ಜೆಮಿನಿ ಟೂರ್ಸ್ ಸ್ವಾಧೀನಪಡಿಸಿದ TBO ಗ್ರೂಪ್: ಬೆಂಗಳೂರಿನ ಟ್ರಾವೆಲ್ಸ್ ಹಾಪರ್ ಐಲ್ಯಾಂಡ್ ಜೊತೆ ವಿಲೀನ!

By Suvarna News  |  First Published May 31, 2021, 8:01 PM IST
  • ಬೆಂಗಳೂರು ಮೂಲದ ಜೆಮಿನಿ ಟೂರ್ಸ್, ಐಸ್‌ಲ್ಯಾಂಡ್ ಹಾಪರ್ ಜೊತೆ ವಿಲೀನ
  • ಭಾರತ- ಮಾಲ್ಡೀವ್ಸ್ ಟ್ರಾವೆಲ್ ಔಟ್‌ಬೌಂಡ್ ದಿಗ್ಗಜನ ಜೊತೆ ಬೆಂಗಳೂರು ಕಂಪನಿ 
  • ದಕ್ಷಿಣ ಭಾರತ ಮಾರುಕಟ್ಟೆಯಲ್ಲಿ ಹಾಪರ್ ತನ್ನ ಅಸ್ತಿತ್ವ ಮತ್ತಷ್ಟು ವಿಸ್ತರಣೆ

ಬೆಂಗಳೂರು(ಮೇ.31):  ಭಾರತೀಯ ಔಟ್‌ಬೌಂಡ್ ಮಾರ್ಕೆಂಟಿಂಗ್‌ನಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ TBO(ಟ್ರಾವೆಲ್‌ ಬೊಟಿಕ್ ಆನ್‌ಲೈನ್) ಗ್ರೂಪ್ ಇದೀಗ ಬೆಂಗಳೂರು ಮೂಲದ ಜೆಮಿನಿ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥಯನ್ನು ಸ್ವಾಧೀನಪಡಿಸಿಕೊಂಡಿದೆ. 

ಇಲ್ಲಿಗೆ  ಒಮ್ಮೆ ಭೇಟಿ ಕೊಡಿ' ಸ್ವರ್ಗದಂತಹ ಜಾಗಕ್ಕೆ ಪ್ರಧಾನಿ ಮೋದಿ ಕರೆ

Tap to resize

Latest Videos

TBO ಗ್ರೂಪ್ 2019ರಲ್ಲಿ ಐಲ್ಯಾಂಡ್ ಹಾಪರ್ ಕಂಪನಿ ಖರೀದಿಸಿದೆ. ಇದೀಗ TBO ಜೆಮಿನಿ ಟೂರ್ಸ್ ಖರೀದಿಯಿಂದ ಐಸ್‌ಲ್ಯಾಂಡ್ ಹಾಪ್ಪರ್ ದಕ್ಷಿಣ ಭಾರತದಲ್ಲಿ ವ್ಯವಹಾರ ವಿಸ್ತರಿಸಿದೆ. ಜೊತೆಗೆ ಭಾರತದಲ್ಲಿ ತನ್ನ ಅಸ್ತಿತ್ತವನ್ನು ಮತ್ತಷ್ಟು ಬಲಪಡಿಸಿದೆ. ಈ ಬೆಳವಣಿಗೆಯೊಂದಿಗೆ ಔಟ್‌ಬೌಂಡ್ ಮಾರ್ಕೆಂಟಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಗಟ್ಟಿಗೊಳಿಸಿದೆ. ಐಸ್‌ಲ್ಯಾಂಡ್ ಹಾಪರ್ ಭಾರತ- ಮಾಲ್ಡೀವ್ಸ್ ಟ್ರಾವೆಲ್ ಮಾರುಕಟ್ಟೆಯ ಶೇಕಡಾ 21ರಷ್ಟು ಪಾಲನ್ನು ಹೊಂದಿದೆ. 

ಮಾಲ್ಡೀವ್ಸ್‌ನಲ್ಲಿ ಡಾಲ್ಫಿನ್‌ಗಳನ್ನು ನೋಡಿ ಎಗ್ಸೈಟ್ ಆದ ರಾಧಿಕಾ ಪಂಡಿತ್, ಐರಾ!

ಐಸ್‌ಲ್ಯಾಂಡ್ ಹಾಪರ್ ಜೊತೆ ಜೆಮಿನಿ ಟೂರ್ಸ್ ಅಂಡ್ ಟ್ರಾವೆಲ್ಸ್ ವಿಲೀನಗೊಳ್ಳುತ್ತಿರುವುದು ಸಂತಸ ತಂದಿದೆ. ಈ ವಿಲೀನದಿಂದ ದಕ್ಷಿಣ ಭಾರತ ಮಾರುಕಟ್ಟೆಯಲ್ಲಿ ಹಾಪರ್ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸರಿಸಲು ಸಾಧ್ಯವಾಗಿದೆ. ಈ ಕಂಪನಿಗಳ ವಿಲೀನದಿಂದ ನಮ್ಮ ಗ್ರಾಹಕರಿಗೆ ವಿಶೇಷವಾಗಿ ಮಾಲ್ಡೀವ್ಸ್‌ನನಲ್ಲಿ  ಐಷಾರಾಮಿ ಹೋಟೆಲ್ ಆಯ್ಕೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಟಿಬಿಒ ಗ್ರೂಪ್ ಸಹ ಸಂಸ್ಥಾಪಕ ಅಂಕುಶ್ ನಿಜವಾನ್ ಹೇಳಿದ್ದಾರೆ. 

