ಇಂದು ಮುಖೇಶ್ ಅಂಬಾನಿ ಜನ್ಮದಿನ; ರಿಲಯನ್ಸ್ ಮುಖ್ಯಸ್ಥರ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ

By Suvarna News  |  First Published Apr 19, 2023, 5:34 PM IST

ಇಂದು ಭಾರತದ ಅತೀ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಜನ್ಮದಿನ.ರಿಲಯನ್ಸ್ ಸಂಸ್ಥೆಯನ್ನು ವಿಸ್ತರಿಸಿ ಬೆಳೆಸುವಲ್ಲಿ ಮುಖೇಶ್ ಅಂಬಾನಿ ಮಹತ್ವದ ಪಾತ್ರ ವಹಿಸಿದ್ದಾರೆ.ಅವರು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಏನೆಲ್ಲ ಮಾಡಿದರು?ಅವರ ಸಂಪತ್ತಿನಲ್ಲಿ ಎಷ್ಟು ಏರಿಕೆಯಾಗಿದೆ? ಇಂಥ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ. 


Business Desk:ರಿಲಯನ್ಸ್ ಸಂಸ್ಥೆಯ (ಆರ್ ಐಎಲ್)  ಮುಖ್ಯಸ್ಥ ಮುಖೇಶ್ ಅಂಬಾನಿ ಪ್ರಸ್ತುತ ಭಾರತದ ಅತೀ ಶ್ರೀಮಂತ ಉದ್ಯಮಿ. ಇಂದು 67ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಮುಖೇಶ್ ಅಂಬಾನಿ, ತಂದೆ ಧೀರೂಬಾಯಿ ಅಂಬಾನಿ ಸ್ಥಾಪಿಸಿದ ರಿಲಯನ್ಸ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮುಖೇಶ್ ಅಂಬಾನಿ 1957ರ ಏಪ್ರಿಲ್ 19ರಂದು ಜನಿಸಿದ್ದರು. ಇವರು ಹುಟ್ಟಿದ ಮರುವರ್ಷವೇ ಅಂದರೆ 1958ರಲ್ಲಿ ಧೀರೂಬಾಯಿ ಅಂಬಾನಿ ರಿಲಯನ್ಸ್ ಸಂಸ್ಥೆಯನ್ನು ಪ್ರಾರಂಭಿಸಿದರು. ಧೀರೂಬಾಯಿ ಅಂಬಾನಿ ಹಾಗೂ ಕೋಕಿಲಾಬೆನ್ ಅವರ ಪ್ರಥಮ ಪುತ್ರನಾಗಿರುವ ಮುಖೇಶ್ ಅಂಬಾನಿ ತಂದೆ ಕಟ್ಟಿದ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಮತ್ತಷ್ಟು ಸಂಪತ್ತು ಹಾಗೂ ಜನಪ್ರಿಯತೆ ಎರಡನ್ನೂ ಗಳಿಸಿದ್ದಾರೆ. 2002ರಿಂದ ರಿಲಯನ್ಸ್ ಸಂಸ್ಥೆಯ ನಿರ್ವಹಣೆ ಜವಾಬ್ದಾರಿಯನ್ನು ಮುಖೇಶ್ ಅಂಬಾನಿ ವಹಿಸಿಕೊಂಡಿದ್ದರು. ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ 66 ವರ್ಷದ ಮುಖೇಶ್ ಅಂಬಾನಿ 80.9 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿದ್ದು, ಭಾರತದ ನಂ.1 ಹಾಗೂ ವಿಶ್ವದ 12ನೇ ಅತೀ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.

