಿಸಲಾಗಿದೆ.
11:48 AM IST:
ಬಂಡವಾಳ ವೆಚ್ಚದ ಮೇಲೆ ಸರ್ಕಾರ ಈ ಬಾರಿ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಬಂಡವಾಳ ಹೂಡಿಕೆ ವೆಚ್ಚವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶೇ.33ರಷ್ಟು ಹೆಚ್ಚಳ ಮಾಡುವ ಮೂಲಕ 2023-24ನೇ ಸಾಲಿಗೆ 10ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. 2022ನೇ ಸಾಲಿನ ಬಜೆಟ್‌ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನಲ್ಲಿ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಿಸಿದ್ದರು. 2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಲಾಗಿತ್ತು.
11:45 AM IST:
ನಿರೀಕ್ಷೆಯಂತೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಉತ್ತರ ಕರ್ನಾಟಕಕ್ಕೆ ನೀರು ನೀಡಲು ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
11:43 AM IST:
ಭಾರತದಲ್ಲೂ ಕೃತಕ ಬುದ್ಧಿಮತ್ತೆಯನ್ನು ಪ್ರೋತ್ಸಾಹಿಸಲಲು ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದ್ದು, 'Make AI for India' ಮತ್ತು 'Make AI work for India', ಎಂದು ವಿತ್ತ ಸಚಿವೆ ನಿರ್ಮಲಾ ಘೋಷಿಸಿದ್ದಾರೆ.
11:41 AM IST:
*ಕೃಷಿ ಕ್ರೆಡಿಟ್ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ.
*ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
*ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ ಘೋಷಣೆ. ಇದಕ್ಕಾಗಿ 6,000 ಕೋಟಿ ರೂ. ಮೀಸಲು.
*ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ಮಿಲ್ಲೆಟ್ ರಿಸರ್ಚ್ ಗೆ ಹೆಚ್ಚಿನ ಪ್ರೋತ್ಸಾಹ.
*ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಪಿಎಂ ವಿಶ್ವಕರ್ಮ ಕುಶಲ್ ಸಮ್ಮಾನ್ ಯೋಜನೆ.
11:40 AM IST:
ಖಾಸಗಿ ಹೂಡಿಕೆಗೆ ನೆರವು ನೀಡಲು ಅಗತ್ಯ ಅನುದಾನ. ಇದು ಕಳೆದ 20 ವರ್ಷಗಳಲ್ಲಿಯೆ ಅತ್ಯಧಿಕ ಆರ್ಥಿಕ ನೆರವು ಘೋಷಣೆ.
11:36 AM IST:
ರಾಜ್ಯ ಸರಕಾರಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಗತ್ಯ ಲೈಬ್ರರಿ ಸ್ಥಾಪಿಸಲು ಅಗತ್ಯ ನೆರವು. ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಬಳಸಲು ಅಗತ್ಯ ಸಹಕಾರ.
States will be encouraged to set up physical libraries for them at panchayat and ward levels and provide infrastructure for accessing the National Digital Library resources: FM Nirmala Sitharaman pic.twitter.com/hlydoAGEwu
— ANI (@ANI)11:32 AM IST:
10 ಲಕ್ಷ ಕೋಟಿ ಮೂಲ ಬಂಡವಾಳ ಹೂಡಿಕೆ. ಭಾರತದ ಇತಿಹಾಸದಲ್ಲಿಯೇ ಅತೀದೊಡ್ಡ ಹೂಡಿಕೆ. ರಾಜ್ಯ ಸರ್ಕಾರಗಳಿಗೆ ಸಾಲ ಸೌಲಭ್ಯ ಇನ್ನೊಂದು ವರ್ಷ ಮುಂದುವರಿಕೆ
11:31 AM IST:
ಸೂಕ್ಷ್ಮ ಬುಡಕಟ್ಟು ಜನಾಂಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ
ಸೂಕ್ಷ್ಮ ಬುಡಕಟ್ಟು ಜನಾಂಗಗಳ ಅಭಿವೃದ್ಧಿ 15 ಸಾವಿರ ಕೋಟಿ ರೂ.
ವಸತಿ, ಕುಡಿಯುವ ನೀರು, ವಿದ್ಯುತ್, ರಸ್ತೆ ಅಭಿವೃದ್ಧಿ
ಈ ಕಾರ್ಯಕ್ರಮದಡಿ ಎರಡು ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದೆರ್ಜೆಗೇರಿಸಲಾಗುವುದು.
11:30 AM IST:
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ. ನಿರೀಕ್ಷೆಯಂತೆ ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ ಘೋಷಿಸಿದ ವಿತ್ತ ಸಚಿವೆ. ಉತ್ತರ ಕರ್ನಾಟಕಕ್ಕೆ ಬಂಪರ್ ಯೋಜನೆ ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಕೇಂದ್ರದ ಗಿಫ್ಟ್.
