ಕರ್ನಾಟಕ ಬ್ಯಾಂಕ್‌ನಿಂದ ಕಸ್ಟಮ್ಸ್‌ ತೆರಿಗೆ ಪಾವತಿಗೆ ಅಸ್ತು

By Kannadaprabha NewsFirst Published Apr 13, 2023, 11:59 AM IST
Highlights

ಅನುಕೂಲಕ್ಕೆ ತಕ್ಕಂತೆ ಗ್ರಾಹಕರು ಆನ್‌ಲೈನ್‌ ತೆರಿಗೆ ಪಾವತಿಸಿ: ಮಹಾಬಲೇಶ್ವರ ಎಂ.ಎಸ್‌.

ಮಂಗಳೂರು(ಏ.13):  ದೇಶದ ಪ್ರತಿಷ್ಠಿತ ಬ್ಯಾಂಕುಗಳ ಪೈಕಿ ಒಂದಾದ ಕರ್ಣಾಟಕ ಬ್ಯಾಂಕ್‌ ಮೂಲಕ ಭಾರತೀಯ ಕಸ್ಟಮ್ಸ್‌ ತೆರಿಗೆ ಪಾವತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಅನುಮತಿ ನೀಡಿದೆ. ಸಿಬಿಡಿಟಿ ಹಾಗೂ ಸಿಬಿಐಸಿ ಪರವಾಗಿ ಪ್ರತ್ಯಕ್ಷ ತೆರಿಗೆ ಹಾಗೂ ಪರೋಕ್ಷ ತೆರಿಗೆ ಪಾವತಿಗೆ ಸಿಜಿಎ (ಕಂಟ್ರೋಲರ್‌ ಜನರಲ್‌ ಆಫ್‌ ಅಕೌಂಟ್ಸ್‌) ಹಾಗೂ ಕೇಂದ್ರ ಹಣಕಾಸು ಸಚಿ ವಾಲಯ ಶಿಫಾರಸು ಮಾಡಿದೆ.

ಈಗಾಗಲೇ ಕರ್ಣಾಟಕ ಬ್ಯಾಂಕ್‌ ಗ್ರಾಹಕರು ವಾಣಿಜ್ಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಯ ರಾಷ್ಟ್ರೀಯ ಜಾಲತಾಣ (ಪೋರ್ಟಲ್‌) ಇಂಡಿಯನ್‌ ಕಸ್ಟಮ್ಸ್‌ ಎಲೆಕ್ಟ್ರಾನಿಕ್‌ ಗೇಟ್‌ವೇ (ಐಸಿಇಗೇಟ್‌) ಮೂಲಕ ಕರ್ಣಾಟಕ ಬ್ಯಾಂಕ್‌ನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಗ್ರಾಹಕರ ನಂಬಿಕೆಗೆ ಕರ್ನಾಟಕ ಬ್ಯಾಂಕ್‌ ಅರ್ಹ: ಶ್ರೀ

ಐಸಿಇಗೇಟ್‌ ಪೋರ್ಟಲ್‌ನಲ್ಲಿ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್‌ (ಸಿಬಿಐಸಿ)ನಲ್ಲಿ ವಾಣಿಜ್ಯ, ಸರಕು ಸಾಗಣೆ ಹಾಗೂ ಇತರ ವ್ಯವಹಾರಸ್ಥರಿಗೆ ಆನ್‌ಲೈನ್‌ ಮೂಲಕ ಪಾವತಿಗೆ ಅವಕಾಶ ಇದೆ. ಇದೀಗ ಸಿಬಿಐಸಿ ಹೊಸದಾಗಿ ಎಲೆಕ್ಟ್ರಾನಿಕ್‌ ಕ್ಯಾಶ್‌ ಲೆಡ್ಜರ್‌ (ಇಸಿಎಲ್‌) ಎಂಬ ಹೊಸ ವಿಧಾನವನ್ನು ಪರಿಚಯಿಸಿದ್ದು, ತೆರಿಗೆ ಹಾಗೂ ತೆರಿಗೆಯಲ್ಲದ ರಸೀದಿಗಳನ್ನು ಸಿಬಿಐಸಿ ಪರವಾಗಿ ಬಹು ಆಯ್ಕೆಯಲ್ಲಿ ಮಾಡಬಹುದಾಗಿದೆ.

ಕರ್ಣಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಈ ಬಗ್ಗೆ ಮಾತನಾಡಿ, ಕರ್ಣಾಟಕ ಬ್ಯಾಂಕ್‌ ಈ ನೂತನ ಸೌಲಭ್ಯ ಒದಗಿಸಲು ಹಣಕಾಸು ಇಲಾಖೆಯ ಪ್ರಿನ್ಸಿಪಾಲ್‌ ಚೀಫ್‌ ಕಂಟ್ರೋಲರ್‌ ಆಫ್‌ ಅಕೌಂಟ್ಸ್‌ ಹಾಗೂ ಸಿಬಿಐಸಿ ಅವರಿಂದ ಅನುಮತಿ ಪಡೆದ ದೇಶದ ಕೆಲವೇ ಬ್ಯಾಂಕ್‌ಗಳ ಪೈಕಿ ಒಂದು. ನಮ್ಮ ಎಲ್ಲ ಗ್ರಾಹಕರು ಈ ಸೌಲ ಭ್ಯದ ಮೂಲಕ ಅವರ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಬಹುದು.ಇದು ನಮ್ಮ ಗ್ರಾಹಕರಿಗೆ ಬ್ಯಾಂಕಿನ ಕೆಬಿಎಲ್‌ ನೆಕ್ಸ್ಟ್‌ಡಿಜಿಟಲ್‌ ಟ್ರಾನ್ಸ್‌ಫಾರ್ಮೇಶನ್‌ ಪ್ರಾಜೆಕ್ಟ್ನ ಮೂಲಕ ನೀಡಿದ ಇನ್ನೊಂದು ಡಿಜಿಟಲ್‌ ಉಪಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 22ರಿಂದ ವಾಣಿಜ್ಯ ತೆರಿಗೆ ಹಾಗೂ ಕಸ್ಟಮ್ಸ್‌ ತೆರಿಗೆ ಸಂಗ್ರಹವನ್ನು ಕರ್ಣಾಟಕ ಬ್ಯಾಂಕ್‌ ಮೂಲಕ ಆನ್‌ಲೈನ್‌ನಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈಗ ಸಿಬಿಐಸಿ ಎಲೆಕ್ಟ್ರಾನಿಕ್‌ ಕ್ಯಾಶ್‌ ಲೆಡ್ಜರ್‌ನ್ನು ಪರಿಚಯಿಸಿದೆ. ಏಪ್ರಿಲ್‌ 1ರಿಂದ ಈ ಸೌಲಭ್ಯ ದೊರಕುತ್ತಿದೆ ಅಂತ ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌ ತಿಳಿಸಿದ್ದಾರೆ. 

click me!