ಬೆಂಗಳೂರು: ಸರಕು ಸಾಗಣೆಯಲ್ಲಿ ದಾಖಲೆ ನಿರ್ಮಿಸಿದ ನೈಋುತ್ಯ ರೈಲ್ವೆ

By Kannadaprabha NewsFirst Published Apr 13, 2023, 1:47 PM IST
Highlights

ನೈಋುತ್ಯ ರೈಲ್ವೆ 20.05 ಕೋಟಿ ಟನ್‌ ಖನಿಜ ತೈಲ, 10.07 ಲಕ್ಷ ಟನ್‌ ಸಿಮೆಂಟ್‌, 10.45 ಲಕ್ಷ ಟನ್‌ ಸಕ್ಕರೆ ಸಾಗಿಸಿದೆ. ಜೊತೆಗೆ 509 ರೇಕ್‌ಗಳ ಆಟೋಮೊಬೈಲ್‌ಗಳನ್ನು ಸಾಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. 

ಬೆಂಗಳೂರು(ಏ.13):  ನೈಋುತ್ಯ ರೈಲ್ವೆಯು ಹದಿನೈದು ವರ್ಷಗಳ ಬಳಿಕ ಈ ಬಾರಿ 4.6 ಕೋಟಿ ಟನ್‌ (46 ಮಿಲಿಯನ್‌)ಗಿಂತ ಹೆಚ್ಚಿನ ಸರಕು ಸಾಗಣೆ ಮಾಡಿ ದಾಖಲೆ ಬರೆದಿದ್ದು, .4,610 ಕೋಟಿ ಆದಾಯ ಗಳಿಸಿದೆ. 2022-23ರಲ್ಲಿ ನೈಋುತ್ಯ ರೈಲ್ವೆಯು 4.60 ಕೋಟಿ ಟನ್‌ ಸರಕನ್ನು ದೇಶದ ವಿವಿಧೆಡೆಗೆ ಸಾಗಿಸಿದೆ. 2007-08ರಲ್ಲಿ 4.6 ಕೋಟಿ ಟನ್‌ ಸರಕು ಸಾಗಿಸಿದ ಬಳಿಕ ಇಷ್ಟು ವರ್ಷ ಪ್ರಮಾಣದ ಸರಕು ಸಾಗಾಣಿಕೆ ಮಾಡಿರಲಿಲ್ಲ.

ನೈಋುತ್ಯ ರೈಲ್ವೆ 20.05 ಕೋಟಿ ಟನ್‌ ಖನಿಜ ತೈಲ, 10.07 ಲಕ್ಷ ಟನ್‌ ಸಿಮೆಂಟ್‌, 10.45 ಲಕ್ಷ ಟನ್‌ ಸಕ್ಕರೆ ಸಾಗಿಸಿದೆ. ಜೊತೆಗೆ 509 ರೇಕ್‌ಗಳ ಆಟೋಮೊಬೈಲ್‌ಗಳನ್ನು ಸಾಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಆಟೋಮೊಬೈಲ್‌ ಕಂಪನಿಗಳ ಸರಕು ಸಾಗಣೆಯ ಮೊದಲ ಅಯ್ಕೆಯಾಗಿ ಹೊರಹೊಮ್ಮಿದ್ದು, ಟೊಯೋಟಾ, ಕಿಯಾ, ಸುಜುಕಿ, ಅಶೋಕ್‌ ಲೇಲ್ಯಾಂಡ್‌, ಟಿವಿಎಸ್‌ ಸೇರಿದಂತೆ ಇನ್ನಿತರ ಕಂಪನಿಗಳು ಹೊಸದಾಗಿ ತಯಾರಿಸಿದ ವಾಹನಗಳನ್ನು, ಪರಿಸರ ಸ್ನೇಹಿ, ಅಪಘಾತ ಮುಕ್ತ ಹಾಗೂ ಸರಿಯಾದ ವೇಳೆಗೆ ಸಾಗಿಸಿದೆ.

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು - ಹುಬ್ಬಳ್ಳಿ ನಡುವೆ ಮತ್ತೆರಡು ಹೊಸ ರೈಲು ಸಂಚಾರ

ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗದಲ್ಲಿ ನಡೆಯುತ್ತಿರುವ ಜೋಡಿ ಹಳಿ ಮಾರ್ಗದ ಕಾಮಗಾರಿ, ನಿಲ್ದಾಣದ ನವೀಕರಣ, ವಿದ್ಯುದೀಕರಣಕ್ಕೆ ಟ್ರಾಫಿಕ್‌ ಬ್ಲಾಕ್‌ಗಳನ್ನು ಪೂರೈಸಬೇಕಿತ್ತು. ಇದರ ಹೊರತಾಗಿ ಸರಕು ಸಾಗಣೆಯಲ್ಲಿ ಸಾರ್ವಜನಿಕ ಮತ್ತು ರೈಲ್ವೆ ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಸಾಗಣೆಗೆ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಅದರಂತೆ ಸೂಕ್ತ ವೇಳಾಪಟ್ಟಿಯಂತೆ ಸಾಗಣೆ ಮಾಡಿದ್ದರಿಂದ ದಾಖಲೆ ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ಆರ್ಥಿಕತೆಯ ಬೆಳವಣಿಗೆಯ ಅಗತ್ಯಕ್ಕೆ ತಕ್ಕಂತೆ ರೈಲ್ವೆಯ ಅಹರ್ನಿಶಿ ಶ್ರಮಿಸುತ್ತಿದೆ ಎಂದು ನೈಋುತ್ಯ ರೈಲ್ವೆ ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಹರಿಶಂಕರ್‌ ವರ್ಮಾ ಅವರು ಹೇಳಿದ್ದಾರೆ. ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಅವರು ದಾಖಲೆ ನಿರ್ಮಿಸಲು ಶ್ರಮಿಸಿದ ನೈಋುತ್ಯ ರೈಲ್ವೆಯ ಎಲ್ಲ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

click me!