Akshaya Tritiya : ಒಂದು ಗ್ರಾಂ ಬಂಗಾರ ಖರೀದಿ ಮೊದಲು ಇದು ತಿಳಿದಿರಲಿ

By Suvarna NewsFirst Published Apr 13, 2023, 12:20 PM IST
Highlights

ಅಕ್ಷಯ ತೃತೀಯ ಹತ್ತಿರ ಬರ್ತಿದೆ. ಬಂಗಾರದ ಬೆಲೆ ಏರ್ತಾನೆ ಇದ್ದು, ಖರೀದಿ ಕಷ್ಟ ಎನ್ನುವವರು ಒಂದು ಗ್ರಾಂ ಗೋಲ್ಡ್ ಕಡೆ ಮುಖ ಮಾಡ್ಬಹುದು. ಆದ್ರೆ ಅದನ್ನು ಖರೀದಿಸುವ ಮೊದಲು ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇರ್ಬೇಕಲ್ವಾ?
 

ಈ ಬಾರಿ ಬಂಗಾರದ ಬೆಲೆ ಗಗನಕ್ಕೇರಿದೆ. ಶ್ರೀಸಾಮಾನ್ಯರು ಬಂಗಾರ ಖರೀದಿ ಮಾಡೋದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿನ್ನ ಖರೀದಿ ಮಾಡ್ತೇನೆ ಎನ್ನುವವರು ಕೆಲವೊಂದು ವಿಷ್ಯಗಳನ್ನು ತಿಳಿಯಬೇಕಾಗುತ್ತದೆ. ಯಾಕೆಂದ್ರೆ ಈಗಿನ ಪರಿಸ್ಥಿತಿಯಲ್ಲಿ ಚಿನ್ನ ಖರೀದಿ ಸುಲಭದ ಮಾತಲ್ಲ. ಚಿನ್ನದ ಮೇಲೆ ಎಲ್ಲರಿಗೂ ವಿಶೇಷ ಮೋಹವಿರುತ್ತದೆ. ಕೆಲವರು ಆಭರಣ ಖರೀದಿ ಮಾಡಿದ್ರೆ ಮತ್ತೆ ಕೆಲವರು ಚಿನ್ನದ ನಾಣ್ಯಗಳನ್ನು ಖರೀದಿ ಮಾಡ್ತಾರೆ. ಇನ್ನು ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸ್ತಾರೆ. ಈಗ ಅಕ್ಷಯ ತೃತೀಯ ಬರ್ತಿದೆ. ಕೈನಲ್ಲಿ ಹಣವಿಲ್ಲ ಆದ್ರೆ ಬಂಗಾರದ ಖರೀದಿಸುವ ಆಸೆ ನಿಯಂತ್ರಿಸೋಕೆ ಆಗ್ತಿಲ್ಲ ಎನ್ನುವವರು ಬೇರೆ ಮಾರ್ಗವನ್ನು ಹುಡುಕಬಹುದು. ನೀವು ಒಂದು ಗ್ರಾಂ ಬಂಗಾರ ಖರೀದಿ ಮಾಡಬಹುದು.

1 ಗ್ರಾಂ ಚಿನ್ನ (Gold) ದ ಟ್ರೆಂಡ್ ಹೊಸದಲ್ಲ. ಅನೇಕ ವರ್ಷಗಳಿಂದಲೂ ಒಂದು ಗ್ರಾಂ ಚಿನ್ನದ ಖರೀದಿ ಚಾಲ್ತಿಯಲ್ಲಿದೆ. ನೀವು ಆಭರಣ (Jewelry ) ಅಂಗಡಿಯಿಂದ ಇದನ್ನು ಖರೀದಿಸಬಹುದು. ಕೇವಲ ಒಂದು ಗ್ರಾಂ ಚಿನ್ನದ ಆಭರಣ ಲಭ್ಯವಿರುವ ಅಂಗಡಿಗಳೂ ನಮ್ಮಲ್ಲಿವೆ. ಇಂದು ನಾವು ಒಂದು ಗ್ರಾಂ ಚಿನ್ನದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

Latest Videos

EPFO:ಉಮಂಗ್ ಆ್ಯಪ್‌ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?

