Sensex Crash:ಡಾಲರ್ ಎದುರು ಸರ್ವಕಾಲಿಕ ಕುಸಿತ ಕಂಡ ರೂಪಾಯಿ; ಸೆನೆಕ್ಸ್, ನಿಫ್ಟಿ ಪತನ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

By Suvarna News  |  First Published May 12, 2022, 6:47 PM IST

*ಅಮೆರಿಕನ್ ಡಾಲರ್ ಮುಂದೆ 77.63ಕ್ಕೆ ಕುಸಿದ ರೂಪಾಯಿ
*ನಿಫ್ಟಿ 50 ಸೂಚ್ಯಂಕ ಶೇ.2.22ಕ್ಕೆ ಇಳಿಕೆ
*ಹೆಚ್ಚಿನ ನಷ್ಟ ಅನುಭವಿಸಿದ ರಿಲಾಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ 


ಮುಂಬೈ (ಮೇ 12): ಒಂದೆಡೆ ಭಾರತೀಯ ರೂಪಾಯಿ ಮೌಲ್ಯ ಯುಎಸ್ ಡಾಲರ್ (US Dollar) ಎದುರು ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡರೆ, ಇನ್ನೊಂದೆಡೆ ಭಾರತೀಯ ಷೇರು ಮಾರುಕಟ್ಟೆಗಳ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.2ಕ್ಕಿಂತಲೂ ಹೆಚ್ಚು ಇಳಿಕೆ ದಾಖಲಿಸಿವೆ. ಹಣದುಬ್ಬರ ಹೆಚ್ಚಳದ ಪರಿಣಾಮ ಹೂಡಿಕೆದಾರರು ಅಪಾಯಕಾರಿ ಹೂಡಿಕೆಗಳಿಂದ ಬಂಡವಾಳ ಹಿಂತೆಗೆಯುತ್ತಿರುವ ಪರಿಣಾಮ ತೀವ್ರ ಮಾರಾಟದ ಒತ್ತಡ ಸೃಷ್ಟಿಯಾಗಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕುಸಿತ ದಾಖಲಿಸಿವೆ.

ರಾಷ್ಟ್ರೀಯ ಷೇರುಪೇಟೆ  (NSE) ಸಂವೇದಿ ಸೂಚ್ಯಂಕ (Nifty) 50 ಇಂಡೆಕ್ಸ್  (Index) ಶೇ.2.22 ಅಥವಾ 359.10 ಅಂಶ ಕಡಿಮೆಯಾಗಿ 15,808 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಇನ್ನು ಮುಂಬೈ ಷೇರುಪೇಟೆ (BSE) ಸಂವೇದಿ ಸೂಚ್ಯಂಕ (Sensex) ಶೇ.2.14ರಷ್ಟು ಅಥವಾ 1,158.08ರಿಂದ 52,930.31 ಮಟ್ಟಕ್ಕೆ ಇಳಿಕೆಯಾಗಿದೆ. ಈ ಎರಡೂ ಸೂಚ್ಯಂಕಗಳು ಸತತ 5ನೇ ಬಾರಿ ನಷ್ಟ ದಾಖಲಿಸಿದ್ದು, ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

Tap to resize

Latest Videos

ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ, ಜನಸಾಮಾನ್ಯರ ಜೀವನದ ಮೇಲೆ ಉಂಟಾಗುವ ಪರಿಣಾಮವೇನು ?

ಭಾರತೀಯ ರೂಪಾಯಿ (Indian Rupee) ಮೌಲ್ಯ ಈ ವಾರದಲ್ಲಿ ಎರಡನೇ ಬಾರಿ ದಾಖಲೆಯ ಕುಸಿತ ಕಂಡಿದ್ದು, ಅಮೆರಿಕದ ಡಾಲರ್  (US Dollar) ಎದುರು 77.63ರ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸೋಮವಾರ (ಮೇ 9) ರೂಪಾಯಿ ಮೌಲ್ಯವು 51 ಪೈಸೆಗಳಷ್ಟು ಕುಸಿದು ಯುಎಸ್ ಡಾಲರ್ ಎದುರು 77.49ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತ್ತು. 

