ಆಪಲ್‌ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡ ಮೈಕ್ರೋಸಾಫ್ಟ್‌!

By Santosh Naik  |  First Published Jan 11, 2024, 10:19 PM IST

ಭಾರತದ ಸತ್ಯ ನಾದೆಳ್ಳ ಸಿಇಒ ಆಗಿರುವ ಮೈಕ್ರೋಸಾಫ್ಟ್‌ ಕಂಪನಿ ತನ್ನ ಅತಿದೊಡ್ಡ ಸಾಧನೆ ಮಾಡಿದೆ. ಆಪಲ್‌ ಕಂಪನಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಮೈಕ್ರೋಸಾಫ್ಟ್‌ನ ಪಾಲಾಗಿದೆ.
 


ನವದೆಹಲಿ (ಜ.11): ಭಾರತದ ಸತ್ಯ ನಾದೆಳ್ಳೆ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಮೈಕ್ರೋಸಾಫ್ಟ್‌ನ ಅಧಿಕಾರ ವಹಿಸಿಕೊಂಡ ಬಳಿಕ ಮೈಕ್ರೋಸಾಫ್ಟ್‌ ಕಂಪನಿಯ ಚಹರೆಯೇ ಬದಲಾಗಿದೆ ಎನ್ನುವ ಸೂಚನೆಗಳು ಸಿಗುತ್ತಿವೆ. ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್‌, ಐಫೋನ್‌ ಮೇಕರ್‌ ಕಂಪನಿಯಾಗಿರುವ ಆಪಲ್‌ಅನ್ನು ಹಿಂದಿಕ್ಕಿದೆ. 2024ರಲ್ಲಿ ಆಪಲ್‌ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿರುವ ಅಂದಾಜಿನಲ್ಲಿ ಈ ವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಆಪಲ್‌ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದೆ. ಇನ್ನೊಂದೆಡೆ ಮೈಕ್ರೋಸಾಫ್ಟ್‌ ಷೇರು ಬೆಲೆಯಲ್ಲಿ ಏರಿಕೆಯಾಗಿದ್ದು, ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಸಂಪಾದಿಸಿದೆ. ವಾಷಿಂಗ್ಟನ್‌ ಮೂಲಕ ಮೈಕ್ರೋಸಾಫ್ಟ್‌ ಕಂಪನಿಯ ಷೇರು ಬೆಲೆಗಳಲ್ಲಿ ಶೇ. 1.6ರಷ್ಟು ಏರಿಕೆ ಆಗಿದ್ದರಿಂದ ಈ ಕಂಪನಿಯ ಮಾರುಕಟ್ಟೆ ಮೌಲ್ಯ 2.875 ಟ್ರಿಲಿಯನ್‌ ಯುಎಸ್‌ ಡಾಲರ್‌ ದಾಟಿತು. ಅರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಹಣ ಸಂಪಾದಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್‌ ಮುಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಂಪನಿಯ ಷೇರುಗಳಲ್ಲಿ ಏರಿಕೆಯಾಗಿದೆ.

ಇನ್ನು ಆಪಲ್‌ ಕಂಪನಿಯ ಷೇರುಗಳು ಶೇ. 0.9ರಷ್ಟು ಕುಸಿದು ಅದರ ಮಾರುಕಟ್ಟೆ ಮೌಲ್ಯ 2.871 ಟ್ರಿಲಿಯನ್‌ ಯುಎಸ್‌ ಡಾಲರ್‌ ಎನಿಸಿಕೊಂಡಿತು. 2021ರ ಬಳಿಕ ಇದೇ ಮೊದಲ ಬಾರಿಗೆ ಮಾರುಕಟ್ಟೆ ಮೌಲ್ಯದಲ್ಲಿ ಆಪಲ್‌ ಕಂಪನಿ ಮೈಕ್ರೋಸಾಫ್ಟ್‌ಗಿಂತ ಕೆಳಗೆ ಇಳಿದಿದೆ. ಜನವರಿಯಲ್ಲಿ ಈವರೆಗೆ ಕ್ಯಾಲಿಫೋರ್ನಿಯಾ ಮೂಲದ ಆಪಲ್‌ ಕಂಪನಿಯ ಷೇರುಗಳು ಶೇ. 3.3ರಷ್ಟು ಕುಸಿದಿದ್ದರೆ, ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳು ಶೇ. 1.8ರಷ್ಟು ಏರಿಕೆ ಕಂಡಿದೆ.

