
ಮಕ್ಕಳ (Children) ಭವಿಷ್ಯಕ್ಕೆ ತಂದೆ – ತಾಯಿ ತಮ್ಮ ಜೀವನ (Life) ವನ್ನೇ ಮುಡುಪಾಗಿಡ್ತಿದ್ದಾರೆ. ಹಿಂದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆಯನ್ನು ಜನರು ನಂಬುತ್ತಿದ್ದರು. ಅಕ್ಕ- ಪಕ್ಕ ಏನೇ ಆಗ್ಲಿ, ನನ್ನ ಕೈನಲ್ಲಿದ್ದಷ್ಟು ಹಣ (money) ದಲ್ಲಿ ನಾನು ನನ್ನ ಸಂಸಾರ (Family ) ತೂಗಿಸ್ತೇನೆ ಎಂಬ ಪಾಲಿಸಿ ಹಿರಿಯರಲ್ಲಿತ್ತು. ಹಾಗೆಯೇ ಮಕ್ಕಳಿಗೆ ಅವರು ತಮ್ಮ ಕಷ್ಟವನ್ನು ಹೇಳ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ನಾವು ಅನುಭವಿಸಿದ ಕಷ್ಟ (difficult) ವನ್ನು ಮಕ್ಕಳು ನೋಡ್ಬಾರದು ಎನ್ನುವ ಪಾಲಿಸಿಯನ್ನು ಪಾಲಕರು ನಿಭಾಯಿಸ್ತಿದ್ದಾರೆ. ಎಷ್ಟೇ ಕಷ್ಟವಾದ್ರೂ, ಮೈಮೇಲೆ ಸಾಲದ ಹೊರೆ ಬಿದ್ದರೂ ಮಕ್ಕಳನ್ನು ಉನ್ನತ ಶಾಲೆ (School) ಯಲ್ಲಿ ಕಲಿಸುವ ಪಾಲಕರು, ಮಕ್ಕಳು ಹೇಳಿದ್ದೆಲ್ಲ ನೀಡ್ತಿದ್ದಾರೆ. ಪಾಲಕರು ತಂದುಕೊಡ್ತಾರೆಂಬ ಕಾರಣಕ್ಕೆ ಮಕ್ಕಳು ಎಲ್ಲೆ ಮೀರಿ ವಸ್ತುಗಳನ್ನು ಆಫರ್ (Offer) ಮಾಡ್ತಾರೆ. ಮಕ್ಕಳ ಓದಿಗೆ ತೊಂದ್ರೆಯಾಗ್ಬಾರದು ಎಂಬ ಕಾರಣಕ್ಕೆ ಪಾಲಕರು ಎಲ್ಲವನ್ನು ಸಹಿಸಿಕೊಳ್ತಿದ್ದಾರೆ. ಆದ್ರೆ ಮಕ್ಕಳು ಮುಂದೆ ಉತ್ತಮ ಜೀವನ ನಿರ್ವಹಣೆ ಮಾಡ್ಬೇಕೆಂದ್ರೆ ಪಾಲಕರಾದವರು ಕೆಲಸ (ಕೆಲಸ ) ಸಂಗತಿಯನ್ನು ಮಕ್ಕಳಿಗೆ ಹೇಳಲೇಬೇಕು. ಇಂದು ನಾವು ಮಕ್ಕಳಿಗೆ ಹಣದ ಮೌಲ್ಯ (Value ) ಕಲಿಸೋದು ಹೇಗೆ ಎನ್ನುವ ಬಗ್ಗೆ ಹೇಳ್ತೇವೆ.
ತ್ಯಾಗದ ಬಗ್ಗೆ ಮಕ್ಕಳಿಗೆ ಹೇಳಿ : ನಮ್ಮಪ್ಪ ಏನೂ ಮಾಡಿಲ್ಲ, ಆಗ ಹಣ ಕೂಡಿಟ್ಟರೆ ಈಗ ನಾನು ತೊಂದರೆ ಪಡ್ಬೇಕಾಗಿರಲಿಲ್ಲ. ಆಗ ಮನೆ ಮಾಡಿದ್ರೆ, ಆಗ ಆಸ್ತಿ ಮಾಡಿದ್ದರೆ ನಾನೂ ಎಲ್ಲರಂತೆ ಇರಬಹುದಿತ್ತು ಎಂಬ ಮಾತನ್ನು ನೀವು ಅನೇಕರ ಬಾಯಲ್ಲಿ ಕೇಳಿರ್ತೀರಿ. ನೀವೂ ಹೇಳಿರಬಹುದು. ಆದ್ರೆ ನೀವು ಪಾಲಕರಾದ್ಮೇಲೆ ತಂದೆ ಏನು ಮಾಡಿದ್ರು ಎಂಬುದು ಗೊತ್ತಾಗುತ್ತದೆ. ಸಣ್ಣ ಬಟ್ಟೆ (Clothes) ಯಿಂದ ಹಿಡಿದು ಶಿಕ್ಷಣದವರೆಗೆ ನಮಗಾಗಿ ನಮ್ಮ ಪಾಲಕರು ಸಾಕಷ್ಟು ಖರ್ಚು ಮಾಡಿರ್ತಾರೆ. ಅದಕ್ಕಾಗಿ ಹಣ ಹೊಂದಿಸುವ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಆದ್ರೆ ಬಹುತೇಕ ಪಾಲಕರು ಅದ್ರ ಹಿಂದಿನ ಕಷ್ಟವನ್ನು ಮಕ್ಕಳಿಗೆ ಹೇಳೋದಿಲ್ಲ. ಮಕ್ಕಳಿಗೆ ನಮ್ಮ ಕಷ್ಟ ತಿಳಿಯದಿರಲಿ ಎಂದುಕೊಳ್ತಾರೆ. ಆದ್ರೆ ನಮ್ಮ ತ್ಯಾಗ ಹೇಳಿದಾಗ ಮಾತ್ರ ನಾವು ಮಕ್ಕಳಿಗೆ ಹಣಕಾಸಿನ ನಿರ್ವಹಣೆಯನ್ನು ಸುಲಭವಾಗಿ ತಿಳಿಸಬಹುದು. ನಾವೆಷ್ಟು ತ್ಯಾಗ ಮಾಡ್ತಿದ್ದೇವೆ ಎಂಬುದು ಗೊತ್ತಾದಾಗ ಮಕ್ಕಳು ಖರ್ಚು ಕಡಿಮೆ ಮಾಡುವ ಅಥವಾ ಉಳಿತಾಯ ಮಾಡುವ ಕೆಲಸಕ್ಕೆ ಮುಂದಾಗ್ತಾರೆ.
