
ನವದೆಹಲಿ (ಮೇ 12): ವೀನಸ್ ಪೈಪ್ಸ್ ಹಾಗೂ ಟ್ಯೂಬ್ಸ್ (Venus Pipes and Tubes) ಕಂಪನಿಯ ಐಪಿಒ (IPO) ಚಂದಾದಾರಿಕೆ ಬುಧವಾರ (ಮೇ 11) ಆರಂಭಗೊಂಡ 90 ನಿಮಿಷಗಳ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಬ್ ಸ್ಕ್ರೈಬ್ (Subscribe) ಆಗಿದೆ. ಇನ್ನು ಎರಡನೇ ದಿನವಾದ ಇಂದು (ಮೇ 11) ಕೂಡ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಐಪಿಒ ಶುಕ್ರವಾರದ (ಮೇ 13) ತನಕ ನಡೆಯಲಿದೆ.
ವೀನಸ್ ಕಂಪನಿ ಐಪಿಒ (IPO) ಮೂಲಕ 35,51,914 ಷೇರುಗಳನ್ನು (Shares) ಮಾರಾಟ (Sale) ಮಾಡಿ 165.41 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಮೊದಲ ದಿನವಾದ ಬುಧವಾರ (ಮೇ 11) 51,67,502 ಷೇರುಗಳಿಗೆ ಬಿಡ್ (Bid) ಸಲ್ಲಿಕೆಯಾಗಿದ್ದು, ಷೇರುಗಳು 1.45 ಬಾರಿ ಸಬ್ ಸ್ಕ್ರೈಬ್ (Subscribe) ಆಗಿವೆ ಎಂದು ಎನ್ ಎಸ್ ಇ (NSE) ಅಂಕಿಅಂಶಗಳು ಬಹಿರಂಗಪಡಿಸಿವೆ. ಇನ್ನು ಐಪಿಒನ ಎರಡನೇ ದಿನವಾದ ಗುರುವಾರ (ಮೇ 12) ಚಂದಾದಾರಿಕೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ 1,15,35,466 ಈಕ್ವಿಟಿ ಷೇರುಗಳಿಗೆ ಹೂಡಿಕೆದಾರರು (Investors) ಬಿಡ್ ಸಲ್ಲಿಕೆ ಮಾಡಿದ್ದಾರೆ ಎಂದು ಬಿಎಸ್ ಇ (BSE) ಅಂಕಿಅಂಶಗಳು ತಿಳಿಸಿವೆ.
ಸ್ವಿಗ್ಗಿ, ಝೊಮ್ಯಾಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ: ಕಾರಣ ಹೀಗಿದೆ
ರಿಟೇಲ್ ವೈಯಕ್ತಿಕ ಹೂಡಿಕೆದಾರರ ((RIIs) ವಿಭಾಗದಲ್ಲಿ5.63 ಬಾರಿ ಚಂದಾದಾರಿಕೆ (Subscribe)ಆಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರು 1.54 ಬಾರಿ ಸಬ್ ಸ್ಕ್ರೈಬ್ ಮಾಡಿದ್ದಾರೆ. ಇನ್ನು ಸಾಂಸ್ಥಿಕವಲ್ಲದ ಹೂಡಿಕೆದಾರರು ಶೇ. 36ರಷ್ಟು ಸಬ್ ಸ್ಕ್ರೈಬ್ ಮಾಡಿದ್ದಾರೆ.ವೀನಸ್ ಪೈಪ್ಸ್ ಹಾಗೂ ಟ್ಯೂಬ್ಸ್ ಕಂಪನಿ ಐಪಿಒ ಮೂಲಕ 50,74,100 ಈಕ್ವಿಟಿ ಷೇರುಗಳನ್ನು (Equity Shares) ಮಾರಾಟ ಮಾಡಲು ಯೋಜಿಸಿದ್ದು, ಪ್ರತಿ ಷೇರಿಗೆ 310-326 ರೂ. ಬೆಲೆ (price range) ನಿಗದಿಪಡಿಸಿತ್ತು.
ಆಂಕರ್ ಹೂಡಿಕೆದಾರರಿಂದ (Anchor Investors) ಈ ಕಂಪನಿ ಮಂಗಳವಾರ (ಮೇ 10) 49 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿತ್ತು. ಆಂಕರ್ ಹೂಡಿಕೆದಾರರಿಗೆ 15,22,186 ಷೇರುಗಳನ್ನು ಪ್ರತಿ ಷೇರಿಗೆ 326 ರೂ. ದರದಲ್ಲಿ ವಿತರಿಸಲಾಗಿದೆ. ನಿಪ್ಪನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್, ಮಹೀಂದ್ರ ಲೈಫ್ ಇನ್ಯುರೆನ್ಸ್ ಕಂಪನಿ ಲಿ. ಹಾಗೂ ಇಂಡಿಯಾ ಎಸ್ಎಂಇ ಇನ್ವಿಸ್ಟ್ ಮೆಂಟ್ಸ್ ಆಂಕರ್ ಬುಕ್ ನಲ್ಲಿ ಪಾಲ್ಗೊಂಡ ಪ್ರಮುಖ ಹೂಡಿಕೆದಾರರಾಗಿದ್ದಾರೆ. ವೀನಸ್ ಕಂಪನಿ ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಶೇ.50ರಷ್ಟು ಷೇರುಗಳನ್ನು ಹಾಗೂ ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಶೇ.15ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಇನ್ನುಉಳಿದ ಶೇ.35ಷ್ಟು ಷೇರುಗಳನ್ನು ರಿಟೇಲ್ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.
ಗುಜರಾತ್ ಮೂಲದ ವೀನಸ್ ಪೈಪ್ಸ್ ಹಾಗೂ ಟ್ಯೂಬ್ಸ್ ಸ್ಟೈನ್ ಲೆಸ್ ಉಕ್ಕಿನ ಪೈಪ್ ಗಳು ಹಾಗೂ ಟ್ಯೂಬ್ ಗಳ ಉತ್ಪಾದಕ ಹಾಗೂ ರಫ್ತು ರಾಷ್ಟ್ರವಾಗಿದೆ. ಕೆಮಿಕಲ್ಸ್, ಇಂಜಿನಿಯರಿಂಗ್, ರಸಗೊಬ್ಬರ, ಔಷಧ, ವಿದ್ಯುತ್, ಆಹಾರ ಸಂಸ್ಕರಣೆ, ಪೇಪರ್, ತೈಲ ಹಾಗೂ ಅನಿಲ ಸೇರಿದಂತೆ ವಿವಿಧ ವಲಯದ ಕೈಗಾರಿಕೆಗಳಿಗೆ ವೀನಸ್ ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡುತ್ತದೆ. ಇನ್ನು ಬಿಎಸ್ ಇ (BSE) ಹಾಗೂ ಎನ್ ಎಸ್ಇಯಲ್ಲಿ (NSE) ಕಂಪನಿಯ ಈಕ್ವಿಟಿ ಷೇರುಗಳ ಲಿಸ್ಟಿಂಗ್ ಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ (IPO) ಸೋಮವಾರ (ಮೇ 9) ಯಶಸ್ವಿಯಾಗಿ ಮುಕ್ತಾಯವಾಗಿದೆ. ಎಲ್ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.