ತಂದೆ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಮಗಳು ಈಗ 63, 000 ಕೋಟಿ ಬೆಲೆಬಾಳೋ ಕಂಪನಿ ಸಿಇಒ

By Suvarna News  |  First Published Jan 11, 2024, 3:53 PM IST

ಭಾರತದ ಪ್ರಭಾವಿ ಮಹಿಳಾ ಸಿಇಒಗಳಲ್ಲಿ ವಿನೀತಾ ಗುಪ್ತಾ ಕೂಡ ಒಬ್ಬರು. ತಂದೆಯ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಕಂಪನಿಯ ಆದಾಯದಲ್ಲಿ ಭಾರೀ ಏರಿಕೆ ಕಾಣುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. 63, 000 ಕೋಟಿ ಬೆಲೆಬಾಳೋ ಕಂಪನಿ ಸಿಇಒ ಆಗಿರುವ ಇವರ ಯಶಸ್ಸಿನ ಕಥೆ ಇಲ್ಲಿದೆ. 
 


Business Desk: ಭಾರತದ ಉದ್ಯಮ ರಂಗದಲ್ಲಿ ಇಂದು ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇದಕ್ಕೆ ಕಳೆದ ಕೆಲವು ದಶಕಗಳಲ್ಲಿ ದೇಶದಲ್ಲಿ ಶತಕೋಟಿ ಮಹಿಳಾ ಸಿಇಒಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರೋದೆ ಸಾಕ್ಷಿ. ಬಹು ಕೋಟಿ ಡಾಲರ್ ಮೌಲ್ಯದ ಜಾಗತಿಕ ಕಂಪನಿಗಳನ್ನು ಅನೇಕ ಭಾರತೀಯ ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಭಾರತದಲ್ಲಿನ ಶ್ರೀಮಂತ ಮಹಿಳಾ ಸಿಇಒಗಳಲ್ಲಿ ಲುಪಿನ್ ಫಾರ್ಮ ಸಂಸ್ಥೆಯ ವಿನೀತಾ ಗುಪ್ತ ಕೂಡ ಒಬ್ಬರು. ಭಾರತದ ಮಹಿಳಾ ಸಿಇಒಗಳಲ್ಲಿ ವಿನೀತಾ ಗುಪ್ತಾ ಅವರ ಹೆಸರು ಮುಂಚೂಣಿಯಲ್ಲಿದೆ. ಭಾರತದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಗುಪ್ತಾ ಅವರು ಜನಪ್ರಿಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. 2013ರ ನಂತರದಲ್ಲಿ ಲುಪಿನ್ ಫಾರ್ಮ ಸಂಸ್ಥೆ ಪ್ರಮುಖ ಫಾರ್ಮ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯನ್ನು ವಿನೀತಾ ಗುಪ್ತಾ ಅವರ ತಂದೆ ದೇಶ್ ಬಂಧು ಗುಪ್ತಾ ಸ್ಥಾಪಿಸಿದ್ದರು. ತಂದೆಯ ಈ ಉದ್ಯಮವನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ಅದನ್ನು ಮುಂಚೂಣಿಗೆ ತರುವಲ್ಲಿ ವಿನೀತಾ ಗುಪ್ತಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 

ವಿನೀತಾ ಗುಪ್ತಾ ಅವರ ತಂದೆ ದೇಶ್ ಬಂಧು ಗುಪ್ತ ಬಿರ್ಲಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ ನಲ್ಲಿ (BITS) ಪ್ರಾಧ್ಯಾಪಕರಾಗಿದ್ದರು. ಇವರು 1968ರಲ್ಲಿ ಟಿಬಿ ಔಷಧಗಳನ್ನು ತಯಾರಿಸಲು ಲುಪಿನ್ ಸಂಸ್ಥೆಯನ್ನು ಪ್ರಾರಂಭಿಸಿದರು. ತಂದೆಯ ನಿಧನದ ಬಳಿಕ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡ ವಿನೀತಾ ಗುಪ್ತಾ ಇಂದು ಅದನ್ನು ಭಾರತದ ಜನಪ್ರಿಯ ಫಾರ್ಮ ಕಂಪನಿಯಾಗಿ ರೂಪಿಸಿದ್ದಾರೆ. ಪ್ರಸ್ತುತ ವಿನೀತಾ ಗುಪ್ತಾ ಲುಪಿನ್ ಫಾರ್ಮಕಂಪನಿಯ ಸಿಇಒ ಆಗಿದ್ದಾರೆ. ಇನ್ನು ಅವರ ಸಹೋದರ ನಿಲೇಶ್ ಗುಪ್ತ ಈ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಹುದ್ದೆ ನಿಭಾಯಿಸುತ್ತಿದ್ದಾರೆ. ಇನ್ನು ವಿನೀತಾ ಗುಪ್ತಾ ಅವರ ತಾಯಿ ಮಂಜು ಗುಪ್ತಾ ಕಂಪನಿಯ ಮುಖ್ಯಸ್ಥೆಯಾಗಿದ್ದಾರೆ.