ಇನ್ನು ಕಳೆದ ಹತ್ತು ವರ್ಷಗಳಲ್ಲಿ ಮುಖೇಶ್ ಅಂಬಾನಿ ಅವರ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಫೋರ್ಬ್ಸ್ ಮಾಹಿತಿ ಪ್ರಕಾರ 2014ರಲ್ಲಿ ಮುಖೇಶ್ ಅಂಬಾನಿ ಆದಾಯ 18.6 ಬಿಲಿಯನ್ ಡಾಲರ್ ಆಗಿತ್ತು. ಕಳೆದ ಐದು ವರ್ಷಗಳಲ್ಲಿ ರಿಲಯನ್ಸ್ ಷೇರುಗಳು ಶೇ.155ರಷ್ಟು ಬೆಳವಣಿಗೆ ದಾಖಲಿಸಿವೆ. ಆ ಮೂಲಕ ದೊಡ್ಡ ಮಾರ್ಜಿನ್ ನಲ್ಲಿ ಮಾರುಕಟ್ಟೆ ರಿಟರ್ನ್ ಹೊಂದಿದೆ. 

Tap to resize

Latest Videos

ಭಾರತಕ್ಕೆ ಆಗಮಿಸಿರುವ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿ ದಿನ ಸ್ಯಾಲರಿ 1.10 ಕೋಟಿ ರೂ!

ಮುಖೇಶ್ ಅಂಬಾನಿ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ
1.2002ರಲ್ಲಿ ಧೀರೂಬಾಯಿ ಅಂಬಾನಿ ನಿಧನರಾದ ಬೆನ್ನಲ್ಲೇ ಮುಖೇಶ್ ಅಂಬಾನಿ ಹಾಗೂ ಅವರ ಸಹೋದರ ಅನಿಲ್ ಅಂಬಾನಿ ಜಂಟಿಯಾಗಿ ರಿಲಯನ್ಸ್ ಸಂಸ್ಥೆಯ ನೇತೃತ್ವ ವಹಿಸಿಕೊಂಡಿದ್ದರು. ಆದರೆ, ಇಬ್ಬರ ನಡುವೆ ವೈಮನಸ್ಸು ಮೂಡಿದ ಹಿನ್ನೆಲೆಯಲ್ಲಿ ತಾಯಿ ಕೋಕಿಲಾಬೆನ್ ಅವರ ಮಧ್ಯಸ್ಥಿಕೆಯಲ್ಲಿ ಇಬ್ಬರೂ ಸಂಸ್ಥೆಯನ್ನು ಇಬ್ಭಾಗ ಮಾಡುವ ನಿರ್ಧಾರವನ್ನು 2005ರಲ್ಲಿ ಮಾಡಿದರು. ಅದರ ಮುಂದಿನ ವರ್ಷವೇ ಸಂಸ್ಥೆಯನ್ನು ಅಧಿಕೃತವಾಗಿ ವಿಭಜಿಸಲಾಯಿತು.
2.1977ರಿಂದಲೂ ಮುಖೇಶ್ ಅಂಬಾನಿ ರಿಲಯನ್ಸ್ ಬೋರ್ಡ್ ನಲ್ಲಿದ್ದಾರೆ.
3.ಮುಂಬೈ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರುವ ಮುಖೇಶ್ ಅಂಬಾನಿ, ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.
4.ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್ (O2C)ಘಟಕ ಗುಜರಾತ್ ಜಮ್ನಗರದ ವಿಶ್ವದ ಅತೀದೊಡ್ಡ ರಿಫೈನಿಂಗ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
5.ಜಮ್ನನಗರ ರಿಫೈನರಿ ಘಟಕದಲ್ಲಿ ಪ್ರತಿದಿನ 6,60,000 ಬ್ಯಾರೆಲ್ಸ್ ತೈಲ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯಕಾರಣ ಮುಖೇಶ್ ಅಂಬಾನಿ ಅವರೇ ಆಗಿದ್ದಾರೆ. ಪೆಟ್ರೋಕೆಮಿಕಲ್ಸ್, ವಿದ್ಯುತ್ ಉತ್ಪಾದನೆ, ಬಂದರುಗಳು ಹಾಗೂ ಸಂಬಂಧಿತ ಮೂಲಸೌಕರ್ಯ ನಿರ್ಮಾಣದಲ್ಲಿ ಕೂಡ ಮುಖೇಶ್ ಅಂಬಾನಿ ಮಹತ್ವದ ಪಾತ್ರ ವಹಿಸಿದ್ದಾರೆ.

