ಲಸಿಕೆ ಖರೀದಿ ಗ್ಲೋಬಲ್ ಟೆಂಡರ್ ಕೈಬಿಟ್ಟ ಸರ್ಕಾರ, ಹೊಸ ಕ್ರಮ

By Suvarna News  |  First Published May 31, 2021, 6:30 PM IST

* ಕೋವಿಡ್ ಲಸಿಕೆ ಖರೀದಿಗೆ ಗ್ಲೋಬಲ್ ಟೆಂಡರ್‌ ಕೈಬಿಟ್ಟ ರಾಜ್ಯ ಸರ್ಕಾರ
* ಜಾಗತಿಕವಾಗಿ ಕೋವಿಡ್‌ ಲಸಿಕೆ ಖರೀದಿ ಮಾಡಲು ಗ್ಲೋಬಲ್ ಟೆಂಡರ್ ಕರೆಯಲಾಗಿತ್ತು
*  ಸಕಾಲಕ್ಕೆ ಅಗತ್ಯ ದಾಖಲೆ ಒದಗಿಸದೆ ಇ- ಟೆಂಡರ್‌ ಸಲ್ಲಿಸಿದ್ದ ಎರಡು ಕಂಪನಿಗಳು..
* ನೇರವಾಗಿ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು  ತೀರ್ಮಾನ


ಬೆಂಗಳೂರು(ಮೇ  31)  ಕೋವಿಡ್ ಲಸಿಕೆ ಖರೀದಿಗೆ ಗ್ಲೋಬಲ್ ಟೆಂಡರ್‌ ಆಲೋಚನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಖರೀದಿ ಮಾಡಲು ಗ್ಲೋಬಲ್ ಟೆಂಡರ್ ಕರೆಯಲು ಮುಂದಾಗಿತ್ತು.

ಸಕಾಲಕ್ಕೆ ಅಗತ್ಯ ದಾಖಲೆ ಒದಗಿಸದೆ ಇ- ಟೆಂಡರ್‌ ನ್ನು ಎರಡು ಕಂಪನಿಗಳು ಸಲ್ಲಿಸಿದ್ದವು. ಈಗ ನೇರವಾಗಿ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು ಸರ್ಕಾರ ಮುಂದಾಗಿದೆ.

Tap to resize

Latest Videos

ಮೇ 15ರಂದು ಕರೆಯಲ್ಪಟ್ಟಿದ್ದ ಗ್ಲೋಬಲ್ ಟೆಂಡರ್ ಕರೆಯಲಾಗಿತ್ತು ಮುಂಬಯಿಯ ಬುಲಕ್‌ ಎಂಆರ್‌ಒ ಇಂಡಸ್ಟ್ರೀಯಲ್‌ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್‌ ಕಂಪನಿಗಳು ಟೆಂಡರ್ ಗೆ ಅರ್ಜಿ ಹಾಕಿದ್ದವು.

ಕರ್ನಾಟಕದಲ್ಲಿ ಲಾಕ್ ಡೌನ್ ಮುಂದುವರಿಯಲಿದೆಯಾ? ತಜ್ಞರ ವರದಿ ಏನು

ಲಸಿಕೆ ತಯಾರು ಮಾಡುವ ಕಂಪನಿಗಳಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸುವುದಾಗಿ ಕಂಪನಿಗಳು ಹೇಳಿದ್ದವು. ಹಣಕಾಸು ದಾಖಲೆಗಳೂ ಸೇರಿ ಪೂರೈಕೆ ಖಾತರಿಯ ದಾಖಲೆ ಹಾಗೂ ಲಸಿಕೆಯ ತಾಂತ್ರಿಕ ದಾಖಲೆಗಳನ್ನು ಸಲ್ಲಿಸಿರಲಿಲ್ಲ.  ಎರಡು ಸಲ ವರ್ಚುಯಲ್‌ ಸಭೆಗಳನ್ನು ಕರೆದರೂ ಭಾಗವಹಿಸಿರಲಿಲ್ಲ. ರಷ್ಯಾ ಮೂಲದ ಸ್ಪುಟ್ನಿಕ್‌ ಲಸಿಕೆ ತಯಾರಿಸುವ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಲ್ಲಿಯೂ ವಿಫಲವಾಗಿದ್ದವು. 

ಈ ಎಲ್ಲ ಕಾರಣದಿಂದ ಜಾಗತಿಕ ಟೆಂಡರ್‌ ಪ್ರಕ್ರಿಯೆ ಡ್ರಾಪ್ ಮಾಡಲಾಗಿದೆ. ಜಾಗತಿಕ ಟೆಂಡರ್‌ ತಿರಸ್ಕೃತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಲಸಿಕೆ ಖರೀದಿಗೆ ತೀರ್ಮಾನ ಮಾಡಲಾಗಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಲಸಿಕೆ ತಯಾರು ಮಾಡುವ ಎಲ್ಲಾ ಕಂಪನಿಗಳಿಗೆ  ಸಂದೇಶ ನೀಡಲಾಗಿದ್ದು ಜನರಿಗೆ ಇನ್ನು ಮುಂದೆ ಹೇಗೆ ಲಸಿಕೆ ಲಭ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 

click me!