
ನವದೆಹಲಿ (ಜು.2): ಭಾರತದ ಅತೀದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI) ತನ್ನ ಗ್ರಾಹಕರಿಗೆ ಶೀಘ್ರದಲ್ಲೇ ವಾಟ್ಸಾಪ್ ಬ್ಯಾಂಕಿಂಗ್ (WhatsApp Banking) ಸೇವೆಗಳನ್ನು (Services) ಒದಗಿಸಲಿದೆ. ಎಸ್ ಬಿಐ ಮುಖ್ಯಸ್ಥ (Chairman) ದಿನೇಶ್ ಖಾರ (Dinesh Khara) ಈ ಬಗ್ಗೆ ಶುಕ್ರವಾರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ಪೋರೇಟ್ ಗ್ರಾಹಕರಿಗೆ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ ಫೇಸ್ (API) ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಕೂಡ ಎಸ್ ಬಿಐ ಸಿದ್ಧತೆ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಒಮ್ಮೆ ಎಪಿಐ ಬ್ಯಾಂಕಿಂಗ್ ವ್ಯವಸ್ಥೆಯನ್ನು (API Banking system) ಪ್ರಾರಂಭಿಸಿದ ಬಳಿಕ ಇದು ಬ್ಯಾಂಕ್ ಹಾಗೂ ಗ್ರಾಹಕ ಸರ್ವರ್ ನಡುವೆ ಸಂವಹನ ಕಲ್ಪಿಸಲು ನೆರವು ನೀಡಲಿದೆ. ಅಲ್ಲದೆ, ಎರಡು ವ್ಯವಸ್ಥೆಗಳ ನಡುವೆ ಮಾಹಿತಿಗಳ ಸುಲಭ ವರ್ಗಾವಣೆಗೆ ಸಹಕರಿಸಲಿದೆ. ಅಲ್ಲದೆ, ಗ್ರಾಹಕರಿಗೆ ಸುಭದ್ರ ಹಾಗೂ ತಡೆರಹಿತ ಅನುಭವ ಒದಗಿಸುತ್ತದೆ.
ಇನ್ಮುಂದೆ ವಿಮಾನ, ರೈಲಲ್ಲೂ ಸಿಗಲಿದೆ ನಂದಿನಿ ಉತ್ಪನ್ನ
ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಿಂದ ಎಸ್ ಬಿಐ ಗ್ರಾಹಕರು ಈ ಮೆಸೇಜಿಂಗ್ ವೇದಿಕೆ ಮೂಲಕ ನಿರ್ದಿಷ್ಟ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಅವಕಾಶ ಸಿಗಲಿದೆ. ಒಮ್ಮೆ ಎಸ್ ಬಿಐ ವಾಟ್ಸಾಪ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ ಬಳಿಕ ಯಾವೆಲ್ಲ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬ ಬಗ್ಗೆ ಖಾರ ಮಾಹಿತಿಗಳನ್ನು ಒದಗಿಸಿಲ್ಲ.
ಪ್ರಸ್ತುತ ಎಸ್ ಬಿಐ ಕಾರ್ಡ್ ವಾಟ್ಸಾಪ್ ಕನೆಕ್ಟ್ (SBI Card WhatsApp connect) ಎಂಬ ಹೆಸರಿನಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಟ್ಸಾಪ್ ಆಧಾರಿತ ಸೇವೆಗಳನ್ನು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಒದಗಿಸುತ್ತಿದೆ. ಈ ವೇದಿಕೆ ಮೂಲಕ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಖಾತೆ ಮಾಹಿತಿ ಪರಿಶೀಲನೆ, ರಿವಾರ್ಡ್ ಪಾಯಿಂಟ್ಸ್ ಚೆಕ್, ಬ್ಯಾಲೆನ್ಸ್, ಪಾವತಿ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆಗೆ ಸೈನ್ ಇನ್ ಆಗಲು ಕಾರ್ಡ್ ಬಳಕೆದಾರರು 9004022022 ಸಂಖ್ಯೆಗೆ ‘OPTIN’ಎಂದು ಟೈಪ್ ಮಾಡಿ ವಾಟ್ಸಾಪ್ ಮೆಸೇಜ್ ಕಳುಹಿಸಬೇಕು. ಅಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 08080945040 ನಂಬ್ರಗೆ ಮಿಸ್ಡ್ ಕಾಲ್ ನೀಡಬಹುದು ಅಥವಾ ಸೇವೆ ಪಡೆಯಲು ಮೊಬೈಲ್ ಅಪ್ಲಿಕೇಷನ್ ಬಳಸಬಹುದು.
ಪ್ರಸ್ತುತ ಎಚ್ ಡಿಎಫ್ ಸಿ ಬ್ಯಾಂಕ್ (HDFC Bank),ಯೆಸ್ ಬ್ಯಾಂಕ್ (Yes Bank), ಐಸಿಐಸಿಐ ಬ್ಯಾಂಕ್ (ICICI Bank),ಇಂಡಸ್ ಇಂಡ್ ಬ್ಯಾಂಕ್ ( IndusInd Bank), ಬ್ಯಾಂಕ್ ಆಫ್ ಮಹಾರಾಷ್ಟ್ರ ( Bank of Maharashtra), ಆಕ್ಸಿಸ್ ( Axis) ಹಾಗೂ ಐಡಿಎಫ್ ಸಿ ಫಸ್ಟ್ (IDFC First) ಹಾಗೂ ಇತರ ಬ್ಯಾಂಕುಗಳು ಪ್ರಸ್ತುತ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿವೆ.
Parents Tips: ಮಕ್ಕಳಿಗೆ ಹಣದ ಮೌಲ್ಯ ಕಲಿಸೋದು ಹೇಗೆ? ಯಾವಾಗ?
ಗೋಲ್ಡ್ ಲೋನ್ ದಾಖಲೆ
ಇದೇ ಸಂದರ್ಭದಲ್ಲಿ ಎಸ್ ಬಿಐ ಗೋಲ್ಡ್ ಲೋನ್ (gold loan) ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ಮೀರಿರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಎಸ್ ಬಿಐ ಚಿನ್ನದ ಸಾಲದಲ್ಲಿ ಶೇ.24ರಷ್ಟು ಮಾರ್ಕೆಟ್ ಷೇರು ಹೊಂದಿದೆ. ಈ ವಿಭಾಗದಲ್ಲಿ ಎಸ್ ಬಿಐ ಉತ್ತಮ ಪ್ರಗತಿ ಸಾಧಿಸಿದ್ದು, ಹೂಡಿಕೆದಾರರಿಗೆ ಏರಿಕೆಯಾಗುತ್ತಿರುವ ಹಣದುಬ್ಬರದ ನಡುವೆಯೂ ಸುರಕ್ಷಿತ ಹೂಡಿಕೆ ಆಯ್ಕೆಯನ್ನು ನೀಡುತ್ತಿದೆ. ಇನ್ನು 2022ನೇ ಆರ್ಥಿಕ ಸಾಲಿನಲ್ಲಿ ಬ್ಯಾಂಕಿನ ರಿಟೇಲ್ ಸಾಲ (retail loans) ವಿಭಾಗದಲ್ಲಿ ಶೇ.15 ರಷ್ಟು ಪ್ರಗತಿ ದಾಖಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.