ಮೊದಲ ಬಾರಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ? ಸಾಲದ ಜೊತೆಗೆ ಪಡೆಯಬಹುದು ಈ ಎಲ್ಲ ಪ್ರಯೋಜನ!

6.ಇಂದು ಜಮ್ನನಗರ ವಿಶ್ವದ ರಿಫೈನಿಂಗ್ ಹಬ್ ಎಂಬ ಖ್ಯಾತಿ ಗಳಿಸಿದ್ದು, ಮುಖೇಶ್ ಅಂಬಾನಿ ಅಲ್ಲಿ ಇನ್ನೊಂದು ರಿಫೈನರಿ ಘಟಕ ಸ್ಥಾಪಿಸುತ್ತಿದ್ದಾರೆ.
7.2020ರ ಜೂನ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲಮುಕ್ತವಾಗಿತ್ತು. ರಿಲಯನ್ಸ್ ಸಂಸ್ಥೆ ಸಾಲಮುಕ್ತಗೊಳ್ಳುವ ಗುರಿಯನ್ನು 2021ರ ಮಾರ್ಚ್ 31ಕ್ಕೆ ನಿಗದಿಪಡಿಸಿತ್ತು. ಆದರೆ, ಅದಕ್ಕಿಂತಲೂ ಒಂದು ವರ್ಷ ಮುನ್ನವೇ ಸಾಲಮುಕ್ತ ಮಾಡಲಾಗಿತ್ತು.
8.ಬ್ಲೂಮ್ ಬರ್ಗ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರಿಗಿಂತ ಒಂದು ಸ್ಥಾನ ಮುಂದಿದ್ದಾರೆ.
9. ರಿಲಯನ್ಸ್ ಸಂಸ್ಥೆ ಚುಕ್ಕಾಣಿ ಹಿಡಿದ ಬಳಿಕ ಮುಖೇಶ್ ಅಂಬಾನಿ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಸಾಗಿದ್ದಾರೆ.ಟೆಲಿಕಾಂ, ರಿಟೇಲ್ ವಲಯ ಮೊದಲಾದ ಕ್ಷೇತ್ರಗಳನ್ನೂ ಪ್ರವೇಶಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಸದ್ಯ ಎಲ್ಲ ವಲಯಗಳಲ್ಲೂ ಮುಕೇಶ್ ಅಂಬಾನಿ ತಮ್ಮ ಉದ್ಯಮ ವಿಸ್ತರಿಸಿದ್ದಾರೆ.
10.ಮುಖೇಶ್ ಅಂಬಾನಿ ಈಗಾಗಲೇ ತಮ್ಮ ಉದ್ಯಮದ ಜವಾಬ್ದಾರಿಗಳನ್ನು ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ.ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ಕಳೆದ ಆಗಸ್ಟ್ ನಲ್ಲಿ ಮುಖೇಶ್ ಅಂಬಾನಿ ನೇಮಕ ಮಾಡಿದ್ದರು.ಜೂನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಟೆಲಿಕಾಂ ಘಟಕದ ಮುಖ್ಯಸ್ಥರಾಗಿ ಆಕಾಶ್‌ ಅಂಬಾನಿ ಅವರನ್ನು ನೇಮಕ ಮಾಡಿದ್ದರು. ಇನ್ನು ರಿಲಯನ್ಸ್‌ ನ್ಯೂ ಎನರ್ಜಿ ವ್ಯವಹಾರಕ್ಕೆ ಕಿರಿಯ ಪುತ್ರ ಅನಂತ್ ಅವರನ್ನು ನೇಮಕ ಮಾಡೋದಾಗಿ ತಿಳಿಸಿದ್ದಾರೆ.


 

click me!