ಅಂಬಾನಿ ಕುಟುಂಬಕ್ಕೆ ಟ್ಯಾಕ್ಸ್ ನೊಟೀಸ್: ಅವರನ್ನು ಬಿಟ್ಟು ಉಳಿದವರೆಲ್ಲ ಕನ್ಫ್ಯೂಸ್!

By Web DeskFirst Published Sep 14, 2019, 4:26 PM IST
Highlights

ರಿಲಯನ್ಸ್ ಕಂಪನಿ ಮಾಲೀಕ ಅಂಬಾನಿ ಕುಟುಂಬ ಸದಸ್ಯರಿಗೆ ಐಟಿ ನೋಟಿಸ್| ವಿದೇಶದಲ್ಲಿ ಅಕ್ರಮ ಆಸ್ತಿ, ಹಣದ ಮಾಹಿತಿ ನೀಡಿ ಎಂದ ಅಧಿಕಾರಿಗಳು| ಅಂಬಾನಿ ಪತ್ನಿ, ಪುತ್ರರಿಗೆ ಸಂಕಷ್ಟ

ಮುಂಬೈ[ಸೆ.14]: ರಿಲಯನ್ಸ್ ಕಂಪನಿ ಮಾಲೀಕ ಮುಕೇಶ್ ಅಂಬಾನಿ ಕುಟುಂಬ ಸದಸ್ಯರಿಗೆ ಕಪ್ಪುಹಣ ಕಾಯ್ದೆ,2015ರಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐಟಿ ಇಲಾಖೆಯ ಮುಂಬೈ ವಿಭಾಗಕ್ಕೆ ಕಪ್ಪು ಹಣದ ಮಾಹಿತಿ ಲಭ್ಯವಾಗಿದ್ದು, ಇದರ ಬೆನ್ನಲ್ಲೇ ಅಂಬಾನಿ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮಕ್ಕಳಿಗೆ ನೋಟಿಸ್ ನೀಡಲಾಗಿದೆ. ಹೀಗಿದ್ದರೂ ರಿಲಯನ್ಸ್ ಈ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ.

ವಿಶ್ವದ ಪ್ರಭಾವಿ ಸಿಇಒಗಳಲ್ಲಿ ಅಂಬಾನಿ, ಶಶಿಶಂಕರ್‌ ಸೇರಿ 10 ಭಾರತೀಯರು!

ಮಾಧ್ಯಮಗಳ ವರದಿಯನ್ವಯ ಮಾರ್ಚ್ 28ರಂದು ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಹಾಗೂ ಅವರ ಮೂವರು ಮಕ್ಕಳಿಗೆ ಕಳುಹಿಸಲಾಗಿದೆ. ಇವರೆಲ್ಲರ ಹೆಸರಲ್ಲೂ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ. ಕೇಂದ್ರ ಸರ್ಕಾರಕ್ಕೆ ಜಿನೆವಾದ HSBC ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ 700 ಮಂದಿಯ ಪಟ್ಟಿ ಲಭ್ಯವಾಗಿತ್ತು. ಇದಾದ ಬಳಿಕ ಆದಾಯ ತೆರಿಗೆ ಈ ಸಂಬಂಧ ತನಿಖೆ ಆರಂಭಿಸಿತ್ತು. HSBC ಬ್ಯಾಂಕ್ ನಲ್ಲಿರುವ 14 ಖಾತೆಗಳಲ್ಲಿರುವ 601 ಮಿಲಿಯನ್ ಡಾಲರ್ ಹಣ ರಿಲಯನ್ಸ್ ಗ್ರೂಪ್ ನ ಆಫ್ ಶೋರ್ ಹೋಲ್ಡಿಂಗ್ಸ್ ನದ್ದಾಗಿದೆ. 

ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

ಐಟಿ ಇಲಾಖೆಗೆ ಹಣದ ಸೂಕ್ತ ಮಾಹಿತಿ ನೀಡಿಲ್ಲ

ಲಭ್ಯವಾದ ಮಾಹಿತಿ ಅನ್ವಯ ಈ ನೋಟಿಸ್ ಮುಂಬೈ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಿಂದ ಕಳುಹಿಸಲಾಗಿದೆ. ಈ ನೋಟೀಸ್ ನಲ್ಲಿ ಅಂಬಾನಿ ಕುಟುಂಬ ತಮ್ಮ ಆದಾಯದ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಹಲವಾರು ಕಂಪೆನಿಗಳು ಮುಂಬೈ ವಿಳಾಸ ಹೊಂದಿದೆಯಾದರೂ ಆದಾಯ ತೆರಿಗೆ ಇಲಾಖೆಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಈ ನೋಟಿಸ್ ಸಂಪೂರ್ಣವಾಗಿ ಆದಾಯ ತೆರಿಗೆ ವಿಭಾಗದ ತನಿಖೆಯನ್ನಾಧರಿಸಿದ್ದು, ನೋಟಿಸ್ ಸುಮಾರು ಮೂರು ತಿಂಗಳಿನ ಮೊದಲೇ ಕಳುಹಿಸಲಾಗಿದೆ ಎನ್ನಲಾಗಿದೆ.

ರಿಲಯನ್ಸ್ ಪ್ರತಿಕ್ರಿಯೆ ಏನು?

ಈ ಕುರಿತಾಗಿ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಕಂಪೆನಿ, ಇಂತಹ ಯಾವುದೇ ನೋಟಿಸ್ ಅಂಬಾನಿ ಕುಟುಂಬ ಸದಸ್ಯರಿಗೆ ಸಿಕ್ಕಿಲ್ಲ ಎಂದಿದ್ದಾರೆ. ಈ ಮೂಲಕ ಸುದ್ದಿಯನ್ನು ತಳ್ಳಿ ಹಾಕಿದೆ.

click me!