ಟಾಸ್ಕ್‌ಲ್ಲಿ ಗೆದ್ರ ಈ ಬಂಕಲ್ಲಿ  1/2, 1 ಲೀಟರ್‌ನಷ್ಟು ಪೆಟ್ರೋಲ್‌, ಡೀಸೆಲ್‌ ಫ್ರೀ

Published : Feb 17, 2021, 05:00 PM IST
ಟಾಸ್ಕ್‌ಲ್ಲಿ ಗೆದ್ರ ಈ ಬಂಕಲ್ಲಿ  1/2, 1 ಲೀಟರ್‌ನಷ್ಟು ಪೆಟ್ರೋಲ್‌, ಡೀಸೆಲ್‌ ಫ್ರೀ

ಸಾರಾಂಶ

ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ವಿನೂತನ ಟಾಸ್ಕ್| ಟಾಸ್ಕ್‌ಲ್ಲಿ ಗೆದ್ರ ಈ ಬಂಕಲ್ಲಿ  1/2, 1 ಲೀಟರ್‌ನಷ್ಟು ಪೆಟ್ರೋಲ್‌, ಡೀಸೆಲ್‌ ಫ್ರೀ| 

ಚೆನ್ನೈ(ಫೆ.17): ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ತಮಿಳುನಾಡಿನ ಪೆಟ್ರೋಲ್‌ ಪಂಪ್‌ವೊಂದು 1-12ನೇ ತರಗತಿ ಮಕ್ಕಳಿಗೆ ಟಾಸ್ಕ್‌ವೊಂದನ್ನು ನೀಡಿ, ಗೆದ್ದವರಿಗೆ 1 ಲೀಟರ್‌ ವರೆಗೆ ಪೆಟ್ರೋಲ್‌ ಅನ್ನು ಕೊಡುಗೆಯಾಗಿ ನೀಡುವ ಆಫರ್‌ ನೀಡಿದೆ.

ತಮಿಳುನಾಡಿನ ಖ್ಯಾತ ಸಾಹಿತಿ ತಿರುವಳ್ಳುವರ್‌ ಅವರ ತಿರುಕ್ಕುರಲ್‌ನಲ್ಲಿರುವ (ಸಣ್ಣ ಪದ್ಯ) 10 ಜೋಡಿ ಪದಗಳನ್ನು ಕಂಠಪಾಠ ಮಾಡಿ ವಾಚಿಸಿದರೆ ಅರ್ಧ ಲೀಟರ್‌ ಪೆಟ್ರೋಲ್‌, 20 ಪದ್ಯಗಳನ್ನು ವಾಚಿಸಿದರೆ 1 ಲೀಟರ್‌ ಪೆಟ್ರೋಲ್‌ ಅನ್ನು ಬಹುಮಾನವಾಗಿ ನೀಡುವುದಾಗಿ ವಳ್ಳುವರ್‌ ಏಜೆನ್ಸಿಯ ನಾಗಂಪಲ್ಲಿಯಲ್ಲಿರುವ ಪೆಟ್ರೋಲ್‌ ಪಂಪ್‌ ಘೋಷಿಸಿದೆ.

ಸಚ್ಚಾರಿತ್ರ್ಯ, ಸಂಪತ್ತು, ಪ್ರೀತಿಯ ಕುರಿತ ತಿರುಕ್ಕುರಲ್‌ನಲ್ಲಿ 7 ಅಕ್ಷರಗಳ 1330 ಜೋಡಿ ಪದಗಳಿವೆ. ತಿರುಕ್ಕುರಲ್‌ ಓದನ್ನು ಉತ್ತೇಜಿಸುವ ಸಲುವಾಗಿ ಈ ಆಫರ್‌ ನೀಡಿದೆ. ತಮಿಳುನಾಡಿನಲ್ಲಿ ಲೀ. ಪೆಟ್ರೋಲ್‌ ಬೆಲೆ 91 ರು. ಮತ್ತು ಡೀಸೆಲ್‌ ಬೆಲೆ 85 ರು.ಗೆ ಏರಿಕೆಯಾಗಿದೆ.

100ರೂ. ಗಡಿಗೆ ಪೆಟ್ರೋಲ್‌, 90 ರೂ ದಾಟಿದ ಡೀಸೆಲ್‌!

ಈ ಒಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 5 ರು.ನಷ್ಟು ಇಳಿಕೆ!

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಜನರಿಗೆ ಮೇಘಾಲಯ ಸರ್ಕಾರ ಭರ್ಜರಿ ನೆರವು ನೀಡಿದೆ. ಎರಡೂ ತೈಲಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ರಾಜ್ಯ ಸರ್ಕಾರ ಕ್ರಮವಾಗಿ ಶೇ.12ರಷ್ಟುಕಡಿತ ಮಾಡಿದೆ.

ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ ಲೀ.ಗೆ 5 ರು. ನಷ್ಟುಇಳಿಕೆಯಾಗಿದೆ. ಪರಿಣಾಮ ಪೆಟ್ರೋಲ್‌ ದರ 91.26 ರು.ನಿಂದ 85.86 ರು.ಗೆ ಮತ್ತು ಡೀಸೆಲ್‌ ಬೆಲೆ 86.23 ರು.ನಿಂದ 79.13 ರು.ಗೆ ಇಳಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೂಡಾ ಇದೇ ರೀತಿ ತೆರಿಗೆ ಕಡಿತ ಮಾಡಿ ದರವನ್ನು ತಲಾ 2 ರು.ನಷ್ಟುಇಳಿಕೆ ಮಾಡಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು
Post Office Scheme: ದಿನಕ್ಕೆ ₹300 ಉಳಿಸಿ, 10 ವರ್ಷದಲ್ಲಿ ₹15 ಲಕ್ಷ ನಿಮ್ಮದಾಗಿಸಿಕೊಳ್ಳಿ!