11:29 AM IST:
ಮಕ್ಕಳು, ಯುವಕರಿಗೆ ನ್ಯಾಷನಲ್ ಡಿಜಿಟಲ್ ಲೈಬ್ರರಿ
ಪಂಚಾಯ್ತಿ, ವಾರ್ಡ್ ಮಟ್ಟದಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ
ಕೊರೊನಾ ಸಮಯದ ಓದಿನ ಕೊರತೆ ಸರಿದೂಗಿಸಲು ಕ್ರಮ
ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಪಠ್ಯೇತರ ಪುಸ್ತಕಗಳ ಸರಬರಾಜು
ಮಕ್ಕಳು, ಯುವಕರ ವಯಸ್ಸಿಗೆ ಸೂಕ್ತವಾದಂತೆ ಲೈಬ್ರರಿ ಸ್ಥಾಪನೆಗೆ ಆದ್ಯತೆ
11:28 AM IST:
ವಿಶ್ವದೆಲ್ಲೆಡೆ ಫಾರ್ಮಸಿ ಕಂಪನಿಗಳ ಹುನ್ನಾರ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಲ್ಲಿಯೇ ಔಷಧ ಉತ್ಪಾದನೆ ಹಾಗೂ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ. ಔಷಧ ಉತ್ಪಾದನಾ ಕೇಂದ್ರದಲ್ಲಿ ಸಂಶೋಧನೆಗೆ ಒತ್ತು ಕೊಡುವ ಯೋಜನೆ ಸರ್ಕಾರಿ ಸ್ವಾಮ್ಯದ ಐಸಿಎಂಆರ್ ಜತೆ ಖಾಸಗಿ ಸಂಶೋಧನಾ ಸಂಸ್ಥೆಗಳ ಒಪ್ಪಂದ ಮಾಡಿಕೊಳ್ಳಲಾಗುವುದು.
11:26 AM IST:
1. ಸಮಗ್ರ ಅಭಿವೃದ್ಧಿ
2. ಹಸಿರು ಕ್ರಾಂತಿ
3. ಮೂಲ ಸೌಕರ್ಯ
4. ಯುವ ಸಬಲೀಕರಣ
5. ಮಹಿಳಾ ಸಬಲೀಕರಣ
6. ಕೃಷಿಯಲ್ಲಿ ಸಾರ್ಟ್ ಅಪ್
7. ದೇಶದ ಸಾಮರ್ಥ್ಯ ಅನಾವರಣ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಮತ್ತೊಮ್ಮೆ ಒತ್ತು ನೀಡಿದ ವಿತ್ತ ಸಚಿವೆ.
11:25 AM IST:
ಕೃಷಿಕರಿಗೆ ಸಾಲ ಯೋಜನೆಯನ್ನು 20 ಲಕ್ಷ ಕೋಟಿಯವರೆಗೆ ವಿಸ್ತರಿಸಲಾಗುವುದು. ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ. ಕೃಷಿಕರ ಆದಾಯ ಹೆಚ್ಚಿುವಂತ ಯೋಜನೆಗಳಿಗೆ ಮೊದಲ ಆದ್ಯತೆ.
11:23 AM IST:
ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು. ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ. 157 ಹೊಸ ನರ್ಸಿಂಗ್ ಕಾಲೇಜು. 2014 ರಿಂದ ಸ್ಥಾಪಿತಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಸರ್ಕಾರದ ಘೋಷಣೆ.
11:20 AM IST:
*400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗೋದು. ಈ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗೋದು.
*100 ಹೊಸ ಕಾರ್ಗೋ ಟರ್ಮಿನಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗೋದು.
*ಹೊಸ ಮೆಟ್ರೋ ರೈಲು ವ್ಯವಸ್ಥೆಗೆ ಹೊಸ ಹೂಡಿಕೆಯನ್ನು ಪ್ರೋತ್ಸಾಹಿಸಲಾಗೋದು .