Tap to resize

Latest Videos

ಅಂಬಾನಿ ಕುಟುಂಬದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳೋ ಬ್ಯೂಟಿ ಕ್ವೀನ್ ದಿಯಾ ಮೆಹ್ತಾ, ಯಾರು ಈ ಲೇಡಿ ಓರಿ?

ಮುಂಬೈ ವಿಶ್ವವಿದ್ಯಾಲಯದಿಂದ ಫಾರ್ಮಸಿಯಲ್ಲಿ ಪದವಿ ಪಡೆದಿರುವ ವಿನೀತಾ ಗುಪ್ತಾ, ಆ ಬಳಿಕ ಅಮೆರಿಕದ ಇಲ್ಲಿನೋಸ್ ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರ್ಣಗೊಳಿಸಿದ್ದಾರೆ. 1992ರಲ್ಲಿ ಲುಪಿನ್ ಕಂಪನಿಯಲ್ಲೇ ತನ್ನ ವೃತ್ತಿ ಜೀವನ ಪ್ರಾರಂಭಿಸಿದ ಗುಪ್ತಾ, ಆ ಬಳಿಕ ವಿವಿಧ ಹುದ್ದೆಗಳಲ್ಲಿ ಕಾರ್ಯಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಾರಂಭದಲ್ಲಿ ಅವರು ಲುಪಿನ್ ಕಂಪನಿಯ ಅಮೆರಿಕದಲ್ಲಿನ ಉದ್ಯಮ ಅಭಿವೃದ್ಧಿಯ ನಿರ್ದೇಶಕಿಯಾಗಿದ್ದರು. ಈ ಸಂದರ್ಭದಲ್ಲಿ ವಿನೀತಾ ತಮ್ಮ ಕುಟುಂಬದ ಉದ್ಯಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಜಾಗತಿಕ ವಿಸ್ತರಣೆಯ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಜೊತೆಗೆ ಸಂಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸಿದರು. ಇನ್ನು ವಿನೀತಾ ಲುಪಿನ್ ಕಂಪನಿಯ ಅಮೆರಿಕದ ಅಂಗಸಂಸ್ಥೆಯ ಮುಖ್ಯಸ್ಥೆ ಕೂಡ ಆಗಿದ್ದಾರೆ. ತಂದೆಯ ಫಾರ್ಮಾ ಕಂಪನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ವಿಸ್ತರಣೆ ಅವಕಾಶಗಳನ್ನು ಹುಡುಕಿ ಕೊಡುವಲ್ಲಿ ವಿನೀತಾ ಬಹುಮುಖ್ಯ ಪಾತ್ರವಹಿಸಿದ್ದರು. ಇದರಿಂದಲೇ ಕಂಪನಿ ಆದಾಯದಲ್ಲಿ ಹೆಚ್ಚಿನ ಏರಿಕೆ ಕೂಡ ಕಂಡುಬಂದಿತ್ತು. 

ನವಾಜ್ ಷರೀಫ್ ಮಗಳು ಬ್ಯೂಟಿ ವಿಷ್ಯದಲ್ಲಿ ಮಾತ್ರವಲ್ಲ, ಕೋಟಿ ಗಳಿಸೋದ್ರಲ್ಲೂ ಮುಂದು

ವಿನೀತಾ ಗುಪ್ತಾ ಅವರ ಲುಪಿನ್ ಫಾರ್ಮದ ಮಾರುಕಟ್ಟೆ ಬಂಡವಾಳ ಅಂದಾಜು 63,750 ಕೋಟಿ ರೂ. ಕಂಪನಿಯ ವಾರ್ಷಿಕ ವರದಿ ಅನ್ವಯ ವಿನೀತಾ ಅವರ 2022-23ನೇ ಹಣಕಾಸು ಸಾಲಿನ ಗೌರವಧನ  10.9 ಕೋಟಿ ರೂ. ಹುರುನ್ ಶ್ರೀಮಂತ ಮಹಿಳೆಯರ ಇತ್ತೀಚಿನ ಪಟ್ಟಿಯಲ್ಲಿ ವಿನೀತಾ ಗುಪ್ತಾ ಅವರ ಹೆಸರಿದ್ದು, 2022ನೇ ಸಾಲಿನಲ್ಲಿ ಅವರ ವೈಯಕ್ತಿಕ ಸಂಪತ್ತು 3,640 ಕೋಟಿ ರೂ. ಇದೆ. ಇನ್ನು 2023ನೇ ಸಾಲಿನ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಾರ ಆಕೆಯ ಕುಟುಂಬದ ಸಂಪತ್ತು ಅಂದಾಜು 24,200 ಕೋಟಿ ರೂ. ಇದೆ. 


 

click me!