ಇಳಿಕೆ ಕಂಡ ಷೇರುಗಳು
ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries), ಎಚ್ ಡಿಎಫ್ ಸಿ (HDFC), ಬಜಾಜ್ ಫೈನಾನ್ಸ್ (Bajaj Finance) ಹಾಗೂ ಬಜಾಜ್ ಫಿನ್ ಸರ್ವ್ (Bajaj Finserv) ಅಧಿಕ ನಷ್ಟ ಅನುಭವಿಸಿದ ಕಂಪನಿಗಳಾಗಿವೆ. ಈ ಸಂಸ್ಥೆಗಳ ನಿಫ್ಟಿ 50 ಸೂಚ್ಯಂಕದಲ್ಲಿ ಶೇ.2ರಿಂದ ಶೇ.3ರಷ್ಟು ಇಳಿಕೆ ದಾಖಲಿಸಿವೆ. ಇನ್ನು ಅದಾನಿ ಪೋರ್ಟ್ಸ್ (Adani Ports) ನಿಫ್ಟಿ  50 ಸೂಚ್ಯಂಕದಲ್ಲಿ ಅತೀಹೆಚ್ಚು ನಷ್ಟ ಅನುಭವಿಸಿದ್ದು, ಇದರ ಷೇರುಗಳು ಶೇ.6ರಷ್ಟು ಕುಸಿತ ದಾಖಲಿಸಿವೆ. ಭಾರ್ತಿ ಏರ್ ಟೆಲ್ (Bharathi Airtel) , ಎಸ್ ಬಿಐ (SBI) , ಎನ್ ಟಿಪಿಸಿ (NTPC) , ಟಾಟಾ ಸ್ಟೀಲ್ (TATA Steel) , ಟಾಟಾ ಮೋಟಾರ್ಸ್ (TATA Motors) , ಎಸ್ ಬಿಐ (SBI)  ಷೇರುಗಳು ಕೂಡ ಶೇ.2ರಿಂದ ಶೇ.5ಷ್ಟು ಕುಸಿತ ದಾಖಲಿಸಿವೆ.

ಅಲ್ಪ ಗಳಿಕೆ ಕಂಡ ಕಂಪನಿಗಳು
ವಿಪ್ರೋ ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಅಲ್ಪ ಗಳಿಕೆ ಕಂಡಿವೆ. 

Cryptocurrency: ತೀವ್ರ ಕುಸಿತ ಕಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ; ಇದಕ್ಕೇನು ಕಾರಣ? ಹೂಡಿಕೆದಾರರು ಏನ್ ಮಾಡ್ಬೇಕು?

ಕಾರಣವೇನು?
ಭಾರತದಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಗುರುವಾರ ಶೇ.8ರಷ್ಟು ಗರಿಷ್ಠ ಏರಿಕೆ ದಾಖಲಿಸಿದೆ. ಈ ಏರಿಕೆಯಾಗುತ್ತಿರುವ ಹಣದುಬ್ಬರದ (Inflation)  ಪರಿಣಾಮ ಹೂಡಿಕೆದಾರರಲ್ಲಿಭೀತಿ ಮನೆ ಮಾಡಿದೆ. ಇನ್ನು ಏಪ್ರಿಲ್ ನಲ್ಲಿ ಅಮೆರಿಕದಲ್ಲಿ ಹಣದುಬ್ಬರ ತೀವ್ರ ಏರಿಕೆ ದಾಖಲಿಸರುವುದು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಷೇರುಗಳ ಮಾರಾಟ ಹೆಚ್ಚಿದೆ. ಇನ್ನೊಂದೆಡೆ ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಬ್ಯಾಂಕುಗಳು (Central Banks) ಬಡ್ಡಿದರ (Interest rate) ಏರಿಕೆ ಮಾಡುತ್ತಿರುವುದು ಕೂಡ ಷೇರುಪೇಟೆಯಲ್ಲಿನ (Stock Market) ತಲ್ಲಣಕ್ಕೆ ಕಾರಣವಾಗಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನಾ ಅಂಕಿಅಂಶ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಅದಕ್ಕೂ ಮುನ್ನ ಹೂಡಿಕೆದಾರರು ಷೇರು ವಹಿವಾಟಿನಲ್ಲಿ ಆಸಕ್ತಿ ವಹಿಸದಿರುವುದು ಕೂಡ ಸೆನೆಕ್ಸ್ ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 
 

click me!