ಭಾರತದ ಆಟೋಮೋಟಿವ್ ವಲಯದ ಸ್ಮಾಲ್‌ಕ್ಯಾಪ್ ಕಂಪನಿಯಾದ JBM ಆಟೋ, ದಶಕದಲ್ಲಿ ಹೂಡಿಕೆದಾರರಿಗೆ ಭಾರಿ ಆದಾಯವನ್ನು ನೀಡಿದೆ.
ನವದೆಹಲಿ (ಜೂನ್ 18, 2023): ಬಹುತೇಕರಿಗೆ ಹಣ ಮಾಡುವ ಹಾಗೂ ತಮ್ಮ ಬಳಿ ಇರೋ ಹಣವನ್ನು ಹೆಚ್ಚು ಮಾಡುವುದು ಹೇಗೆ, ಹೆಚ್ಚು ಉಳಿತಾಯ ಮಾಡೋದು ಹೇಗೆ ಎಂಬುದೇ ಚಿಂತೆಯಾಗಿರುತ್ತೆ. ಇಂತಹವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ತಮ್ಮ ಹಣದ ಮೌಲ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಆದರೆ ಯಾವ ಕಂಪನಿ ಹೇಗೆ ಎಂಬ ಬಗ್ಗೆ ಅನುಮಾನಗಳಿರುತ್ತದೆ.
ಈ ಪೈಕಿ, ಭಾರತದ ಆಟೋಮೋಟಿವ್ ವಲಯದ ಸ್ಮಾಲ್‌ಕ್ಯಾಪ್ ಕಂಪನಿಯಾದ JBM ಆಟೋ, ದಶಕದಲ್ಲಿ ಹೂಡಿಕೆದಾರರಿಗೆ ಭಾರಿ ಆದಾಯ ನೀಡಿದೆ. ಈ ಕಂಪನಿಯ ಷೇರುಗಳು 9962% ರಷ್ಟು ಏರಿಕೆಯಾಗಿದೆ. ಹೂಡಿಕೆದಾರರು 10 ವರ್ಷಗಳ ಹಿಂದೆ 10,000 ರೂ. (135 ಡಾಲರ್) ಹೂಡಿಕೆ ಮಾಡಿದ್ದರೆ, ವಿಶ್ಲೇಷಣೆಯ ಪ್ರಕಾರ ಆ ಹಣದ ಮೌಲ್ಯ 10 ಲಕ್ಷ ರೂ. ಗೆ ($13,540) ಏರಿಕೆಯಾಗುತ್ತಿತ್ತು. ಕಳೆದ 3 ವರ್ಷಗಳಲ್ಲಿ, ಈ ಕಂಪನಿಯ ಷೇರು ಮೌಲ್ಯ 1192% ಏರಿಕೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ 270% ನಷ್ಟು ಆದಾಯವನ್ನು ನೀಡಿದೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: 10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!
ಸುಮಾರು 11,619 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಸ್ಮಾಲ್‌ಕ್ಯಾಪ್ ಕಂಪನಿಯಾದ JBM ಗ್ರೂಪ್, ವಾಹನ ಉತ್ಪನ್ನಗಳು ಮತ್ತು ಉಪ-ವ್ಯವಸ್ಥೆಗಳನ್ನು ತಯಾರಿಸುತ್ತದೆ. ಕಂಪನಿಯು ಏರ್ ಟ್ಯಾಂಕ್, ಚಾಸಿಸ್ ಮತ್ತು ಸಸ್ಪೆನ್ಷನ್ ಭಾಗಗಳು, ಕ್ರಾಸ್ ಕಾರ್ ಬೀಮ್, ನಿಷ್ಕಾಸ ವ್ಯವಸ್ಥೆಗಳು, ಇಂಧನ ಟ್ಯಾಂಕ್‌ಗಳು, ಹೀಟ್ ಶೀಲ್ಡ್‌ಗಳನ್ನು ಇತರ ಉತ್ಪನ್ನಗಳ ನಡುವೆ ನೀಡುತ್ತದೆ.
ಇದು ಹನ್ನೆರಡು ತಿಂಗಳ (ಟಿಟಿಎಂ) ಆಧಾರದ ಮೇಲೆ 10.28 ರ ಇಪಿಎಸ್ ಅನ್ನು ಹೊಂದಿದೆ ಮತ್ತು ಸ್ಟಾಕ್ ಪ್ರಸ್ತುತ 95.55 ರ ಪಿಇನಲ್ಲಿ ವಹಿವಾಟು ನಡೆಸುತ್ತಿದೆ. ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಇತ್ತೀಚಿನ ಷೇರುದಾರರ ಮಾದರಿಯ ಪ್ರಕಾರ, ಈ ಕಂಪನಿಯಲ್ಲಿ ಪ್ರೊಮೋಟರ್‌ಗಳು 67.52% ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ 32.47% ಸಾರ್ವಜನಿಕ ಷೇರುದಾರರ ಬಳಿ ಇರುತ್ತದೆ.
ಇದನ್ನೂ ಓದಿ: ಮರಳಿ ಹಳಿಗೆ ಅದಾನಿ ಗ್ರೂಪ್: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್ ಜಿಗಿದ ಗೌತಮ್ ಅದಾನಿ ಆಸ್ತಿ
ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು ಯಾವುದೇ ಪ್ರಮುಖ ಪಾಲನ್ನು ಹೊಂದಿಲ್ಲ. ಆದರೆ ವಿದೇಶಿ ಹೂಡಿಕೆದಾರರು ಕನಿಷ್ಠ 1.67% ಅನ್ನು ಹೊಂದಿದ್ದಾರೆ. ಇನ್ನು, ಚಿಲ್ಲರೆ ಹೂಡಿಕೆದಾರರು ಕಂಪನಿಯಲ್ಲಿ 9.36% ಸಂಯೋಜಿತ ಹಿಡುವಳಿ ಹೊಂದಿದ್ದಾರೆ.
JBM ಆಟೋ ಕಂಪನಿ ತನ್ನ ಸೇಲ್ಸ್ ಅನ್ನು 2013ರ ಆರ್ಥಿಕ ವರ್ಷದಲ್ಲಿ ಕೇವಲ 1364 ಕೋಟಿ ರೂ.ಗಳಿಂದ ಆರ್ಥಿಕ ವರ್ಷ 2023 ರಲ್ಲಿ 3857 ಕೋಟಿ ರೂ. ಗೆ ಹೆಚ್ಚಳವಾಗಿದೆ. ಈ ಮಧ್ಯೆ, ತೆರಿಗೆಯ ನಂತರದ ಲಾಭ (PAT) ಕೂಡ ಅದೇ ಅವಧಿಯಲ್ಲಿ ಕೇವಲ 57 ಕೋಟಿ ರೂ.ಗಳಿಂದ ಸುಮಾರು 124 ಕೋಟಿ ರೂ. ಗೆ ಏರಿಕೆಯಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: 10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!
ಮಾರ್ಚ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಕಂಪನಿಯ ಆದಾಯವು Q4 FY22 ರಲ್ಲಿ 1,055 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 964 ಕೋಟಿ ರೂ. ಗೆ ಕುಸಿದಿದೆ. ಅಂದರೆ, ವರ್ಷಕ್ಕೆ 8% ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಪಿಎಟಿ 26.81 ಕೋಟಿ ರೂ. ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!