11:19 AM IST:
1. ಎಲ್ಲರನ್ನು ಒಳಗೊಂಡ ಸಮಗ್ರ ಬೆಳವಣಿಗೆ
ರೈತರು, ಮಹಿಳೆಯರು, ಎಸ್ಸಿ/ ಎಸ್ಟಿ, ದಿವ್ಯಾಂಗರು
ಹಿಂದುಳಿದವರು ಸೇರಿ ವಂಚಿತರಿಗೆ ಮೊದಲ ಆದ್ಯತೆ
2. ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ
ರೈತರಿಗೆ ಬೆಳೆ ಯೋಜನೆಗೆ ಸೂಕ್ತ ಮಾಹಿತಿ ನೀಡುವುದು
ಸಾಲ ಸೌಲಭ್ಯ ಡಿಜಿಟಲೀಕರಣ
ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯ
ಕೃಷಿ ಆಧಾರಿತ ಸಾರ್ಟ್ ಅಪ್ಗಳಿಗೆ ಪ್ರತ್ಯೇಕ ಅನುದಾನ
ರೈತರಿಗೆ ಸಮಸ್ಯೆ ಪರಿಹರಿಸಲು ಕೆಲಸ ಮಾಡುವ ಸಾರ್ಟ್ಅಪ್ಗಳಿಗೆ ನೆರವು
3. ಹಸಿರು ಅಭಿವೃದ್ಧಿಗೆ ಅತಿಹೆಚ್ಚಿನ ಆದ್ಯತೆ
ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು
4. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶ
ಪ್ರವಾಸೋದ್ಯಮದ ಪ್ರೋತ್ಸಾಹದ ಸರ್ಕಾರದ ಪ್ರಮುಖ ಆದ್ಯತೆ
An Agriculture Accelerator Fund will be set up to encourage agri-startups by young entrepreneurs: Finance Minister Nirmala Sitharaman pic.twitter.com/0Q7gWu4IOt
— ANI (@ANI)11:17 AM IST:
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ದರ ಶೇ.7. ಈ ಹಿಂದಿನ ಬಜೆಟ್ ಬುನಾದಿ ಮೇಲೆ ಈ ಬಜೆಟ್ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆ ಸರಿಯಾದ ದಾರಿಯಲ್ಲಿದೆ. ಸುಧಾರಣಾ ಕ್ರಮಗಳ ಪರಿಣಾಮವಾಗಿ ಈ ಕಷ್ಟಕರ ಸಮಯದಲ್ಲಿ ಸರಿಯಾದ ಮಾರ್ಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
11:16 AM IST:
ಕೃಷಿಗೆ ಡಿಜಿಟಲ್ ಸೌಕರ್ಯ, ಕೃಷಿ ಆಧಾರಿತ ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರಿಗೆ ಹೆಚ್ಚು ಒತ್ತು. ಗ್ರೀನ್ ಆರ್ಥಿಕ ವಲಯಕ್ಕೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಸ್ಮಾರ್ಟ್ ಅಪ್‌ಗಳಿಗೆ ವಿಶೇಷ ಆರ್ಥಿಕ ನೆರವು ನೀಡಲು ವಿಶೇಷ ಅನುದಾನ.
11:13 AM IST:
ದೇಶದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಸೂಕ್ತ ವಾತಾವರಣ ಕಲ್ಪಿಸಲಾಗಿದೆ. ಸ್ವಾತಂತ್ರ್ಯದ ಶತಮಾನದ ವೇಳೆಗೆ ಹೆಣ್ಣು ಮಕ್ಕಳ ಆರ್ಥಿಕತೆ ಸುಧಾರಣೆಗಾಗಿ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕತೆ ಸುಧಾರಿಸಿದ ದೀನ್ ದಯಾಳ್ ಉಪಾಧ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
11:13 AM IST:
ದೊಡ್ಡ ಗಾತ್ರದ ಉತ್ಪಾದನಾ ಸಂಸ್ಥೆಗಳನ್ನು ಹುಟ್ಟುಹಾಕಲಾಗುತ್ತಿದೆ
ಕುಶಲ ಕರ್ಮಿಗಳಿಗಾಗಿ ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ
ಕುಶಲಕರ್ಮಿಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ
ಗುಣಮಟ್ಟದ, ಹೆಚ್ಚಿನ ಸಂಖ್ಯೆಯ ಕರಕುಶಲ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ
ಎಸ್ಸಿ/ ಎಸ್ಟಿ, ಹಿಂದುಳಿದ ವರ್ಗಗಳಿಗೆ ಹೆಚ್ಚು ಸಹಾಯಕ
11:11 AM IST:
ಹಣಕಾಸು ಈಗ ಅತಿಹೆಚ್ಚು ಶಿಸ್ತುಬದ್ಧವಾಗಿದೆ
ಭಾರತದ ಉತ್ತಮ ಆಡಳಿತ ದೇಶ ಎಂಬ ಮನ್ನಣೆ ಗಳಿಸಿದೆ
ಅನೇಕ ಯೋಜನೆಗಳು ಎಲ್ಲರನ್ನು ಒಳಗೊಂಡು ಅಭಿವೃದ್ಧಿಯಾಗಿದೆ
ಸ್ವಚ್ಚಭಾರತ ಯೋಜನೆ ಅತ್ಯಂತ ಯಶ್ವಸಿ
ಉಜ್ವಲ ಯೋಜನೆಯಡಿ 9.6 ಕೋಟಿ ಗ್ಯಾಸ್ ಸಂಪರ್ಕ
120 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ
ಕಿಸಾನ್ ಸಮ್ಮಾನ್ ಯೋಜನೆಯಡಿ
11. 4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ಹಣ ವಿತರಣೆ
11:10 AM IST:
ಜಿ20ಯ ಅಧ್ಯಕ್ಷ ಸ್ಥಾನ ಸಿಕ್ಕ ಬಳಿಕ ಭಾರತೀಯ ಆರ್ಥಿಕತೆಯ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದ್ದು, ಈ ಬಜೆಟ್ ದೇಶದ ಆರ್ಥಕತೆಯ ದಿಕ್ಕನ್ನು ಮಾತ್ರವಲ್ಲ, ವಿಶ್ವದ ಆರ್ಥಿಕ ದಿಕ್ಕನ್ನೇ ಬದಲಿಸಲಿದೆ.
