ಸೌದಿ ದೊರೆಯಿಂದ ಭರವಸೆಯೊಂದನ್ನು ಹೊತ್ತು ತಂದ ಪ್ರಧಾನಿ ಮೋದಿ| ಸೌದಿ ಅರೇಬಿಯಾಗೆ ಎರಡು ದಿನಗಳ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ| ಭಾರತಕ್ಕೆ ಲಾಭದಾಯಕವಾದ ಒಪ್ಪಂದ ಮಾಡಿಕೊಂಡು ಬಂದ ಮೋದಿ| ಸೌದಿ ಅರೇಬಿಯಾದೊಂದಿಗೆ ಕಚ್ಚಾತೈಲ ಒಪ್ಪಂದ ಮಾಡಿಕೊಂಡ ಭಾರತ| ಭಾರತಕ್ಕೆ ನಿರಂತರವಾಗಿ ಕಚ್ಚಾತೈಲ ಪೂರೈಸುವ ಭರವಸೆ ನೀಡಿದ ಸೌದಿ ದೊರೆ| ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು ಎಂದ ಸೌದಿ ದೊರೆ|
ರಿಯಾದ್(ಅ.31): ಪ್ರಧಾನಿ ಮೋದಿ ಸುಮ್ಮನೆ ವಿದೇಶ ಪ್ರವಾಸ ಮಾಡಲ್ಲ. ನಿರ್ದಿಷ್ಟ ವಿದೇಶ ಪ್ರವಾಸದಲ್ಲಿ ಭಾರತಕ್ಕೆ ಲಾಭ ತಂದು ಕೊಡಬಲ್ಲ ಒಪ್ಪಂದಗಳನ್ನು ಮಾಡಿಕೊಂಡೇ ಮೋದಿ ಸ್ವದೇಶಕ್ಕೆ ವಾಪಸ್ಸಾಗುವುದು.
ಅದರಂತೆ ಸೌದಿ ಅರೇಬಿಯಾಗೆ ಎರಡು ದಿನಗಳ ಪ್ರವಾಸಕ್ಕೆ ತೆರಳಿದ್ದ ಪ್ರಧಾನಿ ಮೋದಿ, ಅಲ್ಲಿನ ದೊರೆ ಜೊತೆಗೆ ಭಾರತಕ್ಕೆ ಲಾಭದಾಯಕವಾದ ಒಪ್ಪಂದವನ್ನೇ ಮಾಡಿಕೊಂಡು ಬಂದಿದ್ದಾರೆ.
undefined
ಇರಾನ್ ಟ್ಯಾಂಕರ್ ಹೊಡೆದ ಸೌದಿ: ಸಮುದ್ರಕ್ಕೆ ತೈಲ ಸೋರ್ತಿರಲಿಲ್ಲ ಇದ್ದಿದ್ರೆ ಬುದ್ದಿ!
ಇರಾನ್ ಮೇಲಿನ ಅಮೆರಿಕದ ನಿರ್ಬಂಧದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕೊರತೆಯನ್ನು ನೀಗಿಸಲು ಪ್ರಧಾನಿ ಮೋದಿ ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇರಾನ್ ತೈಲ ಆಮದಿನಲ್ಲಿ ಭಾರೀ ಕಡಿತ: ಏಕಾಏಕಿ ಇದೆಂತಾ ತುಡಿತ?
ಹೌದು, ಭಾರತಕ್ಕೆ ನಿರಂತರವಾಗಿ ಕಚ್ಚಾತೈಲ ಪೂರೈಸುವುದಾಗಿ ಸೌದಿ ದೊರೆ ಸಲ್ಮಾನ್ ಅಬ್ದುಲ್ ಅಜೀಜ್ ಸೌದ್ ಭರವಸೆ ನೀಡಿದ್ದಾರೆ. ಇತ್ತೀಚಿಗೆ ಸೌದಿಯ ಅರಾಮ್ಕೋ ಕಚ್ಚಾತೈಲ ರಿಫೈನರಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕವೂ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಲ್ಮಾನ್ ಮಾತು ಕೊಟ್ಟಿದ್ದಾರೆ.
ಸೌದಿಗೆ ಪ್ರವಾಸ: ಪ್ರಧಾನಿ ಮೋದಿಗೆ ವೈಮಾನಿಕ ಮಾರ್ಗ ಅನುಮತಿ ನಿರಾಕರಿಸಿದ ಪಾಕ್
ಸದ್ಯ ಸೌದಿ ಅರೇಬಿಯಾದಿಂದ 39.8 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುವ ಭಾರತ, ಒಟ್ಟು ಆಮದಿನ ಶೇ.18ರಷ್ಟು ಸೌದಿ ಮೇಲೆ ಅವಲಂಬಿತವಾಗಿದೆ. ಅಲ್ಲದೇ ಭಾರತಕ್ಕೆ ಶೇ.30ರಷ್ಟು ಎಲ್‌ಪಿಜಿ ಕೂಡ ಸೌದಿ ಅರೇಬಿಯಾದಿಂದಲೇ ಆಮದಾಗುತ್ತದೆ.
ಬಡತನದ ಪಾಠ ಓದಿ ಕಲಿತಿಲ್ಲ, ನೋಡಿ ಕಲಿತಿದ್ದೇನೆ: ಮೋದಿ!
ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: