ನೌಕರರ ಮುಷ್ಕರ, ಎರಡು ದಿನ ಬ್ಯಾಂಕ್ ಸೇವೆ ಸ್ಥಗಿತ!

By Web Desk  |  First Published Sep 14, 2019, 11:48 AM IST

ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್‌ಗಳ ನೌಕರರಿಂದ ಮುಷ್ಕರ| ಭಾರತದಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್‌ಗಳ ಒಕ್ಕೂಟ| ಕರ್ನಾಟಕದಲ್ಲೂ ಬ್ಯಾಂಕ್‌ಗಳ ಮುಷ್ಕರಕ್ಕೆ ಕರೆ| ಮುಷ್ಕರದ ಹಿನ್ನೆಲೆ ATM ಹಾಗೂ ಬ್ಯಾಂಕ್ ಸೇವೆ ಸ್ಥಗಿತ


ಬೆಂಗಳೂರು[ಸೆ.14]: 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕ್‌ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಯಾಂಕ್ ನೌಕಕರು ತೀವ್ರ ವ್ಯಕ್ತಪಡಿಸಿದ್ದು, ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಅಲ್ಲದೇ ಸರ್ಕಾರ ತಮ್ಮ ಬೇಡಿಕೆಗೆ ಸಮ್ಮತಿಸದೇ ಹೋದಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆಯನ್ನೂ ನೀಡಿವೆ. ಹೀಗಾಗಿ ಬ್ಯಾಂಕಿಂಗ್ ಸೇವೆಯಲ್ಲಿ ತೀವ್ರತರ ವ್ಯತ್ಯಯವಾಗಲಿದೆ. ಯಾವತ್ತು ಬ್ಯಾಂಕ್ ನೌಕರರ ಮುಷ್ಕರ? ಇಲ್ಲಿದೆ ವಿವರ

ಸೆ.26​ ಮತ್ತು ಸೆ. 27ರಂದು ಬ್ಯಾಂಕ್‌ಗಳ ವಿಲೀನ ವಿರೋಧ ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್‌ಗಳ ಒಕ್ಕೂಟ ಭಾರತದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. SBI, ಕೆನರಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳೂ ಈ ಮುಷ್ಕರಕ್ಕೆ ಕೈ ಜೋಡಿಸಲಿವೆ. ಬೆಂಗಳೂರಿನಲ್ಲಿ SBI ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

Latest Videos

undefined

ವಿಲೀನ ಖಂಡಿಸಿ ಸೆ.26ರಿಂದ 2 ದಿನ ಬ್ಯಾಂಕ್‌ ಸಂಘಟನೆಗಳ ಮುಷ್ಕರ!

ಮುಷ್ಕರ ಹಿನ್ನೆಲೆ ಸೆ.26​ ಮತ್ತು ಸೆ. 27ರಂದು, ಎರಡು ದಿನಗಳ ಕಾಲ ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆಯಾಗಲಿದೆ. ATM ಹಾಗೂ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಎಚ್ಚರಿಕೆ ವಹಿಸಬೇಕಿದೆ.

ಬ್ಯಾಂಕ್ ನೌಕರರ ಬೇಡಿಕೆಗಳೇನು?

*10 ಬ್ಯಾಂಕ್‌ಗಳ ವಿಲೀನ ಮಾಡಿ 4 ಬ್ಯಾಂಕ್‌ ರಚಿಸುವ ನಿರ್ಧಾರ ಕೈಬಿಡಬೇಕು

* ತಕ್ಷಣವೇ ವೇತನ ಪರಿಷ್ಕರಣೆ ಮಾಡಬೇಕು

* ವಾರಕ್ಕೆ 5 ದಿನಗಳ ಕೆಲಸದ ನೀತಿ ಜಾರಿಗೆ ತರಬೇಕು

* ಬ್ಯಾಂಕ್‌ಗಳಲ್ಲಿ ಪ್ರಸಕ್ತ ಜಾರಿಯಲ್ಲಿರುವ ತನಿಖಾ ಕಾರ್ಯ ವಿಧಾನದಲ್ಲಿ ಬಾಹ್ಯ ಸಂಸ್ಥೆಗಳ ಹಸ್ತಕ್ಷೇಪ ನಿಲ್ಲಿಸಬೇಕು

* ನಿವೃತ್ತ ಸಿಬ್ಬಂದಿ ದೂರು ಇತ್ಯರ್ಥಪಡಿಸಬೇಕು

* ಅಗತ್ಯ ನೇಮಕಾತಿ ನಡೆಸಬೇಕು

* ಎನ್‌ಪಿಎಸ್‌ ರದ್ದು ಮಾಡಬೇಕು

* ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕ ರದ್ದು ಮಾಡಬೇಕು

* ಕಾರ್ಯನಿರ್ವಹಣೆ ತೃಪ್ತಿಕರ ಇಲ್ಲ ಎಂಬ ಅನುಮಾನದ ಮೇಲೆ ವೃಥಾ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು

ಮುಂದುವರಿದ ಬ್ಯಾಂಕ್‌ಗಳ ವಿಲೀನ ಪರ್ವ; ಈ ಬಾರಿ ನಮ್ಮ-ನಿಮ್ಮ ಕಾರ್ಪ್, ಸಿಂಡಿಕೇಟ್, ಕೆನರಾ!

ಕಳೆದ ಆ.30ರಂದು ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳನ್ನು ವಿಲೀನ ಮಾಡಿ 4 ದೊಡ್ಡ ಬ್ಯಾಂಕ್‌ ರಚನೆಯ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿತ್ತು. ಇದು ದೇಶದ ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಲೀನ ಪ್ರಕ್ರಿಯೆಯಾಗಿತ್ತು.

click me!