"ಮೈಕ್ರೋಸಾಫ್ಟ್ ವೇಗವಾಗಿ ಬೆಳೆಯುತ್ತಿರುವ ಕಾರಣ ಮೈಕ್ರೋಸಾಫ್ಟ್ ಆಪಲ್ ಅನ್ನು ಹಿಂದಿಕ್ಕುವುದು ಅನಿವಾರ್ಯವಾಗಿತ್ತು ಮತ್ತು ಈಗಾಗಲೇ AI ಕ್ರಾಂತಿಯಿಂದ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ" ಎಂದು ಗಿಲ್ ಲೂರಿಯಾದ ವಿಶ್ಲೇಷಕ ಡಿ.ಎ. ಡೇವಿಡ್ಸನ್ ಹೇಳಿದ್ದಾರೆ.

ಆಪಲ್‌ ಕಂಪನಿಯ ಪಾಲಿಗೆ ಅತಿದೊಡ್ಡ ಲಾಭ ಬರುವುದು ಐಫೋನ್‌ ಮಾರಾಟದಿಂದ. ಆದರೆ, ಇತ್ತೀಚಿನ ದಿನಗಳಲ್ಲಿ ಐಫೋನ್‌ ಮಾರಾಟ ಕಡಿಮೆಯಾಗಬಹುದು ಎನ್ನುವ ಅಂದಾಜು ಬಂದಿರುವ ಕಾರಣ ಆಪಲ್‌ ಷೇರುಗಳು ಕುಸಿತ ಕಂಡಿವೆ. ಅದರಲ್ಲೂ ಚೀನಾದಂಥ ಪ್ರಮುಖ ಮಾರುಕಟ್ಟೆಯಲ್ಲಿ ಆಪಲ್‌ ಮಾರಾಟ ಇನ್ನಷ್ಟು ಕುಸಿತವಾಗಿದೆ.

 

Tap to resize

Latest Videos

ಇನ್ಫೋಸಿಸ್‌ ನಾರಾಯಣ ಮೂರ್ತಿ ವಾದಕ್ಕೆ ಉಲ್ಟಾ, 'ವಾರಕ್ಕೆ ಮೂರೇ ದಿನ ಕೆಲಸ ಸಾಧ್ಯ' ಎಂದ ಬಿಲ್‌ ಗೇಟ್ಸ್‌

ಮುಂದಿನ ದಿನಗಳಲ್ಲಿ ಆಪಲ್‌ ಮಾರುಕಟ್ಟೆ ಮೌಲ್ಯದ ಕುಸಿತಕ್ಕೆ ಚೀನಾ ಕಾರಣವಾಗಲಿದೆ. ಚೀನಾ ಹಾಗೂ ಅಮೆರಿಕ ನಡುವಿನ ಕೆಟ್ಟ ಸಂಬಂಧ ಆಪಲ್‌ನ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ 14 ರಂದು ಆಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ 3.081 ಟ್ರಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು. ಒಂದೇ ವರ್ಷದಲ್ಲಿ ಆಪಲ್‌ ಶೇ. 48ರಷ್ಟು ಮೌಲ್ಯ ಏರಿಸಿಕೊಂಡಿತ್ತು.

 

ಇಂಜಿನಿಯರ್‌ಗಳ ಪ್ರತಿಭಟನೆ, OpenAI ಸಿಇಒ ಆಗಿ ಮರಳಿದ ಸ್ಯಾಮ್‌ ಆಲ್ಟ್‌ಮನ್‌!

2018 ಹಾಗೂ ತೀರಾ ಇತ್ತೀಚೆಗೆ 2021ರಲ್ಲಿ ಆಪಲ್‌ ಕಂಪನಿಯಲ್ಲಿ ಹಿಂದಿಕ್ಕಿ ಮೈಕ್ರೋಸಾಫ್ಟ್‌ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿತ್ತು. ಆದರೆ, ಪ್ರಸ್ತುತ ವಾಲ್‌ ಸ್ಟ್ರೀಟ್‌ ಮೈಕ್ರೋಸಾಫ್ಟ್‌ ಬಗ್ಗೆ ಧನಾತ್ಕವಾಗಿದ್ದಾರೆ. ಶೇ. 90ರಷ್ಟು ಬ್ರೋಕರೇಜ್‌ಗಳು ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳನ್ನು ಖರೀದಿ ಮಾಡಿ ಎನ್ನುವ ಸಲಹೆ ನೀಡಿದ್ದಾರೆ.

click me!