ಇಸ್ಲಾಂ ಧರ್ಮ ಗುರುಗಳ ಕೆಂಗಣ್ಣಿಗೆ ಗುರಿಯಾದ ಶಾರುಖ್‌ ಖಾನ್‌-ಆರ್ಯನ್‌ ಖಾನ್‌

By Santosh Naik  |  First Published Dec 8, 2024, 4:05 PM IST

ಶಾರುಖ್‌ ಖಾನ್‌ ಹಾಗೂ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಈಗ ಇಸ್ಲಾಂ ಧರ್ಮ ಗುರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಇಬ್ಬರೂ ಸೇರಿ ಆರಂಭ ಮಾಡಿರುವ ಹೊಸ ಉದ್ಯಮ.


ಬೆಂಗಳೂರು (ಡಿ.8): ಶೀಘ್ರದಲ್ಲಿಯೇ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ನೆಟ್‌ಫ್ಲಿಕ್ಸ್‌ ಸಿರೀಸ್‌ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆಯಲಿದ್ದಾರೆ. ಆದರೆ, ತಮ್ಮ ನಿರ್ದೇಶನದ ಮೊದಲ ಪ್ರಯತ್ನವನ್ನು ಘೋಷಣೆ ಮಾಡುವ ಮುನ್ನ ಆರ್ಯನ್‌ ಖಾನ್‌ 2022ರಿಂದಲೇ ಹೊಸ ಉದ್ಯಮವನ್ನು ಆರಂಭ ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಆರ್ಯನ್‌ ಖಾನ್‌ ಹಾಗೂ ಅವರ ತಂದೆ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾಣ್‌ ಜೊತೆಯಾಗಿ ಸೇರಿ ವಿಸ್ಕಿ ಬ್ರ್ಯಾಂಡ್‌ಅನ್ನು ಆರಂಭ ಮಾಡಿದ್ದರು. ಈಗ ಈ ವಿಸ್ಕಿ ಬ್ರ್ಯಾಂಡ್‌ ಜಗತ್ತಿನ ಅತ್ಯುತ್ತಮ ವಿಸ್ಕಿಗಳಲ್ಲಿ ಒಂದು ಎನ್ನುವ ಮನ್ನಣೆ ಪಡೆದುಕೊಂಡಿದೆ. ಅಪ್ಪ-ಮಗ ಸೇರಿ ಆರಂಭಿಸಿರುವ ಈ ವಿಸ್ಕಿ ಬ್ರ್ಯಾಂಡ್‌ನ ಹೆಸರು ಡ್ಯಾವೋಲ್‌ ಇನ್ಸೆಪ್ಶನ್‌ (D’YAVOL Inception).

ಇನ್ನು ಶಾರುಖ್‌ ಹಾಗೂ ಆರ್ಯನ್‌ ಸೇರಿ ಆರಂಭ ಮಾಡಿರುವ ವಿಸ್ಕಿ ಉದ್ಯಮದ ಬಗ್ಗೆ ಇಸ್ಲಾಂ ಧರ್ಮಗುರುಗಳು ಕೆಂಗಣ್ಣು ಬೀರಿದ್ದಾರೆ. ಇಸ್ಲಾಂನಲ್ಲಿ ಮದ್ಯ ಸೇವಿಸುವುದು ಹಾಗೂ ಮದ್ಯ ಮಾರಾಟ ಮಾಡೋದನ್ನ ಹರಾಮ್‌ ಎಂದು ಹೇಳಲಾಗುತ್ತದೆ. ಆದರೆ, ಶಾರುಖ್‌ ಖಾನ್‌ರಂಥ ಪ್ರಸಿದ್ಧ ವ್ಯಕ್ತಿಗಳು ವಿಸ್ಕಿ ಉದ್ಯಮಕ್ಕೆ ಇಳಿದಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಕಿಂಗ್‌ ಆಫ್‌ ಬಾಲಿವುಡ್‌ ಎಂದು ಕರೆಯಲ್ಪಡುವ ಶಾರುಖ್‌ ಖಾನ್‌ ಕೇವಲ ಮನರಂಜನಾ ಕ್ಷೇತ್ರದಲ್ಲಿ ಮಾತ್ರವೇ ಇಲ್ಲ, ವಿಸ್ಕಿ ಬ್ರ್ಯಾಂಡ್‌ ಆರಂಭ ಮಾಡುವ ಮೂಲಕ ವಾಣಿಜ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಇವರ ಡ್ಯಾವೋಲ್‌ ವಿಸ್ಕಿ, 2024ರ ವರ್ಲ್ಡ್‌ ಸ್ಪಿರಿಟ್ಸ್‌ ಸ್ಪರ್ಧೆಯಲ್ಲಿ ಅಗ್ರ ಬಹುಮಾನ ಗೆದ್ದಿದೆ. ಈ ಬ್ರ್ಯಾಂಡ್‌, ಬೆಸ್ಟ್‌ ಓವರ್‌ಆಲ್‌ ಸ್ಕಾಚ್‌, ಬೆಸ್ಟ್‌ ಆಫ್‌ ಕ್ಲಾಸ್‌ ಮತ್ತು ಬೆಸ್ಟ್‌ ಬ್ಲೆಂಡೆಡ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿ ಅನ್ನೋ ಗೌರವ ಪಡೆದಿದೆ.

ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರತಿ ಮದ್ಯವನ್ನು ಪರೀಕ್ಷೆ ಮಾಡಲಾಗುತ್ತದೆ. ಯಾವ ವಿಭಾಗ, ಅಥೆಂಟಿಸಿಟಿ, ಕ್ವಾಲಿಟಿ ಹಾಗೂ ಹೇಗೆ ಉತ್ಪಾದನೆ ಮಾಡಲಾಗಿದೆ ಅನ್ನೋ ಆಧಾರದ ಮೇಲೆ ಅವಾರ್ಡ್‌ ನೀಡಲಾಗುತ್ತದೆ. ಶಾರುಖ್‌ ಖಾನ್‌ ಅವರ ಡ್ಯಾವೋಲ್‌ ಈ ಎಲ್ಲಾ ಪರೀಕ್ಷೆಯಲ್ಲೂ ಪಾಸ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಯನ್‌ ಖಾನ್‌, 'ಅಥೆಂಟಿಸಿಟಿ, ಕ್ವಾಲಿಟಿ ಹಾಗೂ ಕ್ರಾಫ್ಟ್‌ಮನ್‌ ಶಿಪ್‌ ವಿಚಾರದಲ್ಲಿ ನಾವು ಸರಿಯಾದ ದಾರಿಯಲ್ಲಿದ್ದೇವೆ ಅನ್ನೋದಕ್ಕೆ ಈ ಅವಾರ್ಡ್‌ ಸಿಕ್ಕಿರುವುದೇ ಸಾಕ್ಷಿ' ಎಂದು ಹೇಳಿದ್ದಾರೆ.

Shivamogga: ಶರಾವತಿ ಪಂಪ್ಡ್‌ ಸ್ಟೋರೇಜ್‌ ಪ್ರಾಜೆಕ್ಟ್‌; ಪಶ್ಚಿಮ ಘಟ್ಟದಲ್ಲಿ ಡ್ರಿಲ್ಲಿಂಗ್‌, ಬ್ಲಾಸ್ಟಿಂಗ್‌, 14 ಸಾವಿರ ಮರ ಕಟ್

ಈ ವಿಸ್ಕಿ ಬ್ರ್ಯಾಂಡ್‌ನ 750 ಎಂಎಲ್‌ನ ಫುಲ್‌ ಬಾಟಲ್‌ ಮಹಾರಾಷ್ಟ್ರದಲ್ಲಿ 9800 ರೂಪಾಯಿ, ಗೋವಾದಲ್ಲಿ 9 ಸಾವಿರ ಹಾಗೂ ಕರ್ನಾಟಕದಲ್ಲಿ 9500 ರೂಪಾಯಿಗೆ ಲಭ್ಯವಿದೆ. ಶೀಘ್ರದಲ್ಲಿಯೇ ಇದು, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರ್ಯಾಣ ಹಾಗೂ ತೆಲಂಗಾಣದಲ್ಲಿ ಲಭ್ಯವಾಗಲಿದೆ.

ಉದ್ಘಾಟನೆ ಆದ ಬೆನ್ನಲ್ಲೇ ಎದುರಾಯ್ತು ಲೀಲಾವತಿ ದೇಗುಲಕ್ಕೆ ಕುತ್ತು!

ಶಾರುಖ್ ಖಾನ್ ಮತ್ತು ಆರ್ಯನ್ ಖಾನ್ ಅವರ ವಿಸ್ಕಿ ಬ್ರಾಂಡ್‌ನ ವಿಶೇಷ ವೈಶಿಷ್ಟ್ಯವೆಂದರೆ ಇದನ್ನು 12 ವರ್ಷಗಳ 8 ವಿಭಿನ್ನ ಮಾಲ್ಟ್‌ಗಳಿಂದ ರಚಿಸಲಾಗಿದೆ. ಮಾಲ್ಟ್‌ಗಳನ್ನು ಮಿಶ್ರಣ ಮಾಡುವ ಮೊದಲು ಹೈಲ್ಯಾಂಡ್, ಲೋಲ್ಯಾಂಡ್ ಮತ್ತು ಐಲ್ಯಾಂಡ್ ಪ್ರದೇಶಗಳಿಂದ ಪಡೆಯಲಾಗಿದೆ.

click me!