
ಮುಂಬೈ: ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಬುಧವಾರ ಒಂದೇ ದಿನ 25 ಪೈಸೆ ಕುಸಿದು, ₹90.21ಗೆ ಇಳಿದಿದೆ. ಇದು ಅಮೆರಿಕದ ಕರೆನ್ಸಿ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ.
ಮಂಗಳವಾರ ಸಹ ಸಾರ್ವಕಾಲಿಕ ಕನಿಷ್ಠ ಕಂಡಿದ್ದ ರುಪಾಯಿ ಮೌಲ್ಯ ಬುಧವಾರ ₹89.96 ನಿಂದ ವ್ಯವಹಾರ ಆರಂಭಿಸಿತು. ಮಧ್ಯಂತರ ಅವಧಿಯಲ್ಲಿ ಮೊದಲ ಬಾರಿ ₹90 ಗಡಿ ದಾಟಿದ ಅದು, ಒಂದು ಹಂತದಲ್ಲಿ 90.30ಗೆ ಕುಸಿತ ಕಂಡಿತ್ತಾದರೂ ಬಳಿಕ ಅಲ್ಪ ಚೇತರಿಕೆ ಕಂಡು ₹90.21ರಲ್ಲಿ ಅಂತ್ಯವಾಯಿತು.
ಈ ಬಗ್ಗೆ ಪ್ರತಿಪಕ್ಷಗಳು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದು, ‘ಅಚ್ಛೇ ದಿನ್ ಎಂದರೆ ಇದೇನಾ?’ ಎಂದು ಕಿಡಿಕಾರಿವೆ.
ಅಮೆರಿಕ ಮತ್ತು ಭಾರತ ನಡುವೆ ಇನ್ನೂ ಏರ್ಪಡದ ವ್ಯಾಪಾರ ಒಪ್ಪಂದ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರಿಂದ ಭಾರೀ ಪ್ರಮಾಣದಲ್ಲಿ ಬಂಡವಾಳ ಹಿಂಪಡೆತ, ರುಪಾಯಿ ದರ ಕುಸಿತ ತಡೆಯಲು ಆರ್‌ಬಿಐ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಕಚ್ಚಾ ತೈಲದರ ಏರಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಕಂಡುಬಂದಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.