ಒಂದು ಗ್ರಾಂ ಚಿನ್ನ ಎಂದರೇನು? : ಸರಳ ಭಾಷೆಯಲ್ಲಿ ಹೇಳೋದಾದ್ರೆ  ಆಭರಣಗಳ ಮೇಲೆ ಚಿನ್ನದ ಪಾಲಿಶ್ ಮಾಡೋದನ್ನು ಒಂದು ಗ್ರಾಂ ಚಿನ್ನದ ಆಭರಣ ಎನ್ನಲಾಗುತ್ತದೆ.  ಈ ಪಾಲಿಶ್ ಮಾಡಿದ ಆಭರಣಗಳನ್ನು ಯಾರು ಬೇಕಾದರೂ ಧರಿಸಬಹುದು. ನೀವು ಅಲಾಯ್ ಮಿಕ್ಸ್ ಜ್ಯುವೆಲ್ಲರ್ಸ್‌ನಲ್ಲಿ 1 ಗ್ರಾಂ ಗೋಲ್ಡ್ ಪಾಲಿಶ್ ಆಭರಣಗಳನ್ನು ಖರೀದಿಸುತ್ತಿದ್ದರೆ ನಿಮಗೆ ಕಡಿಮೆ ಬೆಲೆಗೆ ಇದು ಲಭ್ಯವಾಗುತ್ತದೆ. ಅದೇ ಬೆಳ್ಳಿಯ ಮೇಲೆ 1 ಗ್ರಾಂ ಚಿನ್ನದ ಪಾಲಿಶ್ ಹೊಂದಿರುವ ಆಭರಣಗಳನ್ನು ಖರೀದಿಸುತ್ತಿದ್ದರೆ ನೀವು ಬೆಳ್ಳಿಯ ತೂಕ ಮತ್ತು 1 ಗ್ರಾಂ ಚಿನ್ನದ ಪಾಲಿಶ್‌ನ ವೆಚ್ಚವನ್ನು ಪಾವತಿಸಬೇಕಾಗುತ್ತದೆ. 