In these times of global challenges, India’s G20 presidency gives us a unique opportunity to strengthen India’s role in the world economic order: Finance Minister Nirmala Sitharaman pic.twitter.com/TVHIpRyjDD
— ANI (@ANI)
11:08 AM IST:
ಮುಂದಿನ ಒಂದು ವರ್ಷ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಅಹಾರ ಧಾನ್ಯವನ್ನು ಕೇಂದ್ರ ಸರ್ಕಾರ ನೀಡಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಇದನ್ನು ಜನರಿಗೆ ನೀಡಲಿದ್ದೇವೆ.28 ತಿಂಗಳು ಉಚಿತ ಪಡಿತರ ನೀಡಿದ್ದೇವೆ. ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯಡಿ ಉಚಿತ . 2 ಲಕ್ಷ ಕೋಟಿ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು
ವಿಶ್ವದ ಹಣಕಾಸು ವ್ಯವಸ್ಥೆಯಲ್ಲಿ ಭಾರತದ ಪಾತ್ರ ದೊಡ್ಡದು. 2014ರಿಂದ ಸರ್ಕಾರದ ಪ್ರಯತ್ನ ಜನರಿಗೆ ಉತ್ತಮ ಜೀವನ ಮಟ್ಟ ನೀಡಿದೆ. ಕಳೆದ 9 ವರ್ಷದಲ್ಲಿ ಭಾರತದ ಹಣಕಾಸು ಗಣನೀಯವಾಗಿ ಬೆಳೆದಿದೆ. ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಆರ್ಥಿಕತೆ ಆಗಿದ್ದೇವೆ.
11:05 AM IST:
ಇದು ಅಮೃತಕಾಲದ ಮೊದಲ ಬಜೆಟ್ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ದೇಶದ ಪ್ರಗತಿಯ ಹಣ್ಣುಗಳು ದೇಶದ ಎಲ್ಲಾ ವರ್ಗದವರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ. ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧ ಮಾಡಲಾಗಿದೆ.
11:04 AM IST:
ಜಾಗತಿಕವಾಗಿ ಭಾರತದ ಆರ್ಥಿಕತೆ ಉತ್ತುಂಗಕ್ಕೇರುತ್ತಿರುವ ಈ ಸಂದರ್ಭದಲ್ಲಿ, ಕೋವಿಡ್ ಲಸಿಕೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತದ ಆರ್ಥಿಕ ನೀಲಿನಕ್ಷೆಯುಳ್ಳ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಸಚಿವೆ.
11:02 AM IST:
2023-24ನೇ ಕೇಂದ್ರ ಆಯವ್ಯವವನ್ನ ಮಂಡಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಆರಂಭಿಸಿದ್ದು, ಮಹಿಳೆ, ಕೃಷಿಕರು, ವಿದ್ಯಾರ್ಥಗಳು, ಓಬಿಸಿ, ಎಸ್ ಸಿ ಹಾಗೂ ಎಸ್ಟಿ ಕಮ್ಯೂನಿಟಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ ಎನ್ನುವ ಮೂಲಕ ಬಜೆಟ್ ಮಂಡನೆ ಆರಂಭಿಸಿದ್ದಾರೆ.
10:57 AM IST:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ
ಕ್ಯಾಬಿನೆಟ್‌ನಿಂದಲೂ ಒಪ್ಪಿಗೆ ಪಡೆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
8 ವರ್ಷಗಳ ಬಳಿಕ ಆದಾಯ ತೆರಿಗೆದಾರರಿಗೆ ಸಿಗುತ್ತಾ ಗುಡ್ ನ್ಯೂಸ್
11 ಗಂಟೆಗೆ ದೇಶದ 75ನೇ ಬಜೆಟ್ ಮಂಡನೆ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
10:51 AM IST:
ದೇಶದ ಜೀವನಾಡಿಯಾದ ಕೃಷಿ ವಲಯಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಅಂಶಗಳನ್ನು ಬಜೆಟ್ ಒಳಗೊಂಡಿರಲಿದೆ ಎನ್ನಲಾಗಿದೆ. ಕೃಷಿಕರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನ ಆಧರಿತ ವಲಯಕ್ಕೆ ಸರ್ಕಾರ ಹೊಸ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಸಾಲದ ನೆರವನ್ನು ಹೆಚ್ಚಿಸುವ ಸಾಧ್ಯತೆ ನಿಚ್ಚಲವಾಗಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ದೇಶ ಎದುರಿಸಿದ ಸಂಕಷ್ಟಮುಂದೆ ಎದುರಾಗದಂತೆ ತಡೆಯಲು ದೇಶದ ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆ ಇದೆ.
10:51 AM IST:
ದೇಶದ ಜೀವನಾಡಿಯಾದ ಕೃಷಿ ವಲಯಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಅಂಶಗಳನ್ನು ಬಜೆಟ್ ಒಳಗೊಂಡಿರಲಿದೆ ಎನ್ನಲಾಗಿದೆ. ಕೃಷಿಕರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನ ಆಧರಿತ ವಲಯಕ್ಕೆ ಸರ್ಕಾರ ಹೊಸ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಸಾಲದ ನೆರವನ್ನು ಹೆಚ್ಚಿಸುವ ಸಾಧ್ಯತೆ ನಿಚ್ಚಲವಾಗಿದೆ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ದೇಶ ಎದುರಿಸಿದ ಸಂಕಷ್ಟಮುಂದೆ ಎದುರಾಗದಂತೆ ತಡೆಯಲು ದೇಶದ ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆ ಇದೆ.
10:43 AM IST:
10:42 AM IST:
ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಭಾರತದ ಷೇರುಮಾರುಕಟ್ಟೆ ಹಸಿರು ಹಾದಿ ಹಿಡಿದಿದೆ. ಸೆನ್ಸೆಕ್ಸ್ 457 ಅಂಕಗಳ ಜಿಗಿತ ಕಂಡಿದ್ದರೆ, ನಿಫ್ಟಿ-50 ಪಟ್ಟಿ 17750 ಅಂಕಗಳ ಗಡಿ ದಾಟಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
10:26 AM IST:
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದದ್ದು, ಸಹಜವಾಗಿಯೇ ಕೇಂದ್ರ ಬಜೆಟ್‌ನಿಂದ ರಾಜ್ಯ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅವುಗಳಲ್ಲಿ ಕೆಲವು ಇವು.
- ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ
- ಹೈದರಾಬಾದ್ ಕರ್ನಾಟಕದ ಭಾಗಕ್ಕೆ ಏಮ್ಸ್ ಮಾದರಿ ಆಸ್ಪತ್ರೆ
- ರಾಜ್ಯಕ್ಕೆ ನಿರ್ಮಲಾರಿಂದ ಹೊಸ ರೈಲು ಹಾಗೂ ಮಾರ್ಗಗಳ ನಿರೀಕ್ಷೆ ಇದೆ.
- ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ
- ಮರದಾ-ಬೇಡ್ತಿ ನದಿ ಜೋಡನೆ ಯೋಜನೆ ಆಗುತ್ತಾ ಜಾರಿ?
- ರಾಜ್ಯದ ಮತ್ತಷ್ಟು ರಸ್ತೆಗಳು ವಿಸ್ರರಣೆಯಾಗುವ ನಿರೀಕ್ಷೆ ಇದೆ.
- ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗುತ್ತಾ ಘೋಷಣೆ?
- ಈಗಾಗಲೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿರುವ ಸ್ಮಾರ್ಟ್ ಸಿಟಿ ಯೋಜನೆ, ಮತ್ತಷ್ಟು ಜಿಲ್ಲೆಗಳಿಗೆ ವಿಸ್ತಾರಣೆಯಾಗುತ್ತಾ?