ಇದನ್ನೂ ಓದಿ: Business Ideas: ಅವಲಕ್ಕಿ ಕುಟ್ಟಿ ಹಣದ ಕಟ್ಟು ಕಟ್ಟಿ!
ಮಕ್ಕಳಿಗೆ ಖಾತೆ : ಬುದ್ಧಿವಂತ ಪಾಲಕರು ಮಕ್ಕಳಿಗೆ ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದನ್ನು ತಿಳಿಸಲು ಸ್ಮಾರ್ಟ್ ಉಪಾಯಗಳನ್ನು ಮಾಡ್ಬಹುದು. ಮಕ್ಕಳ ಹೆಸರಿನಲ್ಲಿ ಖಾತೆ ಮಾಡಿ ಅದ್ರಲ್ಲಿಯೇ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಪಿನ್ ಟು ಪಿನ್ ಖರ್ಚಿನ ಲೆಕ್ಕವನ್ನು ಮಕ್ಕಳಿಗೆ ನೀಡಬಹುದು. ಇಲ್ಲವೆ ಪ್ರತಿ ಖರ್ಚಿನ ವಿವರವನ್ನು ಡೈರಿಯಲ್ಲಿ ಬರೆಯಬಹುದು. ಇದನ್ನು ಮಕ್ಕಳು ಓದಿದ್ರೆ ಅವರಿಗೆ ನಾವೆಷ್ಟು ಖರ್ಚು ಮಾಡ್ತಿದ್ದೇವೆ ಎಂಬುದರ ಅರಿವಾಗುತ್ತದೆ.
ಇದನ್ನೂ ಓದಿ: ವಿದೇಶದಲ್ಲಿ ಓದುವ ಮೊದಲು Education Loan ಬಗ್ಗೆ ತಿಳಿದ್ಕೊಳ್ಳಿ
ಹಣಕಾಸಿನ ಹೋರಾಟದಲ್ಲಿ ಮಕ್ಕಳಿರಲಿ : ಸಾಲ ಕೊಟ್ಟವರು ಮನೆಗೆ ಬಂದಾಗ ಮಕ್ಕಳನ್ನು ಒಳಗೆ ಕಳಿಸ್ತೇವೆ. ಆದ್ರೆ ಮಕ್ಕಳಿಗೂ ಅಪ್ಪನ ಸಾಲ, ದುಡಿಮೆ ವಿವರ ಗೊತ್ತಿರಬೇಕು. ಹಾಗಾಗಿ ಪಾಲಕರು ಮಕ್ಕಳಿಗೆ ಅದನ್ನು ತಿಳಿಸಿ ಹೇಳಿ. ಇದ್ರಿಂದ ಮಕ್ಕಳು ಮಂಕಾಗ್ತಾರೆ ಎಂಬುದು ಸುಳ್ಳು. ಮಕ್ಕಳಿಗೂ ದುಡಿಯುವ ಛಲ ಬರುತ್ತದೆ. ಉನ್ನತ ಸ್ಥಾನಕ್ಕೇರಬೇಕೆಂಬ ಹಂಬಲ ಶುರುವಾಗುತ್ತದೆ. ದೇಹವನ್ನು ಬಗ್ಗಿಸಿ ಸಾಲ ಕೇಳುವ ಸಂಕಷ್ಟ ಮಕ್ಕಳಿಗೆ ಗೊತ್ತಾದ್ರೆ ಮಾತ್ರ ಅವರು ಆರ್ಥಿಕ ನಿರ್ವಹಣೆ ಚೆನ್ನಾಗಿರಲು ಸಾಧ್ಯ. ಆಗ ಮಕ್ಕಳು ತಾನಾಗಿಯೇ ಉಳಿತಾಯ, ಓದಿನ ಕಡೆಗೆ ಹೆಚ್ಚು ಒಲವು ತೋರಿಸ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.