ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟ ಜನರಿಗೆ ರಾಜ್ಯ ಸರ್ಕಾರ ಭರ್ಜರಿ ನೆರವು ನೀಡಿದೆ| ಈ ಒಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ 5 ರು.ನಷ್ಟು ಇಳಿಕೆ!
ಅಗರ್ತಲಾ(ಪೆ.17): ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟಜನರಿಗೆ ಮೇಘಾಲಯ ಸರ್ಕಾರ ಭರ್ಜರಿ ನೆರವು ನೀಡಿದೆ. ಎರಡೂ ತೈಲಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ರಾಜ್ಯ ಸರ್ಕಾರ ಕ್ರಮವಾಗಿ ಶೇ.12ರಷ್ಟುಕಡಿತ ಮಾಡಿದೆ.
ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀ.ಗೆ 5 ರು. ನಷ್ಟುಇಳಿಕೆಯಾಗಿದೆ. ಪರಿಣಾಮ ಪೆಟ್ರೋಲ್ ದರ 91.26 ರು.ನಿಂದ 85.86 ರು.ಗೆ ಮತ್ತು ಡೀಸೆಲ್ ಬೆಲೆ 86.23 ರು.ನಿಂದ 79.13 ರು.ಗೆ ಇಳಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೂಡಾ ಇದೇ ರೀತಿ ತೆರಿಗೆ ಕಡಿತ ಮಾಡಿ ದರವನ್ನು ತಲಾ 2 ರು.ನಷ್ಟುಇಳಿಕೆ ಮಾಡಿತ್ತು.
100ರೂ. ಗಡಿಗೆ ಪೆಟ್ರೋಲ್, 90 ರೂ ದಾಟಿದ ಡೀಸೆಲ್!
ಪೆಟ್ರೋಲ್ ದರ ಶತಕ?
ಗ್ರಾಹಕರಲ್ಲಿ ಬಹುದಿನಗಳಿಂದ ಆತಂಕ ಮೂಡಿಸಿದ್ದ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಸತತ 8ನೇ ದಿನವಾದ ಮಂಗಳವಾರ ಕೂಡಾ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ಲೀ.ಗೆ 30 ಮತ್ತು 35 ಪೈಸೆಯಷ್ಟುಹೆಚ್ಚಳ ಮಾಡಿವೆ. ಇದರೊಂದಿಗೆ ದೇಶದಲ್ಲೇ ಅತಿ ಹೆಚ್ಚು ದರ ಹೊಂದಿರುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ದರ ಲೀ.ಗೆ 99.87 ರು.ಗೆ ಮತ್ತು ಡೀಸೆಲ್ ದರ ಲೀ.ಗೆ 91.86ಕ್ಕೆ ತಲುಪಿದೆ.
ಅಂದರೆ ಕಳೆದ 8 ದಿನಗಳ ದರ ಏರಿಕೆ ಸಂಪ್ರದಾಯ ಬುಧವಾರವೂ ಮುಂದುವರೆದು, ದರ ಕನಿಷ್ಠ 13 ಪೈಸೆಯಷ್ಟುಹೆಚ್ಚಳವಾದರೆ ಪೆಟ್ರೋಲ್ ದರ 100 ರು.ಗೆ ಮುಟ್ಟಲಿದೆ. ಕಳೆದ 8 ದಿನದಲ್ಲಿ ಪೆಟ್ರೋಲ್ ದರ 2.34 ರು. ಮತ್ತು ಡೀಸೆಲ್ ದರ 2.57 ರು.ನಷ್ಟುಏರಿಕೆಯಾಗಿದೆ.
ಅಪ್ರಾಪ್ತರಿಗೆ ಕೊಡೋದಿಲ್ಲ ಪೆಟ್ರೋಲ್, ಡೀಸೆಲ್
ಉಳಿದಂತೆ ಮಂಗಳವಾರ ಪೆಟ್ರೋಲ್ ದರ ಮುಂಬೈನಲ್ಲಿ 95.75 ರು., ಬೆಂಗಳೂರಿನಲ್ಲಿ 92.28 ರು. ಮತ್ತು ದೆಹಲಿಯಲ್ಲಿ 89.29 ರು.ಗೆ ತಲುಪಿದೆ. ಇನ್ನು ಡೀಸೆಲ್ ಬೆಲೆ ಮುಂಬೈನಲ್ಲಿ 86.72 ರು., ಬೆಂಗಳೂರಿನಲ್ಲಿ 84.49 ರು. ಮತ್ತು ದೆಹಲಿಯಲ್ಲಿ 79.70 ರು.ಗೆ ತಲುಪಿದೆ.
ಪೆಟ್ರೋಲ್ ದರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಪಾಲು ಶೇ.60ರಷ್ಟಿದೆ. ಇನ್ನು ಡೀಸೆಲ್ ದರದಲ್ಲಿ ತೆರಿಗೆ ಪಾಲು ಶೇ.54ರಷ್ಟಿದೆ.