ಮಾಲ್ಡೀವ್ಸ್‌ನ್ನು ಪ್ರಯಾಣ ತಾಣವಾಗಿ ಪ್ರಚಾರ ಮಾಡುವ ಕಾರ್ಯದಲ್ಲಿ ಸುಬ್ಬರಾಮ್ ಮಣಿ ಹಾಗೂ ರಾಜಿ ಸುಬ್ಬರಾಮ್ ಮೊದಲಿಗರಾಗಿದ್ದಾರೆ.  ಮಾಲ್ಡೀವ್ಸ್‌ನ ಹೋಟೆಲ್ ಪಾಲುದಾರರಲ್ಲಿ ಹೆಚ್ಚಿನ ಗೌರವವಿದೆ, ಇದು ಐಸ್‌ಲ್ಯಾಂಡ್ ಹಾಪರ್ ತನ್ನ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ ಎಂದು ನಿಜವಾನ್ ಹೇಳಿದ್ದಾರೆ.

ಐಲ್ಯಾಂಡ್ ಹಾಪರ್‌ನ  ದಕ್ಷಿಣ ಭಾರತ ವ್ಯವಹಾರ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಜೆಮಿನಿ ಸಂಸ್ಥೆಯ ಸಂಸ್ಥಾಪಕರಾದ ಸುಬ್ಬರಂ ಮತ್ತು ರಾಜಿ ಸುಬ್ಬರಾಮ್  ಮುಂದುವರಿಯಲಿದ್ದಾರೆ. ಕೊರೋನಾ ವೈರಸ್ ಹೊಡೆತದಿಂದ ಮಾಲ್ಡೀವ್ಸ್ ಪ್ರಯಾಣ ನಿರ್ಬಂಧಗಳ ನಡುವೆಯೂ ಐಲ್ಯಾಂಡ್ ಹಾಪರ್ ವಾರ್ಷಿಕ ಬೆಳವಣಿಗೆಯಲ್ಲಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಿದೆ. ಮಾಲ್ಡೀವ್ಸ್‌ನ ಬಹುತೇಕ ರೆಸಾರ್ಟ್ ಹಾಗೂ ಐಷಾರಾಮಿ ಹೊಟೆಲ್‌ಗಳಿಗೆ ಪ್ರಮುಖ ಪೂರೈಕೆದಾರರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನಿಜವಾನ್ ಹೇಳಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಮಾಧುರಿ ಫನ್: ಸಮ್ಮರ್ ಮಜಾ ಶುರು.

ಜೆಮಿನಿ ಮತ್ತು ಮಾಲ್ಡೀವ್ಸ್ ಯಾವಾಗಲೂ ನಮ್ಮ ಮೊದಲ ಪ್ರೀತಿಯಾಗಿದೆ. ಕಳೆದ  20 ವರ್ಷಗಳ ಜೆಮಿನಿ ಮೇಲಿಟ್ಟಿರುವ ಪ್ರೀತಿಯಿಂದ ಸಂಸ್ಥೆ  ಬೆಳೆದು ನಿಂತಿದೆ.  ನಮ್ಮ ಕಠಿಣ ಪರಿಶ್ರಮ ಸಮಾಧಾನ ತಂದಿದೆ. ಈ ಪರಿಶ್ರಮ ಹೆಚ್ಚಿನ ಮಟ್ಟದ ತೃಪ್ತಿಯನ್ನು ನೀಡುತ್ತದೆ. TBO ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. 2 ಬಿಲಿಯನ್ ಅಮೆರಿಕನ್ ಡಾಲರ್ ಬಹುರಾಷ್ಟ್ರೀಯ ಕಂಪನಿಯ ಭಾಗವಾಗಲು ನಮಗೆ ಸಂತೋಷವಾಗುತ್ತಿದೆ.  ಟಿಬಿಒ ಸಮೂಹದ ಬೆಳವಣಿಗೆಗೆ ನಮ್ಮ ಕೊಡುಗೆ ನೀಡಲು ಉತ್ಸುಕರಾಗಿದ್ದೇವ ಎಂದು ಬೆಂಗಳೂರು ಮೂಲದ ಜೆಮಿನಿ ಟೂರ್ಸ್ ಅಂಡ್ ಟ್ರಾವೆಲ್ಸ್ ಸ್ಥಾಪಕ ಸುಬ್ಬರಾಮ್ ಮಣಿ ಹೇಳಿದ್ದಾರೆ.

click me!