ತಮಗಿಂತ ಜೊಮ್ಯಾಟೋ ಮಾಲೀಕ ದೀಪೇಂದ್ರ ಹೇಗೆ ಶ್ರೇಷ್ಠ ಎಂಬುದನ್ನ ಹೇಳಿದ್ರು ನಾರಾಯಣಮೂರ್ತಿ

By Mahmad Rafik  |  First Published Dec 8, 2024, 12:42 PM IST

ಎನ್ಆರ್ ನಾರಾಯಣಮೂರ್ತಿ ಅವರು ಜೊಮ್ಯಾಟೋ ಮಾಲೀಕ ದೀಪೇಂದ್ರ ಗೋಯೆಲ್ ಅವರನ್ನು ಹೊಗಳಿದ್ದಾರೆ. ನಾರಾಯಣಮೂರ್ತಿ ಅವರು ಮೆಚ್ಚುಗೆ ಸೂಚಿಸಿದ್ದಕ್ಕೆ ದೀಪೇಂದ್ರ ಗೋಯೆಲ್ ಕೈ ಮುಗಿದು ನಮಸ್ಕರಿಸಿದರು. 


ಬೆಂಗಳೂರು: ಇನ್ಪೋಸಿಸ್ ಮಾಲೀಕ ಎನ್ಆರ್ ನಾರಾಯಣಮೂರ್ತಿ ಅವರ ಕಂಪನಿಯಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಾ ಸುಂದರವಾದ ಜೀವನ ಕಟ್ಟಿಕೊಂಡಿದ್ದಾರೆ. ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ  ನಾರಾಯಣಮೂರ್ತಿಯವರ ಕೆಲವು ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುತ್ತವೆ. ಐಟಿ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ರಜೆ ನೀಡುವ ಪದ್ಧತಿ ಬಗ್ಗೆ ನಾರಾಯಣಮೂರ್ತಿ ಆಗಾಗ್ಗೆ ಅಸಮಾಧಾನ ಹೊರಹಾಕುತ್ತಲೇ ಇರುತ್ತಾರೆ. ಈ ಬಗ್ಗೆ ಆಗಾಗ್ಗೆ ವಾದ-ಪ್ರತಿವಾದಗಳು ನಡೆಯುತ್ತಲೇ ಇರುತ್ತೇವೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾರಾಯಣಮೂರ್ತಿ, ಜೊಮ್ಯಾಟೋ ಮಾಲೀಕ ದೀಪೇಂದ್ರ ಗೋಯೆಲ್ ತಮಗಿಂತ ಹೇಗೆ ಶ್ರೇಷ್ಠ ಎಂಬ ವಿಷಯವನ್ನು ಹೇಳಿದ್ದರು. ಈ ವೇಳೆ ಇದೇ ಕಾರ್ಯಕ್ರಮದಲ್ಲಿ ದೀಪೇಂದ್ರ ಗೋಯೆಲ್ ಸಹ ಉಪಸ್ಥಿತರಿದ್ದರು. 

ಕೆಲ ವಾರಗಳ ಹಿಂದೆ ಕಪಿಲ್ ಶರ್ಮಾ ನಡೆಸಿಕೊಡುವ ಕಾಮಿಡಿ ಶೋನಲ್ಲಿ ನಾರಾಯಣಮೂರ್ತಿ, ಸುಧಾಮೂರ್ತಿ, ದೀಪೇಂದ್ರೆ ಗೋಯೆಲ್ ಮತ್ತು ಗ್ರೆಸಿಯಾ ಭಾಗವಹಿಸಿದ್ದರು. ಒಂದೇ ವೇದಿಕೆಯಲ್ಲಿ ಎರಡು ಯಶಸ್ವಿ ಜೋಡಿ ಭಾಗಿಯಾಗಿದ್ದರಿಂದ ಹಲವು ವಿಷಯಗಳ ಚರ್ಚೆ ಜೊತೆ ಕಾಮಿಡಿಯೂ ನಡೆಯಿತು. ಈ ಕಾರ್ಯಕ್ರಮದ ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿವೆ.