-
10:02 AM IST:
ಬುಧವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ ಕಾಗದ ರಹಿತ ಆಗಲಿದೆ. ಬಜೆಟ್‌ನ ಸಂಪೂರ್ಣ ಮಾಹಿತಿಯು ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ (Union Budget Mobile App) ಎಂಬ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಲ್ಲಿ ಕಾಗದರಹಿತವಾಗಿಯೇ ಬಜೆಟ್ ಮಂಡಿಸಲಿದ್ದಾರೆ. ಈ ನಿಮಿತ್ತ ಬಿಡುಗಡೆ ಮಾಡಲಾಗಿರುವ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಜೆಟ್‌ನ ಮುಖ್ಯಾಂಶಗಳು, ಬಜೆಟ್ ಭಾಷಣ, ಹಾಗೂ ವಾರ್ಷಿಕ ಹಣಕಾಸು ವರದಿ ಸೇರಿದಂತೆ ಸವಿವರವಾದ ಮಾಹಿತಿ ಪಡೆಯಬಹುದಾಗಿದೆ.
ಈ ಹಿಂದಿನ ಎರಡು ಬಜೆಟ್‌ಗಳನ್ನು ಕೂಡ ಕಾಗದ ರಹಿತ ಅಥವಾ ಆನ್‌ಲೈನ್ ಮೂಲಕವೇ ಪ್ರಸ್ತುತ ಪಡಿಸಲಾಗಿತ್ತು.
9:46 AM IST:
ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಇದೇ ಮೊದಲ ಬಾರಿ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಹಾಗೂ ಬಜೆಟ್ ಮಂಡನೆ ಮಹಿಳೆಯರಿಂದ ಆಗುತ್ತಿದೆ. ಭಾರತದ 2ನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಬಜೆಟ್ ಜಂಟಿ ಸದನ ಉದ್ದೇಶಿಸಿ ಮಂಗಳವಾರ ಭಾಷಣ ಮಾಡಿದ್ದಾರೆ. ಇನ್ನು ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಇನ್ನೇನು ಕೆಲವೇ ಗಂಟೆಗಳಲ್ಲಿ ಬಜೆಟ್ ಮಂಡಿಸಲಿದ್ದಾರೆ.
9:18 AM IST:
ಈ ವರ್ಷದ ಮೇನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಹಜವಾಗಿಯೇ ಕರ್ನಾಟಕ್ಕೆ ಈ ಬಾರಿಯ ಬಜೆಟ್‌ಲ್ಲಿ ವಿಶೇಷ ಒತ್ತು ನೀಡುವುದು ಖಚಿತ. ಕೇಂದ್ರದಿಂದ ಎಲೆಕ್ಷನ್ ಪ್ಯಾಕೇಜ್ ಸಿಗುವ ನಿರೀಕ್ಷೆ ಇದ್ದು, ಡಬಲ್ ಇಂಜಿನ್ ಸಂದೇ ಶ ನೀಡಲು ಕೇಂದ್ರ ಯತ್ನಿಸಲಿದೆ. ವಿಶೇಷ ಪ್ಯಾಕೇಜ್ ಮೂಲಕ ಮತ ಸೆಳೆಯಲು ತಂತ್ರ ರೂಪಿಸುವ ಸಾಧ್ಯತೆ ಇದ್ದು, ಅಭಿವೃದ್ಧಿ ಮಂತ್ರ ದ ಮೂಲಕ ವಿಪಕ್ಷಗಳಿಗೆ ಕಡಿವಾಣ ಹಾಕೋದು ಖಚಿತ. ಎಲೆಕ್ಷನ್ ರಾಜ್ಯಕ್ಕೆ ಭಾರೀ ಅನುದಾನ ಘೋಷಣೆ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಬಜೆಟ್‌ನತ್ತು ಕರ್ನಾಟಕ ಜನರ ಚಿತ್ತ ಹೆಚ್ಚಾಗಿದೆ.
ಅಧಿಕಾರದ ಗುರಿ ತಲುಪಲು ಬಜೆಟ್ ಮೂಲಕ ಬುನಾದಿ ಹಾಕು ನಿರೀಕ್ಷೆ ಇದೆ.
9:18 AM IST:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬಜೆಟ್ ಪ್ರತಿ ನೀಡಿದ ನಂತರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ನಂತರ ಸಂಸತ್ತಿನಲ್ಲಿ ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ.