ಒಂದು ಗ್ರಾಂ ಚಿನ್ನ ಖರೀದಿ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ : 
• ಒಂದು ಗ್ರಾಂ ಚಿನ್ನದ ಆಭರಣ ಖರೀದಿ ಮಾಡ್ತೀರಿ ಎಂದಾದ್ರೆ ಬೆಳ್ಳಿ ಆಭರಣಕ್ಕೆ ಚಿನ್ನ ಪಾಲಿಶ್ ಮಾಡಿರುವ ಆಭರಣವನ್ನೇ ಖರೀದಿ ಮಾಡಿ. ಇದ್ರಿಂದ ಆಭರಣ ಮೌಲ್ಯ ಹೆಚ್ಚಾಗುತ್ತದೆ.
• ಮಿಶ್ರಲೋಹದ ಆಭರಣದ ಮೇಲೆ ಚಿನ್ನದ ಲೇಪನವಿರುವ ಆಭರಣ ಖರೀದಿ ಮಾಡ್ತಿದ್ದರೆ ಇದಕ್ಕೆ ಸರಿಯಾಗಿ ಚಿನ್ನವನ್ನು ಪಾಲಿಶ್ ಮಾಡಲಾಗಿದೆಯೇ ಎಂಬುದನ್ನು ಗಮನಿಸಿ ನಂತ್ರ ಖರೀದಿ ಮಾಡಿ. 
• ಒಂದು ಗ್ರಾಂ ಚಿನ್ನದ ಆಭರಣದಲ್ಲಿ ನಿಮಗೆ ಹಾಲ್‌ಮಾರ್ಕ್ ಆಭರಣ ಲಭ್ಯವಿಲ್ಲ. ಯಾವುದೇ ರಿಟರ್ನ್ ಪಾಲಿಸಿಯನ್ನು ನೀವು ಹೊಂದುವುದಿಲ್ಲ. ಅದೇ ಬೆಳ್ಳಿಯ ಆಭರಣಗಳ ಮೇಲೆ ಚಿನ್ನದ ಪಾಲಿಶ್ ಇದ್ದರೆ  ನೀವು ಅದರ ರಿಟರ್ನ್ ಮೌಲ್ಯವನ್ನು ಪಡೆಯುತ್ತೀರಿ.
• ನಿಮ್ಮ ಆಭರಣ ಹೊಳೆಯಬೇಕೆಂದ್ರೆ ನೀವು ಯಾವಾಗ ಬೇಕಾದ್ರೂ ಒಂದು ಗ್ರಾಂ ಚಿನ್ನಕ್ಕೆ ಬಂಗಾರದ ಪಾಲಿಶ್ ಮಾಡಿಸಬಹುದು. ಆದ್ರೆ ಆಗ ಬಂಗಾರಕ್ಕೆ ಎಷ್ಟು ಬೆಲೆಯಿದೆ ಅದನ್ನು ಆಧರಿಸಿ ವೆಚ್ಚ ಭರಿಸಬೇಕಾಗುತ್ತದೆ.
• ನಿಮ್ಮ ಬಳಿ ಬಂಗಾರದ ಆಭರಣವಿಲ್ಲವೆಂದು ನೀವು ಚಿಂತಿಸಬೇಕಾಗಿಲ್ಲ. ಒಂದು ಗ್ರಾಂ ಚಿನ್ನದ ಆಭರಣ ಬಂಗಾರದಷ್ಟೆ ಹೊಳಪನ್ನು ನೀಡುತ್ತದೆ. ನೀವು ಸರಿಯಾಗಿ ಅದನ್ನು ಸಂಗ್ರಹಿಸಿಟ್ಟರೆ 10 – 15 ವರ್ಷಗಳ ಕಾಲ ಆರಾಮವಾಗಿ ಬಳಸಬಹುದು. 

Akshaya Tritiya 2023: ತ್ರೇತಾಯುಗ ಆರಂಭದ ಈ ದಿನ ಅದೆಷ್ಟೊಂದು ಮಹತ್ವದ ಘಟನೆಗಳಿಗೆ ಸಾಕ್ಷಿ ಗೊತ್ತಾ?

ಒಂದು ಗ್ರಾಂ ಚಿನ್ನದ ಆಭರಣವನ್ನು ಇಡೋದು ಹೇಗೆ? : ಬಂಗಾರದ ಆಭರಣ ಎಂದಾಗ ನಾವು ಹೆಚ್ಚು ಮುತುವರ್ಜಿ ವಹಿಸ್ತೇವೆ. ಅದೇ ಲೇಪಿತ ಆಭರಣ ಎಂದಾಗ ನಿರ್ಲಕ್ಷ್ಯ ಮಾಡ್ತೇವೆ. ನೀವು ಒಂದು ಗ್ರಾಂ ಚಿನ್ನದ ಆಭರಣವನ್ನು ಹತ್ತಿಯ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಹೀಗೆ ಮಾಡಿದ್ರೆ ಆಭರಣಕ್ಕೆ ಗಾಳಿ ಸೋಕುವುದಿಲ್ಲ. ಇದ್ರಿಂದ ಅದು ಕಪ್ಪಾಗುವುದಿಲ್ಲ. ಒಂದು ಗ್ರಾಂ ಚಿನ್ನದ ಆಭರಣಕ್ಕೆ ನೀರು ತಗಲದಂತೆ ನೋಡಿಕೊಳ್ಳಿ. ಹಾಗೆಯೇ ಸುಗಂಧ ದ್ರವ್ಯವನ್ನು ಹಾಕ್ಬೇಡಿ.  
 

click me!