Tap to resize

Latest Videos

ಕಾರ್ಯಕ್ರಮಕ್ಕೆ ಮೊದಲು ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಆಗಮಿಸಿದ್ದರು. ಇದಾದ ಬಳಿಕ ದೀಪೇಂದ್ರ ಗೋಯೆಲ್ ಪತ್ನಿ ಗ್ರೆಸಿಯಾ ವೇದಿಕೆಗೆ ಆಗಮಿಸಿದರು. ವೇದಿಕೆಗೆ ಬರುತ್ತಿದ್ದಂತೆ ಓರ್ವ ಸಾಮಾನ್ಯ ಯುವಕನಂತೆ ಸರ್ ಮತ್ತು ಮೇಡಮ್ ಜೊತೆ ಒಂದು ಫೋಟೋ ಅಂತೇಳಿ ಅವರ ಪಕ್ಕದಲ್ಲಿ ಹೋಗಿ ನಿಂತ್ಕೊಂಡು ದೀಪೇಂದ್ರ ಗೋಯೆಲ್ ಫೋಟೋ ಕ್ಲಿಕ್ಕಿಸಿಕೊಂಡರು. ಇದನ್ನು ಗಮನಿಸಿದ ವೀಕ್ಷಕರು ದೀಪೇಂದ್ರ ಸರಳತೆಗೆ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿದರು. 

ಇದಾದ ಬಳಿಕ ನಾರಾಯಣಮೂರ್ತಿ ಕೆಲಸದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ದೀಪೇಂದ್ರ ಗೋಯೆಲ್ ತಮಗಿಂತ ಹೇಗೆ ಶ್ರೇಷ್ಠ ಎಂಬ  ಅಚ್ಚರಿಯ ವಿಷಯದ ಬಗ್ಗೆಯೂ ಮಾತನಾಡಿದರು. ತಮ್ಮ ಬಗ್ಗೆ ನಾರಾಯಣಮೂರ್ತಿ ಅವರು ಮೆಚ್ಚುಗೆ ಸೂಚಿಸಿದ್ದಕ್ಕೆ ದೀಪೇಂದ್ರ ಗೋಯೆಲ್ ಕೈ ಮುಗಿದು ನಮಸ್ಕರಿಸಿದರು. 

ಇದನ್ನೂ ಓದಿ: ಭಾರತದಲ್ಲಿ ಇವರಿಗೆ ಸಿಗುತ್ತೆ ಹೆಚ್ಚು ಆದಾಯ ತೆರಿಗೆ ವಿನಾಯ್ತಿ; ಈ ರಾಜ್ಯದವರು ಟ್ಯಾಕ್ಸ್ ಕಟ್ಟೋದೇ ಇಲ್ಲ

ನಾರಾಯಣಮೂರ್ತಿ ಹೇಳಿದ್ದೇನು?
ನಾರಾಯಣಮೂರ್ತಿಯವರ ಇನ್ಫೋಸಿಸ್ ಮತ್ತು ದೀಪೇಂದ್ರ ಗೋಯೆಲ್ ಅವರ ಜೋಮ್ಯಾಟೋದಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ ಎಂದು ಕಪಿಲ್ ಶರ್ಮಾ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ನಾರಾಯಣಮೂರ್ತಿ, ಓದಿದವರಿಗೆ ಕೆಲಸ ಕೊಡುವುದು ದೊಡ್ಡ ವಿಷಯವಲ್ಲ. ಆದ್ರೆ ಓದದೇ ಇರೋರಿಗೆ ದೀಪೇಂದ್ರ ಗೋಯೆಲ್ ಕೆಲಸ ನೀಡಿದ್ದಾರೆ. ಸಾಮಾನ್ಯ ಅರ್ಹತೆಯವರು ಇಂದು ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಾ ಒಳ್ಳೆಯ ಸಂಪಾದನೆ  ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ದೀಪೇಂದ್ರ ಗೋಯೆಲ್ ತಮಗಿಂತ ಶ್ರೇಷ್ಠರು ಎಂದು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ

click me!