
ನವದೆಹಲಿ(ಜು.02): ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ, ಪೆಟ್ರೋಲಿಯಂ ಕಂಪನಿಗಳು ವಿದೇಶಕ್ಕೆ ರಫ್ತು ಮಾಡುವ ಪ್ರತಿ ಲೀ. ಪೆಟ್ರೋಲ್‌ಗೆ 6 ರು. ಮತ್ತು ಡೀಸೆಲ್‌ಗೆ 13 ರೂ.ತೆರಿಗೆ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜು.1ರಿಂದಲೇ ಜಾರಿಗೆ ಬರಲಿದೆ.
ರಿಲಯನ್ಸ್, ನಯಾರದಂಥ ಕಂಪನಿಗಳು ದೇಶೀಯವಾಗಿ ಉತ್ಪಾದಿಸಿದ ಕಚ್ಚಾತೈಲವನ್ನು ವಿದೇಶಕ್ಕೆ ರಫ್ತು ಮಾಡುವುದರ ಮೇಲೆ ಕಡಿವಾಣ ಹೇರಿ, ದೇಶೀಯ ಮಾರುಕಟ್ಟೆಗೆ ಪೂರೈಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಜೊತೆಗೆ ದೇಶೀಯವಾಗಿ ಉತ್ಪಾದಿಸಿದ ಕಚ್ಚಾತೈಲದ ಮೇಲೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 23250 ರು. ತೆರಿಗೆಯನ್ನೂ ಘೋಷಿಸಿದೆ. ಇದಲ್ಲದೆ ಒಎನ್‌ಜಿಸಿ, ಆಯಿಲ್ ಇಂಡಿಯಾ ಲಿ, ಕೇರ್ನ್ ಆಯಿಲ್ ಮೊದಲಾದ ಕಂಪನಿಗಳು ಉತ್ಪಾದಿಸುವ ಕಚ್ಚಾತೈಲದ ಮೇಲೆ ವಿಂಡ್‌ಫಾಲ್ ಟ್ಯಾಕ್ಸ್ ಜಾರಿಗೂ ನಿರ್ಧರಿಸಿದೆ. ಅಂದರೆ ಯಾವುದೇ ವಿಶೇಷ ಕ್ರಮದ ಹೊರತಾಗಿಯೂ, ಮಾರುಕಟ್ಟೆಯ ಬೆಲೆ ಕಾರಣವಾಗಿ ಕಂಪನಿಗಳಿಗೆ ಭಾರೀ ಲಾಭವಾದರೆ ಆಗ ಅಂತ ಕಂಪನಿಗಳಿಗೆ ಇಂಥ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆ ಮೂಲಕ ಸರ್ಕಾರ ಪ್ರತಿ ವರ್ಷ 7000 ಕೋಟಿ ರು. ಹೆಚ್ಚು ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.
ಹಣದುಬ್ಬರ ಕಡಿತದ ಕ್ರಮವಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಸುಂಕ ಕಡಿಮೆ ಮಾಡಿತ್ತು. ಇದರಿಂದಾಗುವ ಸುಮಾರು 1 ಲಕ್ಷ ಕೋಟಿ ರು. ಹೊರೆ ತುಂಬಲು ಸರ್ಕಾರ ಇದೀಗ ಹೊಸ ಮಾರ್ಗ ಹುಡುಕಿದೆ.
ಡೀಸೆಲ್ ದುಬಾರಿ: ಬಸ್ ಟಿಕೆಟ್ ಹೆಚ್ಚಳ ಬಗ್ಗೆ ಚರ್ಚೆ
ಆರ್ಥಿಕ ಸಂಕಷ್ಟ, ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗುರುವಾರ ನಡೆದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಚರ್ಚಿಸಲಾಗಿದೆ.
ಬಂಕ್‌ಗಳಿಂದಲೇ ಬಸ್‌ಗಳಿಗೆ ಡೀಸೆಲ್ ತುಂಬಿಸಿಕೊಳ್ಳುವ ಗೊಂದಲದ ಕುರಿತು ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿದೇಶಕರು ಸಭೆ ನಡೆಸಿದ್ದರು. ಎರಡು ತಿಂಗಳ ಹಿಂದೆಯೇ ಬಸ್ ಟಿಕೆಟ್ ದರ ಶೇ.30ರಿಂದ 35ರಷ್ಟುಏರಿಕೆಗೆ ಸಂಬಂಧಿಸಿದಂತೆ ಸರ್ಕಾರಕೆæ್ಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಸಗಟು ಡೀಸೆಲ… ದರ ಹೆಚ್ಚಳ ಆಗಿದ್ದು, ಬಂಕ್‌ಗಳಿಂದಲೇ ಡೀಸೆಲ… ಹಾಕಿಸಿಕೊಳ್ಳುವಂತಾಗಿದೆ. ನಾಲ್ಕು ವರ್ಷಗಳ ಹಿಂದೆ ಪ್ರಯಾಣ ದರ ಏರಿಕೆ ಮಾಡಿದಾಗ ಡೀಸೆಲ… ದರ ಲೀಟರ್‌ಗೆ 65ರಿಂದ 70 ರು. ಇತ್ತು. ಸದ್ಯ ಸಗಟು ಡೀಸೆಲ… ದರ ಲೀಟರ್‌ಗೆ 119 ರು. ಇದೆ. ಈ ಹಿನೆæ್ನಲೆಯಲ್ಲಿ ಹೆಚ್ಚುವರಿ ಅನುದಾನ ಅಥವಾ ದರ ಏರಿಕೆಗೆ ಅನುಮೋದನೆ ನೀಡುವಂತೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಆರ್ಥಿಕ ಇಲಾಖೆಗೆ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.