Delhi | Finance Minister Nirmala Sitharaman reaches Rashtrapati Bhavan to call on President Murmu
FM will then attend the Union Cabinet meeting, and then present Union Budget 2023-24. pic.twitter.com/hHDSZU7g3j
9:05 AM IST:
ಸಚಿವೆ ನಿರ್ಮಲಾ ತಮ್ಮ ಹೊಸ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬಹುದೊಡ್ಡ ಬೇಡಿಕೆಯಾದ ಆದಾಯ ಮಿತಿ ತೆರಿಗೆ ಮಿತಿಯನ್ನು ಇನ್ನಷ್ಟುಹೆಚ್ಚಿಸಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಸೆಕ್ಷನ್ 80ಸಿ ಮತ್ತು 80ಡಿ ನೀಡುವ ವಿನಾಯ್ತಿಗಳನ್ನು ವಿಸ್ತರಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಜೊತೆಗೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್ ಟಮ್‌ರ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹಿಂಪಡೆವ ಸಾಧ್ಯತೆ ಇದೆ. ಇನ್ನು ಕಾರ್ಪೊರೆಟ್ ವಲಯ ಮತ್ತು ಜನಸಾಮಾನ್ಯರು ಕೋವಿಡ್ ನಿರ್ವಹಣೆಗೆ ಮಾಡಿದ ವೆಚ್ಚವನ್ನು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಬಹುದೆಂಬ ದೊಡ್ಡ ಆಶಾಭಾವನೆ ಇದೆ.
8:52 AM IST:
ಬಜೆಟ್ ಮಂಡನೆ ಹಿನ್ನೆಲೆ ಸಚಿವೆ ನಿರ್ಮಲಾ ಸೀತಾರಾಮನ್ ನಾತ್೯ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯಕ್ಕೆ ಆಗಮಿಸಿದರು. ನಿರ್ಮಲಾ ಇಂದು 5ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಹಳೇ ಸಂಸತ್ ಭವನದಲ್ಲಿ ಮಂಡನೆಯಾಗುತ್ತಿರುವ ಕೊನೆಯ ಬಜೆಟ್ ಇದಾಗಿದ್ದು, ಸಾರ್ವತ್ರಿಕ ಚುನಾವಣೆಗೂ (2024) ಮುನ್ನ ಮಂಡನೆಯಾಗುತ್ತಿರುವ ಪೂರ್ಣಪ್ರಮಾಣದ ಬಜೆಟ್ ಇದು. ಆರ್ಥಿಕ ಹಿಂಜರಿತಕ್ಕೆ ಹೊಸ ಟಾನಿಕ್ ನೀಡುವ ಜೊತೆಗೆ, ಆತ್ಮನಿರ್ಭರಕ್ಕೆ ಹೆಚ್ಚು ಒತ್ತು ನೀಡುವ ನಿರೀಕ್ಷೆ ಇದೆ. ವಿಶ್ವದಲ್ಲಿ ಆರ್ಥಿಕತೆ ಹಿಂಜರಿತ ಹಿನ್ನಲೆ, ಅದರ ದುಷ್ಪರಿಣಾಮ ತಪ್ಪಿಸಲು ಮೇಕ್ ಇನ್ ಇಂಡಿಯಾಗೆ ಒತ್ತು ಕೊಡುವ ಸಾಧ್ಯತೆ ಇದೆ.
8:42 AM IST:
ಇನ್ನೇನು ಕೆಲವೇ ಹೊತ್ತಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಭಾಷಣ ಆರಂಭಿಸಲಿದ್ದಾರೆ.. ಜನಸಾಮಾನ್ಯರಿಗೇನು ನಿರೀಕ್ಷೆಗಳಿವೆ? ಯಾವ್ಯಾವ ಕ್ಷೇತ್ರಕ್ಕೆ ಏನೇನು ಸಿಗಬಹುದು? ಕರ್ನಾಟಕ ಏನು ನಿರೀಕ್ಷಿಸುತ್ತಿದೆ?
8:33 AM IST:
ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿರುವ ಭಾರತದ ಆರ್ಥಿಕತೆಗೆ ಈ ಬಾರಿಯ ಕೇಂದ್ರದ ಬಜೆಟ್ ಹೊಸ ವೇಗ ನೀಡಲಿದೆ ಅನ್ನೋ ನಿರೀಕ್ಷೆ ಇದೆ. ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಬಂಪರ್ ಕೂಡುಗೆ ನೀಡುವ ನಿರೀಕ್ಷೆಗಳಿವೆ.
8:11 AM IST:
ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್ ಮಂಡಿಸುವುದಕ್ಕೂ ಮುನ್ನ ಸಾಕಷ್ಟುಪೂರ್ವ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಮಾರು 6 ತಿಂಗಳ ಮುನ್ನವೇ ಬಜೆಟ್ ತಯಾರಿಯ ಪ್ರಕ್ರಿಯೆ ಶುರುವಾಗುತ್ತದೆ. ಇಲ್ಲಿದೆ ಬಜೆಟ್ ತಯಾರಾಗುವ ಪ್ರಕ್ರಿಯೆ...
