ಇಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಆಗಾಗ ಪರಿಶೀಲಿಸೋದು ಅಗತ್ಯ. ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕೇಬೇಕು ಎಂದೇನಿಲ್ಲ. ಮಿಸ್ಡ್ ಕಾಲ್ ಹಾಗೂ ಎಸ್ ಎಂಎಸ್ ಮೂಲಕ ಕೂಡ ಇಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಮನೆಯಲ್ಲೇ ಕಳಿತು ಸುಲಭವಾಗಿ ಪರಿಶೀಲಿಸಬಹುದು.
Business Desk:ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದ ಅತೀದೊಡ್ಡ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಉದ್ಯೋಗಿಗಳ ಭವಿಷ್ಯ ನಿಧಿಯ ನಿರ್ವಹಣೆ ಮಾಡುತ್ತದೆ. ಕೈಗಾರಿಕೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಇಪಿಎಫ್ಒ ಮೂರು ಯೋಜನೆಗಳನ್ನು ನಿರ್ವಹಣೆ ಮಾಡುತ್ತದೆ. ಇಪಿಎಫ್ ಯೋಜನೆ 1952, ಪಿಂಚಣಿ ವ್ಯವಸ್ಥೆ1995 (ಇಪಿಎಸ್) ಹಾಗೂ ವಿಮಾ ಯೋಜನೆ 1976 (ಇಡಿಎಲ್ ಐ) ಆಧಾರದಲ್ಲಿ ಈ ಮೂರು ಯೋಜನೆಗಳು ಕಾರ್ಯನಿರ್ವಹಿಸುತ್ತವೆ. ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ. ಪ್ರಸ್ತುತ ಇಪಿಎಫ್ ಠೇವಣಿ ಮೇಲೆ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಇಪಿಎಫ್ ಖಾತೆಗೆ ವರ್ಷಕ್ಕೊಮ್ಮೆ ಬಡ್ಡಿ ಜಮೆ ಮಾಡಲಾಗುತ್ತದೆ. ಹೀಗಾಗಿ ಆಗಾಗ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲಿಸೋದು ಅಗತ್ಯ. ಆದರೆ, ಮನೆಯಲ್ಲೇ ಕುಳಿತು ಇಂಟರ್ನೆಟ್ ಅಗತ್ಯವಿಲ್ಲದೆ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದಾ? ಮಾಡಬಹುದು. ಅದು ಹೇಗೆ?
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ. ಮೇಲೆ ಹೇಳಿದ ಈ ಎಲ್ಲ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ UAN ಜೊತೆಗೆ ಬ್ಯಾಂಕ್ ಖಾತೆ (Bank account), ಆಧಾರ್ (Aadhaar), ಪ್ಯಾನ್ ಸಂಖ್ಯೆ (PAN number) ಲಿಂಕ್ (link) ಆಗಿರುವುದು ಅಗತ್ಯ.
ಈ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದು, ಎಟಿಎಂ ವಹಿವಾಟು ವಿಫಲವಾದ್ರೆ ಮೇ 1ರಿಂದ ಬೀಳುತ್ತೆ ದಂಡ!
ಮಿಸ್ಡ್ ಕಾಲ್
9966044425 ಸಂಖ್ಯೆಗೆ ಮಿಸ್ ಕಾಲ್ ನೀಡೋ ಮೂಲಕ ಕೂಡ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದ್ರೆ ಇದಕ್ಕೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ರೆ ಮಾತ್ರ ಮಾಹಿತಿ ಲಭಿಸುತ್ತದೆ. ನೀವು ಕರೆ ಮಾಡಿದಾಗ ಎರಡು ರಿಂಗ್ ಆಗಿ ಬಳಿಕ ಕಡಿತಗೊಳ್ಳುತ್ತದೆ. ಆ ಬಳಿಕ ನಿಮ್ಮ ಮೊಬೈಲ್ ಗೆ ಬ್ಯಾಲೆನ್ಸ್ ಮಾಹಿತಿ ಸಂದೇಶ ರೂಪದಲ್ಲಿ ಬರುತ್ತದೆ. ಈ ಸೇವೆ ಪಡೆಯಲು ಗ್ರಾಹಕರಿಗೆ ಯಾವುದೇ ವೆಚ್ಚ ಮಾಡಬೇಕಾದ ಅಗತ್ಯವೂ ಇಲ್ಲ.
ಇ-ಸೇವಾ ಪೋರ್ಟಲ್(e-Sewa Portal)
EPFO ಪೋರ್ಟಲ್ ಮೂಲಕ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಈ ಪೋರ್ಟಲ್ ನಿರ್ವಹಣೆಯನ್ನು ಸರ್ಕಾರ ಮಾಡುತ್ತದೆ. ನೌಕರರ ಯುಎಎನ್ (Universal Account Number ) ಬಳಸಿಕೊಂಡು ಅವರ ಖಾತೆಯ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಈ ಪೋರ್ಟಲ್ ಮೂಲಕ ನೀವು ನಿಮ್ಮ ಇ-ಪಾಸ್ ಬುಕ್ ಡೌನ್ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು.
ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!
Umang App ಮೂಲಕ
ಸರ್ಕಾರದ Umang App ಬಳಸಿ ಕೂಡ ನೀವು ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದ್ರೆ ಇದಕ್ಕೆ ನೀವು ಉಮಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಅದ್ರಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಬೇಕು. ಉಮಂಗ್ ಅಪ್ಲಿಕೇಷನ್ ನಲ್ಲಿ ಇಪಿಎಫ್ಒಗೆ ತೆರಳಿ ನೌಕರರ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ passbook view ಆಯ್ಕೆ ಮಾಡಬೇಕು. ಆ ಬಳಿಕ ಯುಎಎನ್ ಮೂಲಕ ಲಾಗಿಇನ್ ಆಗಬೇಕು.