7:53 AM IST:
ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಕೇಂದ್ರ ಆಯವ್ಯಯ ಎಂದರೆ ಇಡೀ ದೇಶದ ಅಭಿವೃದ್ಧಿಯ ಮಾರ್ಗಸೂಚಿ. ಇಲ್ಲಿನ ಪ್ರತಿಯೊಂದು ಹೆಜ್ಜೆಯೂ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಚಹರೆ ಬದಲಿಸಿದ ಪ್ರಮುಖ ಬಜೆಟ್‌ಗಳ ಕಿರು ಪರಿಚಯ ಇಲ್ಲಿದೆ.
7:39 AM IST:
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಮತ್ತು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಲಿರುವ ಬಜೆಟ್ ಜನರ ಭರವಸೆ, ಆಕಾಂಕ್ಷೆಗಳನ್ನು ಈಡೇರಿಸಲು ಶ್ರಮಿಸುತ್ತದೆ ಮತ್ತು ಜಗತ್ತು ಭಾರತದತ್ತ ನೋಡುತ್ತಿರುವ ಭರವಸೆಯನ್ನು ಹೆಚ್ಚಿಸುತ್ತದೆ ಎಂದರು.
11:24 PM IST:
ಭಾರತದ ಮೊದಲ ಬಜೆಟ್ ಮಂಡಿಸಿದ್ದು 1860ರ ಏ.7ರಂದು. ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ನಾಯಕ ಮತ್ತು ಆರ್ಥಿಕ ತಜ್ಞನಾಗಿದ್ದ ಸ್ಕಾಟ್ಲೆಂಡ್ ಮೂಲದ ಜೇಮ್ಸ್ ವಿಲ್ಸನ್ ಭಾರತದ ಮೊದಲ ಮಂಡಿಸಿದರು.
11:20 PM IST:
2024ರ ಎಪ್ರಿಲ್ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಮೋದಿ 2.0 ಸರ್ಕಾರ ಮಂಡಿಸುತ್ತಿರುವ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ. ಕಳೆದೆರಡು ವರ್ಷದಂತೆ ಈ ಬಾರಿಯೂ ಪೇಪರ್‌ಲೆಸ್ ಬಜೆಟ್ ಮಂಡನೆಯಾಗಲಿದೆ. ಗೃಹ ಸಾಲದ ಮೇಲಿನ ಬಡ್ಡಿ ಕಡಿತ, ಆಮದು ಸುಂಕ ಕಡಿತ, ಆದಾಯ ತೆರಿಗೆಯಲ್ಲಿ ವಿನಾಯಿತಿ ಸೇರಿದಂತೆ ಹಲವು ಸಲಹೆಗಳನ್ನು ಉದ್ಯಮ ಕ್ಷೇತ್ರದ ದಿಗ್ಗಜರು, ಆರ್ಥಿಕ ತಜ್ಞರು ನೀಡಿದ್ದರು. ಇದೀಗ ಈ ಬಜೆಟ್ ಮೇಲೆ ನೀರಕ್ಷೆಗಳು ಹೆಚ್ಚಾಗಿದೆ.
10:27 PM IST:
ಕೇಂದ್ರದ ರಾಜ್ಯ ಹಣಕಾಸು ಸಚಿವ ಪಂಕಚ್ ಚೌಧರಿ ಹಾಗೂ ಡಾ.ಭಾಗವತ್ ಕಿಶನ್‌ರಾವ್, ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ, CBDT ಮುಖ್ಯಸ್ಥ ನಿತಿನ್ ಗುಪ್ತಾ ಸೇರಿದಂತೆ ಕೇಂದ್ರ ಬಜೆಟ್ ತಂಡದ ಜೊತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೋಟೋಗೆ ಫೋಸ್ ನೀಡಿದ್ದಾರೆ.
Hon'ble Finance Minister Smt , MoS (F) Sh & MoS (F) Sh with the CBDT Budget team on Budget eve.
Secretary, Revenue, Sh Sanjay Malhotra, Chairman, CBDT Sh Nitin Gupta & Member, CBDT Smt Pragya Saxena are also present.
pic.twitter.com/q3HOhOLe46
10:22 PM IST:
ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ 2021 -22 ಸಾಲಿನ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಆಹಾರೋತ್ಪಾದನೆ 315.7 ದಶಲಕ್ಷ ಟನ್‌ಗೆ ಏರಿಕೆಯಾಗಿರುವುದಾಗಿ ಉಲ್ಲೇಖಿಸಿದ್ದಾರೆ. 2022 – 23ನೇ ಸಾಲಿನ ಮೊದಲ ಅಂದಾಜು ಪ್ರಕಾರ ದೇಶದಲ್ಲಿ 149.9 ದಶಲಕ್ಷ ಟನ್ ಆಹಾರ ಧಾನ್ಯಗಳು ಉತ್ಪಾದನೆಯಾಗುವ ನಿರೀಕ್ಷೆಯಿದೆ.
10:10 PM IST: